ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 174/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ: 02/07/2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ   ದಿನಾಂಕ: 01/07/2021 ರಂದು ಸಂಜೆ 6-00 ಗಂಟೆಗೆ ಹೆಚ್ ಸಿ-212 ಶ್ರೀನಾಥ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ.01/07/2021 ರಂದು ಸಂಜೆ  ತಿಮ್ಮಂಪಲ್ಲಿ ಗ್ರಾಮದ ಬಳಿ ಗ್ರಾಮ ಗಸ್ತು ಕರ್ತವ್ಯದಲ್ಲಿದ್ದಾಗ ಗೋರ್ತಪಲ್ಲಿ ಗ್ರಾಮದ ಬಳಿ ಹುಣಸೆಬೀಜವನ್ನು ಬಳಸಿ ಜೂಜಾಟ ಆಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು ನಾನು ಮತ್ತು ಪಿಸಿ-387 ಮೋಹನ್ ಕುಮಾರ್ ರವರು  ತಿಮ್ಮಂಪಲ್ಲಿ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಜೊತೆಯಲ್ಲಿ ಕರೆದುಕೊಂಡು ಗೋರ್ತಪಲ್ಲಿ ಗ್ರಾಮದ ಬಳಿ ಇರುವ ಅರಳಿಕಟ್ಟೆ ಬಳಿ ಹೋಗಿ  ಮರೆಯಲ್ಲಿ ದೂರದಿಂದ ನೋಡಲಾಗಿ  1 ನೇ ನಂಬರ್ ಗೆ 200/- ರೂ, 2ನೇ ನಂಬರಿಗೆ 200/- ರೂ , 3 ನೇ ನಂಬರಿಗೆ  200/- ರೂ ಎಂದು ಹಣವನ್ನು ಪಣವಾಗಿ ಕಟ್ಟಿ ಜೂಜಾಟವಾಡುತ್ತಿದ್ದು, ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಎಲ್ಲರೂ ಓಡಿ ಹೋಗಿದ್ದು, ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜೂಜಾಟಕ್ಕೆ ಪಣವಾಗಿ ಕಟ್ಟಿದ್ದ 2900/- ರೂ ಹಣ, 2 ಹಿಡಿಯಷ್ಟು ಹುಣಸೇ ಬೀಜಗಳು ಮತ್ತು ಸ್ಥಳದಲ್ಲಿದ್ದ ಎ,ಪಿ-04-ಬಿ.ಡಿ-8589, ಎ.ಪಿ-02-ಎ.ವೈ-2078, ಕೆ.ಎ-40-ಎಸ್-6925 ನೊಂದಣಿ ಸಂಖ್ಯೆಯ  ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಸಂಜೆ 6-00 ಗಂಟೆಗೆ  ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಹಾಜರುಪಡಿಸುತ್ತಿದ್ದು  ದ್ವಿ ಚಕ್ರ ವಾಹನಗಳ ಸವಾರರ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣೆಯಲ್ಲಿ ಎನ್ ಸಿಆರ್ 171/2021 ರಂತೆ  ದಾಖಲಿಸಿಕೊಂಡಿರುತ್ತೆ.ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 02-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 89/2021 ಕಲಂ. 15(A),32(3) ಕೆ.ಇ ಆಕ್ಟ್:-

  ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ನಾರಾಯಣಸ್ವಾಮಿ.ಆರ್ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:02/07/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಠಾಣಾ ಸಿಬ್ಬಂದಿ ಹೆಚ್.ಸಿ-36 ವಿಜಯ್ ಕುಮಾರ್, ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಕಡದನಮರಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಠಾಣಾ ವ್ಯಾಪ್ತಿಯ ರಾಯಪ್ಪಲ್ಲಿ(ಹನುಮಯ್ಯಗಾರಹಳ್ಳಿ) ಗ್ರಾಮದ ವಾಸಿಯಾದ ಅನಿಲ್ ಕುಮಾರ್ ಬಿನ್ ಶಿವಾರೆಡ್ಡಿ ರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ-36 ವಿಜಯ್ ಕುಮಾರ್ ರವರೊಂದಿಗೆ ರಾಯಪ್ಪಲ್ಲಿ(ಹನುಮಯ್ಯಗಾರಹಳ್ಳಿ) ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 10-15 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಅನಿಲ್ ಕುಮಾರ್ ಬಿನ್ ಶಿವಾರೆಡ್ಡಿ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ವ್ಯಕ್ತಿಯನ್ನು  ಹಿಡಿದುಕೊಂಡು ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಅನಿಲ್ ಕುಮಾರ್ ಬಿನ್ ಶಿವಾರೆಡ್ಡಿ 27 ವರ್ಷ ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ರಾಯಪ್ಪಲ್ಲಿ(ಹನುಮಯ್ಯಗಾರಹಳ್ಳಿ) ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಡಲು ಯಾವುದಾದರೂ ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ತಿಳಿಸಿದರ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 09 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳು ಅವುಗಳ ಒಟ್ಟು 810 ಎಂ.ಎಲ್ ನ 316.17 ರೂಗಳು ಆಗಿರುತ್ತೆ,  2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು , 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಅಮಾನತ್ತುಪಡಿಸಿಕೊಂಡ ಮಾಲು ಮತ್ತು ಆರೋಪಿಯೊಂದಿಗೆ ಮಧ್ಯಾಹ್ನ 12-00 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಠಾಣೆಯ ಮೊ,ಸಂಖ್ಯೆ:89/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 90/2021 ಕಲಂ. 15(A),32(3) ಕೆ.ಇ ಆಕ್ಟ್:-

  ಈ ದಿನ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ಆರ್.ನಾರಾಯಣಸ್ವಾಮಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಈ ದಿನ ದಿನಾಂಕ:02/07/2021 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಸೀತಾರಾಮಪುರ ಗ್ರಾಮದ ವಾಸಿಯಾದ ಆಂಜಪ್ಪ ಬಿನ್ ರಾಮಕೃಷ್ಣಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ-36 ವಿಜಯ್ ಕುಮಾರ್ ರವರೊಂದಿಗೆ ಸೀತಾರಾಮಪುರ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 12-45 ಗಂಟೆಗೆ ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಸೀತಾರಾಮಪುರ ಗ್ರಾಮದ ಆಂಜಪ್ಪ ಬಿನ್ ರಾಮಕೃಷ್ಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿದ್ದ ವ್ಯಕ್ತಿಯನ್ನು  ಹಿಡಿದುಕೊಂಡು ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಆಂಜಪ್ಪ ಬಿನ್ ರಾಮಕೃಷ್ಣಪ್ಪ 36 ವರ್ಷ ಭೋವಿ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ಸೀತಾರಾಮಪುರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶವನ್ನು ಮಾಡಿಕೊಡಲು ಯಾವುದಾದರೂ ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ತಿಳಿಸಿದರ ಮೇರೆಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ನೋಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿದ್ದರಿಂದ  ಸದರಿಯವುಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ಸಾಮರ್ಥ್ಯದ 05 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 175.65 ರೂಗಳ 450 ಎಂ.ಎಲ್ ಮದ್ಯ ಆಗಿರುತ್ತೆ, 90 ಎಂ.ಎಲ್ ಸಾಮರ್ಥ್ಯದ 05 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 175.65 ರೂಗಳ 450 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಮಧ್ಯಾಹ್ನ 01-00 ಗಂಟೆಯಿಂದ ಮಧ್ಯಾಹ್ನ 01-45 ಗಂಟೆಯವರೆಗೆ ಕೈಗೊಂಡ ಪಂಚನಾಮೆ ಮುಖಾಂತರ ಅಮಾನತ್ತುಪಡಿಸಿಕೊಂಡು ಅಮಾನತ್ತುಪಡಿಸಿಕೊಂಡ ಮಾಲು, ಅಮಾನತ್ತು ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದು ಆರೋಪಿಯನ್ನು ಮತ್ತು ಮಾಲನ್ನು ಅಮಾನತ್ತು ಪಂಚನಾಮೆಯೊಂದಿಗೆ ನೀಡಿದ ದೂರನ್ನು ಪಡೆದು ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 94/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ01/07/2021 ರಂದು ಮದ್ಯಾಹ್ನ 01-20  ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 01/07/2021 ರಂದು ಮದ್ಯಾಹ್ನ 12-00  ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು  ಮನ್ನಾರಪುರ ಗ್ರಾಮದ ವಾಸಿ ಶ್ರೀಮತಿ ಸರೋಜಮ್ಮ ಕೊಂ ಲೇಟ್ ಸದಾನಂದ.30 ವರ್ಷ. ಆದಿ ಕರ್ನಾಟಕ ಜನಾಂಗ. ಕೂಲಿ ಕೆಲಸ. ಮನ್ನಾರಪುರ ಗ್ರಾಮದ ತನ್ನ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 95/2021 ಕಲಂ. 279,337,304(A) ಐ.ಪಿ.ಸಿ :-

  ದಿನಾಂಕ: 02/07/2021 ರಂದು ಬೆಳಗ್ಗೆ 09-00 ಗಂಟೆಯಲ್ಲಿ   ಎಸ್. ರಾಜಶೇಖರ್  ಬಿನ್ ಲೇಟ್ ಎಸ್. ಸುಬ್ಬರಾಯಡು   47ವರ್ಷ  ಬೆಸ್ತರು. ಲಾರಿಯ ಚಾಲಕ ಕೆಲಸ. ವಾಸ: 6-1-453-A. ಲಕ್ಷ್ಮೀನಗರ್ ಅನಂತಪುರ ಟೌನ್ ಆಂದ್ರ ಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು  03 ವರ್ಷಗಳಿಂದ AP02TH3366  ನಂಬರಿನ ಲಾರಿಯಲ್ಲಿ ಚಾಲಕ  ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ.  ದಿನಾಂಕ: 29/06/2021 ರಂದು  ತೆಲಂಗಾಣದ ನಿಜಾಂಬಾದ್ ನಿಂದ  ಬೆಂಗಳೂರುಗೆ  ಮಾಲೀಕರು ಅಕ್ಕಿಯನ್ನು ಲೋಡು  ಮಾಡಿ ಕಳುಹಿಸಿದ್ದು ಅದರಂತೆ ತಾನು ನಿಜಾಮಮಬಾದ್ ನಿಂದ ಬೆಂಗಳೂರುಗೆ  ಬಂದು ಬೆಂಗಳೂರುನಲ್ಲಿ ಅನ್ ಲೋಡು ಮಾಡಿಕೊಂಡು  ನಂತರ ವಾಪಸ್ಸು ಅನಂತಪುರಕ್ಕೆ ಹೋಗಲು  ದಿನಾಂಕ: 01/07/2021 ರಂದು  ರಾತ್ರಿ  ಬೆಂಗಳೂರು  ಹೈದರಾಬಾದ್ ರಸ್ತೆಯಲ್ಲಿ  ಬಂದು  ಸುಮಾರು 11-30 ಗಂಟೆಯ ಸಮಯದಲ್ಲಿ  ಚಿಕ್ಕಬಳ್ಳಾಪುರ ತಾಲ್ಲೂಕು ಎನ್.ಹೆಚ್.44 ರಸ್ತೆಯ  ದೊಡ್ಡಪೈಲಗರ್ಕಿ  ಗ್ರಾಮದ  ಸಮೀಪ  ಎನ್.ಹೆಚ್.44 ರಸ್ತೆಯಲ್ಲಿ ಹೋಗುತ್ತಿದ್ದಾಗ   ಹಂಪ್ಸ್ ನಲ್ಲಿ  ತಾನು  ವಾಹನವನ್ನು  ನಿಧಾನವಾಗಿ ಚಾಲನೆ ಮಾಡುತ್ತಿದ್ದಾಗ ಅದೇ ಸಮಯಕ್ಕೆ  ಹಿಂದುಗಡೆಯಿಂದ ಒಂದು ಲಾರಿಯ  ಚಾಲಕನು ಆತನ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ತಾನು ಚಾಲನೆ ಮಾಡುತ್ತಿದ್ದ   AP-02-TH-3366 ನಂಬರಿನ  ಲಾರಿಯ  ಹಿಂದುಗಡೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದನು. ಅದರ ಪರಿಣಾಮ  ಡಿಕ್ಕಿ ಹೊಡೆದ ರಭಸಕ್ಕೆ  ತನ್ನ ಲಾರಿಯು ರಸ್ತೆಯ ಮದ್ಯಭಾಗದ  ಡಿವೈಡೆರ್ ಮೇಲೆ  ಹತ್ತಿ ಬಲಬದಿಯ ರಸ್ತೆಯಲ್ಲಿ  ಬರುತ್ತಿದ್ದ ಯಾವುದೋ ಲಾರಿಗೆ ತಗುಲಿಸಿ ನಂತರ ಸೇವಾ ರಸ್ತೆಯಲ್ಲಿ ಬಂದು ನಿಂತುಕೊಂಡಿತು.  ತಾನು ಲಾರಿಯಿಂದ  ಇಳಿದು ನೋಡಲಾಗಿ  ತನ್ನ ಲಾರಿಯ  ಹಿಂಭಾಗ ಮತ್ತು ಮುಂಭಾಗ  ಎಡಭಾಗ ದಲ್ಲಿ  ಜಖಂಗೊಂಡಿತ್ತು.  ತನಗೆ ಯಾವುದೇ  ಗಾಯ ವಗೈರೆ ಆಗಿರುವುದಿಲ್ಲ. ತನ್ನ ಲಾರಿಯಲ್ಲಿದ್ದ ಕ್ಲೀನರ್ ವೆಂಕಟೇಶಲು ರವರಿಗೆ  ಸೊಂಟಕ್ಕೆ ಮೂಗೇಟುಗಳಾಗಿತ್ತು.  ತನ್ನ ಲಾರಿಗೆ ಡಿಕ್ಕಿ ಹೊಡೆಯಿಸಿದ ಲಾರಿಯನ್ನು  ನೋಡಲಾಗಿ UP-13-AT-4282  ನಂಬರಿನ ಲಾರಿಯು ಹೆದ್ದಾರಿಯ  ಎಡಭಾಗದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇವಾರಸ್ತೆಯಲ್ಲಿ ನಿಂತುಕೊಂಡಿತ್ತು. ನೋಡಲಾಗಿ ಲಾರಿಯ ಮುಂಭಾಗ  ಜಖಂ ಗೊಂಡಿತ್ತು.  