Feedback / Suggestions

1. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.34/2021 ಕಲಂ. 153A,504,505,507 ಐ.ಪಿ.ಸಿ :-

  ದಿನಾಂಕ:01.05.2021 ರಂದು ಪಿರ್ಯಾದಿದಾರರಾದ ಪಿ ಎನ್ ಚಲಪತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29.04.2021 ರಂದು ಅಪರಿಚಿತ ವ್ಯಕ್ತಿಯು ವಾಟ್ಸಪ್ ಜಾಲತಾಣದ ವೀಡಿಯೋದಲ್ಲಿ ಮಾತನಾಡಿ ಸನ್ಮಾನ್ಯ ಶಾಸಕರು ಹಾಗೂ ಆರೋಗ್ಯ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸುಧಾಕರ್ ರವರನ್ನು ವಿಮರ್ಶಿನಿ ಯಾವುದೇ ಪುರಾವೆಗಳಿಲ್ಲದೇ ಏಕವಚನದಲ್ಲಿ ಮತ್ತು ಅತ್ಯಂತ ಕೀಳು ಮಟ್ಟದ ಬಾಷೆಯಲ್ಲಿ ನಿಂಧಿಸಿ ಮಾತನಾಡಿ ಸಾರ್ವಜನಿಕರ ಹಾದಿ ತಪ್ಪಿಸುವುದರೊಂದಿಗೆ ಸಮಾಜದಲ್ಲಿ ಶಾಂತಿ ಕದಡುವಂತೆ ವ್ಯಕ್ತಿ ನಿಂದನೆ ಮಾಡಿರುತ್ತಾರೆಂದು & ಈ ಸಂದರ್ಭದಲ್ಲಿ ಸವಿತಾ ಸಮಾಜದ ಜನಾಂಗದವರನ್ನು ಅನವಶ್ಯಕವಾಗಿ ಅತೀ ಕೀಳು ಮಟ್ಟದ ಪದಗಳೊಂದಿಗೆ ಹಾಗೂ ಸರ್ಕಾರ ನಿಷೇಧಿಸಿರುವ 'ಹಜಾಮ' ಎಂಬ ಪದವನ್ನು ಬಳಸಿಕೊಂಡು ಮಾತನಾಡಿ ಮಾನ್ಯ ಶಾಸಕರ ಹಾಗೂ ಸವಿತಾ ಸಮಾಜದವರ ಘನತೆ ಗೌರವಗಳಿಗೆ ಧಕ್ಕೆ ತಂದಿರುತ್ತಾರೆಂದು ಈ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.35/2021 ಕಲಂ. 188  ಐ.ಪಿ.ಸಿ & 5 (1) THE EPIDEMIC DISEASES (AMENDMENT) ORDINANCE, 2020:-

  ದಿನಾಂಕ: 01/05/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಶ್ರೀ. ಡಿ.ಬಿ.ಪರಶುರಾಮಬೋವಿ ಸಿಪಿಸಿ 259 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ  ಸಾರಾಂಶವೇನೆಂದರೆ, ದಿನಾಂಕ: 01/05/2021 ರಂದು ಬೆಳಗ್ಗೆ ಠಾಣೆಯ ಹಾಜರಾತಿಯಲ್ಲಿ  ಠಾಣಾಧಿಕಾರಿಗಳು ತನಗೂ ಮತ್ತು  ಎಲ್.ಸಿ.ರಮೇಶ. ಸಿಪಿಸಿ 88 ರವರಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಪ್ರಸರಿಸದಂತೆ ವ್ಯಕ್ತಿಗಳು ಗುಂಪುಗೂಡುವುದು, ಯಾವುದೇ ಕಾರ್ಯಕ್ರಮಗಳ ಆಚರಣೆ ಮಾಡುವುದು, ವ್ಯಕ್ತಿಯಿಂದ ವ್ಯಕ್ತಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕಾನೂನು ಉಲ್ಲಂಘನೆ ಮಾಡುವವರ ವಿರುದ್ದ ಮಾಹಿತಿ ಸಂಗ್ರಹಿಸಲು ನಗರ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ನೇಮಕದಂತೆ ನಾವು ನಗರ ಗಸ್ತಿನಲ್ಲಿದ್ದಾಗ ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದ ವಾರ್ಡ್ ನಂಬರ್.5 ದಿನ್ನೆಹೊಸಹಳ್ಳಿ ರಸ್ತೆಯಲ್ಲಿ ಬರುವ ಪಲ್ಲವಿ ಬಾರ್ ನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿರುತ್ತೆ. ಮಾಹಿತಿಯಂತೆ ತಾನು ಮತ್ತು ಎಲ್.