ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.23/2021  ಕಲಂ. 506,504,143,144,147,148,149,323,324  ಐ.ಪಿ.ಸಿ :-

     ದಿನಾಂಕ: 01/03/2021 ರಂದು ಮದ್ಯಾಹ್ನ 14-30 ಗಂಟೆಗೆ ಸಿ ಹೆಚ್ ಸಿ - 107 ಮುಸ್ತಪಾ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕೃಷ್ಣಾರೆಡ್ಡಿ ಬಿನ್ ಲೆಟ್ ವೆಂಕಟಸ್ವಾಮಿ ರೆಡ್ಡಿ, 61 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮಣೀಗಾನಹಳ್ಳಿ ಗ್ರಾಮ, ಪೆದ್ದೂರು ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಮೊ ನಂ: 9845121849  ರವರು ನೀಡಿದ ಹೆಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಸುಮಾರು 30 ಕುರಿಗಳಿದ್ದು, ನಾನು ದಿನಾಂಕ:28/02/2021 ರಂದು ಸಂಜೆ ಸುಮಾರು 4-50 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದಿಂದ ಪೆದ್ದೂರಿಗೆ ಹೋಗುವ ದಾರಿಯಲ್ಲಿ ಸರ್ಕಾರಿ ಮೋರಿ ಪಕ್ಕದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ನಮ್ಮ ಗ್ರಾಮದ ಶಿವಾರೆಡ್ಡಿ ಬಿನ್ ಕೃಷ್ಣಪ್ಪ ಎಂಬುವರು ನನ್ನ ಒಂದು ಕುರಿ ಮೇಲೆ   ಕಲ್ಲಿನಿಂದ ಹೊಡೆದು ಕುರಿ ಕಾಲಿಗೆ ಗಾಯಪಡಿಸಿರುತ್ತಾನೆ. ನಾನು ಏಕೆ ನಮ್ಮ ಕುರಿಗೆ ಹೊಡೆಯುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನನ್ನ ಮಗನೇ ನೀನು ನಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತೀಯಾ ಎಂದು ಅಲ್ಲಿಯೇ ಹೊಲದಲ್ಲಿ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ನನ್ನ ಎಡ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿ ನಿನ್ನನ್ನು ಪ್ರಾಣ ಸಮೆತ ಇವತ್ತು ಬಿಡುವುದಿಲ್ಲ ಎಂದು ಹೇಳುತ್ತಿದ್ದಂತೆ ಅಲ್ಲಿಯೇ ಹೊಲದಲ್ಲಿದ್ದ ಕೃಷ್ಣಪ್ಪ ಎಂಬುವರು ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಮೂಗೆಟುಂಟು ಮಾಡಿದ ಅಷ್ಟರಲ್ಲಿ  ಈ ನನ್ನ ಮಗನನ್ನು ಬಿಡ ಬೇಡ ಎಂದು ಶಿವಾರೆಡ್ಡಿ ಹೆಂಡತಿ ರೂಪ ಮತ್ತು ಕೃಷ್ಣಪ್ಪ ನ ಹೆಂಡತಿ ರತ್ನಮ್ಮ ಎಂಬುವರು ಹೆಳಿದ್ದು, ನಂತರ ಶಿವಾರೆಡ್ಡಿ ಮಗ ಕೌಶಿಕ್ ಎಂಬುವನು ಕಾಲಿನಿಂದ ಒದ್ದು ಮೂಗೇಟುಂಟು ಮಾಡಿದ ಅಷ್ಟರಲ್ಲಿಯೇ ನಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಲೆಟ್ ವೆಮಕಟಸ್ವಾಮಿ  ಮತ್ತು ಲಕ್ಷ್ಮೀಪತಿ ಗೌಡ ಬಿನ್ ವೆಂಕಟೇ ಗೌಡ ಎಂಬುವರು ಗಲಾಟೆಯನ್ನು ಬಿಡಿಸಿ ಶಿವಾರೆಡ್ಡಿ ಮತ್ತು ವೆಂಕಟೇಶಪ್ಪ ವೈ ಕುರ್ರಪಲ್ಲಿ ರವರ ದ್ವಿಚಕ್ರವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.87/2021 ಕಲಂ. 379  ಐ.ಪಿ.ಸಿ :-

