ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.259/2021 ಕಲಂ.429 ಐ.ಪಿ.ಸಿ & 192(A),177 INDIAN MOTOR VEHICLES ACT, 1988, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020:-

     ದಿನಾಂಕ 31/08/2021 ರಂದು ರಾತ್ರಿ 9-00 ಗಂಟೆಗೆ  ಶ್ರೀ.ಗೋಪಾಲರೆಡ್ಡಿ, ಪಿಎಸ್ಐ ರವರು  ಆರೋಪಿಗಳು, ಮಾಲು ಮತ್ತು ವಾಹನಗಳೊಂದಿಗೆ ಠಾಣೆಯಲ್ಲಿ ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 31/08/2021 ರಂದು ರಾತ್ರಿ  8-15 ಗಂಟೆಯಲ್ಲಿ  ನಾನು ಠಾಣೆಯಲ್ಲಿರುವಾಗ ಯಾರೋ ಆಸಾಮಿಗಳು ಗೂಳೂರು ಕಡೆಯಿಂದ  ಅಕ್ರಮವಾಗಿ ಜಾನುವಾರುಗಳ ಕೊಂಬು ಮತ್ತು ಮೂಳೆಗಳನ್ನು ಸಾಗಾಣಿಕೆ ಮಾಡುತ್ತಿರುವುದಾಗಿ  ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ-156 ನಟರಾಜ್, ಹೆಚ್.ಸಿ-257 ನರಸಿಂಹಮೂರ್ತಿ, ಪಿಸಿ-278 ಶಬ್ಬೀರ್   ರವರನ್ನು ಜೊತೆಗೆ ಕರೆದುಕೊಂಡು ಹೋಗಿ ಬಾಗೇಪಲ್ಲಿ-ಗೂಳೂರು ರಸ್ತೆಯ ಪೋತೆಪಲ್ಲಿ ಕ್ರಾಸ್ ಬಳಿ  ಕಾಯುತ್ತಿದ್ದಾಗ ರಾತ್ರಿ ಸುಮಾರು 8-45 ಗಂಟೆ ಸಮಯದಲ್ಲಿ ಗೂಳೂರು ಕಡೆಯಿಂದ ಮೂರು ವಾಹನಗಳು ಬಂದಿದ್ದು ತಡೆದು ನಿಲ್ಲಿಸಿ, ವಾಹನಗಳನ್ನು  ಪರಿಶೀಲಿಸಲಾಗಿ ಮೂರು ವಾಹನಗಳಲ್ಲಿ ಜಾನುವಾರುಗಳ ಕೊಂಬುಗಳು ಮತ್ತು ಮೂಳೆಗಳು ಇರುತ್ತವೆ. ಸದರಿ ವಾಹನಗಳಲ್ಲಿ ಜಾನುವಾರುಗಳ ಕೊಂಬು ಮತ್ತು ಮೂಳೆಗಳನ್ನು  ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ  ನಂತರ ವಾಹನಗಳನ್ನು ಪರಿಶೀಲಿಸಲಾಗಿ 1] UP-12-A.T-6515 ನೊಂದಣಿ ಸಂಖ್ಯೆಯ ಕಂಟೈನರ್ ಲಾರಿಯಾಗಿದ್ದು ಇದರ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಸದಾಖತ್ ಅಲಿ ಬಿನ್ ಅಲಿ ಮೊಹಮ್ಮದ್, 46 ವರ್ಷ, ಮುಸ್ಲಿಂ ಜನಾಂಗ, ಲಾರಿ ಚಾಲಕ ವೃತ್ತಿ, ನಂ 354, ಹರ್ರ ಗ್ರಾಮ, ಮತ್ತು ಪೋಸ್ಟ್, ಸರ್ಧಾನಾ ತಾಲ್ಲೂಕು, ಮೀರಟ್ ಜಿಲ್ಲೆ, ಉತ್ತರಪ್ರದೇಶ ರಾಜ್ಯ ಎಂದು ತಿಳಿಸಿರುತ್ತಾರೆ. 2] J.H-05-A.U-4920 ನೊಂದಣಿ ಸಂಖ್ಯೆಯ ಲಾರಿಯಾಗಿದ್ದು ಇದರ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ತೌಸಿಫ್ ಬಿನ್ ಅಫ್ರೋಜ್ ಖಾನ್, 37 ವರ್ಷ, ಮುಸ್ಲಿಂ  ಜನಾಂಗ, ಚಾಲಕ ವೃತ್ತಿ, ವಾಸ ನಂ 23, ಹೆಚ್.