ಸಿ.ರಮೇಶ ರವರು ಮೇಲ್ಕಂಡ ಪಲ್ಲವಿ ಬಾರ್ ಹತ್ತಿರ ಹೋಗಿ ನೋಡಲಾಗಿ  ಪಲ್ಲವಿ ಬಾರ್ ಮುಂಭಾಗದಲ್ಲಿ ಸುಮಾರು 7-8 ಜನ ಸೇರಿದ್ದು, ನೋಡಲಾಗಿ ಬಾರ್ ನ ಶೆಟ್ಟರ್ ಡೋರ್ ನ್ನು ಅರ್ಧ ತೆರೆದಿದ್ದು ಒಳಗಡೆಯಿಂದ ಮದ್ಯವನ್ನು ತಂದು ಹೊರಗಡೆ ಇದ್ದ  ಸಾರ್ವಜನಿಕರಿಗೆ ಅಕ್ರಮವಾಗಿ  ಮಾರಾಟ ಮಾಡುತ್ತಿದ್ದರು. ಕರೋನ-19 ರ ಎರಡನೇ ಅಲೆಯ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ಲೆಕ್ಕಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಮಾಸ್ಕ್ ನ್ನು ಧರಿಸದೇ ಗುಂಪಾಗಿ ಸೇರಿಸಿಕೊಂಡಿದ್ದು ನಾವು ಹತ್ತಿರ ಹೋಗುವಷ್ಟರಲ್ಲಿ ಸಾರ್ಜನಿಕರು ಅಲ್ಲಿಂದ ಓಡಿ ಹೋಗಿದ್ದು ಬಾರ್ ನಲ್ಲಿದ್ದವರನ್ನು ವಿಚಾರ ಮಾಡಲಾಗಿ 1) ಶಂಕರ್  ಬಿನ್ ಚೆನ್ನೆಗೌಡ 35ವರ್ಷ ವಕ್ಕಲಿಗ ಕ್ಯಾಷಿಯರ್ ಕೆಲಸ ಪಲ್ಲವಿ ಬಾರ್. ವಾಸ: ವಾರ್ಡ್ ನಂಬರ್: 3 ಪ್ರಶಾಂತ ನಗರ  2) ಮಧು ಬಿನ್ ಗೋವಿಂದರಾಜು 21ವರ್ಷ ವಕ್ಕಲಿಗರು. ಸಪ್ಲೈಯರ್ ಕೆಲಸ. ಪಲ್ಲವಿ ಬಾರ್ ವಾರ್ಡ್ ನಂಬರ್: 3 ಪ್ರಶಾಂತ ನಗರ ಚಿಕ್ಕಬಳ್ಳಾಪುರ ಎಂಬುದಾಗಿ ತಿಳಿಸಿದರು. ಪಲ್ಲವಿ ಬಾರ್ ನ ಮಾಲೀಕರು ಬೆಳಗ್ಗೆ 10-00 ಗಂಟೆಗೆ ಬಾರ್ ನ್ನು ಮುಚ್ಚಲು ಸರ್ಕಾರದ ಆದೇಶವಿದ್ದರೂ ಸಹ ಕ್ಯಾಷಿಯರ್ ಶಂಕರ್ ಮತ್ತು ಸಪ್ಲೆಯರ್ ಮಧು ಮತ್ತು ಪಲ್ಲವಿ ಬಾರ್ ಮಾಲೀಕರು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಿ ಕೋವಿಡ್-19 ರ ಸಾಂಕ್ರಾಮಿಕ ಖಾಯಿಲೆ ಹರಡುವುದನ್ನು ತಡೆಗಟ್ಟುವ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆಂದು  ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿದ್ದರ ಮೇರೆಗೆ  ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.175/2021 ಕಲಂ. 420  ಐ.ಪಿ.ಸಿ:-

  ದಿನಾಂಕ: 01/05/2021 ರಂದು ಸಂಜೆ 6.30 ಗಂಟೆಗೆ ವೆಂಕಟರೆಡ್ಡಿ ಬಿನ್ ಲೇಟ್ ಚಿಕ್ಕನರಸಿಂಹರೆಡ್ಡಿ, 45 ವರ್ಷ, ವಕ್ಕಲಿಗರು, ವ್ಯಾಪಾರ, ಪ್ರಭಾಕರ್ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಹೆಂಡತಿಯಾದ ಜೆ.