ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 80/2021 ಕಲಂ. 188,269,271 ಐ.ಪಿ.ಸಿ & 51(b) THE DISASTER MANAGEMENT ACT, 2005:-

    ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಟಿ.ಎನ್.ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:01/06/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ನಾನು  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಣ ಹಾನಿ ಉಂಟುಮಾಡುವಂತಹ ಕರೋನಾ ಸಾಂಕ್ರಾಮಿಕ ಖಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಮತ್ತು ಹೆಚ್.ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಗಸ್ತಿನಲ್ಲಿದ್ದಾಗ ಬೆಳಿಗ್ಗೆ-10-15 ಗಂಟೆ ಸಮಯದಲ್ಲಿ ಯಸಗಲಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ ಕರೋನ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಗುಂಪು ಸೇರದಂತೆ, ಸಾರ್ವಜನಿಕವಾಗಿ ಅನಗತ್ಯವಾಗಿ ಸಂಚರಿಸದಂತೆ ಹಾಗೂ ಪೇಸ್ ಮಾಸ್ಕ್ ಧರಿಸುವಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸರ್ಕಾರವು ಯಾವುದೇ ಚಿಲ್ಲರೆ ಅಂಗಡಿ ತೆಗೆಯುವುದು ನಿಷೇದಿಸಿದ್ದರೂ ಅಂಗಡಿ ತೆಗೆದುಕೊಂಡು ಹಾಗೂ ಕೋವಿಡ್ -19 ಆದೇಶಗಳನ್ನು ಪಾಲಿಸದೇ ಲಾಕ್ ಡೌನ್ ಆದೇಶವಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ  ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಾ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ನಾರೆಪ್ಪ @ ಕುಂಟಿ ನಾರೆಪ್ಪ ಬಿನ್ ಲೇಟ್ ಯರ್ರಪ್ಪ 58 ವರ್ಷ ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ಯಸಗಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9632965213 ಎಂದು ತಿಳಿದು ಬಂದಿರುತ್ತದೆ ಆದ್ದರಿಂದ ಕೋವಿಡ್-19 ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಚಿಲ್ಲರೆ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಅದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ತ್ರೀಯ ವಿಪತ್ತು ಕಾಯ್ದೆಯಡಿ ಸದರಿ ಚಿಲ್ಲರೆ ಅಂಗಡಿಯ ಮಾಲೀಕರಾದ ನಂಜಪ್ಪ ರವರ ವಿರುದ್ದ ಬೆಳಿಗ್ಗೆ 10-45 ಗಂಟೆಗೆ ಠಾಣೆಗೆ ಹಾಜರಾಗಿ ಸದರಿ ಆಸಾಮಿಯ ವಿರುದ್ದ ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖೈ 80/2021 ಕಲಂ 188,269.271 ಐಪಿಸಿ ಮತ್ತು ಕಲಂ 51(ಬಿ) THE DISASTER MANAGEMENT ACT-2005 ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 81/2021 ಕಲಂ. 188,269,271 ಐ.ಪಿ.ಸಿ & 51(b) THE DISASTER MANAGEMENT ACT, 2005:-

    ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಟಿ.ಎನ್.ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:01/06/2021 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ನಾನು  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಣ ಹಾನಿ ಉಂಟುಮಾಡುವಂತಹ ಕರೋನಾ ಸಾಂಕ್ರಾಮಿಕ ಖಾಯಿಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಮತ್ತು ಹೆಚ್.ಸಿ-139 ಶ್ರೀನಾಥ ಎಂ.ಪಿ ರವರೊಂದಿಗೆ ಗಸ್ತಿನಲ್ಲಿದ್ದಾಗ ಮಧ್ಯಾಹ್ನ 12-45 ಗಂಟೆ ಸಮಯದಲ್ಲಿ ಬ್ರಾಹ್ಮಣರಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ ಕರೋನ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಗುಂಪು ಸೇರದಂತೆ, ಸಾರ್ವಜನಿಕವಾಗಿ ಅನಗತ್ಯವಾಗಿ ಸಂಚರಿಸದಂತೆ ಹಾಗೂ ಪೇಸ್ ಮಾಸ್ಕ್ ಧರಿಸುವಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸರ್ಕಾರವು ಯಾವುದೇ ಚಿಲ್ಲರೆ ಅಂಗಡಿ ತೆಗೆಯುವುದು ನಿಷೇದಿಸಿದ್ದರೂ ಅಂಗಡಿ ತೆಗೆದುಕೊಂಡು ಹಾಗೂ ಕೋವಿಡ್ -19 ಆದೇಶಗಳನ್ನು ಪಾಲಿಸದೇ ಲಾಕ್ ಡೌನ್ ಆದೇಶವಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ  ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಾ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಕೋನಪ್ಪ 66 ವರ್ಷ ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ಬ್ರಾಹ್ಮಣರಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9663322867 ಎಂದು ತಿಳಿದು ಬಂದಿರುತ್ತದೆ ಆದ್ದರಿಂದ ಕೋವಿಡ್-19 ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಚಿಲ್ಲರೆ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಅದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ತ್ರೀಯ ವಿಪತ್ತು ಕಾಯ್ದೆಯಡಿ ಸದರಿ ಚಿಲ್ಲರೆ ಅಂಗಡಿಯ ಮಾಲೀಕರಾದ ನರಸಿಂಹಪ್ಪ ರವರ ವಿರುದ್ದ ಮಧ್ಯಾಹ್ನ  01-30 ಗಂಟೆಗೆ ಠಾಣೆಗೆ ಹಾಜರಾಗಿ ಸದರಿ ಆಸಾಮಿಯ ವಿರುದ್ದ ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖೈ 81/2021 ಕಲಂ 188,269.271 ಐಪಿಸಿ ಮತ್ತು ಕಲಂ 51(ಬಿ) THE DISASTER MANAGEMENT ACT-2005 ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 82/2021 ಕಲಂ. 4,6 EXPLOSIVE SUBSTANCES ACT, 1908:-

     ಘನ ನ್ಯಾಯಾಲಯದ ಸನ್ನಿಧಾನದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ.ಟಿ.ಎನ್.ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ 02/06/2021 ರಂದು ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಸಿಹೆಚ್ಸಿ 36 ಶ್ರೀ.ವಿಜಯ್ಕುಮಾರ್, ಹೆಚ್.ಸಿ 139 ಶ್ರೀ.ಶ್ರೀನಾಥ.ಎಂ.ಪಿ, ಸಿಪಿಸಿ 387 ಅನೀಲ್ ಕುಮಾರ್, ಸಿಪಿಸಿ 262 ಅಂಬರೀಶ್, ಪಿ.