ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.219/2021 ಕಲಂ. 324,448,504,34 ಐ.ಪಿ.ಸಿ :-

    ದಿನಾಂಕ 02/08/2021 ರಂದು ಬೆಳಗಿನ ಜಾವ 01-10 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆ ಯಿಂದ ಬಂದ ಮೆಮೋ ಪಡೆದು ಅಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡ ಸಾರಾಂಶವೆನೆಂದರೆ . ದಿನಾಂಕ;31/07/2021 ರಂದು ಗೋವಿಂದಪ್ಪ ಬಿನ್ ಲೇಟ್ ನರಸಪ್ಪ, 65 ವರ್ಷ, ಬೋವಿ ಜನಾಂಗ, ಜಿರಾಯ್ತಿ ಕೆಲಸ, ಡಿ ಕೋತ್ತಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಆದ ನಾನು ಹೊಲದ ಬಳಿ ಇದ್ದಾಗ ಈಶ್ವರಪ್ಪ ರವರು ಅಲ್ಲಿಗೆ ಬಂದು ನನ್ನ ಮೇಲೆ ಗಲಾಟೆ ಮಾಡಿರುತ್ತಾರೆ.  ಈ ದಿನ  ದಿನಾಂಕ 01/08/2021 ರಂದು ರಾತ್ರಿ  9-30 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಮಲಗಿದ್ದಾಗ ಈಶ್ವರಪ್ಪ ಬಿ9ನ್ ನಾರಾಯಣಪ್ಪ ರವರು ಬಾಗಿಲನ್ನು ಹೊಡೆದು ಮನೆ ಒಳಗೆ ಬಂದು ನೀನು ನಿನ್ನೆ ಅಗಿರುವ ಗಲಾಟೆಗೆ ಕೇಸು ಹಾಕಿದ್ದೀಯಾ ಎಂದು  ಗಲಾಟೆ ಮಾಡಿರುತ್ತಾನೆ.  ನಾನು ಕೇಸು ಇಲ್ಲ ಏನೂ ಇಲ್ಲ ಎಂದು ಹೇಳಿದಕ್ಕೆ ನಮ್ಮ ಮನೆಯಲ್ಲಿ ಇದ್ದ ಕುಡುಗೊಲುನಿಂದ ನನ್ನ ಎಡ ಕೈಯಿ ಮುಂಗೈಗೆ ಮತ್ತು ಬಲಗಾಲಿನ ತೊಡೆಯ ಬಳಿ ಹಾಗೂ ಕಿವಿಗೆ ಹೊಡೆದು ರಕ್ತಗಾಯವನ್ನು ಮಾಡಿರುತ್ತಾನೆ. ಹಾಗೂ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ, ಅಷ್ಟರಲ್ಲಿ ಅವರ ತಾಯಿ ರವಣಮ್ಮ ಕೋಂ ಲೇಟ್ ನಾರಾಯಣಪ್ಪ, ಶಿವಪ್ಪ ಬಿನ್ ಲೇಟ್ ಪೆದ್ದರಾಮಪ್ಪ, ರಾಜಪ್ಪ ಬಿನ್ ಪೆದ್ದರಾಮಪ್ಪ ರವರು ಅಲ್ಲಿಗೆ ಬಂದು  ಅವರೂ ಸಹ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿರುತ್ತಾರೆ, ಅಷ್ಟರಲ್ಲಿ ತಿರುಪತಪ್ಪ ಬಿನ್ ಅಂಜಿನಪ್ಪ, ವೆಂಕಟರವಣ ಬಿನ್ ಚಿಕ್ಕಬಳ್ಳಾಪುರ ವೆಂಕಟರಮಪ್ಪ,ರವರು ಬಂದು ಜಗಳ ಬಿಡಿಸಿರುತ್ತಾರೆ, ನಂತರ ನನಗೆ ರಕ್ತ ಗಯಾಗಳಗಿದ್ದರಿಂದ ನಮ್ಮ ಗ್ರಾಮದ ಸೋಮು ಬಿನ್ ಪೆದ್ದ ವೆಂಕಟರಾಮಪ್ಪ ರವರು ಕಾರಿನಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಕರೆತಂದು ದಾಖಲಿಸಿರುತ್ತಾರೆ, ಅದುದರಿಂದ ಸದರಿ ಮೇಲ್ಕಂಡ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರನ್ನು ಪಡೆದುಕೊಂಡು ಬೆಳಗಿನ ಜಾವ 1-50 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣೆಯಲ್ಲಿ  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.338/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