ಶೋಭಾ ರವರ ಹೆಸರಿನಲ್ಲಿ ಕನ್ನಂಪಲ್ಲಿ ಗ್ರಾಮದ ಹಾಲಿನ ಡೈರಿನ ಮುಂಭಾಗದಲ್ಲಿ ಸಿಎಲ್-2 ಸನ್ನದು ನಿಹಾಲ್ ವೈನ್ಸ್ ಶಾಪ್ ಇರುತ್ತೆ. ಸದರಿ ವೈನ್ ಶಾಪ್ ಉಸ್ತುವಾರಿಯನ್ನು ತಾನು ನೋಡಿಕೊಳ್ಳುತ್ತಿರುತ್ತೇನೆ. ಈಗ್ಗೆ ಸುಮಾರು 5 ತಿಂಗಳಿಂದ ಚಿಂತಾಮಣಿ ನಗರದ ನಾರಸಿಂಹಪೇಟೆ ವಾಸಿ ಶ್ರೀನಿವಾಸ ರವರನ್ನು ತಮ್ಮ ವೈನ್ ಶಾಪ್ ಗೆ ಕ್ಯಾಶಿಯರ್ ಆಗಿ ನೇಮಕ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ:23/04/2021 ರಂದು ಸಂಜೆ ಸುಮಾರು 4.00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದಲ್ಲಿರುವ ಕೆ.ಎಸ್.ಬಿ.ಸಿ.ಎಲ್ ಮಳಿಗೆಯಿಂದ ನಮ್ಮ ವೈನ್ಸ್ ಶಾಪ್ ಗೆ 5,93,916/- ರೂ (ಐದು ಲಕ್ಷ ತೊಂಬತ್ತು ಮೂರು ಸಾವಿರದ ಒಂಬೈನೂರು ಹದಿನಾರು) ರೂಗಳ ವಿವಿಧ ಕಂಪನಿಗಳ ಮದ್ಯ ದಾಸ್ತಾನು ಬಂದಿರುತ್ತೆ. ಸದರಿ ದಾಸ್ತಾನನ್ನು ಕ್ಯಾಶಿಯರ್ ಶ್ರೀನಿವಾಸ ರವರು ವೈನ್ಸ್ ಶಾಪ್ ನಲ್ಲಿ ಶೇಖರಣೆ ಮಾಡಿರುತ್ತಾರೆ. ದಿನಾಂಕ 26/04/2021 ರಂದು ರಾತ್ರಿ 8.00 ಗಂಟೆಗೆ ತಾನು ತಮ್ಮ ವೈನ್ಸ್ ಶಾಪ್ ಗೆ ಹೋಗಿದ್ದು ತನಗೆ ಅಂಗಡಿಯಲ್ಲಿದ್ದ ದಾಸ್ತಾನಿನ ಬಗ್ಗೆ ಅನುಮಾನ ಬಂದು ಸ್ಟೇಟ್ ಮೆಂಟ್ ಹಾಗೂ ದಾಸ್ತಾನನ್ನು ತಾಳೆ ಮಾಡಿ ನೋಡಿದಾಗ 1) ಹೈವಾರ್ಡ್ಸ್ ಚಿಯರ್ಸ್ 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ನ 70 ಬಾಕ್ಸ್, 2) ಬ್ಯಾಗ್ ಪೈಪರ್ 180 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ನ 5 ಬಾಕ್ಸ್, 3) ಓಲ್ಡ್ ಟಾರ್ವನ್ 180 ಎಂ.ಎಲ್ ಟೆಟ್ರಾ ಪಾಕೆಟ್ ನ 5 ಬಾಕ್ಸ್ ಗಳು ಇಲ್ಲದೆ ಇದ್ದು, ಈ ಬಗ್ಗೆ ಕ್ಯಾಷಿಯರ್ ಶ್ರೀನಿವಾಸ ರವರನ್ನು ಪ್ರಶ್ನಿಸಲಾಗಿ ದಾಸ್ತಾನು ಕಡಿಮೆ ಆಗಿರುವ ಬಗ್ಗೆ ತನಗೆ ಗೊತ್ತಿರುವುದಿಲ್ಲವೆಂದು ಉತ್ತರ ನೀಡಿರುತ್ತಾನೆ. ತಾನು ಅಂಗಡಿಯ ಸಿಸಿ ಕ್ಯಾಮೆರಾ ಪುಟೇಜ್ ಅನ್ನು ಪರಿಶೀಲಿಸಿದಾಗ ದಿನಾಂಕ 23/04/2021 ರಂದು ಸಂಜೆ 7.00 ಗಂಟೆಯವರೆಗೆ ರೆಕಾರ್ಡ್ ಆಗಿದ್ದು ನಂತರ ರೆಕಾರ್ಡ್ ಆಗಿರುವುದಿಲ್ಲ. ಕ್ಯಾಷಿಯರ್ ಶ್ರೀನಿವಾಸ ರವರು ಸಿಸಿ ಕ್ಯಾಮೆರಾ ರೆಕಾರ್ಡಿಂಗ್ ಆಪ್ ಮಾಡಿರುತ್ತಾನೆ. ದಿನಾಂಕ 23/04/2021 ರಂದು ಸಂಜೆ 4.00 ಗಂಟೆಯಿಂದ ದಿನಾಂಕ 26/04/2021 ರ ಮದ್ಯೆ ಯಾವುದೇ ಸಮಯದಲ್ಲಿ ಕ್ಯಾಷಿಯರ್ ಶ್ರೀನಿವಾಸ ರವರು ಮೇಲ್ಕಂಡ ಬ್ರಾಂಡ್ ನ ಸುಮಾರು 2,83,160/- (ಎರಡು ಲಕ್ಷ ಎಂಬತ್ತು ಮೂರು ಸಾವಿರದ ನೂರ ಅವರತ್ತು) ರೂಗಳ ಮದ್ಯವನ್ನು ತಮ್ಮ ವೈನ್ ಶಾಪ್ ನಿಂದ ಬೇರೆಡೆಗೆ ಸಾಗಿಸಿ ದುರುಪಯೋಗ ಪಡಿಸಿಕೊಂಡು ತನಗೆ ನಂಬಿಕೆ ದ್ರೋಹ ವೆಸಗಿರುತ್ತಾನೆ. ಕ್ಯಾಷಿಯರ್ ಶ್ರೀನಿವಾಸ ರವರು ತಾನು ದುರುಪಯೋಗ ಪಡಿಸಿರುವ ಮದ್ಯ ದಾಸ್ತಾನಿಗೆ ಸಂಬಂದಿಸಿದ ಹಣವನ್ನು ವಾಪಸ್ಸು ನೀಡುವುದಾಗಿ ತಿಳಿಸಿದ್ದು ಇದುವರೆಗೆ ಆತನು ಹಣವನ್ನು ವಾಪಸ್ಸು ನೀಡದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡ ಕ್ಯಾಷಿಯರ್ ಶ್ರೀನಿವಾಸ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 143,147,148,323,324,504,506,149  ಐ.ಪಿ.ಸಿ:-

  ದಿನಾಂಕ 01/05/2021 ರಂದು ರಾತ್ರಿ 8.30 ಗಂಟೆಗೆ ಹಸೀನ್ ತಾಜ್ ಬಿನ್ ಶಪೀವುಲ್ಲಾ, 50 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಸಂತೇಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಮನೆಯ ಹಿಂದೆ ಸರ್ಕಾರಿ ಖರಾಬು ಜಾಗವಿದ್ದು, ಈ ಜಾಗದ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ಉಬೇದ್ ಬಿನ್ ಲೇಟ್ ಗಫಾರ್ ಸಾಬ್ ರವರಿಗೆ ತಕರಾರಿದ್ದು, ಈ ವಿಚಾರದಲ್ಲಿ ಗ್ರಾಮಸ್ಥರು ನ್ಯಾಯಪಂಚಾಯ್ತಿ ಮಾಡಿ ಇಬ್ಬರಿಗೂ ಅರ್ಧ ಜಾಗವನ್ನು ಬಳಸಿಕೊಳ್ಳುವಂತೆ ತಿಳಿಸಿರುತ್ತಾರೆ. ಈ ದಿನ ದಿನಾಂಕ 01/05/2021 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ಉಬೇದ್ ಬಿನ್ ಲೇಟ್ ಗಫಾರ್ ಸಾಬ್, ಮಹಬೂಬ್ ಪಾಷ ಬಿನ್ ಉಬೇದ್, ಶಾಮೀರ್ ಬಿನ್ ಉಬೇದ್, ಗೌಸ್ ಪೀರ್ ಬಿನ್ ಉಬೇದ್, ತೌಸೀಫ್ ಬಿನ್ ಉಬೇದ್, ರೋಷನ್ ಬಿನ್ ಉಬೇದ್, ಶಾಕೀರ್ ಬಿನ್ ಉಬೇದ್, ಅಮ್ಜದ್ ಬಿನ್ ರಹಮತುಲ್ಲಾ ಮತ್ತು ಬೆಂಗಳೂರು ಎಂ.ಎಸ್ ಪಾಳ್ಯದ ವಾಸಿ ಶಾರುಕ್ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಬಂದು ಆ ಪೈಕಿ ಉಬೇದ್ ಮತ್ತು  ಮಹಬೂಬ್ ಪಾಷ ರವರು ತನ್ನನ್ನು ಕುರಿತು ಬೇವರ್ಷಿ ಮುಂಡೆ ಈ ಜಾಗ ತಮಗೆ ಸೇರುತ್ತೆ ಎಂದು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಶಾಮೀರ್ ರವರು ದೊಣ್ಣೆಯಿಂದ ತನ್ನ ಎದೆ ಮತ್ತು ಬೆನ್ನಿನ ಮೇಲೆ ಹೊಡೆದು ಊತ ಗಾಯವನ್ನುಂಟು ಮಾಡಿರುತ್ತಾರೆ. ಉಳಿದವರು ಕೈಗಳಿಂದ ತನ್ನ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ಈ ಜಾಗದ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ವೆಂಕಟೇಶ ಬಿನ್ ಲೇಟ್ ಪೆದ್ದಪ್ಪಯ್ಯ ಮತ್ತು ಚೋಟು ಬಿನ್ ಲೇಟ್ ಬಾಷೂಸಾಬ್ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುತ್ತೇನೆ. ಆದ್ದರಿಂದ ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತೆ.