ಬಿ.ಆರ್, ಲೇಔಟ್, ಬಿಡಿಯ ಕಾಂಪ್ಲೇಕ್ಸ್, ಬೆಂಗಳೂರು-43, 3] KA-07-A-9596 ASHOK LEYLAND DOST ವಾಹನವಾಗಿದ್ದು , ಇದರ ಚಾಲಕನ ಹೆಸರು ವಿಳಾಸ ಕೇಳಲಾಗಿ ಮಹಮ್ಮದ್ ಬಷೀರ್ ಅನ್ಸಾರಿ ಬಿನ್ ಮಹಮ್ಮದ ಅಸ್ಲಾಂ ಅನ್ಸಾರಿ,  38 ವರ್ಷ, ಮುಸ್ಲಿಂ ಜನಾಂಗ, ರೋಡ್ ನಂ-7, ಭಗನ್ ಸಾಹಿ, ಆಜಾದ್ ನಗರ, ಮ್ಯಾಂಗೋ,  ಜಮ್ ಶೆಡ್ ಪುರ್, ಗೊಲ್ ಮುರಿ ಕಂ ಜಗ್ ಸಲಾಯಿ ಪುರ್ಬಿ, ಸಿಂಗ್ ಬೋಮ್ , ಜಾರ್ಖಂಡ್ ರಾಜ್ಯ,    ಎಂದು ತಿಳಿಸಿರುತ್ತಾರೆ. ಸದರಿ ವಾಹನಗಳಲ್ಲಿ  ಜಾನುವಾರುಗಳ ಕೊಂಬು ಮತ್ತು ಮೂಳೆಗಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ  ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ನಂತರ ಮೇಲ್ಕಂಡ ವಾಹನಗಳನ್ನು ಮತ್ತು ಆರೋಪಿಗಳಾದ ಮೇಲ್ಕಂಡ ಚಾಲಕರನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಹಾಜರುಪಡಿಸುತ್ತಿದ್ದು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಜಾನುವಾರುಗಳ ಕೊಂಬುಗಳು ಮತ್ತು ಮೂಳೆಗಳನ್ನು ಸಾಗಾಣಿಕೆ ಮಾಡುತ್ತಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಕಲಂ  ಕಲಂ 429 ಐಪಿಸಿ, ಮತ್ತು ಕಲಂ 12  THE KARNATAKA PREVENTION OF SLANGHTER AND  PRESERVATION OF  CATTLE ORDINANCE-2020, ಕಲಂ 177, 192(A) INDIAN MOTOR VEHICLE ACT1988 ರೀತ್ಯಾ ಪ್ರಕರಣದ ದಾಖಲು ಮಾಡಲು ಸೂಚಿಸಿ ನೀಡಿದ ದೂರಾಗಿರುತ್ತದೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.260/2021 ಕಲಂ.379 ಐ.ಪಿ.ಸಿ:-

     ದಿನಾಂಕ: 01.09.2021 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರಸಾದ್ ಬಿನ್ ಶಿವಪ್ಪ, 26 ವರ್ಷ, ನಾಯಕ ಜನಾಂಗ, ಜಿರಾಯ್ತಿ, ಕನಮಕುಂಟಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತಂಗಿ ಗಾಯಿತ್ರಿರವರ ಹೆಸರಿನಲ್ಲಿರುವ  PASSION PRO RED COLOUR ದ್ವಿಚಕ್ರ ವಾಹನದಲ್ಲಿ  ದಿನಾಂಕ:27.08.2021 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಟೌನ್ ನ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ಬಂದಿದ್ದು, ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ಒಳಗೆ ಹೋಗಿ ಮದುವೆ ಆರತಕ್ಷತೆ ಮುಗಿಸಿಕೊಂಡು ಆಚೆ ರಾತ್ರಿ 8.30 ಗಂಟೆಗೆ ಬಂದು ನೋಡಿದಾಗ ನನ್ನ ದ್ವಿಚಕ್ರ ವಾಹನವು ನಾಪತ್ತೆಯಾಗಿದ್ದು, ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ಅಲ್ಲಿ ಎಷ್ಟು ಹುಡುಕಿದರೂ ನನ್ನ ದ್ವಿಚಕ್ರ ವಾಹನವು ಸಿಕ್ಕಿರುವುದಿಲ್ಲ. ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿ ಹುಡುಕಿರುತ್ತೇನೆ. ಆದುದರಿಂದ ತಾವು ನನ್ನ ದ್ವಿಚಕ್ರವಾಹನವನ್ನು ಹುಡುಕಿಕೊಡಲು ಮತ್ತು ಕಳುವು ಮಾಡಿರುವ ಆಸಾಮಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.  ಎಲ್ಲಾ ಕಡೆ ಹುಡುಕಾಡಿ ಈ ದಿನ ಪಿರ್ಯಾದು ನೀಡುತ್ತಿದ್ದು, ತಾವು ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ದ್ವಿಚಕ್ರವಾಹನದ Engin no JA06EWMHA 2134D ಮತ್ತು Chassis no MBLJAW14XMHA 16433 ಆಗಿದ್ದು, ವಾಹನದ ಬಣ್ಣ ರೆಡ್ ಕಲರ್ ಆಗಿದ್ದು, ವಾಹನದ ಬೆಲೆ ಸುಮಾರು 50,000 ರೂಗಳಾಗಿರುತ್ತದೆಂದು ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.141/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 01/09/2021 ರಂದು  ಮದ್ಯಾಹ್ನ 12-10 ಗಂಟೆಯ ಸಮಯದಲ್ಲಿ ಶ್ರೀ. ಬಿ.ಪಿ.ಮಂಜು ಪಿ.ಎಸ್.ಐ. ಗ್ರಾಮಾಂತರ  ಪೊಲೀಸ್ ಠಾಣೆ   ಚಿಕ್ಕಬಳ್ಳಾಪುರ ರವರು ಠಾಣೆಯಲ್ಲಿ ನೀಡಿದ  ದೂರಿನ  ಸಾರಾಂಶವೇನೆಂದರೆ  ದಿನಾಂಕ: 01/09/2021 ರಂದು  ಮದ್ಯಾಹ್ನ 12-00 ಗಂಟೆಯಲ್ಲಿ  ನಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ  ಅಣಕನೂರು  ಗ್ರಾಮದ  ವಾಸಿ ಶ್ರೀನಿವಾಸ  ಬಿನ್ ಲೇಟ್  ಮುನಿಶ್ವಾಮಪ್ಪ 45ವರ್ಷ ಬಲಿಜಿಗರು ಚಿಲ್ಲರೆ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಟ್ಟಿರುವುದಾಗಿ  ಖಚಿತ ಮಾಹಿತಿ ಬಂದಿರುತ್ತದೆ.  ಸದರಿ ಆಸಾಮಿಯ ವಿರುದ್ದ  ಕಲಂ:15(ಎ). 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಲು ಸೂಚಿಸಿ ನೀಡಿದ ದೂರಿನ  ಮೇರೆಗೆ ಈ  ಪ್ರ ವ ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.384/2021 ಕಲಂ. 341,323,324,504,506,34 ಐ.ಪಿ.ಸಿ:-

