ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.387/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ: 01/09/2021 ರಂದು ರಾತ್ರಿ 9.30 ಗಂಟೆಗೆ ನಾಗರಾಜ ಬಿನ್ ಬೈರೆಡ್ಡಿಹಳ್ಳಿ ಕೃಷ್ಣಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಕಾಗತಿದಿಗೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ ತಾವು ನಾಲ್ಕು ಜನ ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿರುತ್ತೆ. ಆ ಪೈಕಿ ತಾನು 3ನೇ ಯವನಾಗಿರುತ್ತೇನೆ. ತಾವು ನಾಲ್ಕು ಜನ ಅಣ್ಣ-ತಮ್ಮಂದಿರೂ ಓಟ್ಟಿಗೆ ಒಂದೇ ಕುಟುಂಬದಲ್ಲಿ ವಾಸವಾಗಿರುತ್ತೇವೆ. ಈ ದಿನ ದಿನಾಂಕ: 01/09/2021 ರಂದು ಬೆಳಿಗ್ಗೆ 09.00 ಗಂಟೆಗೆ ತಾನು ಕಾಗತಿ ಗ್ರಾಮದ ಬಳಿ ಇರುವ ರಾಗಿಹೊಲದಲ್ಲಿ ಗುಂಟುವೆ ಹಾಕಲು ಹೋಗಿದ್ದು, ಅದರಲ್ಲಿ ಬೀಳುವ ಮಣ್ಣಿನ ರಾಶಿಗಳನ್ನು ಚೆಲ್ಲಲು ತನ್ನ ಹೆಂಡತಿ ಮಂಜುಳ, 37 ವರ್ಷ ಹಾಗೂ ತನ್ನ ತಮ್ಮ ದೇವರಾಜ್ ರವರ ಹೆಂಡತಿ ಸುಜಾತ(ನಾದಿನಿ), 33 ವರ್ಷ ರವರು ಬೆಳಿಗ್ಗೆ 09.30 ಗಂಟೆಗೆ ತನಗೆ ಊಟ ತೆಗೆದುಕೊಂಡು ಹೊಲದ ಬಳಿ ಬಂದರು. ಸಂಜೆ 6.45 ಗಂಟೆಗೆ ಕೆಲಸ ಮುಗಿಸಿಕೊಂಡು ತನ್ನ ಹೆಂಡತಿ ಮತ್ತು ನಾದಿನಿ ನಡೆದುಕೊಂಡು, ತಾನು ಎತ್ತುಗಳನ್ನು ಹಿಡಿದುಕೊಂಡು ಮನೆಗೆ ಹೋಗಲು ಚಿಂತಾಮಣಿ-ಮುರಗಮಲ್ಲ ಮುಖ್ಯ ರಸ್ತೆಯ ಕಾಗತಿ ಗ್ರಾಮದ ಬಳಿ ಇರುವ ಕೃಷಿ ತರಬೇತಿ ಕೇಂದ್ರ ಮುಂಭಾಗದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಅದೇ ವೇಳೆಗೆ ಚಿಂತಾಮಣಿ ಕೆಡೆಯಿಂದ ಯಾರೋ ಒಬ್ಬ ವ್ಯಕ್ತಿ ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಮದ ಚಾಲನೆ ಮಾಡಿಕೊಂಡು ಬಂದು ತನ್ನ ಹಿಂದೆ ಬರುತ್ತಿದ್ದ ತನ್ನ ಹೆಂಡತಿ ಮತ್ತು ನಾದಿಗೆ ಹಿಂಬದಿಯಿಂದ ಡಿಕ್ಕಿಹೊಡೆಸಿದ್ದರ ಪರಿಣಾಮ ಅವರಿಬ್ಬರು ರಸ್ತೆಯ ಬದಿಯಲ್ಲಿ ಬಿದ್ದು ಹೋದರು. ತಾನು ಜೋರಾಗಿ ಕೂಗಿಕೊಂಡು ಸದರಿ ಸ್ಥಳಕ್ಕೆ ಓಡಿ ಹೋಗಿ ನೋಡಲಾಗಿ ತನ್ನ ಹೆಂಡತಿ ಮಂಜುಳ ರವರ ತಲೆಗೆ ಹಾಗೂ ಎರಡೂ ಕೈ ಕಾಲುಗಳಿಗೆ ರಕ್ತಗಾಯಗಳಾಗಿದ್ದವು. ನಾದಿನಿ ಸುಜಾತ ರವರಿಗೂ ಸಹ ತಲೆ, ಹಣೆ ಹಾಗೂ ಎರಡೂ ಕೈ ಮತ್ತು ಕಾಲುಗಳಿಗೆ ರಕ್ತ ಗಾಯಗಳಾಗಿದ್ದವು. ಅಪಘಾತಪಡಿಸಿದ ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಅದರ ಸವಾರ ಓಡಿಹೋಗಿದ್ದು, ಸದರಿ ದ್ವಿಚಕ್ರ ವಾಹನದ ನಂಬರ್ ನೋಡಲಾಗಿ ಕೆಎ-04 ಜೆಜೆ-4011 ಆಗಿತ್ತು. ಅದೇ ವೇಳೆಗೆ ಅದೇ ಮಾರ್ಗವಾಗಿ ಬಂದ ತಮ್ಮ ಗ್ರಾಮದ ಮಂಜುನಾಥರೆಡ್ಡಿ ಬಿನ್ ರಾಮಲಿಂಗಾರೆಡ್ಡಿ ಮತ್ತು ಆತನ ಹೆಂಡತಿ ರೇಣುಕಮ್ಮ ರವರ ದ್ವಿಚಕ್ರ ವಾಹನದಲ್ಲಿ ಗಾಯಗೊಂಡಿದ್ದ ತನ್ನ ನಾದಿನಿಯನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟು, ನಂತರ ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಹೆಂಡತಿಯನ್ನು ಅದೇ ರಸ್ತೆಯಲ್ಲಿ ಬಂದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ತನ್ನ ಹೆಂಡತಿ ಮಾರ್ಗ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಗಾಯಾಳು ಸುಜಾತ ರವರನ್ನು ವೈದ್ಯರ ಸಲಹೆ ಮೇರೆಗೆ ಚಿಂತಾಮಣಿ ನಗರದ ರಾಧಕೃಷ್ಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತೇವೆ. ತನ್ನ ಹೆಂಡತಿ ಮೃತದೇಹವು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರುತ್ತದೆ. ಆದ್ದರಿಂದ ತನ್ನ ಹೆಂಡತಿಗೆ ಡಿಕ್ಕಿಹೊಡೆಸಿ ಸಾಯಲು ಕಾರಣನಾದ ಮತ್ತು ನಾದಿಗೆ ಗಾಯಗೊಳಿಸಿದ ನಂಬರ್ ಕೆಎ-04 ಜೆಜೆ-4011 ದ್ವಿ-ಚಕ್ರ ವಾಹನ ಮತ್ತು ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.388/2021 ಕಲಂ. 279 ಐ.ಪಿ.ಸಿ:-

     ದಿನಾಂಕ: 02/09/2021 ರಂದು ಮದ್ಯಾಹ್ನ 1.00 ಗಂಟೆಗೆ ಲೋಕೇಶ್ ಬಿನ್ ಮುನಿವೆಂಕಟಪ್ಪ, 43 ವರ್ಷ, ಗೊಲ್ಲರು, ಚಾಲಕ ವೃತ್ತಿ, ಹುಲಗುಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 5 ವರ್ಷಗಳಿಂದ ಹುಲಗುಮ್ಮನಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಬೈರಪ್ಪರವರ ಬಾಬತ್ತು ಕೆಎ-40 ಎಂ-3712 ನೊಂದಣೆ ಸಂಖ್ಯೆಯ ಮೆಸ್ಸಿ ಫರ್ಗೂಸನ್ ಟ್ರಾಕ್ಟರ್ ಗೆ ಚಾಲಕನಾಗಿ ಕರ್ತವ್ಯ ಮಾಡಿಕೊಂಡಿರುತ್ತೇನೆ. ಮುನಿಯಪ್ಪರವರು ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದು ಸದರಿ ಮನೆಗೆ ಜಲ್ಲಿ ಕಲ್ಲುಗಳನ್ನು ನಂದಗುಡಿ ಬಳಿ ಇರುವ ಕ್ವಾರಿಯಿಂದ ತೆಗೆದುಕೊಂಡು ಬರಲು ತಾನು ದಿನಾಂಕ:01/09/2021 ರಂದು ಸಂಜೆ 6.00 ಗಂಟೆಗೆ ಮೇಲ್ಕಂಡ ಮುನಿಯಪ್ಪರವರ ಬಾಬತ್ತು ಟ್ರಾಕ್ಟರ್ ಮತ್ತು ಟ್ರಾಲಿಯನ್ನು ತೆಗೆದುಕೊಂಡು ನಂದಗುಡಿಯಲ್ಲಿ ಜಲ್ಲಿ ಲೋಡ್ ಹಾಕಿಕೊಂಡು ಅದೇ ದಿನ ರಾತ್ರಿ 10.00 ಗಂಟೆ ಸಮಯದಲ್ಲಿ ಸದರಿ ಟ್ರಾಕ್ಟರ್ ಗೆ ಟ್ರಾಲಿಯಲ್ಲಿ ಜಲ್ಲಿ ಲೋಡ್ ಹಾಕಿಕೊಂಡು ಟ್ರಾಕ್ಟರ್ ನ್ನು ಚಾಲನೆ ಮಾಡಿಕೊಂಡು ಟಿ.ಹೊಸಹಳ್ಳಿ ಗ್ರಾಮದ ಗೇಟ್ ಬಳಿ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಟ್ರಾಲಿಯ ಹಿಂದೆ ಯಾವುದೋ ಕಾರು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಕೂಡಲೇ ತಾನು ಟ್ರಾಕ್ಟರ್ ನಿಂದ ಕೆಳಗೆ ಇಳಿದು ನೋಡಲಾಗಿ ಕೆಎ-40 ಎಂ-9681 ನೊಂದಣಿ ಸಂಖ್ಯೆಯ ವೋಕ್ಸ್ ವ್ಯಾಗನ್ ಕಂಪನಿಯ ಪೋಲೋ ಕಾರು ಆಗಿರುತ್ತದೆ. ತಮ್ಮ ಟ್ರಾಕ್ಟರ್ ಟ್ರಾಲಿಯ ಹಿಂಭಾಗ ಜಖಂ ಆಗಿದ್ದು, ಅಪಘಾತಪಡಿಸಿದ ಕಾರಿನ ಮುಂಭಾಗ ಸಹ ಜಖಂಗೊಂಡಿರುತ್ತೆ. ಕಾರಿನಲ್ಲಿದ್ದ ಯಾರಿಗೋ ಗಾಯಗಳಾಗಿರುವುದಿಲ್ಲ. ಅಷ್ಟರಲ್ಲಿ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಅಮರೇಶ ಬಿನ್ ನಾರಾಯಣಸ್ವಾಮಿ ಮತ್ತು ಇತರರು ಸ್ಥಳಕ್ಕೆ ಬಂದು ಅಪಘಾತವನ್ನು ನೋಡಿರುತ್ತಾರೆ. ಅಪಘಾತಗೊಂಡ ತಮ್ಮ ಟ್ರಾಕ್ಟರ್ ಹಾಗೂ ಟ್ರಾಲಿ ಮತ್ತು ಅಪಘಾತಪಡಿಸಿದ ಕಾರು ಸ್ಥಳದಲ್ಲಿಯೇ ಇರುತ್ತವೆ. ಈ ಅಪಘಾತಕ್ಕೆ ಕೆಎ-40 ಎಂ-9681 ನೊಂದಣಿ ಸಂಖ್ಯೆಯ ವೋಕ್ಸ್ ವ್ಯಾಗನ್ ಕಂಪನಿಯ ಪೋಲೋ ಕಾರಿನ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆ ಕಾರಣವಾಗಿರುತ್ತದೆ. ಆದ್ದರಿಂದ ಮೇಲ್ಕಂಡ ಕೆಎ-40 ಎಂ-9681 ನೊಂದಣಿ ಸಂಖ್ಯೆಯ ವೋಕ್ಸ್ ವ್ಯಾಗನ್ ಕಂಪನಿಯ ಪೋಲೋ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.210/2021 ಕಲಂ. 15(A),32(3) ಕೆ.ಇ ಆಕ್ಟ್:-

     ಈ ದಿನ ನ್ಯಾಯಾಲಯದ ಪಿ.ಸಿ 205 ಮೊಹನ್ ಕುಮಾರ್ ತಂದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ:  ದಿನಾಂಕ: 27/08/2021 ರಂದು  ಬೆಳಿಗ್ಗೆ 11-00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು ವಿದುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ, ಕುಡುಮಲಕುಂಟೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ, ಪಿ.ಸಿ-381 ಜಗದೀಶ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-140 ರಲ್ಲಿ  ಕುಡುಮಲಕುಂಟೆ ಗ್ರಾಮಕ್ಕೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಅಲ್ಲಿಯೇ ಇದ್ದ ಮತ್ತೊಬ್ಬ ಆಸಾಮಿ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಆ ಇಬ್ಬರು ವ್ಯಕ್ತಿಗಳಿಗೆ ಕೊಡುತ್ತಿದ್ದನು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ, ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು ರಾಮಕೃಷ್ಣ ಬಿನ್ ಲೇಟ್ ವೆಂಕಟಸ್ವಾಮಪ್ಪ,61 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ,ಕುಡುಮಲಕುಂಟೆ ಗ್ರಾಮ ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು ,ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 11-30 ಗಂಟೆಯಿಂದ 12-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ  90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 13-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ 374/2021 ರನ್ನು ದಾಖಲಿಸಿಕೊಂಡು ಮಾನ್ಯ ಘನ ನ್ಯಾಯಾಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.211/2021 ಕಲಂ. 15(A),32(3) ಕೆ.ಇ ಆಕ್ಟ್:-