  ದಿನಾಂಕ: 01/08/2021 ರಂದು ಸಂಜೆ 6.30 ಗಂಟೆಗೆ ಎಂ.ರಾಜಪ್ಪ ಬಿನ್ ಮಾರಪ್ಪ, 64 ವರ್ಷ, ತಿಗುಳರು, ನಿವೃತ್ತ ಸೈನಿಕರು, ವಾಸ: ಜೆ.ಕುರುಬರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ 1ನೇ ಅರುಣ್ ಕುಮಾರ್, 2ನೇ ಮಂಜುಶ್ರೀ ಮತ್ತು 3ನೇ ಭರತ್ ಮಂಜು ಎಂಬ ಮೂರು ಜನ ಮಕ್ಕಳಿರುತ್ತಾರೆ. ಈ ಪೈಕಿ 1ನೇ ಅರುಣ್ ಕುಮಾರ್ ರವರು ಸಿಕಿಂದ್ರಾಬಾದ್ ನ ಮಿಲಿಟರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಈಗ್ಗೆ 15 ದಿನಗಳ ಹಿಂದೆ ಅರುಣ್ ಕುಮಾರ್ ರಜೆಯ ಪ್ರಯುಕ್ತ ಗ್ರಾಮಕ್ಕೆ ವಾಪಸ್ಸು ಬಂದಿದ್ದರು. ಅರುಣ್ ಕುಮಾರ್ ರವರ ಹೆಂಡತಿ ಶಿಲ್ಪ ಮತ್ತು ಮಗನು ಅವರ ತವರೂರಾದ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರಿಗೆ ಹೋಗಿರುತ್ತಾರೆ. ಅವರನ್ನು ನೋಡಿಕೊಂಡು ಬರಲು ಅರುಣ್ ಕುಮಾರ್ ರವರು ತನ್ನ ಸ್ನೇಹಿತನಾದ ನಾಗೇಶ್ ಬಿನ್ ಈರಪ್ಪ ಎಂಬುವರ ಕೆ.ಎ-40 ವಿ-3009 ಅಪ್ಪಾಚಿ ಬೈಕ್ ನಲ್ಲಿ ದಿನಾಂಕ:23/07/2021 ರಂದು ಸಂಜೆ 6.00 ಗಂಟೆಗೆ ತಮ್ಮ ಗ್ರಾಮದಿಂದ ಯಲ್ದೂರು ಗ್ರಾಮಕ್ಕೆ ಹೋದನು. ನಂತರ ಸಂಜೆ 7.30 ಗಂಟೆಗೆ ತನ್ನ ಮೊಬೈಲ್ ಗೆ ಯಾರೋ ಸಾರ್ವಜನಿಕರು ಕರೆ ಮಾಡಿ ಅರುಣ್ ಕುಮಾರ್ ರವರಿಗೆ ವೈಜಕೂರು-ಹೊಸಹಳ್ಳಿ ಮಾರ್ಗ ಮದ್ಯೆ ಅಪಘಾತವಾಗಿರುತ್ತೆ ನೀವು ಬರಬೇಕೆಂದು ತಿಳಿಸದರು. ತಕ್ಷಣ ತಾನು ಮತ್ತು ತಮ್ಮ ಗ್ರಾಮದ ಜೆ.ಎನ್.ಹನುಮಂತು ಬಿನ್ ಲೇಟ್ ನಂಜಪ್ಪ ರವರು ಬಂದು ನೋಡಲಾಗಿ ವಿಷಯ ನಿಜವಾಗಿರುತ್ತೆ. ನಂತರ ಆಪಘಾತದಲ್ಲಿ ತನ್ನ ಮಗ ಅರುಣ್ ಕುಮಾರ್ ರವರ ಬಲಕಾಲು, ಬಲಕೈ ರಕ್ತಗಾಯವಾಗಿದ್ದು, ಮೈ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. ನಂತರ ಅರುಣ್ ಕುಮಾರ್ ರವರನ್ನು ಆಂಬುಲೇನ್ಸ್ ನಲ್ಲಿ ಬೆಂಗಳೂರಿನ ಕಾಮ್ಯಾಂಡೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡುರುತ್ತೇವೆ.  