 

5. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 279,304(A) ಐ.ಪಿ.ಸಿ:-

  ದಿನಾಂಕ:02-05-2021 ರಂದು ಬೆಳಗ್ಗೆ:8-30 ಗಂಟೆಗೆ ಪಿರ್ಯಾದಿದಾರರಾದ  ಚಿಕ್ಕನಾರಾಯಣಪ್ಪ ಬಿನ್ ಲೇಟ್ ಚನ್ನಪ್ಪ  66 ವರ್ಷ, ಜಿರಾಯ್ತಿ ಕೆಲಸ ,ನಾಯಕ ಜನಾಂಗ,  ವಾಸ: ದೊಡ್ಡಪೈಯಲಗುಕರ್ಿ ಗ್ರಾಮ,ಕಸಬಾ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ಮೊ ನಂ-9741418165 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ ತಮ್ಮ ತಂದೆ ತಾಯಿ ರವರಿಗೆ  1 ನೇ ತಾನು  ಮತ್ತು ತನ್ನ ತಂಗಿ 2 ನೇ ರತ್ನಮ್ಮ ರವರಾಗಿರುತ್ತೇವೆ. ತಾನು  ಸುಮಾರು 25 ವರ್ಷಗಳ ಹಿಂದೆ ತಮ್ಮ ಗ್ರಾಮದ ವಾಸಿಯಾದ  ದಾಸಪ್ಪರವರ ಮಗನಾದ ತಿಮ್ಮರಾಯಪ್ಪರವರೊಂದಿಗೆ ಮದುವೆಮಾಡಿಕೊಟ್ಟಿದ್ದು ಇವರಿಗೆ  1ನೇ ತಿರುಮಲೇಶ, 2ನೇ ಗೀತಾ,  3ನೇ ಮೌನಿಕ ಎಂಬ ಮೂವರು ಮಕ್ಕಳಿರುತ್ತಾರೆ. ತಿರುಮಲೇಶರವರು ಸುಮಾರು 2 ವರ್ಷದಿಂದ ಕೆ,ಎನ್, ಆರ್ ಕನ್ ಸ್ಟ್ರಕ್ಷನ್ ನ ಜೀಪ್ ಚಾಲಕನಾಗಿ ಕೆಲಸಮಾಡುತ್ತಿದ್ದು  ಹೀಗಿರುವಲ್ಲಿ ದಿನಾಂಕ:01/05/2021 ರಂದು ರಾತ್ರಿ ಕೆಲಸಕ್ಕಾಗಿ  ಕೆ,ಎನ್, ಆರ್ ಕನ್ ಸ್ಟ್ರಕ್ಷನ್ ನ ನೊಂದಣಿ ಸಂಖ್ಯೆ ಇಲ್ಲದ  ಹೊಸ ಹೊಂಡ ಶೈನ್ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬೆಂಗಳೂರು- ಹೈದರಾಬಾದ್ ಎನ್ ಹೆಚ್-44  ರಸ್ತೆಯಲ್ಲಿ  ಬೀಚಗಾನಹಳ್ಳಿ ಕ್ರಾಸ್ ಗೆ ಹೋಗಿ ವಾಪಸ್ಸು  ಹೈದರಾಬಾದ್- ಬೆಂಗಳೂರು ಎನ್ ಹೆಚ್-44  ರಸ್ತೆಯಲ್ಲಿ ಬಾಗೇಪಲ್ಲಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಕೆ,ಎನ್, ಆರ್ ಕನ್ ಸ್ಟ್ರಕ್ಷನ್ಗೆ  ಬರುತ್ತಿದ್ದಾಗ ದಿನಾಂಕ:01/05/2021 ರಂದು ರಾತ್ರಿ  ಸುಮಾರು 10-30 ಗಂಟೆಯ ಸಮಯದಲ್ಲಿ ಸಾದಲ್ಲಿ ಕ್ರಾಸ್ ಹತ್ತಿರ ಇರುವ ಬ್ರಿಡ್ಜ್ ಬಳಿ ಮುಂದೆ ಹೋಗುತ್ತಿದ್ದ ಹೆಚ್ ಆರ್-38 ಎಎ-3071 ನೊಂದಣಿಸಂಖ್ಯೆಯ ಕಂಟೈನರ್ ಲಾರಿಯ ಚಾಲಕ ಅಜಾಗರೂಕತೆಯಿಂದ ಯಾವುದೇ ಮುನ್ಸೂಚನೆಯನ್ನು ನೀಡದೇ ಬೆಂಗಳೂರು- ಹೈದರಾಬಾದ್ ಎನ್ ಹೆಚ್-44  ರಸ್ತೆಯಲ್ಲಿ ನಿಲ್ಲಿಸಿದ್ದರ ಪರಿಣಾಮ ಹಿಂದೆ ಬರುತ್ತಿದ್ದ  ತನ್ನ  ತಂಗಿಯ ಮಗನಾದ ತಿರುಮಲೇಶ ಬಿನ್ ತಿಮ್ಮರಾಯಪ್ಪ 25  ವರ್ಷ ನಾಯಕ    ಜನಾಂಗ, ಕೆ,ಎನ್, ದೊಡ್ಡಪೈಯಲಗುರ್ಕಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ನೊಂದಣಿಸಂಖೆಯಯಿಲ್ಲದ  ಹೊಸ ಹೊಂಡಾ ಶೈನ್ ದ್ವಿ ಚಕ್ರ ವಾಹನವು ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವಾದ ಪರಿಣಾಮ ತಿರುಮಲೇಶ ರವರಿಗೆ ಬಲ ಮುಂಗೈಗೆ, ಮೊಣಕೈಗೆ, ಎಡ ಮೊಣಕೈಗೆ, ಹಾಗೂ ಹಣೆಗೆ ರಕ್ತಗಾಯಗಳಾಗಿದ್ದರಿಂದ  ಕೆ,ಎನ್, ಆರ್ ಕನ್ ಸ್ಟ್ರಕ್ಷನ್ ಅಂಬ್ಯೂಲೇನ್ಸ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ  ಚಿಕಿತ್ಸೆಗಾಗಿ ಕರೆದುಕೊಂಡು  ಹೋಗಿರುವುದಾಗಿ  ಕೆ,ಎನ್, ಆರ್ ಕನ್ ಸ್ಟ್ರಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ತಮ್ಮ ಭಾವ ತಿಮ್ಮರಾಯಪ್ಪರವರಿಗೆ  ಪೋನ್ ಮಾಡಿ ತಿರುಮಲೇಶರವರಿಗೆ ಅಪಘಾತವಾಗಿರುವ  ವಿಷಯ ತಿಳಿಸಿದ್ದು, ನಂತರ ತಿಮ್ಮರಾಯಪ್ಪನವರು ತನಗೆ ಪೋನ್ ಮಾಡಿ ವಿಷಯ ತಿಳಿಸಿದರು, ತಾನು  ಮತ್ತು ತಮ್ಮ ಭಾವ ತಿಮ್ಮರಾಯಪ್ಪ ರವರು ಚಿಕ್ಕಬಳ್ಳಾಪುರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರವು ನಿಜವಾಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ ತಿಳಿಸಿದರು. ತಾವು  ಗಾಯಾಳು ಕೆ,ಎನ್, ಆರ್ ಕನ್ ಸ್ಟ್ರಕ್ಷನ್ ಅಂಬ್ಯೂಲೇನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ  ಉಸಿರಾಟ ನಿಂತು ಹೊಗಿದ್ದರಿಂದ ದಿನಾಂಕ:01/05/2021 ರಂದು ರಾತ್ರಿ 12-00 ಗಂಟೆಯಲ್ಲಿ ದೇವನಹಳ್ಳಿ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯಾಧಿಕಾರಿಗಳು ಇ.