     ಈ ದಿನ ದಿನಾಂಕ:27/08/2021 ರಂದು ಮಾನ್ಯ ಸಿ.ಪಿ.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋ ದೂರಿನ ಸಾರಾಂಶ ಏನೆಂಧರೆ: ಆದ ನಾನು  ಸೂಚಿಸುವುದೇನೆಂದರೆ,  ಈ ದಿನ ದಿನಾಂಕ:27/08/2021 ರಂದು ಸಂಜೆ 4-15 ಗಂಟೆಯಲ್ಲಿ ವೃತ್ತ  ಕಛೇರಿಯಲ್ಲಿದ್ದಾಗ ಚೌಳೂರು ಗೇಟ್ ಬಳಿ ಇರುವ ಮಾರುತಿ ಪ್ರಾವಿಷನ್ ಸ್ಟೋರ್ ನಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ,ಪಿಸಿ-310 ಮೈಲಾರಪ್ಪ, ಮತ್ತು ಎಪಿಸಿ-133 ಹೇಮಂತ ರವರೊಂದಿಗೆ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234 ರಲ್ಲಿ  ಚೇಳೂರು ಗೇಟ್ ಗೆ 4-30 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಆದಿನಾರಾಯಣಪ್ಪ ಬಿನ್ ನಾರಾಯಣಪ್ಪ, 42 ವರ್ಷ, ನಾಯಕ ಜನಾಂಗ, ವ್ಯಾಪಾರ, ಚೌಳೂರು ಗ್ರಾಮ ಹಿಂದೂಪುರ ಮಂಡಲಂ, ಅನಂತಪುರ ಜಿಲ್ಲೆ.  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ 6ಟೆಟ್ರಾ ಪಾಕೆಟ್ ಗಳು  ಇದ್ದು ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 900 ಎಂ.ಎಲ್. ಆಗಿರುತ್ತೆ. ಇವುಗಳ ೊಟ್ಟು ಬೆಲೆ 866/- ರೂಗಳಾಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು,.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 5-00 ಗಂಟೆಯಿಂದ 6-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು ಮತ್ತು 180 ಎಂ.ಎಲ್ ನ ಓಲ್ಡ್ ಟವರೆನ್ 6ಟೆಟ್ರಾ ಪಾಕೆಟ್ ಗಳು 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 04 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ. ದಿನಾಂಕ:02/09/2021 ರಂದು ಬೆಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರ ನೀಡಿದ ಮೇರೆಗೆ ಠಾಣಾ ಮೊ.ಸಂ 211/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.211/2021 ಕಲಂ. 279,304(A) ಐ.ಪಿ.ಸಿ:-

