ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:01/04/2021 ರಂದು ಮದ್ಯಾಹ್ನ 2:30 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಲಾಗಿ ಗಾಯಾಳು ಆದಿನಾರಾಯಣ ಬಿನ್ ಶಿವಪ್ಪ, 32 ವರ್ಷ, ನಾಯಕರು, ಕೂಲಿಕೆಲಸ, ಜಿ.ಮದ್ದೇಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ನಮಗೂ ಮತ್ತು ನಮ್ಮ ಗ್ರಾಮದ ರಾಮಾಂಜಿ ರವರಿಗೂ ಗ್ರಾಮ ಪಂಚಾಯ್ತಿಯ ಚುನಾವಣೆಗಳಾದಾಗಿನಿಂದ ಮನಸ್ತಾಪವಿತ್ತು. ನಾವುಗಳು ಮಾತನಾಡುತ್ತಿರಲಿಲ್ಲ. ದಿನಾಂಕ:31/03/2021 ರಂದು ರಾತ್ರಿ ಸುಮಾರು 11:00 ಗಂಟೆಯಲ್ಲಿ ನಮ್ಮ ಮನೆಯ ಮುಂಬಾಗದಲ್ಲಿ ಇದ್ದಾಗ, ನಮ್ಮ ಗ್ರಾಮದ ರಾಮಾಂಜಿ, ಆತನ ಹೆಂಡತಿ ಅನಿತ ಮತ್ತು ಅಮರಾವತಿ ಕೋಂ ಚನ್ನಕೃಷ್ಣಪ್ಪ ಮತ್ತು ನರೇಶ ಬಿನ್ ಚನ್ನಕೃಷ್ಣಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಚುನಾವಣೆ ಆದಾಗಿನಿಂದ ಈ ನನ್ನ ಮಗನದು ಜಾಸ್ತಿ ಆಗಿದೆ ಇವನ್ನು ಬಿಡಬೇಡಿ ಎಂದು ಅವಾಚ್ಯ ಶಬ್ದಗಳಿಮದ ಬೈಯ್ಯುತ್ತಾ, ರಾಮಾಂಜಿಯು ಒಂದು ರಾಡಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಉಳಿದವರು ನನಗೆ ಪ್ರಾಣ ಬೆದರಿಕೆಯನ್ನು ಹಾಕಿ ಕೈಗಳಿಂದ ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿದರು. ನಮ್ಮ ಗ್ರಾಮದ ನರಸಿಂಹಪ್ಪ ಹಾಗೂ ಇತರರು ಜಗಳವನ್ನು ಬಿಡಿಸಿದರು. ಗಾಯಗೊಂಡಿದ್ದ ನನ್ನನ್ನು ನರಸಿಂಹಪ್ಪ ರವರು ಚಿಕಿತ್ಸೆಗಾಗಿ ಯವುದೋ ಕಾರಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ದಾಖಲಿಸಿರುತ್ತಾರೆ. ನನ್ನ ಮೇಲೆ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕಬ್ಬಿಣದ ರಾಡಿನಿಂದ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ, ಪ್ರಾಣ ಬೆದರಿಕೆ ಹಾಕಿರುವ ನಮ್ಮ ಜನಾಂಗದ ನಮ್ಮ ಗ್ರಾಮದ ರಾಮಾಂಜಿ, ಅನಿತ, ಅಮರಾವತಿ, ಮತ್ತು ನರೇಶ ರವರು ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇನೆಂದು ನೀಡಿದ ಹೇಳಿಕೆಯ ದೂರನ್ನು ಪಡೆದು ಠಾಣೆಗೆ ಮದ್ಯಾಹ್ನ 3:45 ಗಂಟೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 454,380 ಐ.ಪಿ.ಸಿ:-