     ದಿನಾಂಕ:02/03/2021 ರಂದು ಪಿರ್ಯಾದಿದಾರರಾದ ಜಯರಾಮಪ್ಪ ಬಿನ್ ಲೇಟ್. ಮುನಿನಾರಾಯಣಪ್ಪ, 60 ವರ್ಷ, ಬಲಜಿಗರು, ಜಿರಾಯ್ತಿ ವಾಸ: ದೊಡ್ಡಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ಮಗನಾದ ಜೆ.ವಿನಯ್ ಎಂಬುವನು ಬೆಂಗಳೂರಿನ ಇಸ್ರೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅವನ ಹೆಸರಿನಲ್ಲಿ ENG NO:DUZWFE87401, CHASIS NO:2A18AZ6FWE01391 ನಂಬರಿನ ಕೆಎ-51 ಇಕ್ಯೂ-1273 ನೊಂದಣಿ ಸಂಖ್ಯೆಯ ಸಿ.ಟಿ 100 ದ್ವಿಚಕ್ರ ವಾಹನ ಇದ್ದು, ಸದರಿ ವಾಹನವನ್ನು ನಾವು ನಮ್ಮ ಸ್ವಂತ ಕೆಲಸಗಳಿಗೆ ಬಳಸುತ್ತಿದ್ದೆವು. ದಿನಾಂಕ 04/02/2021 ರಂದು ಕೈವಾರ ಗ್ರಾಮದ ಅಮರನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ತಮ್ಮ ಸಂಬಂಧಿಕರ ಮದುವೆ ಇದ್ದು ನಾನು ನಮ್ಮ ಬಾಬತ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಸಂಜೆ 7.30 ಗಂಟೆಗೆ ಕೈವಾರ ಗ್ರಾಮದ ಅಮರನಾರಾಯಣಸ್ವಾಮಿ ಕಲ್ಯಾಣ ಮಂಟಪದ ಬಳಿ ಹೋಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮದುವೆ ನೋಡಿಕೊಂಡು ಅದೇ ದಿನ ರಾತ್ರಿ ಸುಮಾರು 11.00 ಗಂಟೆಗೆ ಕಲ್ಯಾಣ ಮಂಟಪದಿಂದ ಹೊರ ಬಂದು ನೋಡಲಾಗಿ ತನ್ನ ಬಾಬತ್ತು ದ್ವಿಚಕ್ರ ವಾಹನ ಸ್ಥಳದಲ್ಲಿ ಇಲ್ಲದೆ ಕಳುವಾಗಿರುತ್ತೆ ಕಳುವಾಗಿರುವ ದ್ವಿಚಕ್ರ ವಾಹನವನ್ನು ಕೈವಾರ ಸುತ್ತ-ಮುತ್ತ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ದಿನಾಂಕ 04/02/2021 ರಂದು ಸಂಜೆ 7.30 ಗಂಟೆಯಿಂದ ರಾತ್ರಿ 11.00 ಗಂಟೆ ಮದ್ಯೆ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ದ್ವಿಚಕ್ರ ವಾಹನವು ಸುಮಾರು 34000/- ಬೆಲೆ ಬಾಳುತ್ತೆ. ಕಳುವಾಗಿರುವ ದ್ವಿಚಕ್ರ ವಾಹನವನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ 01/03/2021 ರಮದು ಸಂಜೆ 6-45 ಗಂಟೆಗೆ ಪಿರ್ಯಾದುದಾರರಾದ ಲಕ್ಷ್ಮಣರೆಡ್ಡಿ ಬಿನ್  ಲೇಟ್ ದೊಡ್ಡ ಕೃಷ್ಣಪ್ಪ ,55 ವರ್ಷ, ವಕ್ಕಲಿಗರು ಕಾಗತಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ನನಗೆ ಇಬ್ಬರು ಮಕ್ಕಳಿದ್ದು ಆ ಪೈಕಿ ನನ್ನ ಮಗನಾದ ಚರಣ್ ಕುಮಾರ್ ಕೆ.