     ದಿ:01/09/2021 ರಂದು ರಾತ್ರಿ  7-30 ಗಂಟೆಗೆ ಪಿರ್ಯಾದಿದಾರರಾದ  ಶ್ರೀ.ಆರ್.ರಮೇಶ್ ಕುಮಾರ್ ಬಿನ್ ರಂಗಸ್ವಾಮಯ್ಯ ರವರು  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ನನ್ನ ತಂದೆ ರಂಗಸ್ವಾಮಯ್ಯ, ತಾಯಿ ಲಕ್ಷ್ಮಮ್ಮ ರವರಿಗೆ 01 ನೇ ಸುರೇಶ್. ಆರ್, 02 ನೇ ರಮೇಶ್ ಕುಮಾರ್. ಆರ್, ಆದ ನಾನು ಮತ್ತು 03 ನೇ ಸತೀಶ್. ಆರ್ ಎಂಬ ಮೂರು ಜನ ಮಕ್ಕಳಿದ್ದು ನಮಗೆ ಎಲ್ಲರಿಗೂ ಮದುವೆಗಳಾಗಿದ್ದು ನಾವುಗಳು ಬೇರೆ ಮನೆಯಲ್ಲಿ ಮಾಡಿಕೊಂಡು ಸಂಸಾರವನ್ನು ನಡೆಸಿಕೊಂಡು ಹೋಗುತ್ತೀರುತ್ತೇವೆ. ನನ್ನ ಚಿಕ್ಕ ತಮ್ಮ ಸತೀಶ್ ರವರು ನಮ್ಮ ತಂದೆ ತಾಯಿಯೊಂದಿಗೆ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ನನ್ನ ತಮ್ಮ ಸತೀಶ್ ರವರು ಆಟೋ ಚಾಲನೆ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾನೆ. ದಿನಾಂಕ:28/08/2021 ರಂದು ಬೆಳಿಗ್ಗೆ ತನ್ನ  ಸ್ನೇಹಿತ ಹರ್ಷ.ಎನ್.ಎಂ ಬಿನ್ ಲೇಟ್ ಮನೋಹರ್, 32 ವರ್ಷ, ಹೋಟೆಲ್ಲ್ ನಲ್ಲಿ ಕೆಲಸ, ವಾಸ: ಜೆ.ಸಿ.ಬಿ ಬೈರಪ್ಪ ರಸ್ತೆ, ಕೆ.ಎಸ್.ಆರ್ ಆಗ್ರಹಾರ, ಕುಣಿಗಲ್  ಟೌನ್ ರವರೊಂದಿಗೆ ಕೆ.ಎ-06 ಹೆಚ್.ಇ-7363 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಆವುಲಬೆಟ್ಟಕ್ಕೆ ಹೋಗಿದ್ದು ನಂತರ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಅಂಬುಲೆನ್ಸ್ ಚಾಲಕ ನನಗೆ ಪೊನ್ ಮಾಡಿ ಸತೀಶ್ ಮತ್ತು ಹರ್ಷ ರವರಿಗೆ ಗುಂಡಾಪುರ ಗ್ರಾಮದಿಂದ ಸ್ವಲ್ಪ ಮುಂದೆ ಗುಣಿಗಳು ಬಿದ್ದಿರುವ ಗೌರಿಬಿದನೂರುನಿಂದ ಮದುಗಿರಿಗೆ ಹೋಗುವ ರಸ್ತೆಯಲ್ಲಿ ಅಪಘಾತವಾಗಿದ್ದು ಗಾಯಗೊಂಡಿರುತ್ತಾರೆ. ಅವರನ್ನು ಗೌರಿಬಿದನೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತೀರುವುದಾಗಿ ತಿಳಿಸಿರುತ್ತಾರೆ. ನಂತರ ನಾನು ಗೌರಿಬಿದನೂರು ನಗರದ ವಾಸಿಯಾದ ನನ್ನ ಸ್ನೇಹಿತನಾದ ರಘು ರವರಿಗೆ ಪೋನ್ ಮಾಡಿ ವಿಚಾರ ತಿಳಿಸಿ ಅವರನ್ನು ಕೂಡಲೇ ಅಸ್ಪತ್ರೆಯ ಬಳಿಗೆ ಹೋಗಿ ಚಿಕಿತ್ಸೆಯನ್ನು ಕೊಡಿಸಲು ತಿಳಿಸಿರುತ್ತೇನೆ. ನಂತರ ರಘು ರವರು ನನಗೆ ಪೋನ್ ಮಾಡಿ ನಿಮ್ಮ ತಮ್ಮನಿಗೆ ಚಿಕಿತ್ಸೆ ನೀಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ. ಆದರಂತೆ ನನ್ನ ಸ್ನೇಹಿತ ರಘು ರವರು ಅಂಬುಲೆನ್ಸ್ ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದ ವಿಚಾರವನ್ನು ತಿಳಿಸಿದ. ನಂತರ ದಿ:29/08/2021 ರಂದು ಬೆಳಿಗ್ಗೆ ನಾನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಬಳಿ ಹೋಗಿ ನನ್ನ ತಮ್ಮ ಸತೀಶ್ ರವರನ್ನು ವಿಚಾರಿಸಿದಾಗ ತಾನು ಮತ್ತು ತನ್ನ ಸ್ನೇಹಿತ ಹರ್ಷ ರವರು ಕೆ.ಎ-06 ಹೆಚ್.