ಲಾರಿಯಲ್ಲಿದ್ದವರ ಬಗ್ಗೆ ವಿಚಾರ ಮಾಡಲಾಗಿ ಕ್ಲೀನರ್ ಭುವನೇಶ್ವರ ಸಿಂಗ್ ಎಂಬುದಾಗಿದ್ದು ಆತನಿಗೆ ಗಾಯಗಳಾಗಿತ್ತು. ಮತ್ತು ಲಾರಿಯಲ್ಲಿದ್ದ  ಚಾಲಕ  ಧನಪತ್ ಸಿಂಗ್  ಸುಮಾರು 70 ವರ್ಷ  ಎಂಬುವವನಿಗೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಪಘಾತ ಮಾಡಿದ  ಚಾಲಕನು ಅಲ್ಲಿಂದ ಓಡಿಹೋಗಿರುತ್ತಾನೆಂತ ತಿಳಿಯಿತು.  ಸ್ಥಳಕ್ಕೆ ಬಂದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ  ಆಂಬುಲೆನ್ಸ್ ನಲ್ಲಿ  ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ  ಕಳುಹಿಸಿಕೊಟ್ಟೆವು.  ಈ ಅಪಘಾತವು UP-13-AT-4282  ನಂಬರಿನ ಲಾರಿಯ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿರುತ್ತದೆ. ಈ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ  ಮೇರೆಗೆಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 297/2021 ಕಲಂ. 279,337  ಐ.ಪಿ.ಸಿ :-

  ದಿನಾಂಕ: 02/07/2021 ರಂದು ಬೆಳಿಗ್ಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಹರೀಶ ಬಿನ್ ಗೋವಿಂದಪ್ಪ, 28 ವರ್ಷ, ಬೆಸ್ತರು, ಚಾಲಕ ವೃತ್ತಿ, ತಳಗವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 08.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 01/07/2021 ರಂದು ಬೆಳಿಗ್ಗೆ 09.00 ಗಂಟೆ ಸಮಯದಲ್ಲಿ ತನ್ನ ಮದುವೆ ಕಾರ್ಯಕ್ರಮಕ್ಕೆ ದಿನಸಿ ವಸ್ತುಗಳು ಹಾಗೂ ಇನ್ನಿತರೆ ವಸ್ತುಗಳನ್ನು ತೆಗೆದುಕೊಂಡು ಬರಲು ತನ್ನ ಬಾಬತ್ತು KA-06 D-0655 ನೊಂದಣಿ ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಚಿಂತಾಮಣಿ ನಗರಕ್ಕೆ ಬಂದು ದಿನಸಿ ವಸ್ತುಗಳನ್ನು ತೆಗೆದುಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹೋಗಲು ಅದೇ ದಿನ ಸಂಜೆ 7.20 ಗಂಟೆ ಸಮಯದಲ್ಲಿ ತಾನು ಚಿಂತಾಮಣಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿ ಕೊಂಗನಹಳ್ಳಿ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತನ್ನ ಎದುರುಗಡೆಯಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ KA-40 A-6672 ನೊಂದಣಿ ಸಂಖ್ಯೆಯ ಟಾಟಾ ಏಸ್ ನ ಚಾಲಕನು ಆತನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಟಾಟಾ ಏಸ್ ವಾಹನಕ್ಕೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ಹಾಗೂ ತನಗೆ ಡಿಕ್ಕಿ ಹೊಡೆಸಿದ ಟಾಟಾ ಏಸ್ ವಾಹನಗಳು ಸಹ ಜಖಂಗೊಂಡಿರುತ್ತವೆ. ಈ ಅಪಘಾತದಿಂದ ತನ್ನ ತಲೆಯ ಬಲಗಡೆ, ಬಲಕೆನ್ನೆಗೆ ರಕ್ತಗಾಯವಾಗಿ ಎಡಕೈಗೆ ಮತ್ತು ಬಲಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಕೊಂಗನಹಳ್ಳಿ ಗ್ರಾಮದ ಗೇಟ್ ಬಳಿ ಇದ್ದ ಯಾರೋ ಸಾರ್ವಜನಿಕರು ತನ್ನನ್ನು ಉಪಚರಿಸಿ, ಅಪಘಾತವ ವಿಚಾರವನ್ನು ತಮ್ಮ ಸಂಬಂಧಿಕರಾದ ಚಿಂತಾಮಣಿ ನಗರ, ಅಗ್ರಹಾರದ ವಾಸಿಯಾದ ಶ್ರೀನಿವಾಸ ಬಿನ್ ಜೈರಾಮಪ್ಪ ರವರಿಗೆ ತಿಳಿಸಿದ್ದು, ಸದರಿಯವರು ಸ್ಥಳಕ್ಕೆ ಬಂದು ತನ್ನನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಅಪಘಾತಕ್ಕೀಡಾದ ಎರಡೂ ಟಾಟಾ ಏಸ್ ವಾಹನಗಳು ರಸ್ತೆಯ ಬದಿಯಲ್ಲಿ ಇರುತ್ತವೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವ ಮೇಲ್ಕಂಡ KA-40 A-6672 ನೊಂದಣಿ ಸಂಖ್ಯೆಯ ಟಾಟಾ ಏಸ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 122/2021 ಕಲಂ. 353,504,506,34 ಐ.ಪಿ.ಸಿ :-

  ಪಿರ್ಯಾದಿದಾರರಾದ ಮುಕ್ತಿಯಾರ್ ಪಾಷ ಎ.ಎಸ್.ಐ ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 02/07/2021 ರಂದು ಮಾನ್ಯ ಪಿಐ ಸಾಹೇಬರು ನನ್ನನ್ನು ಹಗಲು ರಕ್ಷಕ್ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಚಿಂತಾಮಣಿ ನಗರದಲ್ಲಿ ಅಜಾದ್ ಚೌಕ್ ಕಡೆ ಗಸ್ತು ಕರ್ತವ್ಯ ಮಾಡುತ್ತಿರುವಾಗ ಬೆಳಿಗ್ಗೆ 8.05 ಗಂಟೆಗೆ ಮಾನ್ಯ ಪಿಐ ಸಾಹೇಬರು ಪಟಾಲಮ್ಮ ವೃತ್ತದ ಬಳಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಪೊಲೀಸರು ಹಸುಗಳ ಕಳ್ಳತನ ಮಾಡಿರುವ ಅಪರಾಧಿಗಳನ್ನು ವಶಕ್ಕೆ ಪಡೆದುಕೊಳ್ಳುವ ವಿಚಾರದಲ್ಲಿ ಬಂದಿದ್ದು ಈ ವಿಚಾರದಲ್ಲಿ ಗಲಾಟೆ ನಡೆಯುತ್ತಿದ್ದೆ ನೀವು ತಕ್ಷಣ ಪಟಾಲಮ್ಮ ವೃತ್ತದ ಬಳಿ ಹೋಗಿ ಎಂದು ತಿಳಿಸಿದ್ದು,  ಮಾನ್ಯ ಪಿ.ಐ ಸಾಹೇಬರ ಆದೇಶದ ಮೇರೆಗೆ ನಾನು ಮತ್ತು ಅಪರಾಧ ವಿಭಾಗದ ಸಿಬ್ಬಂದಿಯಾದ ನಾಗಭೂಷಣ್ ಸಿ.ಹೆಚ್.ಸಿ-126, ರವೀಂದ್ರ ಸಿಪಿಸಿ-539 ರವರೊಂದಿಗೆ ಅಜಾದ್ ಚೌಕ್ ನಿಂದ ಪಟಾಲಮ್ಮ ವೃತ್ತದ ಬಳಿ 8.15 ಗಂಟೆಗೆ ಹೋಗಿ ನೋಡಲಾಗಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತವನಂಪಲ್ಲಿ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ರಾಜಶೇಖರ್ ಮತ್ತು ಅವರ ಸಿಬ್ಬಂದಿಯನ್ನು ರೇಷ್ಮಾ ಕೋಂ ಮಹಬೂಬ್ ಪಾಷ, ಸುನ್ನು ಮಗನಾದ ಅಪ್ರೀದ್, ಚಾಂದ್ ಪಾಷ ರವರ ಹೆಂಡತಿ ಮತ್ತು ಇತರರು ಗುಂಪು ಕಟ್ಟಿಕೊಂಡು ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುತ್ತಿದ್ದರು. ತಕ್ಷಣ ನಾವು ಹೋಗಿ ವಿಚಾರ ಕೇಳಲು ಮುಂದಾದಾಗ ನನ್ನ ಹಾಗೂ ನಾಗಭೂಷಣ್.ಸಿಹೆಚ್.ಸಿ-126, ರವೀಂದ್ರ ಸಿಪಿಸಿ-539 ಸಮವಸ್ರದಲ್ಲಿದ್ದ ನಮ್ಮ ಮೇಲೆ ಮೇಲ್ಕಂಡವರು ಹಲ್ಲೆ ಮಾಡಲು ಪ್ರಯತ್ನಿಸಿ, ಕೇಳಲು ನೀವ್ಯಾರೆಂದು ಲೋಫರ್ ನನ್ನ ಮಕ್ಕಳೇ ಸೂಳೆ ಮಕ್ಕಳೆ ನಿಮ್ಮನ್ನು ಸಾಯಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿ ಸಕರ್ಾರಿ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ. ಆದ್ದರಿಂದ ರೇಷ್ಮಾ ಹಾಗೂ ಇತರರ ವಿರುದ್ದ ಕಾನೂನು ಕ್ರಮ ಜರುಗಿಸಲು ಠಾಣಾಧಿಕಾರಿಗಳಿಗೆ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.79/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ:01/07/2021 ರಂದು ಸಂಜೆ 17-15 ಗಂಟೆಗೆ ಪಿ.ಎಸ್.ಐ ರವರು  ಮಾಲು, ಪಂಚನಾಮೆ, ಆಸಾಮಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ದಿನಾಂಕ:01/07/2021 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ  ನನಗೆ ಬಾತ್ಮೀದಾರರಿಂದ ದಿಂಬಾರ್ಲಹಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನ ಹಿಂಭಾಗದಲ್ಲಿನ ಖಾಲಿ ಜಾಗದಲ್ಲಿ ಮರದ ಕೆಳಗೆ ಯಾರೋ ಕೆಲವು ಆಸಾಮಿಗಳು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಬಾತ್ಮಿ ಬಂದಿದ್ದು, ಸದರಿ ಆಸಾಮಿಗಳ ಮೇಲೆ ದಾಳಿ ಮಾಡಿ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಘನ ನ್ಯಾಯಾಲಯದಿಂದ ಠಾಣೆಯ ನ್ಯಾಯಾಲಯ ಸಿಬ್ಬಂದಿಯಾದ ಸಿ.ಪಿ.ಸಿ 490 ಸೋಮಶೇಖರ ರವರ ಮೂಲಕ ಅನುಮತಿಯನ್ನು ಪಡೆದುಕೊಂಡು ನಂತರ ಠಾಣೆಯ ಸಿಬ್ಬಂಧಿಯವರಾದ ಸಿ.ಹೆಚ್.ಸಿ-186 ನರಸಿಂಹಯ್ಯ, ಸಿ.ಪಿ.ಸಿ 91 ಮಂಜುನಾಥ  ಸಿ.ಪಿ.ಸಿ 557 ಶ್ರೀನಿವಾಸ ಮೂರ್ತಿ, ಸಿ.ಪಿ.ಸಿ 200 ಚಂದ್ರ ಶೇಖರ್  ಜೀಫ್ ಚಾಲಕನಾದ ಎಪಿ.ಸಿ 190 ರವರೊಂದಿಗೆ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-60 ನಲ್ಲಿ ದಿಬ್ಬೂರಹಳ್ಳಿ ಸರ್ಕಲ್ ನಿಂದ ರಾಯಪ್ಪನಹಳ್ಳಿ ಗ್ರಾಮದ ಮೂಲಕ ದಿಂಬಾರ್ಲಹಳ್ಳಿ ಗ್ರಾಮದ ಬಳಿ ಹೋಗಿ ಮುಖ್ಯ ರಸ್ತೆಯಲ್ಲಿ ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರನ್ನು ಬರಮಾಡಿಕೊಂಡು  ಪಂಚರೊಂದಿಗೆ ದಿಂಬಾರ್ಲಹಳ್ಳಿ ಗ್ರಾಮದ ಶ್ರೀರಾಮ ದೇವಸ್ಥಾನದ ಬಳಿ ಮರೆಯಲ್ಲಿ ಜೀಫನ್ನು ನಿಲ್ಲಿಸಿ ನಡೆದುಕೊಂಡು ದೇವಸ್ಥಾನ ಹಿಂಭಾಗಕ್ಕೆ ಹೋಗಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ದೇವಸ್ಥಾನ ಹಿಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ 4 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಒಬ್ಬ ಆಸಾಮಿಯು ಅಂದರ್ 100 ರೂ ಎಂತಲೂ ಮತ್ತೊಬ್ಬ ಆಸಾಮಿಯ ಬಾಹರ್ 100 ರೂ ಎಂತಲೂ, ಇನ್ನುಳಿದ ಆಸಾಮಿಗಳು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಆಸಾಮಿಗಳನ್ನು ಸುತ್ತುವರೆದು ಓಡಬಾರದೆಂದು ಸೂಚಿಸಿ, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 01) ಸತೀಶ ಬಿನ್ ನಾರಾಯಣಸ್ವಾಮಿ, 25 ವರ್ಷ, ವಕ್ಕಲಿಗರು, ವಾಸ: ದಿಬಾರ್ಲ ಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  02) ಶಿವ ಕುಮಾರ್ ಬಿನ್ ನಾರಾಯಣಸ್ವಾಮಿ, 28 ವರ್ಷ, ವಕ್ಕಲಿಗರು, ವಾಸ: ದಿಂಬಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು 03) ಮುರಳಿ ಬಿನ್ ಕೃಷ್ಣಪ್ಪ, 25 ವರ್ಷ, ಬೋವಿ ಜನಾಂಗ, ವಾಸ: ದಿಂಬಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  04) ಅಶೋಕ ಬಿನ್  ಕೃಷ್ಣಪ್ಪ, 24 ವರ್ಷ, ಎಸ್.ಸಿ ಜನಾಂಗ, ವಾಸ: ದಿಂಬಾರ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗಳಿಗೆ ಇಸ್ಪೀಟ್ ಜೂಜಾಟವಾಡುತ್ತಿದ್ದರ ಬಗ್ಗೆ ಪರವಾನಿಗೆಯನ್ನು ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಇಸ್ಪೀಟ್ ಎಲೆಗಳು 52 ಇದ್ದು, ಹಣವನ್ನು ಎಣಿಕೆ ಮಾಡಲಾಗಿ 2405-00 ರೂ ಇದ್ದು, ಮೇಲ್ಕಂಡ  ನಗದು ಹಣವನ್ನು, 52 ಇಸ್ಪೀಟ್ ಎಲೆಗಳನ್ನು ಹಾಗು ಪ್ಲಾಸ್ಟಿಕ್ ಗೋಣಿ ಚೀಲವನ್ನು ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಕೊಂಡು  ಆರೋಪಿಗಳ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:79/2021 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ:02.07.2021 ರಂದು ಬೆಳಿಗ್ಗೆ 10-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ದಿನಾಂಕ: 02/07/2021  ರಂದು ಬೆಳಿಗ್ಗೆ 8-30  ಗಂಟೆಯಲ್ಲಿ  ಪಿ.ಎಸ್.ಐ ಸಾಹೇಬರು .ಸಿ.179 ಶಿವಶೇಖರ, ಪಿ.ಸಿ-426 ಲೋಹಿತ್, ಮತ್ತು ಪಿ.ಸಿ-518 ಆನಂದ ಮತ್ತು ಚಾಲಕ ಎ.ಪಿ.ಸಿ-143 ಮಹೇಶ ರವರೊಂದಿಗೆ ನಗರಗೆರೆ ಸಹಾಯವಾಣಿ ಕೇಂದ್ರದ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಮೇಳ್ಯ ಗ್ರಾಮದ ಬಳಿ ರಸ್ತೆಯಲ್ಲಿ ಯಾರೋ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾನೆಂದು ಬಂದ ಖಚಿತ ವರ್ತಮಾನದ ಮೇರೆಗೆ ತಾನು ಸಿಬ್ಬಂದಿಯವರಾದ ಪಿ.ಸಿ-179, ಶಿವಶೇಖರ, ಪಿ.ಸಿ-426 ಲೋಹಿತ್, ಪಿ.ಸಿ-518 ಆನಂದ, ಹಾಗೂ ಚಾಲಕ ಎ.ಪಿ.