ಎಲ್ ರವರಿಗೆ 21 ವರ್ಷ ವಯಸ್ಸಾಗಿದ್ದು ಚಿಂತಾಮಣಿ ನಗರ ರಾಯಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುತ್ತಾನೆ. ನನ್ನ ಮಗನಾದ ಚರಣ್ ಕುಮಾರ್ ರವರು ಪ್ರತಿ ದಿನ ನನ್ನ ಬಾಬತ್ತು ಕೆಎ-40-ಇಬಿ-5980 ಹಿರೋ ಸ್ವೇಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಹೋಗಿ ಬರುತ್ತಿರುತ್ತಾನೆ. ಹೀಗಿರುವಾಗ ದಿನಾಂಕ 18/02/2021 ರಂದು ಬೆಳಿಗ್ಗೆ 9-00 ಗಂಟೆಗೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ನನ್ನ ಬಾಬತ್ತು ಕೆಎ-40-ಇಬಿ-5980 ದ್ವಿ ಚಕ್ರ ವಾಹನದಲ್ಲಿ ನನ್ನ ಮಗನಾದ ಚರಣ್ ಕುಮಾರ್ ಚಾಲನೆ ಮಾಡಿಕೊಂಡು ಹಾಗೂ ನಮ್ಮ ಗ್ರಾಮದ ದಿಲೀಪ್ ಬಿನ್ ಸೋಮಶೇಖರ್ ರವರು ಹಿಂಬದಿಯಲ್ಲಿ ಕುಳಿತುಕೊಂಡು ರವರು ಹೋಗಿರುತ್ತಾರೆ. ನಂತರ  ಬೆಳಿಗ್ಗೆ 9-30 ಗಂಟೆಗೆ ದಿಲೀಪ್ ರವರು ನನಗೆ ಪೋನ್ ಮಾಡಿ ನಾನು ಹಾಗೂ ಚರಣ್ ಕುಮಾರ್ ರವರು ಚಿಂತಾಮಣಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯ ಬಳಿ ಇರುವ ತಿರುಮಲ ಹೊಟೇಲ್ ಮುಂಭಾಗದ ರಸ್ತೆಯ ಎಡಬದಿಯಲ್ಲಿ ದ್ವಿ-ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ  ಹಿಂದುಗಡೆಯಿಂದ ಎಪಿ-26 ಟಿಎ-6229  ಟ್ರಾಕ್ಟರ್ ನ  ಚಾಲಕ ಟ್ರಾಕ್ಟರ್ ನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ನಾನು ಹಾಗೂ ಚರಣ್ ಕುಮಾರ್ ರವರು ರಸ್ತೆಯ ಮೇಲೆ ಬಿದ್ದು ಹೋಗಿದ್ದು ಚಾಲಕ ಟ್ರಾಕ್ಟರ್ ಇಂಜಿನ್ ನ ಮುಂಭಾಗದ ಎಡ ಚಕ್ರವನ್ನು ಚರಣ್ ಕುಮಾರ್ ರವರ ಎಡಕಾಲಿನ ಮೇಲೆ ಹತ್ತಿಸಿದ ಪರಿಣಾಮ ಎಡಗಾಲಿಗೆ ರಕ್ತಗಾಯವಾಗಿದ್ದು ನಾನು, ಅಲ್ಲಿಯೇ ಇದ್ದ ನಮ್ಮ ಗ್ರಾಮದ ಬೈರೆಡ್ಡಿ ಬಿನ್ ಕಶ್ಯಪ್ಪ ನವರ ವೆಂಕಟರೆಡ್ಡಿ ಹಾಗೂ ಕಾಗತಿ ದಿಗೂರು ಗ್ರಾಮದ ಅಶೋಕ್ ಕೆ.ವಿ ಬಿನ್ ವೆಂಕಟರಾಮಪ್ಪ ಆರ್ ರವರು ಚರಣ್ ಕುಮಾರ್ ರವರನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿ ಸಕರ್ಾರಿ ಆಸ್ವತ್ರೆಗೆ ಕರೆದುಕೊಂಡು ಹೋಗುತ್ತಿರುತ್ತೇವೆಂದು ತಿಳಿಸಿದ್ದು ಕೂಡಲೇ ನಾನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ನೋಡಲಾಗಿ  ವಿಷಯ ನಿಜವಾಗಿರುತ್ತೆ. ನನ್ನ ಮಗನಾದ ಚರಣ್ ಕುಮಾರ್ ರವರ ಎಡಗಾಲಿಗೆ ರಕ್ತಗಾಯವಾಗಿದ್ದು ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ಪಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಮಗನನ್ನು ಬೆಂಗಳೂರಿನ ಹಸ್ಮ್ಯಾಟ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ದಾಖಲುಮಾಡಿರುತ್ತೇವೆ. ಇದುವರೆಗೂ ನನ್ನ ಮಗನಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುತ್ತೆ. ಆದ್ದರಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನಾದ ಚರಣ್ ರವರು ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಎಡಗಾಲಿಗೆ ರಕ್ತಗಾಯಪಡಿಸಿದ ಎಪಿ-26 ಟಿಎ-6229  ಟ್ರಾಕ್ಟರ್ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ 01/03/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾಧಿ ಚಂದ್ರಕಲಾ ಕೊಂ ಕೆ.ಮಲ್ಲೇಶ ಅಮಗೊಂಡಪಾಳ್ಯಂ ಗ್ರಾಮ ಪುಟ್ಟಪರ್ತಿ ಮಂಡಲ ಅನಂತಪುರ ಜಿಲ್ಲೆ ಆಂದ್ರ ಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ತನ್ನ ಗಂಡ ಕೆ. ಮಲ್ಲೇಶ ದಿನಾಂಕ 28/02/2021 ರಂದು ಸಂಜೆ ಸುಮಾರು 5-00 ಗಂಟೆಯ ಸಮಯದಲ್ಲಿ ನಮ್ಮ ಸಂಬಂಧಿಯಾದ ಸುನೀಲ್ ಕುಮಾರ್ ಬಿನ್ ವೆಂಕಟೇಶ  ರವರ ಮದುವೆಗೆ ಕರ್ನಾಟಕರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ದೇವರಾಜಪಲ್ಲಿ ಗ್ರಾಮಕ್ಕೆ ಹೋಗಲು ತಮ್ಮ ಬಾಬತ್ತು ಎಪಿ39-ಸಿಕೆ-3690 ರ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮದಿಂದ ಬಂದಿದ್ದು, ಹೀಗಿರುವಲ್ಲಿ ಈ ದಿನ ದಿನಾಂಕ 01/03/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿದ್ದಾಗ ತನ್ನ ಗಂಡ ಕೆ.ಮಲ್ಲೇಶ ಬಿನ್ ಲೇಟ್ ಗಂಗುಲಪ್ಪ, 46 ವರ್ಷ, ರವರಿಗೆ ದಿನಾಂಕ 28/02/2021 ರಂದು ರಾತ್ರಿ ಸುಮಾರು 8-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕು ಎನ್.ಹೆಚ್. 44 ರಸ್ತೆಯಲ್ಲಿ ವರ್ಲಕೊಂಡ ಗ್ರಾಮದ ಹತ್ತಿರ ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ತಾನು ಹೋಗುತ್ತಿದ್ದ ತನ್ನ ಬಾಬತ್ತು ಎಪಿ39-ಸಿಕೆ-3690 ರ ದ್ವಿಚಕ್ರವಾಹನಕ್ಕೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಸ್ಥಳದಿಂದ ಹೊರಟು ಹೋಗಿದ್ದು, ಇದರಿಂದ ರಕ್ತಗಾಯಗಳಾಗಿ ತನ್ನ ಗಂಡ ಸ್ಥಳದಲ್ಲಿ ಮೃತಪಟ್ಟಿದ್ದು, ರಸ್ತೆ ಅಪಘಾತ ಉಂಟುಪಡಿಸಿ ಸ್ಥಳದಿಂದ ಹೊರಟು ಹೋದ ವಾಹನವನ್ನು ಪತ್ತೆ ಮಾಡಿ ಸದರಿ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 3,5,25(1-B)(a) ARMS ACT, 1959, 9B EXPLOSIVE ACT, 1884 & 5 EXPLOSIVE SUBSTANCES ACT, 1908:-

     ದಿನಾಂಕ:01/03/2021 ರಂದು ಸಂಜೆ 5:15 ಗಂಟೆಗೆ ಪಿ.ಎಸ್.ಐ ರವರು ಮೂರು ಜನ ಆರೋಪಿತರನ್ನು, ಅಮಾನತ್ತು ಪಡಿಸಿಕೊಂಡ ಮಾಲುಗಳು, ದಾಳಿ ಪಂಚನಾಮೆದೊಂದಿಗೆ ಮುಂದಿನ ಕ್ರಮ ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:01/03/2021 ರಂದು ಬೆಳಿಗ್ಗೆ 11:00 ಗಂಟೆ ಸಮಯದಲ್ಲಿ ತಾನು ಮತ್ತು ಮಾನ್ಯ ಡಿ.ವೈ.ಎಸ್.ಪಿ ಸಾಹೇಬರವರು ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ಪಂಚಾಯ್ತಿ ಸಾಭಾಂಗಣದಲ್ಲಿ ಮೀಟಿಂಗ್ನಲ್ಲಿದ್ದಾಗ ಡಿ.ವೈ.ಎಸ್.ಪಿ ಸಾಹೇಬರಿಗೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ ಗುಂಗೀರ್ಲಹಳ್ಳಿ ಗ್ರಾಮದ ಸಮೀಪ ಗೊಲ್ಲರ ಜನಾಂಗದ ಗಂಗಾಧರಪ್ಪ ಬಿನ್ ಹನುಂತಪ್ಪ ಎಂಬುವರು ಅಕ್ರಮವಾಗಿ ಮದ್ದುಕೂರುವ ನಾಡ ಬಂದೂಕುಗಳನ್ನು ಮತ್ತು ಅದರ ಬಿಡಿ ಭಾಗಗಳನ್ನು ತಯಾರಿ ಮತ್ತು ದುರಸ್ತಿ ಮಾಡುತ್ತಾ ಸದರಿ ಶಸ್ತ್ರಗಳಿಗೆ ಅಕ್ರಮವಾಗಿ ಸ್ಟೋಟಕ ಸಾಮಾಗ್ರಿಯನ್ನು ಬಳಸಿ ಮದ್ದುಗುಂಡುಗಳನ್ನು ಅಕ್ರಮವಾಗಿ ಪೂರೈಸುತ್ತಿದ್ದಾನೆಂದು ಬಂದ ಬಾತ್ಮಿ ಮಾಹಿತಿ ಮೇರೆಗೆ ದಾಳಿ ನಡೆಸಲು ತನಗೆ ಸೂಚನೆ ನೀಡಿ ಡಿ.ವೈ.ಎಸ್.ಪಿ ಸಾಹೇಬರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ಮಿಂಚಿನ ದಾಳಿ ನಡೆಸಲು ಸಿಬ್ಬಂದಿಯಾದ 1) ಹೆಚ್.ಸಿ-59  ಶ್ರೀನಿವಾಸ, ಹೆಚ್.ಸಿ-205   ರಮೇಶ, ಹೆಚ್.ಸಿ-06 ಬಾಬು, ಹೆಚ್.ಸಿ-157 ಬ್ಯಾಕೋಡ, ಹೆಚ್.ಸಿ-234 ಶೇಖರ್, ಹೆಚ್.ಸಿ-206 ಮಂಜುನಾಥ, ಪಿಸಿ-436 ಬಾಲಕೃಷ್ಣ, ಪಿಸಿ-240 ಮಧುಸೂಧನ್ ರವರನ್ನು ಕರೆದುಕೊಂಡು ಸರ್ಕಾರಿ ಜೀಪ್ ಕೆ.ಎ-40 ಜಿ-1555 ಬೊಲೆರೋ ವಾಹನದಲ್ಲಿ ಮತ್ತು ಕೆ.ಎ-40 ಜಿ-0855 ಬೊಲೆರೋ ವಾಹನದಲ್ಲಿ ಪೋಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರಾಗಿ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಪಂಚರಾಗಿ ಕರೆದುಕೊಂಡು ಎರಡು ಜೀಪುಗಳಲ್ಲಿ ಗುಂಗೀರ್ಲಹಳ್ಳಿ ಗ್ರಾಮಕ್ಕೆ ಹೋದೇವು. ಸದರಿ ಗ್ರಾಮದಿಂದ ಸುಮಾರು ಒಂದು ಕಿ.ಮೀಟರ್ ಆಗ್ನೆಯ ದಿಕ್ಕಿಗೆ ಆಲದ ಮರಗಳ ಸಮೀಪ ಸದರಿ ಗ್ರಾಮದ ಸರ್ವೆ ನಂಬರ್:49 ರಲ್ಲಿ ನಿರ್ಮಾಣ ಮಾಡಿರುವ ಮೂರು ಮನೆಗಳ ಪೈಕಿ ಮದ್ಯಭಾಗದ ಮನೆಯ ಬಳಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿಗೆ ಹೋದಾಗ ಮನೆಯ ಹಿತ್ತಲಲ್ಲಿ ಬೆವಿನ ಮರಗಳ ಕೆಳೆಗೆ ನೋಡಿದಾಗ ಒಬ್ಬ ಅಸಾಮಿ ಕೂಲಿಮೆಯನ್ನು ಇಟ್ಟು ತನ್ನ ಬದಿಯಲ್ಲಿ ನಾಢ ಬಂದೂಕಿನ ಬಟ್ ಭಾಗವನ್ನು ಮರದ ಪೀಸ್ನಿಂದ ತಯಾರು ಮಾಡುತ್ತಿದ್ದು ಆತನ ಹೆಸರು ವಿಳಾಸ ಕೇಳಿದಾಗ ಗಂಗಾಧರಪ್ಪ ಬಿನ್ ಹನುಮಂತರಾಯಪ್ಪ, ಗೊಲ್ಲರು, ಗುಂಗೀರ್ಲಹಳ್ಳಿ ಗ್ರಾಮ ಎಂದು ತಿಳಿಸಿದನು. ನಾನು ಆತನನ್ನು ಕುರಿತು ಏನು ಮಾಡುತ್ತಿರುವುದು ಎಂದು ಕೇಳಿದಾಗ ತಾನು ನಾಢ ಬಂದೂಕನ್ನು ತಯಾರು ಮಾಡುತ್ತಿರುವುದಾಗಿ ತಿಳಿಸಿದ್ದು ಆ ರೀತಿಯ ಶಸ್ತ್ರಗಳನ್ನು ತಯಾರು ಮಾಡಲು ಪರವಾನಗೆ, ವಗೈರೆ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ ಯಾವುದು ಇಲ್ಲವೆಂದು ಹೇಳಿದನು. ಅವನ ಬದಿಯಲ್ಲಿ ಅರ್ದಂಬರ್ದ ತಯಾರು ಮಾಡಿರುವ ನಾಢ ಬಂದೂಕಿನ ಬಟ್ ಭಾಗ ಮತ್ತು ಎರಡು ಉಕ್ಕಿನ ನಳಿಕೆ (ಬ್ಯಾರಲ್)ಗಳು ಇದ್ದು, ಎರಡು ಮರದ ಭಾಗಗಳು ಮತ್ತು ಎರಡು ನಳಿಕೆ ಭಾಗಗಳನ್ನು ಈ ಕೇಸಿನ ಮುಂದಿನ ತನಿಖೆಗೆ ಅಮಾನತ್ತು ಪಡಿಸಿಕೊಳ್ಳಲಾಯಿತು.  ಸದರಿ ಗಂಗಾಧರಪ್ಪನು ಕೂಲಿಮೆ ಬಳಿ ಇಟ್ಟುಕೊಂಡಿದ್ದ ಸಂಪೂರ್ಣ ನಾಢ ಬಂದೂಕನ್ನು ತೋರಿಸಿ ಇದನ್ನು ತಾನೇ ತಯಾರು ಮಾಡಿ ಎರಡು ತಿಂಗಳುಗಳಿಂದ ಹಲವಾರು ಬಾರಿ ಬಳಸಿರುವುದಾಗಿ ಒಪ್ಪಿಕೊಂಡಿದ್ದು ಸದರಿ ಬಂದೂಕನ್ನು ಪರಿಶೀಲಿಸಲಾಗಿ ಇದು ಸುಮಾರು ನಾಲ್ಕುವರೆ ಅಡಿ ಉದ್ದವಿದ್ದು ಇದನ್ನು ಬಳಕೆ ಮಾಡಿದಂತೆ ಕಂಡು ಬರುತ್ತಿದ್ದು ಸದರಿ ನಾಢ ಬಂದೂಕನ್ನು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಎನ್.ಜಿ ಎಂಬ ಸೀಲಿನಿಂದ ಮೊಹರು ಮಾಡಿ ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ಅಮಾನತ್ತು ಪಡಿಸಿಕೊಳ್ಳಲಾಯಿತು. ಕೂಲಿಮೆಯ ಸುತ್ತಮುತ್ತ ಇದ್ದ ನಾಢ ಬಂದೂಕಿನ ತಯಾರಿ ಹಾಗೂ ದುರಸ್ತಿಗೆ ಬಳಸುವ ಉಪಕರಣಗಳನ್ನು ಪರಿಶೀಲಿಸಲಾಗಿ 1) ಒಂದು ಕಬ್ಬಿಣದ ಅರ, 2) ಎರಡು ಕಬ್ಬಿಣದ ಇಕ್ಕಳಗಳು, 3) ಮರವನ್ನು ಕೆತ್ತುವ ಎರಡು ಉಳಿಗಳು, 4) ಒಂದು ಕಬ್ಬಿಣದ ಕ್ಲಾಂಪು, 5) ಒಂದು ಕಬ್ಬಿಣದ ಬೈರಿಗೆ ಹಾಗೂ ಅದನ್ನು ತಿರುಗಿಸುವ ಸುಮಾರು 3 ಅಡಿ ಉದ್ದದ ನೈಲಾನ್ ಹಗ್ಗ, 6) ಎರಡು ಕಬ್ಬಿಣದ ಹಿಡಿ ಇರುವ ಪ್ಲೇಟುಗಳು, 7) ಸ್ಪಾನರ್, 8) ಮರಕ್ಕೆ ತೂತು ಮಾಡುವ ಮರದ ಹಿಡಿ ಇರುವ ಎರಡು ಕಬ್ಬಿಣದ ಆಗರಗಳು ಇರುತ್ತವೆ, ಈ ವಸ್ತುಗಳನ್ನು ಈ ಕೇಸಿನ ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡಿರುತ್ತೆ. ಗಂಗಾಧರಪ್ಪನನ್ನು ವಿಚಾರಣೆ ಮಾಡಿದಾಗ ತಾನು ಸದರಿ ನಾಢ ಬಂದೂಕುಗಳಿಗೆ ಬಳಸುವ ಸಿಡಿ ಮದ್ದುಗಳು ಇರುವ ಒಂದು ಬ್ಯಾಗ್ ಎಂದು ತನ್ನ ಹಿಂದೆ ಇದ್ದ ಕಂದು ಬಣ್ಣದ ಸಣ್ಣ ಬ್ಯಾಗನ್ನು ಹಾಜರ್ಪಡಿಸಿದ್ದು ಅವುಗಳಲ್ಲಿ ವಿವಿಧ ಬಾಟಲುಗಳಿದ್ದು ಅವುಗಳನ್ನು ಪರಿಶೀಲಿಸಲಾಗಿ 1) ಒಂದು ರಾಜ ವಿಸ್ಕಿ ಗಾಜಿನ ಬಾಟಲಿನಲ್ಲಿ ಮುಕ್ಕಾಲು ಬಾಗಕ್ಕೆ ಕರಿ ಸಿಡಿ ಮದ್ದು, 2) ಸುಮಾರು 3 