ನಂತರ ಅರುಣ್ ಕುಮಾರ್ ರವರಿಗೆ ಅಪಘಾತದ ಬಗ್ಗೆ ಕೇಳಿದಾಗ ತಾನು ಯಲ್ದೂರು ಗ್ರಾಮಕ್ಕೆ ಹೋಗಲು ಕಡಪ-ಬೆಂಗಳೂರು ರಸ್ತೆಯ ವೈಜಕೂರು-ಹೊಸಹಳ್ಳಿ ಗ್ರಾಮಗಳ ಮದ್ಯೆ ಸಂಜೆ ಸುಮಾರು 7.00 ಗಂಟೆಯಲ್ಲಿ ಹೋಗುತ್ತಿದ್ದಾಗ, ಚಿಂತಾಮಣಿ ಕಡೆಯಿಂದ ಬಂದ ಕ್ವಾಲೀಸ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಬೈಕ್ ಗೆ ಮುಂಭಾಗದಿಂದ ಡಿಕ್ಕಿ ಹೊಡೆಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿದ್ದು, ಅದರ ನಂಬರ್ ನೋಡಲಾಗಿ ಕೆಎ-05 ಜಡ್-921 ನೊಂದಣಿ ಸಂಖ್ಯೆಯ ಕ್ವಾಲೀಸ್ ವಾಹನವಾಗಿರುತ್ತೆಂದು ತಿಳಿಸಿದನು. ತಾನು ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಈ ದಿನ ದಿನಾಂಕ:01/08/2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ತನ್ನ ಮಗನಿಗೆ ಅಪಘಾತಪಡಿಸಿದ ಕೆಎ-05 ಜಡ್-921 ನೊಂದಣಿ ಸಂಖ್ಯೆಯ ಕ್ವಾಲೀಸ್ ವಾಹನ ಮತ್ತು ಅದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.339/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ: 02/082021 ರಂದು ಬೆಳಿಗ್ಗೆ 11.00 ಗಂಟೆಗೆ ನ್ಯಾಯಾಲಯ ಕರ್ತವ್ಯದ CPC-339 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ:01/08/2021 ರಂದು ಮಧ್ಯಾಹ್ನ 3.15 ಗಂಟೆಯಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ.ನಾರಾಯಣಸ್ವಾಮಿ.ಕೆ, ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಮಲ್ಲಿಕಾಪುರ – ಹೊಸಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ತೋಪಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ, ಸುಬ್ರಮಣಿ, ಸಿ.ಹೆಚ್.ಸಿ-152 ನಾಗರಾಜ, ಸಿ.ಹೆಚ್.ಸಿ-199 ನಾಗರಾಜ, ಸಿ.ಪಿ.ಸಿ-24 ನರೇಶ್ ರವರೊಂದಿಗೆ KA-40-G-326 ನಂಬರಿನ ಸರ್ಕಾರಿ ಜೀಪಿನಲ್ಲಿ ಬೆಂಗಳೂರು-ಕಡಪ ರಸ್ತೆಯಲ್ಲಿ ತಳಗವಾರದ ಬಳಿಗೆ ಹೋಗಿ ಅಲ್ಲಿಂದ ಮಲ್ಲಿಕಾಪುರ ಗ್ರಾಮದ ಕಡೆಗೆ ಹೋಗಿದ್ದು ಮಲ್ಲಿಕಾಪುರ-ಹೊಸಹಳ್ಳಿ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ನೀಲಗಿರಿ ತೋಪಿನ ಒಂದು ಮೂಲೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸದರಿ ನೀಲಗಿರಿ ಮರಗಳ ಕೆಳಗೆ 3-4 ಜನರು ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದು ಸದರಿಯವರನ್ನು ಪೊಲೀಸರು ಸುತ್ತುವರಿದು