ಇ-7363 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದಲ್ಲಿ ಆವುಲಬೆಟ್ಟಕ್ಕೆ ಹೋಗಿ ಪೂಜೆಯನ್ನು ಮುಗಿಸಿಕೊಂಡು ವಾಪಸ್ಸು ಮನೆಗೆ ಬರಲು ಆದೇ ದ್ವಿ ಚಕ್ರವಾಹನದಲ್ಲಿ ನಾನು ಹಿಂಬದಿಯಲ್ಲಿ ಕುಳಿತುಕೊಂಡು ಹರ್ಷ ರವರು ಚಾಲನೆ ಮಾಡಿಕೊಂಡು ಗೌರಿಬಿದನೂರು ನಗರದ ಗುಂಡಾಪುರ ಗ್ರಾಮದ ಸ್ವಲ್ಪ ಮುಂದೆ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ರಸ್ತೆಯಲ್ಲಿ ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಬರುತ್ತೀದ್ದಾಗ ಹರ್ಷ ರವರು ಸದರಿ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಗುಣಿಗಳಲ್ಲಿ ಇಳಿಸಿದಾಗ ನಾವುಗಳು ನಿಯಂತ್ರಣ ತಪ್ಪಿ ದ್ವಿ ಚಕ್ರ ವಾಹನದ ಸಮೇತ ಬಿದ್ದಿದ್ದು ನನಗೆ ತಲೆ, ಮೂಗು, ಬಲ ಮುಂಗೈ, ಕಾಲಿಗೆ ರಕ್ತ ಗಾಯಗಳಾಗಿರುತ್ತವೆ ಮತ್ತು ಹರ್ಷ ರವರಿಗೆ ಬಲ ಕಣ್ಣಿನ ಬಳಿ,  ಎಡ ಮೊಣಕೈ ಬಳಿ ರಕ್ತ ಗಾಯಗಳಾಗಿರುವುದಾಗಿ ತಿಳಿಸಿತ್ತಾನೆ. ನಮ್ಮನ್ನು ಯಾರೋ ಸಾರ್ವಜನಿಕರು ಉಪಚರಿಸಿ ಅಂಬುಲೆನ್ಸ್ ಗೆ  ಕರೆ ಮಾಡಿ ಅಂಬುಲೆನ್ಸ್ ನಲ್ಲಿ ಅಸ್ಪತ್ರೆಗೆ ಕಳುಹಿಸಿಕೊಟ್ಟರು ಎಂದು ತಿಳಿಸಿದನು. ನನ್ನ ತಮ್ಮನಿಗೆ ನಿಮ್ಹಾನ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿಕೊಂಡು ಅಲ್ಲಿಂದ ಮುಂದಿನ ಚಿಕಿತ್ಸೆಗಾಗಿ ದಿ:30/08/2021 ತುಮಕೂರಿನ, ವಿನಾಯಕ ಆಸ್ಪತ್ರೆಗೆ ದಾಖಲು ಮಾಡಿರುತ್ತೆ. ನನ್ನ ತಮ್ಮನಿಗೆ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೋಡಿಸುತ್ತಿದ್ದ ಕಾರಣ ದೂರನ್ನು ನೀಡಲು ಸಾದ್ಯವಾಗಿರುವುದಿಲ್ಲ. ದಿ:01/09/2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ವಿನಾಯಕ ಅಸ್ಪತ್ರೆಯಲ್ಲಿ ರಸ್ತೆ ಅಪಘಾತದಿಂದ ಆದ ಗಾಯಗಳ ದೆಸೆಯಿಂದ ಚಿಕಿತ್ಸೆಯು ಫಲಕಾರಿಯಾಗದೇ ನನ್ನ ತಮ್ಮ ಸತೀಶ್ ರವರು  ಮೃತ ಪಟ್ಟಿರುತ್ತಾನೆಂದು ಕರ್ತವ್ಯದಲ್ಲಿದ್ದ ವೈದ್ಯರು ತಿಳಿಸಿರುತ್ತಾರೆ. ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆ, ತುಮಕೂರಿನ ಶವಗಾರದಲ್ಲಿಟ್ಟಿದ್ದು ನನ್ನ ತಮ್ಮನಿಗೆ ಅಫಘಾತಪಡಿಸಿದ ಹರ್ಷ ಬಿನ್ ಲೇಟ್  ಮನೋಹರ್ ರವರ ವಿರುದ್ದ ಮತ್ತು ಕೆ.ಎ-06 ಹೆಚ್.ಇ-7363 ನೊಂದಣಿ ಸಂಖ್ಯೆ ದ್ವಿ ಚಕ್ರ ವಾಹನದ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರಿಗಿಸಲು ಕೋರುತ್ತೇನೆ ಅಂತ  ನೀಡಿರುವ ದೂರಾಗಿದ್ದು ಈ ದೂರಿನ  ಮೇರೆಗೆ ಠಾಣೆಯಲ್ಲಿ ಪ್ರಕಣವನ್ನು ದಾಖಲು ಮಾಡಿಕೊಂಡಿರುತ್ತೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.206/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:01/09/2021 ರಂದು ಸಂಜೆ 6-30  ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ಲಕ್ಷ್ಮಿನರಸಿಂಹಪ್ಪ ಬಿನ್ ನರಸಿಂಹಯ್ಯ,    40ವರ್ಷ, ಆದಿ ಕರ್ನಾಟಕ, ಗಾರೆ ಕೆಲಸ,     ವಾಸ ಮಾದಿನಾಯಕನಹಳ್ಳಿ ಗ್ರಾಮ,     ಚಿಕ್ಕಬಳ್ಳಾಪುರ ತಾಲ್ಲೂಕು.     ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ತಮ್ಮ ನವೀನ , 24 ವರ್ಷ ರವರು ಪೆರೇಸಂದ್ರ ಕ್ರಾಸ್ ನಲ್ಲಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕಿನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿರುತ್ತಾನೆ. ತನಗೆ ಪೋನ್ ಮೂಲಕ ತನ್ನ ತಮ್ಮನಿಗೆ ಪೆರೇಸಂದ್ರ ಕ್ರಾಸ್ ನಲ್ಲಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕ್ ಮುಂದೆ ಅಪಘಾತವಾಗಿರುವುದಾಗಿ ತನ್ನ ತಮ್ಮನನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಮಾಹಿತಿ ತಿಳಿದು ಕೂಡಲೇ ತಾನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿರುತ್ತೆ. ವಿಚಾರ ಕೇಳಿ ತಿಳಿಯಲಾಗಿ  ಎಂದಿನಂತೆ ತನ್ನ ತಮ್ಮ  ದಿನಾಂಕ 31/08/2021 ರಂದು ಬೆಳಿಗ್ಗೆ 8-00 ಕೆಲಸಕ್ಕಾಗಿ ತನ್ನ  ಬಾಬತ್ತು ಕೆ.ಎ-40-ಇಇ-0634 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಅದೇ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತ ಭತ್ತಲಹಳ್ಳಿ ಗ್ರಾಮದ ವಾಸಿ ಜಾಕೀರ್ ಹುಸೇನ್, 27 ವರ್ಷ,  ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗಿದ್ದು ಪೆಟೋಲ್ ಬಂಕಿನಲ್ಲಿ ಕೆಲಸವಿಲ್ಲವೆಂದು ವಾಪಸ್ಸು  ಪೆರೇಸಂದ್ರ ಕ್ರಾಸ್ ಹೋಗುವ ಎನ್.ಹೆಚ್.-44 ರಸ್ತೆಯ ಸರ್ವೀಸ್  ರಸ್ತೆಯಲ್ಲಿ ರಸ್ತೆಯ ಎಡ ಭಾಗದಲ್ಲಿ ಹೋಗುತ್ತಿದ್ದಾಗ ಪೆರೇಸಂದ್ರ ಕ್ರಾಸ್ ನಿಂದ ಬಂದ ಕೆ.ಎ-51-ಬಿ-7300 ನೊಂದಣಿ ಸಂಖ್ಯೆಯ ಬೊಲೊರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ತನ್ನ ತಮ್ಮನ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ತನ್ನ ತಮ್ಮನಿಗೆ ಬಲಮೊಣಕಾಲಿನ ಕೆಳಬಾಗ ರಕ್ತಗಾಯವಾಗಿದ್ದು, ಹಣೆಗೆ, ಕೈಗಳಿಗೆ ರಕ್ತಗಾಯವಾಗಿದ್ದು, ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಜಾಕೀರ್ ಹುಸೇನ್ ಗೆ ಬಲ ಮೊಣಕಾಲಿನ ಕೆಳಬಾಗ ರಕ್ತಗಾಯವಾಗಿರುತ್ತೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ಅಪಘಾತಪಡಿಸಿದ ಕೆ.