ಇಂಚು ಉದ್ದದ ಎರಡು ಅಲ್ಯೂಮಿನಿಯಂ ಡಬ್ಬಿಗಳಲ್ಲಿ ಇರುವ ಕರಿ ಸಿಡಿ ಮದ್ದು, 3) ಮತ್ತೊಂದು ಗಾಜಿನ ಬಾಟಲಿನಲ್ಲಿ ಬಿಳಿ ಬಣ್ಣದ ಕಲ್ಲು ಸಕ್ಕರೆ ರೀತಿ ಇರುವ ಸ್ಪಟೀಕ ವಸ್ತು, 4) ಒಂದು ಪ್ಲಾಸ್ಟಿಕ್ ಕವರಿನಲ್ಲಿ ಸುಮಾರು 100 ಗ್ರಾಂನಷ್ಟು ಅರಿಶಿಣ ಬಟ್ಟಣದ ಗಂಧಕದ ಪುಡಿ, 5) ಒಂದು ಪ್ಲಾಸ್ಟಿಕ್ ಕವರಿನಲ್ಲಿ ಸುಮಾರು 300 ಗ್ರಾಂ ತೂಕದ ಕಬ್ಬಿಣದ ಸಣ್ಣ ಸಣ್ಣ ಚೂರುಗಳು, 6) ಎರಡು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಬಂದೂಕಿನ ಸ್ಟೋಟಕಕ್ಕೆ ಬಳಸುವ ಅರಿಶಿಣ ಬಣ್ಣದ ಸಿಡಿ ಮದ್ದು ಇವುಗಳನ್ನು ಅಲಾಯಿದೆಯಾಗಿ ಬಿಳಿ ಬಟ್ಟೆಯ ಚೀಲಗಳಲ್ಲಿ ಇಟ್ಟು ದಾರದಿಂದ ಹೊಲೆದು ಎನ್.ಜಿ ಎಂಬ ಸೀಲಿನಿಂದ ಮೊಹರು ಮಾಡಿ ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ಅಮಾನತ್ತು ಪಡಿಸಿಕೊಳ್ಳಲಾಯಿತು. ಗಂಗಾಧರಪ್ಪ ರವರನ್ನು ವಿಚಾರಣೆ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕೆ.ಎ-40 ಎಕ್ಸ್-5241 ಟಿವಿಎಸ್ ಸ್ಟಾರ್ ಸೀಟಿ ದ್ವಿಚಕ್ರ ವಾಹನದಲ್ಲಿ ಗಂಗಾಧರಪ್ಪ ರವರ ಮನೆಯ ಬಳಿಗೆ ಒಂದು ಚೀಲ ಮತ್ತು ಒಂದು ಬ್ಯಾಗಿನೊಂದಿಗೆ ಬಂದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಚೀಲ ಮತ್ತು ಬ್ಯಾಗಿನೊಂದಿಗೆ ಓಡಿ ಪರಾರಿಯಾಗಲು ಯತ್ನಿಸಿದವರನ್ನು ಹೆಚ್.ಸಿ-157 ಬ್ಯಾಕೋಡ ಮತ್ತು ಪಿಸಿ-240 ಮಧುಸೂಧನ್ ರವರು ಹಿಡಿದು ಕರೆತಂದು ಹಾಜರ್ಪಡಿದರು. ಅವರನ್ನು ಹೆಸರು ವಿಳಾಸ ಕೇಳಿದಾಗ ರಾಜಹನುಮಯ್ಯ ಬಿನ್ ಲೇಟ್ ಆಂಜಿನಪ್ಪ, ನಾಯಕರು, ರಾಗಿಮಾಕಲಹಳ್ಳಿ ಗ್ರಾಮ ಮತ್ತು ಅನಿಲ್ ಬಿನ್ ನರಸಿಂಹಪ್ಪ, ನಾಯಕರು, ರಾಗಿಮಾಕಲಹಳ್ಳಿ ಗ್ರಾಮ ಎಂದು ತಿಳಿಸಿದ್ದು ಚೀಲದಲ್ಲಿ ಇರುವುದು ಏನು ಎಂದು ಕೇಳಿದಾಗ ಮುರಿದಿರುವ ನಾಢ ಬಂದೂಕು ಎಂತಲೂ ಸದರಿ ಬಂದೂಕು ತಮ್ಮ ಗ್ರಾಮದ ಶಂಕರ್ ಎಂಬುವರಿಗೆ ಸೇರಿದ್ದೆಂದು ದುರಸ್ತಿಗೆ ತಂದಿರುವುದಾಗಿ ತಿಳಿಸಿದರು. ಸದರಿ ಬಂದೂಕು ಬ್ಯಾರಲ್ ವಿಭಾಗ ಹಾಗೂ ಬಂದೂಕಿನ ಮೊದಲುಭಾಗ(ಬಟ್) ಬೇರ್ಪಟ್ಟಿದ್ದು ಇದು ಹಿಂದೆ ಬಳಕೆಯಾಗಿರುವಂತೆ ಕಂಡು ಬಂದಿರುತ್ತೆ. ಈ ಎರಡು ಭಾಗಗಳನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಅರಗಿನಿಂದ ಎನ್.