ಹಿಡಿದುಕೊಳ್ಳುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿಹೋಗಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ ಪಂದ್ಯಕ್ಕೆ ಇಟ್ಟಿದ್ದ ಒಂದು ಕೋಳಿ ಹುಂಜ ಮತ್ತು ಸ್ಥಳದಲ್ಲಿದ್ದ (1) ಕೆಎ-40-ಜೆ-2213 ಹೀರೋಹೊಂಡಾ ಸ್ಪೆಂಡರ್ , (2) ಕೆಎ-43-ಹೆಚ್-4073 ಪಲ್ಸರ್, (3) ಕೆಎ 67- ಹೆಚ್-1996 ಸ್ಪೆಂಡರ್ ಪ್ಲಸ್ ದ್ವಿ ಚಕ್ರ ವಾಹನಗಳಿದ್ದು, ಸಂಜೆ 4.00 ರಿಂದ 5.00 ಗಂಟೆಯವರೆಗೆ ಪಂಚನಾಮೆಯ ಮೂಲಕ 3 ದ್ವಿ ಚಕ್ರ ವಾಹನಗಳನ್ನು, ಒಂದು ಕೋಳಿ ಹುಂಜವನ್ನು ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದವರ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

4. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 279,337 ಐ.ಪಿ.ಸಿ :-

  ದಿನಾಂಕ 02-08-2021 ರಂದು ಮದ್ಯಾಹ್ನ 14-30 ಗಂಟೆ ಸಮಯದಲ್ಲಿ  ಪಿರ್ಯಾದಿದಾರರಾದ H.R.ಗಂಗಾಧರಪ್ಪ ಬಿನ್ ರಾಮಪ್ಪ, 57 ವರ್ಷ, ಪ.ಜಾತಿ ಜನಾಂಗ,ಪೂಜಾರಿ, ಹೊನ್ನಪ್ಪನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 02-08-2021 ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಹೊನ್ನಪ್ಪನಹಳ್ಳಿ ಗ್ರಾಮದಿಂದ ಅಲಕಾಪುರ ಗ್ರಾಮದ ಸೋಮೇಶ್ವರ ದೇವಸ್ಥಾನಕ್ಕೆ ಓಮಿನಿ ಕೆಎ-40,ಎಮ್-8524 ವಾಹನದಲ್ಲಿ ನಾವುಗಳು ಹೋಗುತ್ತಿದ್ದಂತಹ ಸಂದರ್ಭದಲ್ಲಿ ಅಲಕಾಪುರ ಸರ್ಕಲ್ ಹತ್ತಿರ ಗೌರಿಬಿದನೂರಿನ ಕಡೆಯಿಂದ ಬಂದ ಮಾರುತಿ ಸುಜುಕಿ ಬ್ರೀಜ್ ಕೆಎ-03, ಎನ್ ಸಿ-8773 ನ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ರಭಸವಾಗಿ ಬಂದು ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ನಮ್ಮ ವಾಹನವನ್ನು ಚಲಾಯಿಸುತ್ತಿದ್ದ ಪುಟ್ಟರಾಜು ರವರಿಗೆ ಕಾಲು ಮತ್ತು ಎದೆಯ ಭಾಗಕ್ಕೆ ರಕ್ತ ಭರಿತ ಗಾಯಗಳಾಗಿರುವುದರಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು ಮತ್ತು ನನಗೂ ಸಹಾ ಕಾಲುಗಳಿಗೆ ಸಣ್ಣ ಪುಟ್ಟ ಮೂಗೇಟುಗಳಾಗಿದ್ದು, ಗಾಡಿಯ ಮುಂಭಾಗ ಪೂರ್ತಿ ಡ್ಯಾಮೇಜ್ ಆಗಿರುತ್ತದೆ. ಆದ್ದರಿಂದ ಅಪಘಾತ ಪಡಿಸಿದ ಮಾರುತಿ ಸುಜುಕಿ ಬ್ರೀಜ್ ಕೆಎ-03,ಎನ್ ಸಿ-8773 ನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರ.ವ.ವರದಿಯನ್ನು ದಾಖಲಿಸಿರುತ್ತೆ.