ಸಿ-143 ಮಹೇಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಮೇಳ್ಯ ಗ್ರಾಮದ  ಬಳಿ ಮಸೀದಿ ರಸ್ತೆಯಲ್ಲಿ ಹೋಗಿ, ನೋಡಲಾಗಿ ಯಾರೋ ಒಬ್ಬ ಆಸಾಮಿಯು ಒಂದು ಪ್ಲಾಸ್ಟೀಕ್ ಬ್ಯಾಗಿನಲ್ಲಿ ಹೆಂಡವನ್ನು  ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೊಲೀಸ್ ವಾಹನವನ್ನು ಕಂಡು ಪ್ಲಾಸ್ಟೀಕ್ ಬ್ಯಾಗನ್ನು ಸ್ಥಳದಲ್ಲಿ ಬಿಟ್ಟು  ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು  ನಾನು ಮತ್ತು ಸಿಬ್ಬಂದಿಯವರು ಆತನನ್ನು ಬೆನ್ನಟ್ಟಿ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಿ ತಿಳಿಲಾಗಿ ಆನಂದ ಬಿನ್ ಲೇಟ್ ಅಂಜಿನಪ್ಪ, 34 ವರ್ಷ, ಆದಿ ಕರ್ನಾಟಕ, ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ ಮೇಳ್ಯ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ  ಪ್ಲಾಸ್ಟೀಕ್ ಬ್ಯಾಗನ್ನು ಪರಿಶೀಲಿಸಲಾಗಿ, ಅದರಲ್ಲಿ  10 ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಕ್ಯಾನು ಇದ್ದು ಅದರಲ್ಲಿ ಹೆಂಡ ಇರುತ್ತೆ. ಸದರಿ ಹೆಂಡ ಸುಮಾರು 08 ಲೀಟರ್ ಇರುತ್ತೆ. ಇದರ ಪೈಕಿ ಎಫ್.ಎಸ್.ಎಲ್ ಕಛೇರಿಗೆ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಒಂದು ಲೀಟರ್ ಸಾಮರ್ಥ್ಯ ಇರುವ 01 ಪ್ಲಾಸ್ಟಿಕ್ ಬಾಟಲ್ನಲ್ಲಿ  ಹೆಂಡವನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯಿಂದ ಸುತ್ತಿ, ‘’K’’  ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ಸದರಿ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡವನ್ನು ಮಾರಾಟ ಮಾಡಲು ಸಾಗಾಣಿಕೆಯನ್ನು ಮಾಡುತ್ತಿದ್ದಾನೆ.  ನಂತರ   ಸ್ಥಳದಲ್ಲಿ  ಬೆಳಿಗ್ಗೆ 8-45  ಗಂಟೆಯಿಂದ 9-45   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) 10 ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಕ್ಯಾನಿನಲ್ಲಿ 07  ಲೀಟರ್ ಹೆಂಡ ಇರುವ ಒಂದು ಕ್ಯಾನು, 2) ಒಂದು ಪ್ಲಾಸ್ಟಿಕ್ ಬ್ಯಾಗು 3) ಎಫ್.ಎಸ್.ಎಲ್ ಕಛೇರಿಗೆ ಪರೀಕ್ಷೆಗೆ ಕಳುಹಿಸಿಕೊಡುವ ಸಲುವಾಗಿ ಬಿಳಿ ಬಟ್ಟೆಯಿಂದ ಸುತ್ತಿ, ‘’K’’  ಎಂಬ ಅಕ್ಷರದಿಂದ ಸೀಲು ಮಾಡಿರುವ ಒಂದು ಲೀಟರ್ ಸಾಮರ್ಥ್ಯದ ಹೆಂಡ ತುಂಬಿರುವ ಒಂದು ಪ್ಲಾಸ್ಟಿಕ್ ಬಾಟೆಲ್, 4) ಆರೋಪಿ ಬಳಿ ಇದ್ದ 480/- ರೂ ನಗದು ಹಣವನ್ನು ಹಾಗೂ ಆರೋಫಿ ಆನಂದ ರವರನ್ನು ವಶಕ್ಕೆ ಪಡೆದು ಠಾಣೆಗೆ ಬೆಳಿಗ್ಗೆ 10-30  ಗಂಟೆಗೆ  ವಾಪಸ್ಸು ಬಂದಿದ್ದು, ಆರೋಪಿ ಆನಂದ, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34 ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.147/2021 ಕಲಂ. 32, 34 ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 32,34 ಕೆ.ಇ ಆಕ್ಟ್ :-

  ದಿನಾಂಕ:02.07.2021 ರಂದು ಮದ್ಯಾಹ್ನ 13-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ದಿನಾಂಕ: 02/07/2021  ರಂದು ಬೆಳಿಗ್ಗೆ 11-00  ಗಂಟೆಯಲ್ಲಿ  ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಮೆಳ್ಯ ಗ್ರಾಮದ ಕಾಲೋನಿ ರಸ್ತೆಯಲ್ಲಿ ಯಾರೋ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನದ ಮೇರೆಗೆ ತಾನು ಸಿಬ್ಬಂದಿಯವರಾದ ಪಿ.ಸಿ-518 ಆನಂದ, ಮ.ಹೆಚ್.,ಸಿ-07 ಅನಿತ, ಚಾಲಕ ಎ.ಪಿ.ಸಿ-143 ಮಹೇಶ  ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538  ರಲ್ಲಿ  ಬೆಳಿಗ್ಗೆ 11-30 ಗಂಟೆಗೆ ಮೇಳ್ಯ ಗ್ರಾಮದ  ಬಳಿ ಕಾಲೋನಿ ರಸ್ತೆಯಲ್ಲಿ ಹೋಗಿ, ನೋಡಲಾಗಿ ಯಾರೋ ಒಬ್ಬ ಹೆಂಗಸು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಹೆಂಡವನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೊಲೀಸ್ ವಾಹನವನ್ನು ಕಂಡು ಪ್ಲಾಸ್ಟೀಕ್ ಚೀಲವನ್ನು ಸ್ಥಳದಲ್ಲಿ ಬಿಟ್ಟು ಅಲ್ಲಿಂದ ಓಡಿ ಹೋದಳು ಆಕೆಯ  ಹೆಸರು ಮತ್ತು ವಿಳಾಸ ಕೇಳಿ ತಿಳಿಲಾಗಿ ಲಕ್ಷ್ಮಮ್ಮ ಕೋಂ ರಾಮಾಂಜಿನಪ್ಪ, 50 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ ಮೇಳ್ಯ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದರು ನಂತರ ಪಂಚರ ಸಮಕ್ಷಮದಲ್ಲಿ ಪ್ಲಾಸ್ಟೀಕ್ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ 20 ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಕ್ಯಾನು ಇದ್ದು, ಸದರಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಸುಮಾರು 19 ಲೀಟರ್ ಹೆಂಡ ಇದ್ದು ಸದರಿ ಮಾಲಿನಲ್ಲಿ  ಎಫ್.ಎಸ್.ಎಲ್ ಕಚೇರಿಗೆ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಒಂದು ಲೀಟರ್ ಸಾಮರ್ಥ್ಯ ಇರುವ ಪ್ಲಾಸ್ಟಿಕ್ ಬಾಟೆಲ್ ನಲ್ಲಿ 01 ಲೀಟರ್  ಹೆಂಡವನ್ನು ಪ್ರತ್ಯೇಕವಾಗಿ  ತೆಗೆದು ಬಿಳಿ ಬಟ್ಟೆಯಿಂದ ಸುತ್ತಿ, ‘’K’’  ಎಂಬ ಅಕ್ಷರದಿಂದ ಸೀಲು ಮಾಡಿ ವಶಕ್ಕೆ ಪಡೆದಿರುತ್ತೆ. ಸದರಿ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡವನ್ನು ಮಾರಾಟ ಮಾಡಲು ಸಾಗಾಣಿಕೆಯನ್ನು ಮಾಡುತ್ತಿರುತ್ತಾಳೆ. ನಂತರ  ಸ್ಥಳದಲ್ಲಿ  ಬೆಳಿಗ್ಗೆ  11-45  ಗಂಟೆಯಿಂದ ಮದ್ಯಾಹ್ನ 12-45   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ ಮೇಲ್ಕಂಡ ಮಾಲು ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಮದ್ಯಾಹ್ನ 13-15  ಗಂಟೆಗೆ  ವಾಪಸ್ಸು ಬಂದಿದ್ದು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34 ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ.148/2021 ಕಲಂ.32,34 ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 279,337 ಐ.ಪಿ.ಸಿ :-

  ದಿನಾಂಕ:02/07/2021 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದುದಾರರಾದ ಪ್ರದೀಪ್ ಕುಮಾರ್ ಬಿನ್ ಗೋವಿಂದ ರಾವ್, 26 ವರ್ಷ ,ನಾಯಕ ಜನಾಂಗ, ಫೋಟೊ ಗ್ರಾಫರ್, ಎಸ್.ಐ.ಟಿ 9 ನೇಕ್ರಾಸ್, ತುಮಕೂರು ನಗರ. ರವರು  ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ದಿನಾಂಕ:29/06/2021 ರಂದು ರಾಯಚೂರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ಫೋಟೊ ಶೂಟ್ ಮಾಡಲು ಹೋಗಿರುತ್ತೇವೆ. ನಂತರ ದಿನಾಂಕ:02/07/2021 ರಂದು ಬೆಳಗಿನ ಜಾವ 12-30 ಗಂಟೆಯಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ತನ್ನ ಸ್ನೇಹಿತನಾದ ರಾಕೇಶ್ ಬಿನ್ ರಂಗಸ್ವಾಮಯ್ಯ, ಚಿಕ್ಕನೆಟ್ಟಕುಂಟೆ, ಎಮ್.ಹೆಚ್.ಪಾಟ್ನ ಪೋಸ್ಟ್,  ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ ರವರ ಬಾಬತ್ತು ಕೆಎ-06 ಎಮ್-9223 ನೊಂದಣಿ ಸಂಖ್ಯೆಯ ಮಾರುತಿ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ತಾನು ಮತ್ತು ತನ್ನ ಸ್ನೇಹಿತರಾದ ಮಧುಸೂಧನ್ ಮ್ಲಲಸಂದ್ರ ಗ್ರಾಮ, ತುಮಕೂರು ತಾಲ್ಲೂಕು, ಬೆಂಗಳೂರಿನವರಾದ ಅಭಿಷೇಕ್ ಮತ್ತು ನಿತೇಶ್  ರವರು ರಾಯಚೂರಿನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ನನ್ನ ಸ್ನೇಹಿತನಾದ ಮಧುಸೂಧನ್ ರವರು ಕಾರನ್ನು ಚಾಲನೆ ಮಾಡಿಕೊಂಡು ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ  ಸುಮಾರು ಬೆಳಿಗ್ಗೆ 06-30 ಗಂಟೆಯಲ್ಲಿ ಎನ್.ಹೆಚ್-44 ರಸ್ತೆಯಲ್ಲಿ ಗುಡಿಬಂಡೆ ತಾಲ್ಲೂಕು ಚೆಂಡೂರು ಕ್ರಾಸ್ ಮತ್ತು ಯರ್ರಲಕ್ಕೆನಹಳ್ಳಿ ಕ್ರಾಸ್ ನಡುವೆ ಬರುತ್ತಿದ್ದಾಗ ಕಾರನ್ನು ಚಾಲನೆ ಮಾಡುತ್ತಿದ್ದ ಮಧುಸೂಧನ್ ರವರು ಚಾಲನೆ ಮಾಡುತ್ತಿದ್ದ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಢು ಬಂದು ಎನ್.ಹೆಚ್-44 ರಸ್ತೆಯ ಎಡಭಾಗದಲ್ಲಿದ್ದ ರಸ್ತೆಯ ಪಕ್ಕದಲ್ಲಿದ್ದ ಡಿವೈಡರ್ ಕಲ್ಲಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಪಲ್ಟಿ ಹೊಡೆದು ರಸ್ತೆಯ ಎಡಭಾಗಕ್ಕೆ ಬಿದ್ದಿದ್ದು ಕಾರಿನಲ್ಲಿದ್ದ ತನಗೆ ಎಡಕೈಗೆ ಹಾಗೂ ಎಡ ಬುಜಕ್ಕೆ ತರಚಿದ ಗಾಯಗಳಾಗಿರುತ್ತೆ. ಅಭಿಷೇಕ್ ಬೆನ್ನಿಗೆ ತೀವ್ರ ತರವಾದ ಮೂಗೇಟುಗಳಾಗಿರುತ್ತೆ. ಹಾಗೂ  ನಿತೇಶ್ ರವರಿಗೆ ಕತ್ತಿನ ಬಳಿ ತೀವ್ರ ತರವಾದ ಮೂಗೇಟು ಗಳಾಗಿರುತ್ತೆ. ನಂತರ ತಾನು ಕಾರಿನಿಂದ ಹೊರಗೆ ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಗೆ ಕರೆದು ಅವರ ಸಹಾಯದಿಂದ ಕಾರಿನಲ್ಲಿ ತನ್ನ ಸ್ನೇಹಿತರನ್ನು ಕಾರಿನಿಂದ ಹೊರಗಡೆಗೆ ಕರೆದುಕೊಂಡು ಬಂದಿರುತ್ತೇವೆ. ಅಲ್ಲಿದ್ದ ಸಾರ್ವಜನಿಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದು ಆಂಬುಲೆನ್ಸ್ ಬರವಷ್ಟರಲ್ಲಿ ನನ್ನ ಸ್ನೇಹಿತರಿಗೆ ಉಪಚರಿಸಿರುತ್ತೇವೆ. ನಂತರ ಆಂಬುಲೆನ್ಸ್ ಬಂದ ಮೇಲೆ ತನ್ನ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತೇನೆ. ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಸ್ನೇಹಿತರನ್ನು ಬೆಂಗಳೂರಿನ ಕೊಲಂಬಿಏಷ್ಯಾ ಆಸ್ಪತ್ರೆಗೆ ಕಳುಹಿಸಿ ಇವರ ಮನೆಯವರಿಗೆ ಮಾಹಿತಿಯನ್ನು ತಿಳಿಸಿ ನಂತರ ತಾನು ಗುಡಿಬಂಡೆ ಪೊಲೀಸ್ ಠಾಣೆಗೆ ತಡವಾಗಿ ಬಂದು ಈ ಅಪಘಾತಕ್ಕೆ ಮಧುಸೂಧನ್ ರವರ ಅತಿವೇಗ ಮತ್ತು ಅಜಾಗರುಕತೆಯ ಚಾಲನೆ ಆಗಿದ್ದು ಇವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.67/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ 02-07-2021 ರಂದು ಬೆಳಿಗ್ಗೆ  11-40 ಗಂಟೆಗೆ ಆ ಉ ನಿ ಸಾಹೇಬರು ದಾಳಿಯಿಂದ  ಆರೋಫಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-02-07-2021 ರಂದು  ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಪಿಎಸ್ಐ ರವರು  ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಹೆಚ್ ಸಿ-32 ಕೇಶವಮೂರ್ತಿ ಹಾಗೂ ಸಿಪಿಸಿ-240 ಮಧುಸೂದನ್  ರವರೊಂದಿಗೆ  ತಿಮ್ಮನಹಳ್ಳಿ  ಗ್ರಾಮದ ಕಡೆ ಹಗಲು  ಗಸ್ತಿನಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ ಎನೆಂದರೆ  ಕೊಂಡೇನಹಳ್ಳಿ ಗ್ರಾಮದ ಗಂಗಾಧರ್  ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ ಅಂಗಡಿಯ  ಮುಂದೆ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರು ವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ ಸಂಜೆ 10-30 ಗಂಟೆಗೆ  ಕೊಂಡೇನಹಳ್ಳಿ ಗ್ರಾಮದ  