ಎ-51-ಬಿ-7300 ನೊಂದಣಿ ಸಂಖ್ಯೆಯ ಬೊಲೊರೋ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ದೂರಾಗಿರುತ್ತೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:02/09/2021 ರಂದು ಬೆಳಿಗ್ಗೆ 10:15 ಗಂಟೆಗೆ ಪಿರ್ಯಾದಿ ಶ್ರೀಮತಿ ಕಲ್ಪನ ಕೋಂ ಗಂಗರಾಜು, 21 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಗೌಚೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:01/09/2021 ರಂದು ರಾತ್ರಿ 7:30 ಗಂಟೆಗೆ ತನಗೆ ಯಾರೋ ಸಾರ್ವಜನಿಕರು ಪೋನ್ ಮಾಡಿ ನಿನ್ನ ಗಂಡನಿಗೆ ತಿರ್ನಹಳ್ಳಿ ಮತ್ತು ಮಾವಹಳ್ಳಿ ರಸ್ತೆಯ ಬಳಿ ಅಪಘಾತವಾಗಿದೆಂದು ತಿಳಿಸಿದಾಗ ಕೂಡಲೆ ತಾನು ಮತ್ತು ತಮ್ಮ ತಾತ ರಾಮಕೃಷ್ಣ ರವರೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ ಕೆ.ಎ-43 ವೈ-9550 ದ್ವಿಚಕ್ರ ವಾಹನ ಅಪಘಾತದ ಸ್ಥಳದಲ್ಲಿ ಬಿದ್ದಿದ್ದು ತನ್ನ ಗಂಡನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿದಾಗ ತಾವು ಆಸ್ಪತ್ರೆಯ ಬಳಿ ಹೋಗಿ ನೋಡಿದಾಗ ವಿಚಾರ ನಿಜವಾಗಿರುತ್ತೆ. ಅಪಘಾತವಾಗಿರುವ ತನ್ನ ಗಂಡನನ್ನು ಕೇಳಿದಾಗ ದಿನಾಂಕ:01/09/2021 ರಂದು ಸಂಜೆ ಗೌಚೇನಹಳ್ಳಿ ಗ್ರಾಮದಿಂದ ಕೆ.ಎ-43 ವೈ-9550 ದ್ವಿಚಕ್ರ ವಾಹನದಲ್ಲಿ ಸಿಂಗಾಟಕದಿರೇನಹಳ್ಳಿಗೆ ಹೋಲು ಮುದ್ದೇನಹಳ್ಳಿ ತಿರ್ನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಕಡೆಯಿಂದ ನಂದಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ತಿರ್ನಹಳ್ಳಿ ಮಾವಳ್ಳಿ ಮದ್ಯೆ ಸಂಜೆ 7:30 ಗಂಟೆಗೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಂದಿ ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಯಾವುದೋ ಒಂದು ಸ್ವೀಪ್ಟ್ ಮಾರುತಿ ಕಾರು ಆದರ ಚಾಲಕ ಕಾರನ್ನು ಅತೇ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಮುಂಭಾಗದಿಂದ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಾನು ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ತನಗೆ ಎಡ ಕಾಲು ಮತ್ತು ಎಡ ಕೈಗೆ ಮೂಗೇಟು ಮತ್ತು ಒಳಗಾಯಗಳು ಆಗಿರುತ್ತವೆ. ದ್ವಿಚಕ್ರ ವಾಹನ ಸಹ ಜಖಂಗೊಂಡಿರುತ್ತೆ. ಅಪಘಾತ ಪಡಿಸಿದ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಆಗ ನನ್ನನ್ನು ಸಾರ್ವಜನಿಕರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಆಂಬ್ಯೂಲೇನ್ಸ್ ವಾಹನದಲ್ಲಿ ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿದ. ತನ್ನ ಗಂಡನಿಗೆ ಅಪಘಾತ ಪಡಿಸಿದ ಕಾರಿನ ಚಾಲಕ ವಿರುದ್ದ ಕ್ರಮ ಜರುಗಿಸಲು ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 02-09-2021 05:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080