          ದಿನಾಂಕ: 01/04/2021 ರಂದು  ರಾತ್ರಿ 8-30 ಗಂಟೆಯ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ಪಾರ್ವತಮ್ಮ ಕೋಂ ಚಿಕ್ಕಕೇಶವಪ್ಪ ಸೊಪ್ಪಹಳ್ಳಿ  ಗ್ರಾಮ ರವರು  ಠಾಣೆಗೆ  ಹಾಜರಾಗಿ  ನೀಡಿದ  ದೂರಿನ ಸಾರಾಂಶವೇನೆಂದರೆ, ದಿನಾಂಕ: 01/04/2021 ರಂದು  ಬೆಳಗ್ಗೆ ತಮ್ಮ ಮಗ  ಅಶೋಕ ರವರು  ಬೋರ್ ವೆಲ್ ಮೋಟರ್ ಎತ್ತಲು ಮಂಚನಬಲೆ  ಗ್ರಾಮಕ್ಕೆ ಹೋಗಿದ್ದು, ಸಂಜೆ  4-00 ಗಂಟೆಯ ಸಮಯದಲ್ಲಿ  ತನ್ನ ಗಂಡ ಚಿಕ್ಕಕೇಶವಪ್ಪ , ಸೊಸೆ ಸೌಂದರ್ಯ  ಮತ್ತು  ಮೊಮ್ಮಗಳು  ಪೃತ್ವಿಕಾ ರವರೊಂದಿಗೆ  ಗೊಳ್ಳು ಗ್ರಾಮಕ್ಕೆ  ಹೋಗಿದ್ದು ಪಿರ್ಯಾದಿದಾರರು ಸಂಜೆ 4-45 ಗಂಟೆಯಲ್ಲಿ ಮನೆಗೆ  ಬೀಗ  ಹಾಕಿ  ಬೀಗದ ಕೈಯನ್ನು  ಮನೆಯ ಮುಂದೆ ಮೆಟ್ಟಿಲು ಕೆಳಗಡೆ ಇಟ್ಟು  ಕುರಿಗಳನ್ನು  ಮೇಯಿಸಲು ಜಮೀನು  ಕಡೆಗೆ ಹೋಗಿದ್ದಾಗ  ಸಂಜೆ 5-30 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರ ಗಂಡ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದುಕೊಂಡಿದ್ದು ಹಾಲ್ ನಲ್ಲಿದ್ದ  ಬೀರುವಿನ ಬಾಗಿಲು ತೆರೆದುಕೊಂಡಿದ್ದು  ಬಟ್ಟೆಗಳು  ಚೆಲ್ಲಾಪಿಲ್ಲಿಯಾಗಿ ಬಿದ್ದು ಹೋಗಿರುವುದಾಗಿ  ಪಿರ್ಯಾದಿದಾರರ  ಗಂಡ ಜಮೀನು ಬಳಿ ಇದ್ದ ಪಿರ್ಯಾದಿಗೆ  ತಿಳಿಸಿದಾಗ   ಪಿರ್ಯಾದಿ ಬಂದು ನೋಡಿದ್ದು  ಬೀರುವಿನ ಮೇಲೆ  ಇಟ್ಟಿದ್ದ ಬೀರುವಿನ ಬೀಗದ ಕೈ ಇರಲಿಲ್ಲವೆಂತ ಮತ್ತು ಬೀರುವಿನಲ್ಲಿಟ್ಟಿದ್ದ 40000/- ರೂ ನಗದು ಹಣ ಮತ್ತು  ಬಂಗಾರದ   ವಡವೆಗಳಾದ  ಒಂದು ಚೈನು. ಎರಡು ಬಳೆ. ಒಂದು ಜೊತೆ ಲಕ್ಷ್ಮೀ ವಾಲೆ, ಒಂದು ಜೊತೆ ಜಡೆ ಮಾಟಿ. ಮಗುವಿನ ಎರಡು ಚಿಕ್ಕ ಉಂಗುರಗಳು . ಹಾಗೂ ಮಗುವಿನ ಬಾಲಗ್ರಹ ಬೊಟ್ಟು, ಇವುಗಳನ್ನು ಯಾರೋ ಕಳ್ಳರು  ಮೆಟ್ಟಿಲು ಬಳಿ  ಇಟ್ಟಿದ್ದ್  ಬೀಗದ  ಕೈಯಿಂದ  ಮನೆಯ ಬೀಗ  ತೆಗೆದು,  ಬೀರುವಿನ ಮೇಲೆ ಇದ್ದ ಬೀಗದಿಂದ  ಬಿರುವನ್ನು ತೆಗೆದು  ಮೇಲ್ಕಂಡ ನಗದು ಮತ್ತು ಬಂಗಾರದ ವಡವೆಗಳನ್ನು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆಂತ  ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.47/2021 ಕಲಂ. 454,380 ಐ.ಪಿ.ಸಿ:-

          ದಿನಾಂಕ: 02.04.2021 ರಂದು ಬೆಳಿಗ್ಗೆ 11:30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಪಿರ್ಯಾದಿದಾರರು ಅಣಕನೂರು ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ01.04.2021 ರಂದು ಸಂಜೆ 17:00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಚಿಕ್ಕ ಮಗನಾದ ಪ್ರವೀಣ್ ಕುಮಾರ್ ರವರು ತೋಟದಲ್ಲಿ ಔಷಧಿ ಹೊಡೆಯಲು ಹೋಗಿದ್ದು ಮನೆಯಲ್ಲಿ ತನ್ನ ಹೆಂಡತಿ ಶ್ರೀಮತಿ ರತ್ನಮ್ಮ ರವರು ಹಾಗೂ 2ನೇ ಮಗನಾದ ನವೀನ್ ಕುಮಾರ್ ರವರು ಮನೆಯಲ್ಲಿದ್ದು ಸ್ವಲ್ಪ ಸಮಯದ ನಂತರ ತನ್ನ ಹೆಂಡತಿ ಮತ್ತು ಮಗ ನವೀನ್ ರವರು ಮನೆಗೆ ಬೀಗ ಹಾಕಿಕೊಂಡು ಪೆಟ್ರೋಲ್ ಬಂಕ್ ಹಿಂಬಾಗದಲ್ಲಿರುವ ತೋಟದ ಬಳಿ ಹೋಗಿರುತ್ತಾರೆ, ಈಗಿರುವಾಗ ಸಂಜೆ ಸುಮಾರು 17:45 ಗಂಟೆಯ ತನ್ನ ಹೆಂಡತಿ ಮನೆಗೆ ಬರುವಷ್ಠರಲ್ಲಿ ಯಾರೋ ಅಸಾಮಿ ತನ್ನ ಮನೆಯ ಒಳಗಿನಿಂದ ಹೊರಗೆ ಬಂದಿದ್ದು ಆಗ ತನ್ನ ಹೆಂಡತಿ ಅತನನ್ನು ಮಾತನಾಡಿಸಿದಾಗ ಅಣ್ಣನನ್ನು ನೋಡಲು ಬಂದೆ ಆದರೆ ಅಣ್ಣ ಇಲ್ಲವೆಂದು ಗಾಬರಿಯಿಂದ ಅಸಾಮಿಯು ತನ್ನ ಮನೆಯಿಂದ ಆಚೆಗೆ ಬಂದಿರುತ್ತಾರೆ, ತನ್ನ ಹೆಂಡತಿ ಮನೆಯ ಒಳಗೆ ರೂಮಿನಲ್ಲಿದ್ದ ಬಿರುವಿನ ಬಳಿ ಹೋಗಿ ನೊಡಲಾಗಿ ಬಿರುವಿನ ಲಾಕ್ ಅನ್ನು ಕಿತ್ತು ಹಾಕಿದ್ದು ಬೀರುವಿನಲ್ಲಿದ್ದ 50,000 ರೂ ನಗದು  ಮತ್ತು ಬಂಗಾರದ ವಡವೆಗಳನ್ನು ಕಳವು ಆಗಿರುತ್ತೆಂತ, ತನಗೆ ತಿಳಿಸಿದರು ನಂತರ ತಾನು ಮನೆಗೆ ಬಂದು ನೋಡಲಾಗಿ ನಿಜವಾಗಿದ್ದು, ಬಂಗಾರದ ವಡವೆಗಳ ವಿವರ ಮತ್ತು ಬೆಲೆಯನ್ನು ತಿಳಿಸುವುದಾಗಿ ಪಿರ್ಯಾದಿದಾರರು ಕಳವು ಮಾಡಲು ಬಂದಿದ್ದ ಅಸಾಮಿ ತನ್ನ ಮಗನ ಸ್ನೇಹಿತ ಎಂದು ಹೇಳಿದ್ದರಿಂದ ತನ್ನ ಮಗನನ್ನು ವಿಚಾರಿಸಲಾಗಿ ತನ್ನ ಮಗನು ಯಾರು ಇಲ್ಲವೆಂತ ತಿಳಿಸಿದ್ದರಿಂದ  ದಿನ ತಡವಾಗಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.138/2021 ಕಲಂ. 379 ಐ.ಪಿ.ಸಿ:-

          ದಿನಾಂಕ: 02/04/2021 ರಂದು ಬೆಳಿಗ್ಗೆ 11.00 ಗಂಟೆಗೆ ಕೆ.ಸಿ.ಶ್ರೀರಂಗನಾಥ ಬಿನ್ ಚೌಡಪ್ಪ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ಕಲ್ಕೆರೆ ಗ್ರಾಮ, ನರಸಾಪುರ ಹೋಬಳಿ, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಸ್ವಂತ ಕೆಲಸ ಕಾರ್ಯಗಳಿಗೆ ಮತ್ತು ಮನೆಯ ಉಪಯೋಗಕ್ಕಾಗಿ 2010 ರಲ್ಲಿ ಕೆಎ-35 ಎಂ-8170 ನೊಂದಣಿ ಸಂಖ್ಯೆಯ ಮಹೇಂದ್ರ ಬೊಲೆರೋ ಎಸ್.ಎಲ್.