ಗಂಗಾಧರ್ ರವರ ಅಂಗಡಿಯ ಬಳಿ  ಹೋಗುವಷ್ಟರಲ್ಲಿ ಅಂಗಡಿ ಮುಚ್ಚಿದ್ದು  ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯ  ಮಾಲೀಕನ   ಹೆಸರು ವಿಳಾಸವನ್ನು ಕೇಳಲಾಗಿ   ಗಂಗಾಧರ್ ಬಿನ್ ಲೇಟ್ ಮುನಿಕೃಷ್ಣಪ್ಪ, 45 ವರ್ಷ, ವಕ್ಕಲಿಗರು  ಚಿಲ್ಲರೆ ಅಂಗಡಿ ಮಾಲೀಕ   ಕೊಂಡೇನಹಳ್ಳಿ ಎಂತ ತಿಳಿಸಿದ್ದು  ಇವನ  ಅಂಗಡಿಯ   ಮುಂದೆ  ಒಂದು  ಕವರಿದ್ದು  ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ   HAYWARDS CHEERS WHISKY  ಯ  10  TETRA  POCKET ಗಳಿದ್ದು ಪ್ರತಿ  ಪಾಕೇಟಿನ ಬೆಲೆ /- 35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-900 ML ಮದ್ಯವಿದ್ದು ಒಟ್ಟು ಬೆಲೆ 351.5/- ರೂ ಆಗುತ್ತದೆ. 2) 5 ಖಾಲಿ ಲೋಟಗಳು 3) 5 ಖಾಲಿ ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಇವುಗಳನ್ನು ತನ್ನ ಮುಚ್ಚಿರುವ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿಯ  ಮಾಲೀಕ  ಗಂಗಾಧರ್ ಬಿನ್ ಲೇಟ್ ಮುನಿಕೃಷ್ಣಪ್ಪ,  ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10-40 ಗಂಟೆಯಿಂದ 11-20 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 10 ಟೆಟ್ರಾ ಪ್ಯಾಕೇಟುಗಳನ್ನು ಮತ್ತು ಲೋಟಗಳನ್ನು ಅಂಗಡಿಯ ಮಾಲೀಕ  ಗಂಗಾಧರ್ ನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

13. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.56/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ:01-07-2021 ರಂದು ಸಂಜೆ 5-30 ಗಂಟೆಗೆ PSI ರವರು ಮಾಲು & ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:01-07-21 ರಂದು ಸಂಜೆ CPC-148 & AHC-21 ರವರೊಂದಿಗೆ KA-40-G-59 ರಲ್ಲಿ ಗಸ್ತಿನಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ  ಪಂಚಾಯ್ತಿದಾರರೊಂದಿಗೆ ಬೋಯಿಪಲ್ಲಿ ಗ್ರಾಮಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಮತ್ತು  ಅಂಗಡಿಯ ಮಾಲೀಕ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ನರಸಿಂಹಮೂರ್ತಿ ಬಿನ್ ಲೇಟ್ ತಿರುಪಾಲಪ್ಪ, 35 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಬೋಯಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML ನ Haywards Cheers Whisky 18 Tetra Pockets ಇದ್ದು, (1 Litre 620 ML  ಅದರ ಬೆಲೆ 630/-Rs), 1 Litre ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90ML ನ Haywards Cheers Whisky 1 Emty Tetra Pocket ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 4-00 ಗಂಟೆಯಿಂದ 4-45 ವರೆಗೆ ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

14. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.57/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ:02-07-2021 ರಂದು ಮದ್ಯಾಹ್ನ 1-45 ಗಂಟೆಗೆ PSI ರವರು ಮಾಲು & ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:02-07-21 ರಂದು ಸಂಜೆ CPC-148 & AHC-21 ರವರೊಂದಿಗೆ KA-40-G-59 ರಲ್ಲಿ ಗಸ್ತಿನಲ್ಲಿದ್ದಾಗ ಬಂದ ಮಾಹಿತಿ ಮೇರೆಗೆ  ಪಂಚಾಯ್ತಿದಾರರೊಂದಿಗೆ ನಾರೇಮದ್ದೇಪಲ್ಲಿ ಗ್ರಾಮಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ವೆಂಕಟೇಶ.ಎಸ್.ವಿ., ಬಿನ್ ವೆಂಕಟರವಣ್ಪ.ಪಿ 42 ವರ್ಷ, ಪಿಚ್ಚಕುಂಟ್ಲ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ನಾರೇಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90ML ನ Haywards Cheers Whisky 15 Tetra Pockets ಇದ್ದು, (1 Litre 350 ML  ಅದರ ಬೆಲೆ 525/-Rs), 1 Litre ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90ML ನ Haywards Cheers Whisky 1 Emty Tetra Pocket ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 12-30 ಗಂಟೆಯಿಂದ 1-15 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.217/2021 ಕಲಂ. 379 ಐ.ಪಿ.ಸಿ :-