ಸಿ 02 ಅರುಣ್ ಎ ರವರೊಂದಿಗೆ ಕೊರೋನಾ ಲಾಕ್ಡೌನ ನಿಮಿತ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಇರಗಂಪಲ್ಲಿ, ನಲ್ಲಗುಟ್ಟಲಹಳ್ಳಿ, ಬ್ರಾಹ್ಮಣರಹಳ್ಳಿ, ಮಾದಮಂಗಲ, ಯಸಗಲಹಳ್ಳಿ ಕಡೆ ಗಸ್ತುಮಾಡಿಕೊಂಡು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಠಾಣೆಗೆ ವಾಪಸ್ ಬರಲು ಸೋಮುಕಲಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ ಸೋಮುಕಲಹಳ್ಳಿ ಕಡೆಯಿಂದ ಯಾರೋ 4 ಜನ ಆಸಾಮಿಗಳು ಎರಡು ದ್ವಿಚಕ್ರವಾಹನಗಳಲ್ಲಿ ಏನೋ ಮೂಟೆಗಳನ್ನು ಇಟ್ಟುಕೊಂಡು ಬಂದಿದ್ದು ನಮಗೆ ಅನುಮಾನಬಂದು ಸದರಿ ವಾಹನ ಸವಾರರನ್ನು ನಿಲ್ಲಿಸಿ ಪ್ರಶ್ನಿಸಿ ವಾಹನಗಳಲ್ಲಿದ್ದ ಮೂಟೆಗಳನ್ನು ಕೆಳಕ್ಕೆ ಇಳಿಸಿ ಪರಿಶೀಲಿಸಲಾಗಿ ಅವರ ಬಳಿ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಏನೂ ವಸ್ತುಗಳು ಇರುವುದು ಕಂಡು ಬಂದಿದ್ದು ಅವುಗಳಲ್ಲಿ ಇರುವುದು ಏನು ಎಂತ ಕೇಳಲಾಗಿ ಸದರಿಯವರು ಚೀಲಗಳಲ್ಲಿ ಸ್ಪೋಟಕಗಳು ಇರುವುದಾಗಿ ತಿಳಿಸಿದ್ದು ಸದರಿ ಆಸಾಮಿಗಳ ಹೆಸರು ವಿಳಾಸಗಳನ್ನು ವಿಚಾರಿಸಲಾಗಿ 1)ರಮೇಶ್ ಬಿನ್ ಲೇಟ್ ಲಿಂಗಯ್ಯ, 35ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವೇಂಬಾವಿ ಗ್ರಾಮ, ಚಿಟ್ಟಿಯಾಲ್ ಮಂಡಲಂ, ನಲ್ಲಗೊಂಡ ಜಿಲ್ಲೆ, ತೆಲಂಗಾಣ, ಹಾಲಿ ವಾಸ ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಮೊ.ನಂ 9666176285 2) ವೆಂಕಟೇಶ್ ಬಿನ್ ಇದ್ದಯ್ಯ, 32ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಪೆದ್ದಕಾಪಡ್ತಿ ಗ್ರಾಮ, ಚಿಟ್ಟಿಯಾಲ್ ಮಂಡಲಂ ನಲ್ಲಗೊಂಡ ಜಿಲ್ಲೆ, ತೆಲಂಗಾಣ, ಹಾಲಿ ವಾಸ ಆದೆನ್ನಗಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಮೊ.ನಂ 9948885330 3) ವೇಣು ಬಿನ್ ವೆಂಕಣ್ಣ, 20ವರ್ಷ, ಬೋವಿ ಜನಾಂಗ, ವಟ್ಟಿಮಡ್ತಿ ಗ್ರಾಮ, ಚಿಟ್ಟಿಯಾಲ್ ಮಂಡಲಂ ನಲ್ಲಗೊಂಡ ಜಿಲ್ಲೆ, ತೆಲಂಗಾಣ, ಹಾಲಿ ವಾಸ ಆದೆನ್ನಗಾರಪಲ್ಲಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಮೊ.ನಂ 9603833524 4) ಯಾದಗಿರಿ ಬಿನ್ ರಾಮುಲು, 30ವರ್ಷ, ಬೋವಿ ಜನಾಂಗ, ಅಡ್ಡಗೂಡು ಗ್ರಾಮ, ಅಡ್ಡಗೂಡು ಮಂಡಲಂ, ಯಾದಾದ್ರಿ ಜಿಲ್ಲೆ, ತೆಲಂಗಾಣ, ಚಿಟ್ಟಿಯಾಲ್ ಮಂಡಲಂ ನಲ್ಲಗೊಂಡ ಜಿಲ್ಲೆ, ತೆಲಂಗಾಣ, ಹಾಲಿ ವಾಸ ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ಮೊ.ನಂ 9398456859 ಎಂದು ತಿಳಿಸಿದ್ದು ಸದರಿಯವರುಗಳನ್ನು ಸ್ಪೋಟಕಗಳ ಸಾಗಾಣಿಕೆ ಬಗ್ಗೆ ವಿಚಾರಿಸಲಾಗಿ ತಾವು ಬಂಡೆಗಳನ್ನು ಸ್ಪೋಟಕಗಳನ್ನು ಬಳಿಸಿ ಹೊಡೆಯುವ ಕೆಲಸ ಮಾಡುತ್ತಿದ್ದು ನಮಗೆ ಸೀತಹಳ್ಳಿ ಗ್ರಾಮದ ನಾರಾಯಣಸ್ವಾಮಿ ಮತ್ತು ನರಸಿಂಹಪ್ಪ ರವರು ಬಂಡೆಗಳನ್ನು ಸೀಳಿಸಿಕೊಡವ ಕೆಲಸ ಕೊಡುತ್ತಿದ್ದರು. ಸದರಿ ಕೆಲಸಕ್ಕೆ ಸ್ಪೋಟಕಗಳು ಅವಶ್ಯಕತೆ ಇದ್ದಿದರಿಂದ ನಮಗೆ ಪರಿಚಯವಿದ್ದ ಕೊಂಡರಾಜನಹಳ್ಳಿ ಗ್ರಾಮದ ವಾಸಿಯಾದ ಕೊಂಡಾಚಾರಿ ಮೊ.ನಂ 8971173809 ರವರು ನಮಗೆ ಮದನಪಲ್ಲಿ ಟೌನ್ ವಾಸಿಯಾದ ಮುಸ್ಲಿಂ ಜನಾಂಗ, ನೂರ್ ಎಂಬುವರನ್ನು ಪೋನ್ ಮುಖಾಂತರ ಪರಿಚಯಮಾಡಿಸಿಕೊಟ್ಟಿದ್ದು ಅವರಿಂದ ನಾವುಗಳು ಸ್ಪೋಟಕಗಳನ್ನು ತೆಗೆದುಕೊಂಡು ಬಂದು ನಮ್ಮ ಮನೆಗಳಲ್ಲಿ ದಾಸ್ತಾನುಮಾಡಿಕೊಂಡು ಕೊಂಡಾಚಾರಿ ರವರು ರೈತರ ಹೊಲಗಳಲ್ಲಿ ಬಂಡೆಗಳನ್ನು ಸ್ಪೋಟಕಗಳ ಮುಖಾಂತರ ಹೊಡೆಯುವ ಕೆಲಸವನ್ನು ಕೊಡಿಸುತ್ತಿದ್ದು ಅದರಂತೆ ನಾವುಗಳು ಮದನಪಲ್ಲಿ ಟೌನ್ ವಾಸಿಯಾದ ನೂರ್ ಮೊ.