ಎಕ್ಸ್ ಕಾರನ್ನು ಖರೀದಿ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ: 01/04/2021 ರಂದು ಸಂಜೆ 6.00 ಗಂಟೆ ಸಮಯದಲ್ಲಿ ತಮ್ಮ ಸಂಬಂದಿಕರಾದ ಮುನೇಗೌಡರವರ ಮಗಳ ಮದುವೆ ಕಾರ್ಯಕ್ಕೆಂದು ತಾನು ತಮ್ಮ ಕುಟುಂಬ ಸಮೇತ ಮೇಲ್ಕಂಡ ತನ್ನ ಬಾಬತ್ತು ಕಾರಿನಲ್ಲಿ ಕೈವಾರ ಗ್ರಾಮದ ಅಮರನಾರಾಯಣ ದೇವಾಯದ ಮುಂದೆ ಇರುವ ಮದುವೆ ಮಂಟಪದ ಮುಂದೆ ಕಾರನ್ನು ನಿಲ್ಲಿಸಿ ಸದರಿ ಮದುವೆ ಕಾರ್ಯಗಳನ್ನು ಮುಗಿಸಿಕೊಂಡು ಈ ದಿನ ದಿನಾಂಕ:02/04/2021 ರಂದು  ಬೆಳಗಿನ ಜಾವ 01.00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮಕ್ಕೆ ಹೋಗಲೆಂದು ಸದರಿ ಮದುವೆ ಮಂಟಪದಿಂದ ಆಚೆ ಬಂದು ನೋಡಲಾಗಿ ತನ್ನ ಬಾಬತ್ತು ಮೇಲ್ಕಂಡ ಕಾರು ತಾನು ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ಕಳುವಾಗಿರುತ್ತದೆ. ಸುತ್ತಮುತ್ತಲು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಸದರಿ ಕಾರಿನ ಬೆಲೆ ಸುಮಾರು 5,10,000/- ಗಳಾಗಿದ್ದು ಸದರಿ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳತನವಾಗಿರುವ ನನ್ನ ಬಾಬತ್ತು ಕೆಎ-35 ಎಂ-8170 ನೊಂದಣಿ ಸಂಖ್ಯೆಯ ಮಹೇಂದ್ರ ಬೊಲೆರೋ ಎಸ್.ಎಲ್.ಎಕ್ಸ್ ಕಾರನ್ನು ಮತ್ತು ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 01-04-2021 ರಂದು ಸಂಜೆ 05.00 ಪಿ.ಎಸ್.ಐ ರವರು ಠಾಣೆಗೆ ಹಾಜರುಪಡಿದ ಮಾಲು, ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 01-04-2021 ರಂದು ಮಧ್ಯಹ್ನ 03.00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ನಡಂಪಲ್ಲಿ ಕ್ರಾಸ್ ಬಳಿ ನಾರಾಯಣಮ್ಮ ಕೋಂ ಚಲಪತಿ ರವರ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕವಾಗಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಚಿಲ್ಲರೆ ಅಂಗಡಿ ಬಳಿ ದಾಳಿ  ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-148 ಕೃಷ್ಣಪ್ಪ ಸಿಹೆಚ್ಸಿ-161 ಕೃಷ್ಣಪ್ಪ, ಮಹೆಚ್ಸಿ-251 ಸಾವಿತ್ರಮ್ಮ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ನಡಂಪಲ್ಲಿ ಕ್ರಾಸ್  ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ನಡಂಪಲ್ಲಿ ಗ್ರಾಮದ ನಾರಾಯಣಮ್ಮ ಕೋಂ ಚಲಪತಿ  ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿರುವ ಆಸಾಮಿ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಚಿಲ್ಲರೆ ಅಂಗಡಿಯಲ್ಲಿದ್ದಾಕೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಆಕೆನನ್ನು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲ. ಆಕೆಯ ಹೆಸರು ಮತ್ತು ವಿಳಾಸ ಕೇಳಗಾಗಿ  ನಾರಾಯಣಮ್ಮ ಕೋಂ ಚಲಪತಿ, 50 ವರ್ಷ, ಅಂಗಡಿ ವ್ಯಾಪಾರ, ವಾಸ ನಡಂಪಲ್ಲಿ ಕ್ರಾಸ್ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 10 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 351/-ರೂ ಆಗಿರುತ್ತೆ. ಮದ್ಯ ಒಟ್ಟು 900 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕಳಾದ ನಾರಾಯಣಮ್ಮ ಓಡಿಹೋಗಿರುತ್ತಾಳೆ  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 3-30 ರಿಂದ 4-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಾರಾಯಣಮ್ಮ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.89/2021 ಕಲಂ. 341,427,323,324,504,506,34 ಐ.ಪಿ.ಸಿ:-

          ದಿನಾಂಕ: 01-04-2021 ರಂದು ಸಂಜೆ 5.30 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ಘನ ನ್ಯಾಯಾಲಯದಿಂದ ಸಾದರಾದ ಪಿಸಿಆರ್ ನಂ. 203/2019 ರ ದೂರನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀ ಸಿ.ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕಚನ್ನಪ್ಪ, 48 ವರ್ಷ, ಹಿರೆಬಲ್ಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಮತ್ತು ಆತನ ಹೆಂಡತಿಯಾದ ಶ್ರೀಮತಿ ಪೂರ್ಣಿಮ ರವರು ಮೂಲತಃ ಜಂಗಮಕೋಟೆ ಹೋಬಳಿ ಹಿರೆಬಲ್ಲ ಗ್ರಾಮದ ಮೂಲಕ ನಿವಾಸಿಗಳಾಗಿದ್ದು ಸದರಿಯವರು ಗ್ರಾಮದಲ್ಲಿ ಹಾಗೂ ಸಮಾಜದಲ್ಲಿ ಗೌರವಾನ್ವಿತರು ಮತ್ತು ಕಾನೂನು ಪಾಲಿಸುವ ವ್ಯಕ್ತಿಗಳಾಗಿದ್ದು, ಫಿರ್ಯಾದಿದಾರರ ತಂದೆಯಾದ ಶ್ರೀ ಚಿಕ್ಕಚನ್ನಪ್ಪ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಫಿರ್ಯಾದಿದಾರರ ತಂದೆಯವರು ಮೃತಪಟ್ಟಿರುತ್ತಾರೆ, ಫಿರ್ಯಾದಿದಾರರ ಕುಟುಂಬದ ಪೂರ್ವಜರ ಆಸ್ತಿಗಳನ್ನು ಯಾವುದೇ ವಿಧಾನದಲ್ಲಿ ವಿಭಜಿಸಿಲ್ಲ ಅಥವಾ ವಿಂಗಡಣೆ ಮಾಡಿಕೊಳ್ಳದೆ ಇದ್ದು, ಈ ವಿಚಾರದಲ್ಲಿ ಶಿಡ್ಲಘಟ್ಟ ಘನ ನ್ಯಾಯಾಲಯದಲ್ಲಿ ಓಎಸ್ ಸಂಖ್ಯೆ 273/2019 ರಲ್ಲಿ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿರುತ್ತದೆ. ಹಿರೆಬಲ್ಲ ಗ್ರಾಮದ ಸರ್ವೆ ನಂ. 