ಜಿ ಎಂಬ ಸೀಲಿನಿಂದ ಮೊಹರು ಮಾಡಿ ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ಅಮಾನತ್ತು ಪಡಿಸಿಕೊಳ್ಳಲಾಯಿತು. ಅನಿಲ್ ಎಂಬ ವ್ಯಕ್ತಿಯ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿನಲ್ಲಿ ಏನಿದೆ ಎಂದು ಕೇಳಿದಾಗ ಅವನು ಬ್ಯಾಗನ್ನು ತೆಗೆದು ಒಂದು ಪ್ಲಾಸ್ಟಿಕ್ ಬಾಟಲನ್ನು ತೆಗೆದುಕೊಟ್ಟಿದ್ದು ಇದು ನಾಢ ಬಂದೂಕಿಗೆ ಬಳಸುವ ಕರಿ ಸಿಡಿ ಮದ್ದು ಎಂದು ತಿಳಿಸಿದ್ದು ಸದರಿ ಪ್ಲಾಸ್ಟಿಕ್ ಬಾಟಲಿನಲ್ಲಿ ಕಾಲು ಭಾಗಕ್ಕೆ ಇದ್ದು ಸದರಿ ಸಿಡಿ ಮದ್ದನ್ನು ಪ್ಲಾಸ್ಟಿಕ್ ಬಾಟಲ್ ಸಮೇತವಾಗಿ ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಅರಗಿನಿಂದ ಎನ್.ಜಿ ಎಂಬ ಸೀಲಿನಿಂದ ಮೊಹರು ಮಾಡಿ ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ಅಮಾನತ್ತು ಪಡಿಸಿಕೊಳ್ಳಲಾಯಿತು. ಸದರಿ ಗಂಗಾಧರಪ್ಪನೇ ಮುಂದುವರೆದು ತಾನು ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಮತ್ತೊಂದು ನಾಢ ಬಂದೂಕನ್ನು ಅಕ್ರಮವಾಗಿ ತಯಾರು ಮಾಡಿ ಮನೆಯಲ್ಲಿ ಇಟ್ಟುಕೊಂಡು ಸ್ವಂತಕ್ಕೆ ಬಳಸುತ್ತಿರುವುದಾಗಿ ಹೇಳಿದ್ದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಮನೆ ಶೋಧನೆ ಮಾಡಿದಾಗ ಕೊಠಡಿಯ ಮೂಲೆಯಲ್ಲಿ ಇದ್ದ ನಾಢ ಬಂದೂಕನ್ನು ತೋರಿಸಿದ್ದು ಸದರಿ ಬಂದೂಕನ್ನು ಪರಿಶೀಲಿಸಿದಾಗ ಇದು ನಾಢ ಬಂದೂಕಾಗಿದ್ದು ಮದ್ದು ಕೂರುವ ಶಸ್ತ್ರವಾಗಿದ್ದು ಸುಮಾರು 4 ಅಡಿ ಉದ್ದವಿದ್ದು ಇದನ್ನು ಸಹ ಬಳಸಿರುವ ನಿಶಾನೆಗಳು ಕಂಡು ಬಂದಿದ್ದು ಇದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಇಟ್ಟು ದಾರದಿಂದ ಹೊಲೆದು ಎನ್.ಜಿ ಎಂಬ ಸೀಲಿನಿಂದ ಮೊಹರು ಮಾಡಿ ಎಫ್.ಎಸ್.ಎಲ್ ತಜ್ಞರ ಪರೀಕ್ಷೆಗಾಗಿ ಅಮಾನತ್ತು ಪಡಿಸಿಕೊಳ್ಳಲಾಯಿತು. ಸದರಿ ಗಂಗಾಧರಪ್ಪ ರವರು ರಾಜ ಹನುಮಯ್ಯ ಮತ್ತು ಅನಿಲ್ ರವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಯಾವುದೇ ದಾಖಲೆಗಳ ಇಲ್ಲದೆ ನಾಢ ಬಂದೂಕನ್ನು ತಯಾರು ಮಾಡುತ್ತಾ ಹಾಗೂ ನಾಢ ಬಂದೂಕುಗಳನ್ನು ದುರಸ್ತಿ ಮಾಡುತ್ತಾ ಸದರಿ ಬಂದೂಕುಗಳಿಗೆ ಮದ್ದು ಗುಂಡು, ಸಿಡಿ ಮದ್ದುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಗಿರಾಕಿಗಳಿಗೆ ಪೂರೈಸುತ್ತಾ ಇದ್ದುದು ಪಂಚರು ದೃಡಪಡಿಸಿದ್ದರಿಂದ ಮೇಲ್ಕಂಡ ಮೂರು ಜನ ಆರೋಪಿಗಳನ್ನು ಹಾಗೂ ಅಮಾನತ್ತು ಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಕ್ರಮವಾಗಿ ಅಮಾನತ್ತು ಮಹಜರ್ ಮಾಡಿ ವಶಪಡಿಸಿಕೊಂಡು ಸಂಜೆ 5:00 ಗಂಟೆಗೆ ಠಾಣೆಗೆ ಸಿಬ್ಬಂದಿ ಸಮೇತವಾಗಿ ವಾಪಸ್ಸು ಬಂದು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 02-03-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080