 

5. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.91/2021 ಕಲಂ. 323,324,504,34 ಐ.ಪಿ.ಸಿ :-

  ದಿನಾಂಕ.01.08.2021 ರಂದು ಸಂಜೆ 4.30 ಗಂಟೆಗೆ ಗಾಯಾಳು ಪೂಜಪ್ಪ ಲೇಟ್ ಯರ್ರಪ್ಪ, ಸಿದ್ದಾರ್ಥನಗರ, ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನಂದರೆ, ದಿನಾಂಕ.01.08.2021 ರಂದು ಮದ್ಯಾಹ್ನ ಸುಮಾರು 12.30 ಗಂಟೆಯಲ್ಲಿ ನಮ್ಮ ಅಣ್ಣನಾದ ಮಂಜುನಾಥ ರವರು ಮನೆಯಲ್ಲಿರುವ ರೇಷ್ಮೇ ನೂಲು ತೆಗೆಯುವ ಪಿಲೇಚರ್ ಸರಿಮಾಡಿಕೊಳ್ಳುತ್ತಿದ್ದಾಗ ನಮ್ಮ ಅಣ್ಣನ ಮಕ್ಕಳಾದ ವೆಂಕಟೇಶ್ ಬಿನ್ ಚಿಕ್ಕಯರ್ರಪ್ಪ, ದೇವರಾಜ ಇವರ ತಂಗಿ ಅನಿತಾ ಮತ್ತು ತಾಯಿ ವೆಂಕಟರತ್ನಮ್ಮ ರವರು ನಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತಿದ್ದು, ಆಗ ನಾನು ಅಣ್ಣನ ಮೇಲೆ ಗಲಾಟೆ ಮಾಡಬಾರದೆಂತ ಕೇಳಿದ್ದಕ್ಕೆ ದೇವರಾಜ ನನ್ನ ಮಗನೇ ನೀನು ಯಾರು ಕೇಳುವುದಕ್ಕೆ ಎಂದು ಕೆಟ್ಟ ಮಾತುಗಳಿಂದ ಬೈದು ಕಲ್ಲುನಿಂದ ತಲೆಯ ಬಲಭಾಗ ಹೊಡೆದು ರಕ್ತಗಾಯ ಪಡಿಸಿದ್ದು, ವೆಂಕಟೇಶ್ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಹೆಂಗಸರು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು ಗಲಾಟೆ ಮಾಡುತ್ತಿದ್ದಾಗ ಗಂಗರಾಜ ಬಿನ್ ಯರ್ರಪ್ಪ ಮತ್ತು ತನ್ನ ಹೆಂಡತಿ ಸುನಂದಮ್ಮ ರವರು ಬಂದು ಜಗಳ ಬಿಡಿಸಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂತ, ಪಿಲೇಚರ್ ವಿಚಾರದಲ್ಲಿ ಗಲಾಟೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

6. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.92/2021 ಕಲಂ. 323,324,504,34 ಐ.ಪಿ.ಸಿ :-