ಸಂಖ್ಯೆ 9701100265 ಎಂಬುವರ ಮುಖಾಂತರ ಸ್ಪೋಟಕಗಳನ್ನು ಕೊಂಡಾಚಾರಿ ರವರ ಸೂಚನೆಯಂತೆ ಪಡೆದುಕೊಂಡು ಬಂಡೆಗೆ ಸ್ಪೋಟಕಗಳನ್ನು ಇಟ್ಟು ಬ್ಲಾಸ್ಟಿಂಗ್ ಮಾಡುತ್ತಿದ್ದೆವು. ನಮ್ಮ ಬಳಿ ದಾಸ್ತಾನು ಇದ್ದ ಸ್ಪೋಟಕಗಳು ಮುಗಿದ್ದಿದ್ದರಿಂದ ನಾವು ನೆನ್ನೆ ದಿನ ದಿನಾಂಕ 01/06/2021 ರಂದು ನೂರ್ ರವರಿಗೆ ಪೋನ್ ಮಾಡಿ ಸ್ಪೋಟಕಗಳು ಬೇಕು ಎಂದು ಕೇಳಿದ್ದಕ್ಕೆ ನೂರ್ ರವರು ಈ ದಿನ ದಿನಾಂಕ 02/06/2021 ರಂದು ಬೆಳಿಗ್ಗೆ ಮದನಪಲ್ಲಿಗೆ ಬರುವಂತೆ ಸೂಚಿಸಿದರ ಮೇರೆಗೆ ನಾವುಗಳು ಬೆಳಗಿನ ಜಾವ 4-00 ಗಂಟೆಗೆ ದಿಬ್ಬೂರಹಳ್ಳಿಯಿಂದ ವೆಂಕಟೇಶ್ ಮತ್ತು ಯಾದಗಿರಿ ರವರ ದ್ವಿಚಕ್ರ ವಾಹನಗಳಲ್ಲಿ ಮದನಪಲ್ಲಿಯ ಹೊರವಲಯಕ್ಕೆ ಬೆಳಿಗ್ಗೆ ಸುಮಾರು 6-00 ಗಂಟೆಗೆ ಹೋಗಿ ನೂರ್ ರವರಿಗೆ ಪೋನ್ ಮಾಡಲಾಗಿ ನೂರ್ ರವರು ನಾವಿದ್ದ ಕಡೆಗೆ ಮ್ಯಾಜಿಕ್ ವಾಹನದಲ್ಲಿ ಸ್ಪೋಟಕಗಳನ್ನು ತಂದು ನಮಗೆ 600 ಈಡಿ ಗಳನ್ನು (ಜಿಲೆಟಿನ್ ಕಡ್ಡಿಗಳು) 800 ಐಡೆಲ್ ಬ್ಲಾಸ್ಟಿಂಗ್ ಗಳನ್ನು ಕೊಟ್ಟಿದ್ದು ನಮ್ಮಿಂದ 21,000 ರೂಗಳನ್ನು ಪಡೆದುಕೊಂಡರು. ಅವುಗಳ ಪೈಕಿ 600 ಈಡಿಗಳನ್ನು (ಜಿಲೆಟಿನ್ ಕಡ್ಡಿಗಳು) ಒಂದು ಚೀಲದಲ್ಲಿ 800 ಐಡೆಲ್ ಬ್ಲಾಸ್ಟಿಂಗ್ ಗಳನ್ನು ಎರಡು ಚೀಲಗಳಲ್ಲಿ ಒಂದೊಂದರಲ್ಲಿ 400 ರಂತೆ ತುಂಬಿಕೊಂಡು ರಮೇಶ್ ಮತ್ತು ವೆಂಕಟೇಶ್ ರವರು ಬ್ಲಾಸ್ಟಿಂಗ್ ಐಡೆಲ್ಗಳು ಇದ್ದ ಎರಡು ಚೀಲಗಳನ್ನು ವೆಂಕಟೇಶ್ ದ್ವಿಚಕ್ರ ವಾಹನದಲ್ಲಿ ಮತ್ತೊಂದು ದ್ವಿಚಕ್ರ ವಾಹನದಲ್ಲಿ ವೇಣು ಮತ್ತು ಯಾದಗಿರವರು ಈಡಿಗಳು ಇದ್ದ ಚೀಲವನ್ನು ಇಟ್ಟುಕೊಂಡು ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾರೆ. ಸದರಿಯವರನ್ನು ಸ್ಪೋಟಕಗಳನ್ನು ಸಾಗಾಣಿಕೆಮಾಡಲು ಯಾವುದಾದರು ಪರವಾನಿಗೆಯನ್ನು ಹೊಂದಿರುವ ಬಗ್ಗೆ ವಿಚಾರಿಸಲಾಗಿ ತಮ್ಮ ಬಳಿ ಯಾವುದೇ ರೀತಿಯ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದು ಅವರುಗಳು ಬಂದಿದ್ದ ದ್ವಿಚಕ್ರ ವಾಹನಗಳನ್ನು ಪರಿಶೀಲಿಸಲಾಗಿ ಎರಡೂ ದ್ವಿಚಕ್ರ ವಾಹನಗಳು ಹೋಂಡಾ ಶೈನ್ ದ್ವಿಚಕ್ರ ವಾಹನಗಳಾಗಿದ್ದು ಒಂದರ ನೊಂದಣಿ ಸಂಖ್ಯೆ ಎಪಿ 28 ಬಿಹೆಚ್ 9011 ಆಗಿದ್ದು ಮತ್ತೊಂದು ದ್ವಿಚಕ್ರ ವಾಹನಕ್ಕೆ ನೊಂದಣಿ ಸಂಖ್ಯೆ ಇರುವುದಿಲ್ಲ ಸದರಿಯವರು ಯಾವುದೇ ಪರವಾನಿಗೆ ಇಲ್ಲದೆ ಸ್ಪೋಟಕಗಳನ್ನು ಅಕ್ರಮವಾಗಿ ಸಾಗಾಣಿಕೆಮಾಡುತ್ತಿರುವುದು ಕಂಡು ಬಂದಿದ್ದರ ಮೇರೆಗೆ ಸದರಿಯವರುಗಳ ಮುಖಾಂತರ ಅವರು ತಂದಿದ್ದ ಸ್ಪೋಟಕಗಳನ್ನು ಠಾಣೆಯ ಬಳಿಗೆ ತಂದು ಠಾಣೆಯ ಹಿಂಭಾಗದಲ್ಲಿ ಇರುವ ಖಾಲಿ ಜಮೀನಿನಲ್ಲಿ ಇರಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 10-30 ಗಂಟೆಗೆ ಠಾಣೆಗೆ ಬಂದು ಸದರಿ ಆರೋಪಿಗಳ ವಿರುದ್ದ ಠಾಣಾ ಮೊ.ಸಂ 82/2021 ಕಲಂ 4, 6 Explosive Substances act 1908  ರೀತ್ಯ ಕೇಸು ದಾಖಲಿಸಿರುತ್ತೇನೆ.