32 ರ ಜಮೀನು ಫಿರ್ಯಾದಿದಾರರ ತಂದೆಯವರ ಜಮೀನಾಗಿದ್ದು ಸದರಿ ಜಮೀನಿನಲ್ಲಿ ಫಿರ್ಯಾದಿದಾರರು ಹಾಗೂ ಅವರ ಕುಟುಂಬದವರು ಹಿಂದಿನ ಕಾಲದಿಂದಲೂ ಓಡಾಡಿಕೊಳ್ಳಲು ರಸ್ತೆಯಾಗಿ ಬಳಸುತ್ತಿದ್ದರೂ, ಜಮೀನು ವಿಭಾಗಗಳ ವಿಚಾರದಲ್ಲಿ ಸಿವಿಲ್ ಸೂಟ್ ಹಾಕಿಕೊಂಡಿದ್ದು ಸದರಿ ಸಿವಿಲ್ ಸೂಟ್ ಬಾಕಿಯಿದ್ದರೂ ಸಹ ಫಿರ್ಯಾದಿದಾರರ ಸಂಬಂಧಿಯಾದ ಚನ್ನಕೃಷ್ಣಪ್ಪ ರವರು ಫಿರ್ಯಾದಿದಾರರನ್ನು ಮತ್ತು ಅವರ ಕುಟುಂಬದವರನ್ನು ಜಮೀನಿ ಬಳಿ ಓಡಾಡಲು ಅಡ್ಡಪಡಿಸುತ್ತಿರುತ್ತಾರೆ. ಹೀಗಿದ್ದು ದಿನಾಂಕ: 15-11-2019 ರಂದು ಸುಮಾರು 11.00 ಗಂಟೆಯಲ್ಲಿ ಫಿರ್ಯಾದಿದಾರರು ಮತ್ತು ಆತನ ಹೆಂಡತಿಯಾದ ಶ್ರೀಮತಿ ಪೂರ್ಣಿಮ ರವರು ಹಸುಗಳಿಗೆ ಹುಲ್ಲನ್ನು ತೆಗೆದುಕೊಂಡು ಬರಲು ಹೋಗಿದ್ದಾಗ ಆರೋಪಿಗಳು ಫಿರ್ಯಾದಿದಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ಹೆಂಡತಿಯಾದ ಶ್ರೀಮತಿ ಪೂರ್ಣಿಮ ರವರ ಮೇಲೆ ಹಲ್ಲೆ ಮಾಡಿ ಕೈಗಳಿಗೆ ಮತ್ತು ಕಾಲುಗಳಿಗೆ ಗಾಯಗಳಾಗುವಂತೆ ಮಾಡಿ ಫಿರ್ಯಾದಿದಾರರನ್ನು ಸಹ ಕೈಗಳಿಂದ ಹೊಡೆದು ಹಲ್ಲೆ ಮಾಡಿದ್ದು ಆ ಸಮಯದಲ್ಲಿ ಸಾಕ್ಷಿದಾರರಾದ ರಾಮಕೃಷ್ಣಪ್ಪ ಬಿನ್ ಲೇಟ್ ಚೌಡಪ್ಪ ಮತ್ತು ಶ್ರೀನಿವಾಸ ಬಿನ್ ಬಚ್ಚೇಗೌಡ ರವರು ಗಲಾಟೆ ಬಿಡಿಸಿದ್ದು ಫಿರ್ಯಾದಿದಾರರಿಗೆ ಸಂಭಂಧಿಸಿದ 5000-00 ರೂ ಬೆಲೆ ಬಾಳುವ ಹುಲ್ಲನ್ನು ನಾಶ ಮಾಡಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.90/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 01-04-2021 ರಂದು ರಾತ್ರಿ 8.00 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 01-04-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಹಿತ್ತಲಹಳ್ಳಿ, ಬೆಳ್ಳುಟ್ಟಿ, ಬೋದಗೂರು, ಭಕ್ತರಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 7.30 ಗಂಟೆ ಸಮಯದಲ್ಲಿ ಮಳಮಾಚನಹಳ್ಳಿ ಗ್ರಾಮದ ಕಡೆ ಹೋಗಲು ಮಳಮಾಚನಹಳ್ಳಿ ಗೇಟ್ ನಲ್ಲಿದ್ದಾಗ ಬಾತ್ಮಿದಾರರಿಂದ ಮಳಮಾಚನಹಳ್ಳಿ ಗ್ರಾಮದ ಕರ್ನಾಟಕ ಬ್ಯಾಂಕ್ ಸಮೀಪದ ಅರುಣ್ ಕುಮಾರ್ ಬಿನ್ ಕೃಷ್ಣಪ್ಪ ರವರ ಚಿಲ್ಲರೆ ಅಂಗಡಿ ಮುಂಭಾಗದ ಸರ್ಕಾರಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಮಳಮಾಚನಹಳ್ಳಿ ಗ್ರಾಮದ ಅರುಣ್ ಕುಮಾರ್ ರವರ ಚಿಲ್ಲರೆ ಅಂಗಡಿ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ನನ್ನನ್ನು ನೋಡಿ ಸದರಿ ಆಸಾಮಿ ಆತನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಅರುಣ್ ಕುಮಾರ್ ಎಂ.