Feedback / Suggestions

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 18/2021 ಕಲಂ.15(ಎ) ಕೆ.ಇ ಆಕ್ಟ್:-

     ದಿನಾಂಕ: 01/02/2021 ರಂದು ಸಂಜೆ 7:30 ಗಂಟೆಗೆ ಪಿ ಎಸ್ ಐ ರವರು ಠಾಣೆಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:-01/02/2021 ರಂದು ಸಂಜೆ ಸುಮಾರು 06-30 ಗಂಟೆಯ ಸಮಯದಲ್ಲಿ ನಾರಾಯಣಸ್ವಾಮಿ.ಆರ್  ಪಿ.ಎಸ್.ಐ ಆದ  ನಾನು ಠಾಣೆಗೆ ಒದಗಿಸಿರುವ ರಕ್ಷಕ್  ಸರ್ಕಾರಿ ಜೀಪ್ ಸಂಖ್ಯೆ ಕೆಎ-07-ಜಿ-61 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ತಾನು ಮತ್ತು ತನ್ನೊಂದಿಗೆ ಠಾಣೆಯ ಶ್ರೀ. ನಾಗಭೂಷಣ್ ಸಿ ಹೆಚ್ ಸಿ 126, ರವರು ನಗರದ ಚೇಳೂರು ರಸ್ತೆ, ಇಡ್ಲಿಪಾಳ್ಯ, ಬೆಂಗಳೂರು ವೃತ್ತ, ಎನ್.ಆರ್ ಬಡಾವಣೆ, ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಆರ್.ಆರ್ ವೃತ್ತದ ಬಳಿ ಇವರು ಪಾರ್ಕ್  ಬಳಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಬೆಂಗಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ ಇಬ್ಬರು ಆಸಾಮಿಗಳು ತಮ್ಮ ಬಳಿ ಕವರ್ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  2-3 ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ವೆಂಕಟೇಶ್ ಬಿನ್ ನರಸಿಂಹರೆಡ್ಡಿ, 41 ವರ್ಷ, ವಕ್ಕಲಿಗರು, ಪ್ಲಬಿಂಗ್ ಕೆಲಸ , ಕೋಲಾರ ಕ್ರಾಸ್,  ಚಿಂತಾಮಣಿ ನಗರ, ಆತನ ಬಳಿ ಇದ್ದ ಚೀಲದಲ್ಲಿ ಪರಿಶೀಲಿಸಲಾಗಿ 90 ML  HAYWARDS CHEERS WHISKEY ನ 4 ಟೆಟ್ರಾ ಪ್ಯಾಕೆಟ್ ಗಳು ಇದ್ದು ಇವು ಒಟ್ಟು 360 ಮಿ.ಲೀಟರ್ ಇದ್ದು, ಇವುಗಳ  ಒಟ್ಟು ಬೆಲೆ ಸುಮಾರು 121 ರೂ ಗಳಷ್ಟು ಬೆಲೆ ಬಾಳುವಂತಹದ್ದಾಗಿದ್ದು, ಈ ಮಾಲನ್ನು, 2 ಖಾಲಿ ಪ್ಲಾಸ್ಟಿಕ್ ಲೋಟಗಳು,  ಖಾಲಿಯಾಗಿರುವ 90 ML  HAYWARDS CHEERS WHISKEY ಯ 2 ಟೆಟ್ರಾ ಪ್ಯಾಕೆಟ್ ಗಳನ್ನು ಈ ದಿನ ಸಂಜೆ 06-45  ಗಂಟೆಯಿಂದ 07-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 20/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:02/02/2021 ರಮದು ಮದ್ಯಾಹ್ನ 01-30 ಗಂಟೆಯಲ್ಲಿ ಪಿರ್ಯಾದಿದಾರರಾದ ಚಂದ್ರ ಶೇಖರ್ ಬಿನ್ ನಾರಾಯಣಪ್ಪ, 36 ವರ್ಷ, ಬಲಜಿಗರು, ಡ್ರೈವರ್ ಕೆಲಸ ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೆನೆ. ತಮ್ಮ ಮನೆಯಲ್ಲಿ ತಾನು ತನ್ನ ತಂದೆ, ಮತ್ತು ತಾಯಿಯೊಂದಿಗೆ ವಾಸವಾಗಿರುತ್ತೆನೆ. ತನ್ನ ತಾಯಿ ಲಕ್ಷ್ಮಿದೇವಮ್ಮ ರವರು ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಇರುತ್ತಾರೆ. ತಾನು ದಿನಾಂಕ:28/01/2021 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಊಟ ಮಾಡಿ ಮನೆಯಲ್ಲಿದ್ದು ತನ್ನ ತಾಯಿಯವರು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದರು, ನಂತರ ರಾತ್ರಿ ಸುಮಾರು 08-45 ಗಂಟೆಯಲ್ಲಿ ತಮ್ಮ ಗ್ರಾಮದ ವಾಸಿಯದ ಶಿವಕುಮಾರ್ ಬಿನ್ ಚಿನ್ನಪ್ಪರೆಡ್ಡಿ, 25 ವರ್ಷ, ವಕ್ಕಲಿಗರು, ಮೊಬೈಲ್ ಅಂಗಡಿ ವ್ಯಾಪಾರ ರವರು ತಮ್ಮ ಮನೆಯ ಬಳಿ ಬಂದು ನಿಮ್ಮ ತಾಯಿ ಲಕ್ಷ್ಮಿದೇವಮ್ಮ ರವರು ತಮ್ಮ ಗ್ರಾಮದ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ  KA-40 A-9221 ನೊಂದಣಿ ಸಂಖ್ಯೆಯ ಆಟೋ ಚಾಲಕ ತನ್ನ ವಾಹವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಾಯಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ತಲೆಗೆ,  ಬಲ ಕೈಗೆ ರಕ್ತಗಾಯವಾಗಿರುವುದಾಗಿ ತಿಳಿಸಿದ್ದು ತಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರವು ನಿಜವಾಗಿರುತ್ತೆ. ತಾನು ಅಂಬುಲೇನ್ಸ್ ಕರೆಯನ್ನು ಮಾಡಿ ಅಂಬುಲೇನ್ಸ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಅಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅದರಂತೆ ತಾವುಗಳು ಬೆಂಗಳೂರಿನ ಪ್ರೋ ಲೈಫ್ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಯನ್ನು ಕೊಡಿಸಿ ನಂತರ ತಾವುಗಳು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೋಡಿಸುತ್ತೀದ್ದದರಿಂದ ದೂರನ್ನು ನೀಡಲು ತಡವಾಗಿರುತ್ತೆ. ಆದ್ದರಿಂದ ತನ್ನ ತಾಯಿ ಲಕ್ಷ್ಮಿದೇವಮ್ಮ ರವರಿಗೆ ಅಪಘಾತ ಪಡಿಸಿದ  KA-40 A-9221 ನೊಂದಣಿ   ಸಂಖ್ಯೆಯ ಆಟೋ ಚಾಲಕ ನರಸಿಂಹಮೂರ್ತಿ ಬಿನ್ ಲೇಟ್ ಗಂಗಪ್ಪ  ಮತ್ತು ಆಟೋ ವಾಹನದ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿದೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 14/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ 01/02/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರೋಜಾ ಕೋಂ ನಾಗೇಶ, 26 ವರ್ಷ, ಅಗಸರು, ಗೃಹಿಣಿ, ವಾಸ ಯಗವಗೊಳ್ಳಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ: ತಮ್ಮ ತವರು ಮನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಮುತ್ತಗೊಗುಲಪಲ್ಲಿ ಗ್ರಾಮವಾಗಿದ್ದು, ತನಗೆ ಈಗ್ಗೆ 4 ವರ್ಷದ ಹಿಂದೆ ನಾಗೇಶ ನೊಂದಿಗೆ ಮದುವೆಯಾಗಿದ್ದು, ತಮಗೆ 3 ವರ್ಷ ವಯಸ್ಸಿನ  ಗುರುಕಿರಣ್   ಎಂಬ ಮಗನಿರುತ್ತಾನೆ. ತನ್ನ ಗಂಡ ನಾಗೇಶ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ತಾವು ಬೆಂಗಳೂರಿನ ಆವಲಹಳ್ಳಿಯಲ್ಲಿ ವಾಸವಾಗಿದ್ದೆವು. ಕರೋನಾ ಬಂದ ನಂತರ ತನ್ನ ಗಂಡ ತನ್ನನ್ನು ಯಗವಗೊಳ್ಳಹಳ್ಳಿ ಗ್ರಾಮದಲ್ಲಿ ಬಿಟ್ಟು ಕೆಲಸಕ್ಕೆ ಹೋಗಿ ಬರುತ್ತಿದ್ದನು. ದಿನಾಂಕ 13/01/2021 ರಾತ್ರಿ 10-00 ಗಂಟೆ ಸಮಯದಲ್ಲಿ  ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬರುತ್ತಿರುವುದಾಗಿ ಪೋನ್ ಮಾಡಿ ತಿಳಿಸಿದ ತನ್ನ ಗಂಡ ನಂತರ  ಮನೆಗೆ ಬಾರದೇ ಕಾಣೆಯಾಗಿದ್ದು, ತನ್ನ ಗಂಡ ಕಾಣೆಯಾದ ಬಗ್ಗೆ ತಮ್ಮ ಸಂಭಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲಾ. ತನ್ನ ಗಂಡ ನಾಗೇಶ ಕಾಣೆಯಾದ ವಿಚಾರದಲ್ಲಿ ತಮ್ಮ ಸಂಭಂದಿಯಾದ ಆಂಧ್ರಪ್ರದೇಶದ ಕಾನಗಮಾಕಲಹಳ್ಳಿ ಗ್ರಾಮದ ಲಕ್ಷ್ಮೀ (9392605682) ರವರನ್ನು ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿರುತ್ತದೆ. ತನ್ನ ಗಂಡ ಕಾಣೆಯಾದ ವಿಚಾರದಲ್ಲಿ ಲಕ್ಷ್ಮಿ, ಅವರ ತಂದೆ-ತಾಯಿಯಾದ ತಿಮ್ಮ, ಮಂಜುಳ ಹಾಗೂ ನಾಗೇಶ ರವರ ತಂದೆ-ತಾಯಿಯಾದ ಶಿವಣ್ಣ, ರವಣಮ್ಮ ರವರ ಮೇಲೆ ಅನುಮಾನ ಇದ್ದು, ಈ ಬಗ್ಗೆ ವಿಚಾರ ಮಾಡುತ್ತಿದ್ದರಿಂದ ಈಗ ತಡವಾಗಿ ದೂರು ನೀಡುತ್ತಿದ್ದು, ಕಾಣೆಯಾದ ತನ್ನ ಗಂಡ ನಾಗೇಶ್ ( ಪೋನ್ ನಂ: 9071078130, 9113550402) ರವರನ್ನು ಪತ್ತೆ ಮಾಡಲು ಕೋರಿ ಪಿರ್ಯಾದು.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 10/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:01/02/2021 ರಂದು ಸಂಜೆ 06-20 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ. ಈ ದಿನ ದಿನಾಂಕ:01/02/2020 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ ನಾನು ಸಿಬ್ಬಂದಿಯಾದ ಸಿಪಿಸಿ-119 ಗಿರೀಶ್, ಸಿಪಿಸಿ-306 ಮುತ್ತುರಾಜ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ಗೊಂದಿಪಲ್ಲಿ ಗ್ರಾಮದ ಬಳಿ ಗಸ್ತಿನಲ್ಲಿ ಇದ್ದಾಗ ಕೊತ್ತೂರ ಗ್ರಾಮದ ವೆಂಕಟರಾಮಪ್ಪ ಬಿನ್ ಲೇಟ್ ಗೆಜ್ಜನ್ನ ಎಂಬುವವರು ತನ್ನ ಮನೆಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ಮೇಲ್ಕಂಡ ವೆಂಕಟರಾಮಪ್ಪ ಬಿನ್ ಲೇಟ್ ಗೆಜ್ಜನ್ನ ರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಮನೆಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಯಾರೋ ಒಬ್ಬ ಆಸಾಮಿಯು  ಓಡಿ ಹೋಗಿದ್ದು, ಮನೆಯ ಮುಂದೆ ಒಬ್ಬ ಆಸಾಮಿ ಇದ್ದು ಹೆಸರು ವಿಳಾಸ ಕೇಳಲಾಗಿ ವೆಂಕಟರಾಮಪ್ಪ ಬಿನ್ ಲೇಟ್ ಗೆಜ್ಜನ್ನ, 50 ವರ್ಷ, ಜಿರಾಯ್ತಿ, ನಾಯಕರು, ಕೊತ್ತೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ  90 ಎಂ.ಎಲ್ ನ 14 ಹೈವಾರ್ಡ್ಸ್  ಚಿಯರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಗಳು ( 1 ಲೀಟರ್ 260 ಎಂ.ಎಲ್ ಮದ್ಯ, ಅದರ ಬೆಲೆ ಸುಮಾರು  491/- ರೂ), ಒಂದು ಲೀಟರ್ ನ 01 ಖಾಲಿ ವಾಟರ್ ಬಾಟಲ್, 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಎಂ.ಎಲ್ ನ 01 ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ವೆಂಕಟರಾಯಪ್ಪರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಸಂಜೆ 5-00 ರಿಂದ 6-00 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ :10/2021  ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

Last Updated: 06-02-2021 01:21 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080