 

4. ಚೇಳೂರು ಪೊಲೀಸ್ ಠಾಣೆ ಮೊ.ಸಂ. 52/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ:02-06-2021 ರಂದು ಬೆಳಿಗ್ಗೆ 9-15 ¨ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ನಾನು ಸಿಬ್ಬಂಧಿಯಾದ ಹೆಚ್.ಸಿ-47 ಪ್ರಭಾಕರ್ ಮತ್ತು ಹೆಚ್.ಸಿ-149  ಇನಾಯತ್ ವುಲ್ಲಾ ರವರೊಂದಿಗೆ ದಿನಾಂಕ:02-06-2021 ರಂದು ಚಾಕವೇಲು ಗ್ರಾಮದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾತ್ರ ¸ಸರ್ಕಾರs ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳಲು ಚಿಲ್ಲರೆ ಅಂಗಡಿ ಮುಂದೆ ¨ಬಾಕ್ಸ್ ಗಳನ್ನು ಹಾಕಿ ಸದರಿ ಬಾಕ್ಸ್ ಗಳಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ ಬೆಳಗ್ಗೆ 8-00 ಗಂಟೆಯಲ್ಲಿ ಚಾಕವೇಲು ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಲಾಗಿ  ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ರಾಜೀವ್ ಬಿನ್ ಗೋಪಾಲಯ್ಯಶೆಟ್ಟಿ, 42 ವರ್ಷ, ವೈಶ್ಯರು, ವ್ಯಾಪಾರ, ಚಾಕವೇಲು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿಯವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರಿಗೆ ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಅಂಗಡಿಯ ಮಾಲೀಕರಾದ ರಾಜೀವ್ ಬಿನ್ ಗೋಪಾಲಯ್ಯಶೆಟ್ಟಿ, ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.  ಎಂಬುದಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 52/2021 ಕಲಂ: 269,270 188 ಐಪಿಸಿ ಮತ್ತು ಕಲಂ: 51(ಬಿ) ಡಿ.ಎಂ ಆಕ್ಟ್ -2005 ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

5. ಚೇಳೂರು ಪೊಲೀಸ್ ಠಾಣೆ ಮೊ.ಸಂ. 53/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ 02-06-2020 ರಂದು ಬೆಳಿಗ್ಗೆ 10:00 ಗಂಟೆಗೆ  ಸಿ ಹೆಚ್.ಸಿ  149 ಇನಾಯತ್ ವುಲ್ಲಾ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ಈ ದಿನ ನಾನು ಮತ್ತು ಹೆಚ್.ಸಿ-47 ಪ್ರಭಾಕರ್ ಮತ್ತು ಹೆಚ್.ಜಿ-601 ಬೈರೆಡ್ಡಿ ರವರೊಂದಿಗೆ ದಿನಾಂಕ:02-06-2021 ರಂದು ಚಾಕವೇಲು ಗ್ರಾಮದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾತ್ರ ಸಕರ್ಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಂತುಕೊಳ್ಳಲು ಅಂಗಡಿಗಳ ಮುಂದೆ ಬಾಕ್ಸ್ಗಗಳನ್ನು ಹಾಕಿ ಸದರಿ ಬಾಕ್ಸ್ಗಗಳಲ್ಲಿ ನಿಂತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ ಬೆಳಗ್ಗೆ 9-00 ಗಂಟೆಯಲ್ಲಿ ಚಾಕವೇಲು ಗ್ರಾಮದಲ್ಲಿ ಒಂದು ಬಟ್ಟೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ನಾನು ಸ್ಥಳಕ್ಕೆ ಹೋಗಿ ನೋಡಲಾಗಿ  ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಬಟ್ಟೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ವ್ಯಾಪಾರ ಮಾಡುತ್ತಿದ್ದು, ಸದರಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ಸುರೇಶ್ ಬಿನ್ ರಮೇಶ್, 26 ವರ್ಷ, ಬ್ರಾಹ್ಮಣರು, ಬಟ್ಟೆ ವ್ಯಾಪಾರ, ಚಾಕವೇಲು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿಯವರು ಬಟ್ಟೆ ಅಂಗಡಿ ತೆರೆಯಲು ಅವಕಾಶ ಇಲ್ಲದೇ ಇದ್ದರೂ ಸಹ ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರಿಗೆ ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಬಟ್ಟೆ ಅಂಗಡಿಯ ಮಾಲೀಕರಾದ ಸುರೇಶ್ ಬಿನ್ ರಮೇಶ್, ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 53/2021 ಕಲಂ: 269,270 188 ಐಪಿಸಿ ಮತ್ತು ಕಲಂ: 51(ಬಿ) ಡಿ.ಎಂ ಆಕ್ಟ್ -2005 ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.252/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

  ದಿನಾಂಕ: 01/06/2021 ರಂದು ಮದ್ಯಾಹ್ನ 2.30 ಗಂಟೆಗೆ ಠಾಣೆಯ ಶ್ರೀ ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01/06/2021 ರಂದು ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-339 ಕರಿಯಪ್ಪ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ವಡ್ಡಹಳ್ಳಿ ಗ್ರಾಮದ ಶ್ರೀನಾಥ್ ಬಿನ್ ನಾರಾಯಣಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 1.15 ಗಂಟೆಗೆ ವಡ್ಡಹಳ್ಳಿ ಗ್ರಾಮದ ಶ್ರೀನಾಥ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಾಥ್ ಬಿನ್ ನಾರಾಯಣಪ್ಪ, 33 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ವಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.253/2021 ಕಲಂ. 143, 147, 148, 341, 323, 324, 504, 506, 269,270,188,149 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ: 01/06/2021 ರಂದು ಕೋಲಾರ ನಗರದ ಗೌರವ್ ಆರ್ಥೋಪೆಡಿಕ್ ಅಂಡ್ ಸರ್ಜಿಕಲ್ ಆಸ್ಪತ್ರೆಯಲ್ಲಿ ಗಾಯಾಳು ಬಚ್ಚಿರೆಡ್ಡಿ ಬಿನ್ ಲೇಟ್ ಮುನಿಶಾಮಪ್ಪ, 48 ವರ್ಷ, ವಕ್ಕಲಿಗರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೂ ಹಾಗೂ ತಮ್ಮ ಗ್ರಾಮದ ಕೃಷ್ಣಪ್ಪ ಬಿನ್ ಪೂತುಲಪ್ಪ ಮತ್ತು ಅವರ ಕಡೆಯವರಿಗೆ ಜಮೀನಿನ ವಿಚಾರವಾಗಿ ಹಳೆಯ ವೈಷಮ್ಯಗಳಿರುತ್ತೆ. ಈ ವಿಚಾರವಾಗಿ ಕೃಷ್ಣಪ್ಪ ಮತ್ತು ಅವರ ಕಡೆಯವರು ಆಗಾಗ ತಮ್ಮ ಮೇಲೆ ವಿನಾ ಕಾರಣ ಜಗಳ ಮಾಡುತ್ತಿರುತ್ತಾರೆ. ಹೀಗಿರುವಾಗ ನಿನ್ನೆ ದಿನ ದಿನಾಂಕ: 31/05/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಾನು ಊಟ ಮಾಡಿಕೊಂಡು ಮನೆಯಿಂದ ಆಚೆ ಬಂದಾಗ ತಮ್ಮ ಮನೆಯ ಬಳಿ ಯಾರೋ ಗಲಾಟೆ ಮತ್ತು ಕಿರುಚಾಡುವ ಶಬ್ದಗಳು ಕೇಳಿ ಬರುತ್ತಿದ್ದವು. ಅದೇ ಸಮಯದಲ್ಲಿ ತಾನು ತಮ್ಮ ಮನೆ ಮುಂದೆ ಇದ್ದಾಗ ತಮ್ಮ ಗ್ರಾಮದ ಮುರಳಿ ಬಿನ್ ನಾರಾಯಣಸ್ವಾಮಿ, ಕೃಷ್ಣಪ್ಪ ಬಿನ್ ಪೂತುಲಪ್ಪ ಮತ್ತು ಅವರ ಕಡೆಯವರಾದ ಶಶಿ ಬಿನ್ ವೆಂಕಟೇಶಪ್ಪ, ಮಂಜುನಾಥ ಬಿನ್ ರಾಜಪ್ಪ, ಸಂಜಯ್ ಬಿನ್ ಪಾಪಣ್ಣ ಮತ್ತು ನಾಗೇಶ ಬಿನ್ ಮುನಿವೆಂಕಟಪ್ಪ ರವರು ಅಕ್ರಮಗುಂಪು ಕಟ್ಟಿಕೊಂಡು ಕೈಗಳಲ್ಲಿ ರಾಡು, ಕಲ್ಲು ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ತನ್ನ ಬಳಿ ಬಂದು ಆ ಪೈಕಿ ಮುರಳಿ ರವರು ತನ್ನನ್ನು ಕುರಿತು “ಏನೋ ಬೋಳಿ ನನ್ನ ಮಗನೇ, ನಿನಗೆಷ್ಟು ಧೈರ್ಯ ಊರಲ್ಲಿ ಇಲ್ಲ-ಸಲ್ಲದ  ರಾಜಕೀಯ ಮಾಡುತ್ತೀಯಾ” ಎಂದು ಅವಾಚ್ಯಶಬ್ದಗಳಿಂದ ಬೈದು, ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತನ್ನ ಎಡ ಮೊಣಕಾಲಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ “ಈ ನನ್ನ ಮಗನನ್ನು ಬಿಡಬಾರದು, ಸಾಯಿಸಿ ಇಲ್ಲಿಯೇ ಊತು ಬಿಡಬೇಕು” ಎಂದು ಪ್ರಾಣಬೆದರಿಕೆ ಹಾಕಿದನು. ಉಳಿದ ಕೃಷ್ಣಪ್ಪ, ಶಶಿ ಮತ್ತು ಮಂಜುನಾಥ ರವರು ಅವರ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ನಂತರ ತಾನು ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಸಂಜಯ್ ಮತ್ತು ನಾಗೇಶ್ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ “ಈ ನನ್ನ ಮಗನನನ್ನು ಬಿಡಬಾರದು ಸಾಯಿಸಿ ಒಂದು ಗತಿಕಾಣಿಸಿ ಇಲ್ಲಿಯೇ ಊತು ಬಿಡೋಣ” ಎಂದು ಪ್ರಾಣ ಬೆದರಿಕೆಯನ್ನು ಹಾಕಿ, ಸಂಜಯ್ ರವರು ಆತನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಎಡ ಕೈಗೆ ಹೊಡೆದು ನೋವನ್ನುಂಟು ಮಾಡಿ, ನಾಗೇಶ್ ರವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ತನ್ನ ಬಲಕಾಲಿಗೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ನಂತರ ಎಲ್ಲರೂ ಸೇರಿ ತನ್ನನ್ನು ಕುರಿತು ನಿನಗೆ ಒಂದು ಗತಿ ಕಾಣಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದರು. ಅಷ್ಟರಲ್ಲಿ ತಮ್ಮ ಗ್ರಾಮದ ಶಶಿಕುಮಾರ್, ಶ್ರೀಧರ್ ಮತ್ತು ಬಾಬುರೆಡ್ಡಿ ರವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಗಾಯಗೊಂಡಿದ್ದ ತನ್ನನ್ನು ಶಶಿಕುಮಾರ್ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಶ್ರೀ ಗೌರವ್ ಆರ್ಥೋಪೆಡಿಕ್ ಅಂಡ್ ಸರ್ಜಿಕಲ್ ಹಾಸ್ಪಿಟಲ್ ಗೆ ಬಂದು ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಕೋವಿಡ್-19 ಕಾಯಿಲೆ ಇದ್ದು ಸಹ ಮಾಸ್ಕ್ ಹಾಕದೆ ಆಕ್ರಮ ಗುಂಪುಕಟ್ಟಿಕೊಂಡು ಬಂದು ತನ್ನ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ. ತಾನು ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಕಾರಣ ಈ ದಿನ ತಡವಾಗಿ ತನ್ನ ಹೇಳಿಕೆಯನ್ನು ನೀಡಿರುತ್ತಾರೆ.