ಕೆ ಬಿನ್ ಕೃಷ್ಣಪ್ಪ, 30 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 180 ಎಂ.ಎಲ್. ನ 5 BAGPIPER DELUXE WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದ ಚೀಲವನ್ನು ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಅರುಣ್ ಕುಮಾರ್ ಬಿನ್ ಕೃಷ್ಣಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 90/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.92/2021 ಕಲಂ. 429 ಐ.ಪಿ.ಸಿ & 4,8,9,11 KARNTAKA PREVENTION OF COW SLANGHTER & CATTLE PREVENTION ACT-1964, 11 PREVENTION OF CRUELTY TO ANIMALS ACT, 177,192 INDIAN MOTOR VEHICLES ACT, 1988 & 125(E) The Central Motor Vehicle Rules 2015:-

          ದಿನಾಂಕ: 01-04-2021 ರಂದು ರಾತ್ರಿ 9.45 ಗಂಟೆಯ್ಲಲಿ ಪಿ.ಎಸ್.ಐ. ಶ್ರೀ ಲಿಯಕತ್ ಉಲ್ಲಾ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸಿಬ್ಬಂಧಿಯಾದ ವೆಂಕಟರಾಜು, ಎ.ಎಸ್.ಐ., ಸಿ.ಹೆಚ್.ಸಿ-117 ಚನ್ನಕೇಶವ ಮತ್ತು ಸಿಪಿಸಿ-14 ಗೋವಿಂದಪ್ಪ ರವರೊಂದಿಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಂತಮಣಿ ಉಪ ವಿಭಾಗ ರವರ ಮಾರ್ಗದರ್ಶನದಂತೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು, ಶಿಡ್ಲಘಟ್ಟ ವೃತ್ತ ರವರ ನಿರ್ದೇಶನದಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಸರಹದ್ದಿನ ಮೇಲೂರು, ಮಳ್ಳೂರು, ಅಂಕತಟ್ಟಿ, ಜೆ.ವೆಂಕಟಾಪುರ ಕಡೆಗಳಲ್ಲಿ ಗಸ್ತನ್ನು ನಿರ್ವಹಿಸಿಕೊಂಡು ರಾತ್ರಿ 9.00 ಗಂಟೆಯಲ್ಲಿ ಜಂಗಮಕೋಟೆ ಗ್ರಾಮದ ಪೊಲೀಸ್ ಹೊರ ಠಾಣೆಯ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ನಂ. ಎಪಿ-02-ಯು-3428 407 ಟೆಂಪೋ ಬಂದಿದ್ದು, ಸದರಿ ಟೆಂಪೋವನ್ನು ನಿಲ್ಲಿಸುವಂತೆ ಸೂಚಿಸಿದ್ದು, ಸದರಿ 407 ಟೆಂಪೋ ವನ್ನು ಚಾಲಕ ನಿಲ್ಲಿಸಿ ಕೂಡಲೇ ಓಡಿ ಹೋಗಿದ್ದು ಸದರಿ ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಹೆಸರು ವಿಳಾಸವನ್ನು ಕೇಳಲಾಗಿ ಸಿ.