  ದಿನಾಂಕ.01.08.2021 ರಂದು ಸಂಜೆ 5.30 ಗಂಟೆಗೆ ಗಾಯಾಳು ವೆಂಕಟೇಶ್ ಬಿನ್ ಚಿಕ್ಕಯರ್ರಪ್ಪ, ಸಿದ್ದಾರ್ಥನಗರ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನಂದರೆ, ನಮಗೆ ಮತ್ತು ನಮ್ಮ ಚಿಕ್ಕಪ್ಪನಾದ ಪೂಜಪ್ಪ ಬಿನ್ ಲೇಟ್ ಯರ್ರಪ್ಪ ರವರಿಗೆ ಮನೆ ಮತ್ತು ಖಾಲಿ ಜಾಗದ ಭಾಗದ ವಿಚಾರದಲ್ಲಿ ಮನಸ್ತಾಪಗಳಿದ್ದು, 2-3 ವರ್ಷಗಳಿಂದ ಭಾಗ ಮಾಡಿಕೊಂಡುವಂತೆ ಕೇಳಿದರೂ ಭಾಗ ಮಾಡಿಕೊಟ್ಟಿರುವುದಿಲ್ಲ. ಹೀಗಿರುವಾಗ ದಿನಾಂಕ.01.08.2021 ರಂದು ಮದ್ಯಾಹ್ನ ಸುಮಾರು 12.15 ಗಂಟೆಯಲ್ಲಿ ನಮ್ಮ ಚಿಕ್ಕಪ್ಪನಾದ ಪೂಜಪ್ಪ, ಗಂಗರಾಜಬಿನ್, ಮಂಜುನಾಥ ಬಿನ್  ಯರ್ರಪ್ಪ ಲೇಟ್ ರವರು ಮನೆಯಲ್ಲಿದ್ದ ಪಿಲೇಚರ್ ಕಿತ್ತು ಹಾಕುತ್ತಿದ್ದು, ಆಗ ನಾವು ಭಾಗ ಮಾಡಿಕೊಡದೆ ಏಕೆ ಕಿತ್ತು ಹಾಕುತ್ತಿರುವುದೆಂತ ಕೇಳಿದ್ದಕ್ಕೆ ಪೂಜಪ್ಪ ರವರು ನೀವು ಯಾರು ಕೇಳುವುದಕ್ಕೆ ನನ್ನ ಮಗನೇ ಇಲ್ಲಿಂದ ಹೋಗೋ ಎಂದು ಕೆಟ್ಟ ಮಾತುಗಳಿಂದ ಬೈದು ಕಲ್ಲುನಿಂದ ತಮ್ಮ ದೇವರಾಜ ರವರ ತಲೆಯ ಬಲಭಾಗ ಹೊಡೆದು ರಕ್ತಗಾಯ ಪಡಿಸಿದ್ದು, ಆಗ ಬಿಡಿಸಲು ಅಡ್ಡ ಹೋದ ನನಗೆ ಗಂಗರಾಜ ಕೋಲುನಿಂದ ಮೈ ಮೇಲೆ ಹೊಡೆದು, ಮಂಜುನಾಥ ಕೈಗಳಿಂದ ಮೈ ಮೇಲೆ ಗುದ್ದಿ ನೋವುಂಟು ಮಾಡಿ ಪಿಲೇಚರ್ ತೆಗೆಯಲು ಅಡ್ಡ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು  ಗಲಾಟೆ ಮಾಡುತ್ತಿದ್ದಾಗ ತನ್ನ ತಂಗಿ ಅನಿತಾ ಮತ್ತು ತಾಯಿ ವೆಂಕಟರತ್ನಮ್ಮ ರವರು ಜಗಳ ಬಿಡಿಸಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂತ, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 02-08-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080