 

8. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.94/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

    ಪಿರ್ಯಾದಿದಾರರಾದ ನಾರಾಯಣಸ್ವಾಮಿ, ಪೊಲೀಸ್ ಸಬ್ಇನ್ಸ್ ಪೆಕ್ಟರ್ ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ   ದಿನಾಂಕ:01/06/2021 ರಂದು ಬೆಳಿಗ್ಗೆ  ನಾನು ಮತ್ತು ಠಾಣಾ  ಸಿಬ್ಬಂದಿ ಸಿ.ಪಿ.ಸಿ-236 ಸಂಜಯ್ ಕುಮಾರ್ ರವರೊಂದಿಗೆ ಠಾಣೆಗೆ  ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-138  ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಡೈಮಂಡ್ ಟಾಕೀಸ್ ರಸ್ತೆಯಲ್ಲಿರುವ ಎಸ್.ಎನ್.ಎಸ್. ಸ್ಟೋರ್ಸ್ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ನಂಜಯ್ಯ ಬಿನ್ ರಾಧಾಕೃಷ್ಣಯ್ಯ, ವೈಶ್ಯರು, ವ್ಯಾಪಾರ, ವಾಸ ಡೈಮಂಡ್ ಟಾಕೀಸ್ ರಸ್ತೆ ಚಿಂತಾಮಣಿ ನಗರ ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಎಸ್.ಎನ್.ಎಸ್. ಸ್ಟೋರ್ಸ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.80/2021 ಕಲಂ. 304A,279,337 ಐ.ಪಿ.ಸಿ :-

     ದಿನಾಂಕ 01/06/2021 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ರಕ್ಷಿತ್ ಕುಮಾರ್ ಎಸ್.ಬಿ.ಬಿನ್ ಎಸ್.ಎನ್. ಬಸವರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:-31/05/2021 ರಂದು ಬೆಳಿಗ್ಗೆ 06-30 ಗಂಟೆಗೆ ತನ್ನ ತಂದೆಯಾದ ಎಸ್.ಎನ್.ಬಸವರಾಜುರವರ ಬಾಬತ್ತು KA--40-ED-5525 ರ ಆಕ್ಟಿವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಆಂಧ್ರಪ್ರದೇಶದ ತರುವಾರ ಗ್ರಾಮದಿಂದ  ತನ್ನ ಅಜ್ಜಿ ತಿಮ್ಮಮ್ಮರವರನ್ನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ದ್ವಿಚಕ್ರವಾಹನದಲ್ಲಿ ಕುಳ್ಳರಿಸಿಕೊಂಡು ಸುಮಾರು ಬೆಳಿಗ್ಗೆ 07-00 ಗಂಟೆಯ ಸಮಯದಲ್ಲಿ ಕಲ್ಲೂಡಿ ಬಳಿ ಬರುತ್ತಿರುವಾಗ ಬ್ರಿಡ್ಜ್ ಬಳಿ ತನ್ನ ತಂದೆಯು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಕ್ಷಣ ಬ್ರೇಕ್ ಹಾಕಿದ  ಕಾರಣ ತಂದೆ ಮತ್ತು ಅಜ್ಜಿಯು ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು, ಹೋಗಿದ್ದು,  ತನ್ನ ತಂದೆಗೆ ಎಡಕಾಲಿನ ಗಾಯಗಳಾಗಿದ್ದು, ಮತ್ತು  ಅಜ್ಜಿಯ ತಲೆಗೆ ಪೆಟ್ಟಾಗಿದ್ದು,  ಅಲ್ಲಿದ್ದ  ಸಾರ್ವಜನಿಕರು ಉಪಚರಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ.  ವೈದ್ಯರ ಸಲಹೆಯ ಮೇರೆಗೆ  ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿದ್ದು, ತನ್ನ  ಅಜ್ಜಿ ತಿಮ್ಮಮ್ಮರವರು  ಈ ದಿನ ದಿನಾಂಕ: 01/06/2021 ರಂದು ಬೆಳಿಗ್ಗೆ 9-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಮುಂದಿನ ಕ್ರಮ ಜರುಗಿಸಲು ಕೋರುತ್ತೇನೆ. ಹಾಗೂ ತನ್ನ ತಂದೆಯಾದ ಎಸ್.ಎನ್.ಬಸವರಾಜುರವರು KA- 40-ED-5525 ರ ಆಕ್ಟಿವ್ ಹೊಂಡಾ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಅಪಘಾತವುಂಟಾಗಿ ನಮ್ಮ ತಂದೆಗೂ ಕಾಲಿಗೆ ಗಾಯಗಳಾಗಿದ್ದು, ತನ್ನ ಅಜ್ಜಿಯು ಮೃತಪಟ್ಟಿರುತ್ತಾರೆ. ನಮ್ಮ ತಂದೆ ಮತ್ತು ಅಜ್ಜಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ. ತನ್ನ ಅಜ್ಜಿಯ ಮೃತದೇಹವು ನಿಮ್ಹಾನ್ಸ್ ಆಸ್ಪತ್ರೆಯ ಶವಗಾರದಲ್ಲಿರುತ್ತೆ. ತನ್ನ ತಂದೆಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 

10. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.48/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

     ದಿನಾಂಕ 01/06/2021 ರಂದು ಸಂಜೆ 07-45 ಗಂಟೆ ಸಮಯದಲ್ಲಿ ಪಾತಪಾಳ್ಯ ಪೊಲೀಸ್ ಠಾಣೆಯ ಪಿ ಎಸ್ ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:01-06-2021 ರಂದು ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಬೆಳಿಗ್ಗೆ 06-00 ಗಂಟೆಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಮಾತ್ರ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಸೂಚಿಸುತ್ತಿರುವಾಗ ಸಂಜೆ 5-15 ಗಂಟೆಯಲ್ಲಿ ಆಗಟಿಮಡಕ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತಿದ್ದು, ತಾವು ಸ್ಥಳಕ್ಕೆ ಹೋಗಿ ನೋಡಲಾಗಿ  ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿಯವರು ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯತನದಿಂದ ವ್ಯಾಪಾರ ಮಾಡುತ್ತಿದ್ದು, ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕರ ಹೆಸರು & ವಿಳಾಸ ಕೇಳಲಾಗಿ ರಾಜಮ್ಮ ಕೋಂ ಶ್ರೀನಿವಾಸ, 35 ವರ್ಷ, ಬಲಜಿಗರು ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಆಗಟಿಮಡಕ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿಯವರು ಕೋವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರಿಗೆ ವ್ಯಾಪಾರ ಮಾಡಿ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಗಳನ್ನು ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಅಂಗಡಿಯ ಮಾಲೀಕರಾದ ರಾಜಮ್ಮ ಕೋಂ ಶ್ರೀನಿವಾಸ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುದ್ದಾಗಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.175/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ:02-06-2021  