ಸಿ.ಜಿ.ಯನ್ನು ಮಾಡಿ ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ತಿರುಮಲೇಶ ರವರು ಮೃತಪಟ್ಟು  20 ನಿಮಿಷಗಳು ಆಗಿರುತ್ತೆಂದು ವೈದ್ಯಾಧಿಕಾರಿಗಳು ತಿಳಿಸಿದರು. ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ ಮೇಲ್ಕಂಡ ಹೆಚ್ ಆರ್-38 ಎಎ-3071 ನೊಂದಣಿಸಂಖ್ಯೆಯ ಕಂಟೈನರ್ ಲಾರಿಯ ಚಾಲಕ ವಿರುದ್ದ  ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ್ದರ ಮೇರಿಗೆ

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.137/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:01-05-2021 ರಂದು ರಾತ್ರಿ 7-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಅಜಯ್ ಕುಮಾರ್ ಬಿನ್ ಗೋವಿಂದ ರಾಜು.ಟಿ 21 ವರ್ಷ, ವಕ್ಕಲಿಗರು, ವಿದ್ಯಾರ್ಥಿ,ವಾಸ-ಮಜರಾ ಹನುಮೇನಹಳ್ಳಿ ಅಪ್ಪೇಗೌಡನಹಳ್ಳಿ ಗೇಟ್,ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ  ತಂದೆಯವರಾದ ಗೋವಿಂದ ರಾಜು.ಟಿ ಬಿನ್ ಟಿ.ತಿಮ್ಮಯ್ಯ (58 ವರ್ಷ) ರವರು ಹಸುಗಳ ವ್ಯಾಪಾರ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ದಿನಾಂಕ 22/04/2021 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ  ತಂದೆಯವರು ಹಸುಗಳ ವ್ಯಾಪಾರಕ್ಕೆಂದು ಮನೆಯಿಂದ ಹೋಗಿ, ತನ್ನ ಸ್ನೇಹಿತನಾದ ಆನೂರು ಗ್ರಾಮದ ವಾಸಿ ಚಂದ್ರಪ್ಪ ರವರೊಂದಿಗೆ ಅವರ ಬಾಬತ್ತು ಕೆಎ-40-ಕೆ-0198 ನೊಂದಣಿ ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಅದೇ ದಿನ ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಚೌಡಸಂದ್ರ ಗ್ರಾಮದ ಗೇಟ್ ನಲ್ಲಿ ಮೇಲೂರು ಗ್ರಾಮದ ಕಡೆ ಹಸುಗಳ ವ್ಯಾಪಾರಕ್ಕೆಂದು ಹೋಗುತ್ತಿದ್ದಾಗ ಆ ಸಮಯದಲ್ಲಿ ವಿಜಯಪುರ ಕಡೆಯಿಂದ ಬಂದ ಕೆಎ-44-ಎಂ-4550 ನೊಂದಣಿ ಸಂಖ್ಯೆಯ ಓಮ್ನಿ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ  ತಂದೆಯವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಚಂದ್ರಪ್ಪ ರವರು ಹಾಗು ಹಿಂಬದಿಯಲ್ಲಿ ಕುಳಿತಿದ್ದ ತನ್ನ್ನ ತಂದೆ ಗೋವಿಂದ ರಾಜು.ಟಿ ರವರು ದ್ವಿಚಕ್ರವಾಹನದ ಸಮೇತವಾಗಿ ಕೆಳಗೆ ಬಿದ್ದು ತನ್ನ  ತಂದೆಯವರ ಬೆನ್ನಿನ ಹಿಂಭಾಗ, ಎಡ ಕಿವಿ, ಬಲ ಮೊಣ ಕಾಲಿನ ಸೊಂಟದ ಜಾಯಿಂಟ್ ಬಳಿ ರಕ್ತಗಾಯವಾಗಿ ಎರಡು ಕೈಗಳಿಗೂ ಹಾಗು ಕಾಲುಗಳಿಗೂ ತರಚಿದ ಗಾಯಗಳಾಗಿರುತ್ತದೆ. ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ತನ್ನ  ತಂದೆ ಹಾಗು ಚಂದ್ರಪ್ಪ ರವರನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು, ನಂತರ ತನಗೆ ವಿಷಯ ತಿಳಿದು ಕೂಡಲೇ ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ನಂತರ ತಾನು  ಗಾಯಾಳುವಾಗಿದ್ದ ತನ್ನ ತಂದೆಯವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಆಂಬುಲನ್ಸ್ ನಲ್ಲಿ ಕರೆದುಕೊಂಡು ಹೋಗಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ಚಂದ್ರಪ್ಪ ರವರ ಮನೆಯವರು ಚಂದ್ರಪ್ಪನನ್ನು ನಾರ್ಥ್  ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿರುವುದಾಗಿ ತಿಳಿದು ಬಂದಿದ್ದು, ಈ ಅಪಘಾತ ನಡೆದ ಮಾಹಿತಿಯನ್ನು ತಾನು ತನ್ನ ತಂದೆಯವರನ್ನು ಕೇಳಿ ತಿಳಿದುಕೊಂಡಿದ್ದು, ತನ್ನ ತಂದೆಯವರು ಇನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ತಾನು ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-44-ಎಂ-4550 ನೊಂದಣಿ ಸಂಖ್ಯೆಯ ಓಮ್ನಿ ಕಾರಿನ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:137/2021 ಕಲಂ:279,337 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.138/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ: 02-05-2021 ರಂದು ಬೆಳ್ಳಿಗೆ 9-00 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 02-05-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹನುಮಂತಪುರ, ಚೀಮನಹಳ್ಳಿ, ವರದನಾಯಕನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳ್ಳಿಗೆ 8-30 ಗಂಟೆ ಸಮಯದಲ್ಲಿ ಅಬ್ಲೂಡು ಗ್ರಾಮದ ಕಡೆ ಹೋಗಲು ಗುಡಿಹಳ್ಳಿ  ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಅಬ್ಲೂಡು ಗ್ರಾಮದ ರಸ್ತೆಯಲ್ಲಿ ಪಶು ಚಿಕಿತ್ಸಾಲಯದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಅಬ್ಲುಡು ಗ್ರಾಮದ ಪಶು ಚಿಕಿತ್ಸಾಲಯ ಮುಂಭಾಗ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮುನಿರಾಜು ಬಿನ್ ಮುನಿಯಪ್ಪ, ಸುಮಾರು 38 ವರ್ಷ, ಪ.ಜಾತಿ, ಜಿರಾಯ್ತಿ, ವಾಸ: ದೊಡ್ಡತೇಕಹಳ್ಳಿ ಗ್ರಾಮ, ಶಿಡ್ಲಘಟ್ಟ  ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 10 ORIGINAL CHOICE DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದ ಚೀಲವನ್ನು ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮುನಿರಾಜು ಬಿನ್ ಮುನಿಯಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 138/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 506,341,504,143,149 ಐ.ಪಿ.ಸಿ:-

  ದಿನಾಂಕ:02-05-2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಅಶ್ವತ್ಥಮ್ಮ ಕೋಂ ಕ್ಯಾತಪ್ಪ, ಸುಮಾರು 52 ವರ್ಷ,ವಕ್ಕಲಿಗರು, ಜಿರಾಯ್ತಿ, ವಾಸ:ಚೌಡಸಂದ್ರ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ಗ್ರಾಮದ ಪಕ್ಕದಲ್ಲಿಯೇ ಸರ್ವೆ ನಂ:241 ರಲ್ಲಿ 5 ಎಕರೆ 6 ಗುಂಟೆ   ಸರ್ಕಾರಿ ಜಮೀನು ಇದ್ದು ಸದರಿ ಸಕರ್ಾರಿ ಜಮೀನಿನಲ್ಲಿ ತಾನು ಮತ್ತು ತಮ್ಮ ಗ್ರಾಮದ ವೆಂಕಟರತ್ನಮ್ಮ ಕೋಂ ಆಂಜಿನೇಯರೆಡ್ಡಿ, ರತ್ನಮ್ಮ ಕೋಂ ರಾಮಕೃಷ್ಣಪ್ಪ, ಹೇಮಾವತಿ ಕೋಂ ನಾರಾಯಣಸ್ವಾಮಿ, ಪವಿತ್ರ ಕೋಂ ಲೇಟ್ ಹರೀಶ್, ರೂಪ ಕೋಂ ಜಯರಾಮ ಮತ್ತು ಇತರೆಯವರು ಕಸದ ತಿಪ್ಪೆಗಳನ್ನು ಹಾಕಿಕೊಂಡಿರುತ್ತೇವೆ, ರಾಮೇಗೌಡ ಬಿನ್ ಚನ್ನರಾಯಪ್ಪ ರವರ ಕುಟುಂಬದವರು ಸದರಿ ಜಮೀನು ತಮಗೆ ಸೇರಿದೆ ಯಾರೂ ತಿಪ್ಪೆಗಳನ್ನು ಹಾಕಬಾರದೆಂದು ಆಗಾಗ ಗಲಾಟೆ ಮಾಡುತ್ತಿದ್ದರು, ಈಗಿರುವಲ್ಲಿ ದಿನಾಂಕ:02-05-2021 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ  ತಾನು ಮತ್ತು ತಮ್ಮ ಗ್ರಾಮದ ವೆಂಕಟರತ್ನಮ್ಮ ಕೋಂ ಆಂಜಿನೇಯರೆಡ್ಡಿ, ರತ್ನಮ್ಮ ಕೋಂ ರಾಮಕೃಷ್ಣಪ್ಪ, ಹೇಮಾವತಿ ಕೋಂ ನಾರಾಯಣಸ್ವಾಮಿ, ಪವಿತ್ರ ಕೋಂ ಲೇಟ್ ಹರೀಶ್, ರೂಪ ಕೋಂ ಜಯರಾಮ ರವರುಗಳು ಕಸವನ್ನು ತಿಪ್ಪೆಗಳಲ್ಲಿ ಹಾಕುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ತಮ್ಮ ಗ್ರಾಮದ ರಾಮೇಗೌಡ ಬಿನ್ ಚನ್ನರಾಯಪ್ಪ, ಪ್ರಭಾಕರ ಬಿನ್ ರಾಮೇಗೌಡ, ಅರುಣ್ ಕುಮಾರ್ ಬಿನ್ ರಾಮೇಗೌಡ, ಯಶಸ್ಗೌಡ ಬಿನ್ ಪ್ರಭಾಕರ, ಗಜೇಂದ್ರಬಾಬು ಬಿನ್ ಎಂ.ಕೃಷ್ಣಪ್ಪ,ರಾಘವೇಂದ್ರ ಬಿನ್ ಎಂ.ಕೃಷ್ಣಪ್ಪ ರವರುಗಳು  ಅಕ್ರಮ ಗುಂಪು ಕಟ್ಟಿಕೊಂಡು ಬಂದು  ತಮ್ಮನ್ನು ಅಡ್ಡಗಟ್ಟಿ  ಇಲ್ಲಿ ತಿಪ್ಪೆಗಳು ಹಾಕಬೇಡಿ ಎಂದು ಮೇಲ್ಕಂಡ ತಿಪ್ಪೆ ಹಾಕುತ್ತಿದ್ದ ತಮ್ಮಗಳ ಮೇಲೆ ಏಕಾ ಏಕಿ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು  ಇಲ್ಲಿ ತಿಪ್ಪೆಗಳನ್ನು ಹಾಕಿದರೇ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಗಲಾಟೆಯನ್ನು ತಮ್ಮ ಗ್ರಾಮದ ಹರೀಶ್ ಬಿನ್ ಆಂಜಿನೇಯರೆಡ್ಡಿ, ರಾಮಕೃಷ್ಣ ಬಿನ್ ಮುನಿಯಪ್ಪ ರವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆ, ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:139/2021 ಕಲಂ:142,341,504,506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.48/2021 ಕಲಂ. 32(3),15(A) ಕೆ.ಇ ಆಕ್ಟ್:-

  ದಿನಾಂಕ:01/05/2020 ರಂದು ರಾತ್ರಿ 8-30 ಗಂಟೆಗೆ ಹೆಚ್.ಸಿ.97 ರವರು ಆರೋಪಿ ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ಠಾಣಾಧಿಕಾರಿಗಳ ಅದೇಶದಂತೆ ದಿನಾಂಕ.01.05.2021 ರಂದು ರಾತ್ರಿ 7.00 ಗಂಟೆಯಲ್ಲಿ  ಹೆಚ್.ಸಿ.97, ಸುಬ್ರಮಣಿ ಆದ ನಾನು ಪಿ.ಸಿ.308 ಚಂದಪ್ಪಯಲಿಗಾರ್ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟದ ಮಯೂರ ಸರ್ಕಲ್ ನಲ್ಲಿರುವ ವೆಂಕಟೇಶ್ ರವರ ಅಂಗಡಿಯ ಮುಂಭಾಗದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ರಾತ್ರಿ 7-15 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಇವರ ಹೆಸರು ವಿಳಾಸ ಕೇಳಲಾಗಿ ವೆಂಕಟೇಶ್ ಬಿನ್ ಲೇಟ್ ಕೋದಂಡರಾಮಯ್ಯ, 45 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಮಯೂರ ವೃತ್ತ, ಶಿಡ್ಲಘಟ್ಟ ಟೌನ್ ಎಂದು   ತಿಳಿಸಿರುತ್ತಾರೆ. ಇವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಬ್ಯಾಗ್ ನಲ್ಲಿ ಪರಿಶೀಲಿಸಲಾಗಿ ORIGINAL CHOICE 90 ML ನ 12 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 8 ರ ಬೆಲೆ ಒಟ್ಟು 281-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ORIGINAL CHOICE 90 ML ನ 04 ಖಾಲಿ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿದ್ದು,  ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ವೆಂಕಟೇಶ್ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

Last Updated: 02-05-2021 04:55 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080