  ದಿನಾಂಕ:-01/07/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಜೀತ್ ಬಿನ್ ಹೆಚ್.ಡಿ ಶ್ರೀನಿವಾಸ, 27 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಎನ್.ಹೊಸಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ 2015 ನೇ ಸಾಲಿನಲ್ಲಿ ತನ್ನ ಅಕ್ಕ ಶ್ವೇತಾ ರವರ ಹೆಸರಿನಲ್ಲಿ ಕೆಎ-40-ಎಕ್ಸ್-6365 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಖರೀದಿ ಮಾಡಿ ತಾನು ಮತ್ತು ತನ್ನ ಅಕ್ಕ ತಮ್ಮ ದ್ವಿ ಚಕ್ರ ವಾಹನವನ್ನು ಬಳಿಸಿಕೊಳ್ಳುತ್ತಿದ್ದು, ದಿನಾಂಕ 06/05/2021 ರಂದು ತನಗೆ ಜಂಗಮಕೋಟೆ ಕ್ರಾಸ್ ನಲ್ಲಿರುವ ಪೆಡರಲ್ ಬ್ಯಾಂಕಿನಲ್ಲಿ ಕೆಲಸ ಇದ್ದ ಕಾರಣ ತಾನು ತಮ್ಮ ಗ್ರಾಮದಿಂದ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಜಂಗಮಕೋಟೆ ಕ್ರಾಸ್ ಗೆ ಹೋಗಿ ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಪೆಡರಲ್ ಬ್ಯಾಂಕಿನ ಕೆಳಭಾಗದಲ್ಲಿ ಇರುವ ಅಂಗಡಿ ಮಳಿಗೆಗಳ ಬಳಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಬ್ಯಾಂಕಿಗೆ ಹೋಗಿ ತನ್ನ ಕೆಲಸವನ್ನು ಮುಗಿಸಿಕೊಂಡು ಮದ್ಯಾಹ್ನ ಸುಮಾರು 2-00 ಗಂಟೆಗೆ ತಾನು ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ್ದ ಸ್ಥಳದಲ್ಲಿ ನೋಡಲಾಗಿ ತನ್ನ ದ್ವಿ ಚಕ್ರ ವಾಹನವು ಕಾಣಿಸದೇ ಇದ್ದು, ಸುತ್ತ ಮುತ್ತಲು ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತನ್ನ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ದ್ವಿ ಚಕ್ರ ವಾಹನವು ಕೆಂಪು ಬಣ್ಣದಿಂದ ಕೂಡಿದ್ದು, ಇದು ಸುಮಾರು 30.000-00 ರೂ ಬೆಲೆ ಬಾಳುವುದ್ದಾಗಿರುತ್ತದೆ. ತಾನು ತನ್ನ ದ್ವಿ ಚಕ್ರ ವಾಹನವನ್ನು ಇದುವರೆವಿಗೂ ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಳುವಾಗಿರುವ ತನ್ನ ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.218/2021 ಕಲಂ. 143,147,148,323,324,504,506,149 ಐ.ಪಿ.ಸಿ, 3(1)(r),3(1)(s) The SC & ST (Prevention of Atrocities) Amendment Act 2015 :-

  ದಿನಾಂಕ: 01-07-2021 ರಂದು ರಾತ್ರಿ 9.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ಬಿ.ಎ. ಸುರೆಶ ಬಿನ್ ಆಂಜಿನಪ್ಪ, 37 ವರ್ಷ, ಆದಿ ದ್ರಾವಿಡ ಜನಾಂಗ, ಹಿರೆಬಲ್ಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೆ ನಂ. 71 ರಲ್ಲಿನ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಮ್ಮ ಗ್ರಾಮದ ಕೆಲವು ಮನೆಗಳನ್ನು ಕಟ್ಟಿಕೊಂಡು ಅನುಭವದಲ್ಲಿರುತ್ತಾರೆ, ಸದರಿ ಜಮೀನಿನಲ್ಲಿ ನಮ್ಮ ಕುಟುಂಬದವರು ಸಹ 50*50 ಅಡಿ ಜಾಗದಲ್ಲಿ ಸೌದೆ ಹಾಗೂ ಹುಲ್ಲಿನ ಬವಣೆಯನ್ನು ಹಾಕಿಕೊಂಡಿದ್ದು ನಾವೆ ಅನುಭವದಲ್ಲಿದ್ದು, ಸದರಿ ಜಮೀನನ್ನು ನಮ್ಮ ಹೆಸರಿಗೆ ಮಂಜೂರು ಮಾಡುವಂತೆ ಪಂಚಾಯ್ತಿ ಕಛೇರಿಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತೇವೆ, ನಾವು ಅನುಭವದಲ್ಲಿರುವ ಖಾಲಿ ಜಾಗದ ಹಿಂಭಾಗದಲ್ಲಿ ನಮ್ಮ ಗ್ರಾಮದ ವಕ್ಕಲಿಗ ಜನಾಂಗದವರಾದ ರಮೇಶ್ ಬಿನ್ ಲೇಟ್ ಶ್ರೀಕೃಷ್ಣಪ್ಪ ರವರು ಮನೆಯನ್ನು ಕಟ್ಟಿಕೊಂಡು ಕಾಂಪೌಂಡ್ ಹಾಕಿಕೊಂಡಿರುತ್ತಾರೆ, ಹೀಗಿದ್ದು ರಮೇಶ್ ರವರು ನಾವು ಅನುಭವದಲ್ಲಿರುವ ಖಾಲಿ ಜಾಗದಲ್ಲಿ ದಿನಾಂಕ: 30-06-2021 ರಂದು ರಾತ್ರೋ ರಾತ್ರಿ ಪಿಟ್ ಗುಣಿಯನ್ನು ತೆಗೆದಿದ್ದು, ಈ ದಿನ ದಿನಾಂಕ: 01-07-2021 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ತನ್ನ ತಮ್ಮನಾದ ವೆಂಕಟೇಶ ರವರು ರಮೇಶ್ ರವರನ್ನು ನಮ್ಮ ಜಾಗದಲ್ಲಿ ನೀವು ಯಾಕೆ ಪಿಟ್ ಗುಣಿಯನ್ನು ಅಗೆದಿದ್ದೀರಿ ಎಂದು ಕೇಳಿದ್ದಕ್ಕೆ ರಮೇಶ್ ಬಿನ್ ಲೇಟ್ ಶ್ರೀಕೃಷ್ಣಪ್ಪ, ಆತನ ಹೆಂಡತಿಯಾದ ಮಮತ ಕೋಂ ರಮೇಶ್, ಮಗನಾದ ಪ್ರದೀಪ್, ವಸಂತ್ ಕುಮಾರ್ ಬಿನ್ ಬಚ್ಚೇಗೌಢ @ ಪುಟ್ಟಪ್ಪ, ಮಾಲತೇಶ್ ಬಿನ್ ಲೇಟ್ ಕೃಷ್ಣಪ್ಪ, ಶ್ರೀನಿವಾಸ ಬಿನ್ ಬಚ್ಚೇಗೌಡ @ ಪುಟ್ಟಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ, ರಾಡ್ ಮತ್ತು ಇತರೆ ಮಾರಕಾಯುಧಗಳನ್ನು ಹಿಡಿದುಕೊಂಡು ತನ್ನ ತಮ್ಮ ವೆಂಕಟೇಶ ರವರ ಮೇಲೆ ಗಲಾಟೆ ಮಾಡುತ್ತಿದ್ದು, ಗಲಾಟೆಯನ್ನು ಬಿಡಿಸಲು ಹೋದ ತನ್ನ ತಮ್ಮನಾದ ಗೋವಿಂದ ರವರಿಗೂ ಸಹ ಮೇಲ್ಕಂಡ 6 ಜನರು ಸೇರಿಕೊಂಡು ಕೈಗಳಲ್ಲಿ ಹೊಡೆದು ಕಾಲಿನಲ್ಲಿ ಒದ್ದು ಕೆಳಕ್ಕೆ ತಳ್ಳಿ ಆ ಪೈಕಿ ವೆಂಕಟೇಶ ರವರಿಗೆ ರಮೇಶ್ ಬಿನ್ ಲೇಟ್ ಶ್ರೀಕೃಷ್ಣಪ್ಪ ರವರು ತಲೆಯ ಹಿಂಭಾಗ ರಾಡ್ ನಲ್ಲಿ ಹೊಡೆದು ಗಾಯಗೊಳಿಸಿದ್ದು, ಗೋವಿಂದ ರವರಿಗೆ ವಸಂತ್ ಕುಮಾರ್ ರವರು ದೊಣ್ಣೆಯಲ್ಲಿ ಕೈಗಳಿಗೆ, ಮುಖಕ್ಕೆ ಮತ್ತು ಕಿವಿಯ ಬಳಿ ಹೊಡೆದು ಗಾಯಗೊಳಿಸಿ, ಲೋಪರ್ ನನ್ನ ಮಕ್ಕಳೆ, ನಿಮ್ಮಮ್ಮನ್ನೆ ಜಾತಿನೇ ಕ್ಯಾಯ, ಹೊಲೆಯ ನನ್ನ ಮಕ್ಕಳೆ ಎಂದು ಜಾತಿ ನಿಂದನೆ ಮಾಡಿ ನಿಮ್ಮ ಪಾಡಿಗೆ ನೀವು ಇದ್ದರೆ ಸರಿ ನೀವೇನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು, ಅಷ್ಟರಲ್ಲಿ ಅಲ್ಲಿಗೆ ಬಂದ ತಾನು ಮತ್ತು ತನ್ನ ತಮ್ಮನಾದ ನಾಗೇಶ್ ರವರು ಗಲಾಟೆ ಬಿಡಿಸಿದ್ದು ಗಲಾಟೆಯ ಸಮಯದಲ್ಲಿ ತನ್ನ ತಮ್ಮ ನಾಗೇಶ್ ರವರಿಗೆ ರಮೇಶ ರವರು ಆತನ ಬಲಗೈಗೆ ಕಚ್ಚಿ ಗಾಯಗೊಳಿಸಿದ್ದು ನಾವು ಗಲಾಟೆ ಬಿಡಿಸಿ ತನ್ನ ತಮ್ಮಂದಿರಾದ ವೆಂಕಟೇಶ ಮತ್ತು ಗೋವಿಂದ ರವರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೇವೆ. ನಾವು ಅನುಭವದಲ್ಲಿರುವ ಜಮೀನಿನಲ್ಲಿ ಪಿಟ್ ಗುಣಿಯನ್ನು ಅಗೆದಿದ್ದು, ಸದರಿ ವಿಚಾರವನ್ನು ಕೇಳಿದ್ದಕ್ಕೆ ನಮ್ಮ ತಮ್ಮಂದಿರ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ, ರಾಡ್ ಮತ್ತು ದೊಣ್ಣೆಯಿಂದ ಹೊಡೆದು ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 

ಇತ್ತೀಚಿನ ನವೀಕರಣ​ : 02-07-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080