ರಂದು ಬೆಳಿಗ್ಗೆ 8-30  ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:02-06-2021  ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಆನೂರು, ಹಂಡಿಗನಾಳ, ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 7-50 ಗಂಟೆ ಸಮಯದಲ್ಲಿ  ಮೇಲೂರು  ಗ್ರಾಮದ ಕಡೆ ಹೋಗಲು ಕೇಶವಪುರ ಗ್ರಾಮದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ-ಮೇಲೂರು ರಸ್ತೆಯ ಅಪ್ಪೇಗೌಡನಹಳ್ಳಿ  ಗೇಟ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಶಿಡ್ಲಘಟ್ಟ-ಮೇಲೂರು ರಸ್ತೆಯ ಅಪ್ಪೇಗೌಡನಹಳ್ಳಿ  ಗೇಟ್  ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್  ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಬೆಳಿಗ್ಗೆ 8-00 ಗಂಟೆಯಲ್ಲಿ  ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ  ವೆಂಕಟೇಶ ಬಿನ್ ಲೇಟ್ ನಲ್ಲಪ್ಪ, ಸುಮಾರು 32 ವರ್ಷ, ಪ.ಜಾತಿ, ಕೂಲಿಕೆಲಸ, ವಾಸ: ಹೊಸಹುಡ್ಯ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್  ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 8-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ವೆಂಕಟೇಶ್ ಬಿನ್ ಲೇಟ್ ನಲ್ಲಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ.175/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.176/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 02-06-2021 ರಂದು ಬೆಳಿಗ್ಗೆ 9-45 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 02-06-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಹಂಡಿಗನಾಳ, ಕೇಶವಪುರ, ಚೌಡಸಂದ್ರ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 9-30 ಗಂಟೆ ಸಮಯದಲ್ಲಿ ಮೇಲೂರು ಗ್ರಾಮದ ಕಡೆ ಹೋಗಲು ಚೌಡಸಂದ್ರ ಗ್ರಾಮದ ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಮೇಲೂರು ಗ್ರಾಮದ ಸರ್ಕಾರಿ ಪಶು ಆಸ್ಪತ್ರೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿಯು ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಶಿಡ್ಲಘಟ್ಟ-ಮೇಲೂರು ರಸ್ತೆಯ ಪಶು ಆಸ್ಪತ್ರೆಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್ ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ದಿಲೀಪ್ ಕುಮಾರ್ ಬಿನ್ ಲೇಟ್ ವೆಂಕಟೇಶ, 38 ವರ್ಷ, ಬೆಸ್ತರು, ಮೆಕಾನಿಕ್ ಕೆಲಸ, ವಾಸ: ತಲದುಮ್ಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್  ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು ,4 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಬೆಳ್ಳಿಗೆ 9-45 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ದಿಲೀಪ್ ಕುಮಾರ್ ಬಿನ್ ವೆಂಕಟೇಶ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ.176/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.177/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 02-06-2021 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 02-06-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ದೊಗರನಾಯಕನಹಳ್ಳಿ, ಕುತ್ತಾಂಡಹಳ್ಳಿ, ಪಲ್ಲಿಚೆರ್ಲು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಇದ್ಲೂಡು ಗ್ರಾಮದ ಕಡೆ ಹೋಗಲು ಕುತ್ತಾಂಡಹಳ್ಳಿ ಗ್ರಾಮದ ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಇದ್ಲೂಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿಯು ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಇದ್ಲುಡು ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಕವರ್ ಎತ್ತಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ನವೀನ್ ಬಿನ್ ಲೇಟ್ ಮಾರಪ್ಪ, 26 ವರ್ಷ, ಗೊಲ್ಲರು, ಗಾರೆ ಕೆಲಸ, ವಾಸ: ಮಯೂರ ವೃತ್ತ, 23ನೇ ವಾರ್ಡ್, ಶಿಡ್ಲಘಟ್ಟ ನಗರ ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್ ಪರಿಶೀಲಿಸಲಾಗಿ 90 ಎಂ.ಎಲ್.  ಸಾಮರ್ಥ್ಯದ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು,  ಸದರಿ ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಲೋಟಗಳು, 2 ಖಾಲಿ ವಾಟರ್ ಪಾಕೇಟ್ ಗಳನ್ನು ಮತ್ತು 90 ಎಂ.ಎಲ್.  ಸಾಮರ್ಥ್ಯದ 2 ORIGINAL CHOICE DELUXE WHISKY ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 12-30 ಗಂಟೆಯಲ್ಲಿ ಠಾಣಾಧಿಕಾರಿಗಳ ಬಳಿ ಹಾಜರುಪಡಿಸಿರುತ್ತೇನೆ. ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ನವೀನ್ ಬಿನ್ ಮಾರಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ.177/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 02-06-2021 05:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080