ಗೋವಿಂದ @ ಸಾಕಲ ಗೋವಿಂದಪ್ಪ ಬಿನ್ ಗಂಗಾಧರಪ್ಪ, 38 ವರ್ಷ, ದೋಬಿ ಜನಾಂಗ, ಕ್ಲೀನರ್ ಕೆಲಸ, ವಾಸ: ಹಳೆ ಮಸೀದಿ ಸಮೀಪ, ದೋಬಿ ಬಜಾರ್, ಗೋರಂಟ್ಲ ಟೌನ್, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂಬುದಾಗಿ ಹಾಗೂ ಸದರಿ ಟೆಂಪೋದ ಮಾಲೀಕನು ಸಹ ನಾರಾಯಣಸ್ವಾಮಿ ರವರೆ ಆಗಿದ್ದು, ನಾರಾಯಣಸ್ವಾಮಿ ರವರೆ ದನಗಳನ್ನು/ಎಮ್ಮೆಗಳನ್ನು ಗೋರಂಟ್ಲದ ಸಂತೆ ಹಾಗೂ ರೈತರ ಬಳಿ ಖರೀದಿ ಮಾಡಿಕೊಂಡು ಬಂದು ಹೊಸಕೋಟೆಯ ಕಸಾಯಿ ಖಾನೆಗೆ ಮಾರಾಟ ಮಾಡುತ್ತಾನೆಂದು ತಿಳಿಸಿದ್ದು, ಸದರಿ ವಾಹನವನ್ನು ಪರಿಶೀಲಿಸಲಾಗಿ ಅದರಲ್ಲಿ 2 ಎಮ್ಮೆಗಳು ಮತ್ತು 6 ಹಸುಗಳು ಇದ್ದು ಪ್ರಾಣಿಗಳ ಬಗ್ಗೆ ಕೇಳಲಾಗಿ ಎಮ್ಮೆ/ದನಗಗಳನ್ನು ಸಾಗಿಸಲು ಸಂಬಂಧಪಟ್ಟ ಇಲಾಖೆಗಳ ಕಡೆಯಿಂದ ಪರವಾನಿಗೆಯನ್ನು ಪಡೆದುಕೊಂಡಿರುತ್ತೀರಿಯೇ ಎಂಬ ಬಗ್ಗೆ ವಿಚಾರ ಮಾಡಲಾಗಿ ತಾವು ಯಾವುದೇ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲವೆಂತ ತಿಳಿಸಿದ್ದು ಹಾಗೂ ಸದರಿ ಪ್ರಾಣಿಗಳನ್ನು ಕಟಾವು ಮಾಡಿ ಮಾಂಸವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಚಾಲಕನ ಬಗ್ಗೆ ವಿಚಾರ ತಿಳಿಯಲಾಗಿ ಗೋರಂಟ್ಲ ಟೌನ್ ಸರ್ಕಾರಿ ಆಸ್ಪತ್ರೆಯ ಸಮೀಪದ ಎರಿಕಲ ನಾರಾಯಣಸ್ವಾಮಿ ಎಂಬುವರೊಂದಿಗೆ ತಾನು ದನಗಳನ್ನು ಗೋರಂಟ್ಲದಿಂದ ಸಾಗಿಸಿಕೊಂಡು ಹೊಸಕೋಟೆಗೆ ಸಾಗಿಸಿಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಸದರಿ ಟೆಂಪೋ ಚಾಲಕ ಎರಿಕಲ ನಾರಾಯಣಸ್ವಾಮಿ ಮತ್ತು ವಾಹನದ ಕ್ಲೀನರ್ ಸಿ.ಗೋವಿಂದ @ ಸಾಕಲ ಗೋವಿಂದಪ್ಪ ಮತ್ತು ಇತರರು ಪ್ರಾಣಿಗಳನ್ನು ಸಾಗಾಣಿಕೆ ಮಾಡಲು ಪಶು ಸಂಗೋಪನೆ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ, ಸದರಿ ಪ್ರಾಣಿಗಳನ್ನು ಅವುಗಳ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿದ್ದು, ಆರೋಪಿ, ವಾಹನ ಮತ್ತು ಅದರಲ್ಲಿದ್ದ ಎಮ್ಮೆ/ದನಗಳನ್ನು ವಶಕ್ಕೆ ನೀಡಿ ಕಾನೂನು ಕ್ರಮ ಕೈಗೊಳ್ಳು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 02-04-2021 04:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080