     ದಿನಾಂಕ: 31/08/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟಸ್ವಾಮಪ್ಪ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2.50 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಬಲಜಿಗ ಜನಾಂಗದ ವೆಂಕಟರವಣಪ್ಪ ರವರ ಮನೆಯ ಪಕ್ಕದಲ್ಲಿ ತಮ್ಮ ತಂದೆಯ ಹೆಸರಿನಲ್ಲಿ 30*40 ಅಡಿ ವಿಸ್ತೀರ್ಣದ ನಿವೇಶನ ಇರುತ್ತೆ. ಈಗ್ಗೆ ಸುಮಾರು 15 ದಿನಗಳ ಹಿಂದೆ ಸದರಿ ನಿವೇಶನವನ್ನು ಸ್ವಚ್ಚಗೊಳಿಸಿ ಶೆಡ್ ನಿರ್ಮಿಸುವ ಸಲುವಾಗಿ ಮಣ್ಣು ಮತ್ತು ಕಲ್ಲು ಚಪ್ಪಡಿಗಳನ್ನು ಹೊಡೆಸಿರುತ್ತೇವೆ. ಸದರಿ ಚಪ್ಪಡಿಗಳನ್ನು ಅವರ ಮನೆಯ ಪಕ್ಕದಲ್ಲಿ ಕಾಂಪೌಂಡ್ ನಿರ್ಮಿಸಿರುವ ಸ್ಥಳದಲ್ಲಿಯೇ ಹಾಕಿರುತ್ತೇನೆ. ತಾನು ಕಲ್ಲುಚಪ್ಪಡಿಗಳನ್ನು ಹೊಡೆಸುವಾಗ ತನಗೆ ಇನ್ನೂ ನಿಮ್ಮ ಕಾಂಪೌಂಡ್ ಕಡೆ ಸುಮಾರು 3-4 ಅಡಿಗಳಷ್ಟು ಜಾಗ ಬರಬೇಕು. ಅದನ್ನು ನೀವು ಒತ್ತುವರಿ ಮಾಡಿಕೊಂಡಿದ್ದೀರಿ ಎಂದು ಕೇಳಿದೆನು. ಹಿರಿಯರು ನೀವು ಪಾಯ ಹಾಕುವಾಗ ಮಾತನಾಡೋಣ ಎಂದು ಹೇಳಿದ್ದರು. ಆದರೂ ವೆಂಕಟರವಣಪ್ಪ ರವರ ಸೊಸೆಯಾದ ಪುಷ್ಪಮ್ಮ ರವರು ತಾನು ಕಂಡ ಕಡೆಗಳಲ್ಲಿ ಬೈದಾಡಿಕೊಂಡು ಓಡಾಡುತ್ತಿದ್ದಳು. ಆದರೂ ತಾನು ಏನೂ ಮಾತನಾಡಿರಲಿಲ್ಲ. ತಾನು ಈ ದಿನ ದಿನಾಂಕ: 31/08/2021 ರಂದು ಬೆಳಿಗ್ಗೆ 08.30 ಗಂಟೆಗೆ ಶೌಚಾಲಯಕ್ಕೆಂದು ತಮ್ಮ ಗ್ರಾಮದ ನಾರಾಯಣಸ್ವಾಮಿ ರವರ ನೀಲಗಿರಿ ತೋಪಿಗೆ ಹೋಗಿ ವಾಪಸ್ ಗ್ರಾಮಕ್ಕೆ ಬರಲು ವೆಂಕಟರೆಡ್ಡಿ ರವರ ರೇಷ್ಮೇ ತೋಟದ ಬದುವಿನ ಮೇಲೆ ನಡೆದುಕೊಂಡು ಬರುತ್ತಿದ್ದಾಗ ಪಕ್ಕದ ಹೊಲದಲ್ಲಿಯೇ ಕಳೆ ಕೀಳುತ್ತಿದ್ದ ಪುಷ್ಪ ಕೋಂ ನಾಗೇಶ್ ರವರು ತನ್ನನ್ನು ನೋಡಿ ಲೊಫರ್ ನನ್ನ ಮಕ್ಕಳು, ನಮ್ಮ ಜಾಗವೇ ಬೇಕು ಇವರಿಗೆ ಎಂದು ಅವಾಚ್ಯಶಬ್ದಗಳಿಂದ ಬೈಯ್ಯುತ್ತಿದ್ದಳು. ಇದನ್ನು ಕೇಳಿಸಿಕೊಂಡ ತಾನು ಆಕೆಯನ್ನು ಕುರಿತು ಏಕೆ ಈ ರೀತಿ ನನ್ನನ್ನು ನೋಡಿದಾಗಲೆಲ್ಲಾ ಬೈಯ್ಯುವುದು ಎಂದು ಕೇಳುತ್ತಿದ್ದಂತೆ ಅಲ್ಲಿಯೇ ಇದ್ದ ನಾಗೇಶ್ ಬಿನ್ ವೆಂಕಟರವಣಪ್ಪ, ರೆಡ್ಡಪ್ಪ ಬಿನ್ ನಾರಾಯಣಸ್ವಾಮಿ, ವೆಂಕಟರವಣಪ್ಪ ರವರುಗಳು ತನ್ನನ್ನು ಹಿಡಿದುಕೊಂಡು ಕೈಗಳಿಂದ ಹೊಡೆದರು. ಪುಷ್ಪಮ್ಮ ಆಕೆಯ ಕೈಯಲ್ಲಿದ್ದ ಕುಡುಗೋಲಿನಿಂದ ತನ್ನ ಹಣೆಯ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದಳು. ಮೇಲ್ಕಂಡವರೆಲ್ಲರೂ ತನ್ನನ್ನು ಮುಂದಕ್ಕೆ ಹೋಗದಂತೆ ತಡೆದು ಕಾಲುಗಳಿಂದ ಒದ್ದು, ನೆಲದಲ್ಲಿ ಹೊರಳಾಡಿಸಿ, ತನ್ನ ಶರ್ಟ್ ಕಿತ್ತು, ನಿನ್ನನ್ನು ಇಲ್ಲಿಯೇ ಸಾಯಿಸುತ್ತೇವೆಂದು ಬೆದರಿಕೆ ಹಾಕಿ ಹೊರಟ ಹೋದರು. ತಾನು ಪ್ರಜ್ಞೆ ತಪ್ಪಿ ಅಲ್ಲಿಯೇ ಬಿದ್ದು, ಹೋಗಿದ್ದು ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ಮನೆಗೆ ಬಂದು ರಮೇಶ್ ಬಿನ್ ರಾಮರೆಡ್ಡಿ ರವರೊಂದಿಗೆ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.385/2021 ಕಲಂ. 353,504,506 ಐ.ಪಿ.ಸಿ:-

     ದಿನಾಂಕ: 01/09/2021 ರಂದು ಬೆಳಿಗ್ಗೆ 08.30 ಗಂಟೆಗೆ ಠಾಣೆಯ ಸಿ.ಪಿ.ಸಿ-239 ಮಣಿಕಂಠ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 31/08/2021 ರಂದು ಪಿ.ಎಸ್.ಐ ಸಾಹೇಬರು ತನಗೆ ಹಾಜರಾತಿಯಲ್ಲಿ ERSS Dial 112 ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ದಿನಾಂಕ: 31/08/2021 ರಂದು ರಾತ್ರಿ 8.00 ಗಂಟೆಗೆ C-ಪಾಳೆಯ ಕರ್ತವ್ಯದಲ್ಲಿ ತಾನು, ಕೃಷ್ಣಮೂರ್ತಿ, ಸಿ.ಪಿ.ಸಿ-326, ಚಿಂತಾಮಣಿ ನಗರ ಪೊಲೀಸ್ ಠಾಣೆ ಮತ್ತು ಜೀಪ್ ಚಾಲಕ ಸಂಜಯ್ ಎ.ಪಿ.ಸಿ-73 ರವರು ERSS ಜೀಪ್ ನಂಬರ್ KA-40 G-0640 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಸುಮಾರು 8.10 ಗಂಟೆಯಲ್ಲಿ ಚಿಂತಾಮಣಿ ತಾಲ್ಲೂಕು, ಮೂಡಚಿಂತಲಹಳ್ಳಿ ಗ್ರಾಮದ ವಾಸಿಯಾದ ಶಾರದ ಕೋಂ ವಿಶ್ವನಾಥ ರವರು 7022219350 ನಂಬರಿನಿಂದ ERSS Dial 112 ಗೆ ಕರೆ ಮಾಡಿ ದೂರು ನೀಡಿದ್ದು, ಸದರಿ ದೂರಿನ ಮೇರೆಗೆ ತಾವು ಮೂರು ಜನರು 112 ಜೀಪಿನಲ್ಲಿ ರಾತ್ರಿ 8.30 ಗಂಟೆಗೆ ಮೂಡಚಿಂತಲಹಳ್ಳಿ ಗ್ರಾಮದ ಶಾರದ ರವರ ಮನೆ ಬಳಿಗೆ ಹೋಗಿ ದೂರುದಾರರನ್ನು ವಿಚಾರ ಮಾಡುತ್ತಿದ್ದಾಗ, ದೂರುದಾರರ ಮೇಲೆ ಜಗಳ ಮಾಡಿದ್ದ ಅನಿಲ್ ರವರು ಏಕಾಏಕೀ ಕೈಯಲ್ಲಿ ಒಂದು ಮಚ್ಚನ್ನು ಹಿಡಿದುಕೊಂಡು ಬಂದು ತಮ್ಮ ಕಡೆ ಮತ್ತು ದೂರುದಾರರ ಕಡೆ ಮಚ್ಚನ್ನು ತೋರಿಸಿ ನನ್ನ ತಂಟೆ ತಕರಾರಿಗೆ ಬಂದರೆ ನಿಮ್ಮನ್ನು ಮುಗಿಸಿ ಬಿಡುವುದಾಗಿ ಪ್ರಾಣಬೆದರಿಕೆ ಹಾಕುತ್ತಾ, ಅವಾಚ್ಯಶಬ್ದಗಳಿಂದ ಬೈದನು. ಸಮವಸ್ತ್ರದಲ್ಲಿದ್ದ ತಾವು ಆತನಿಗೆ ಬುದ್ದಿವಾದ ಹೇಳಿದರೂ ಸಹ ಆತ ತಮ್ಮ ಮಾತನ್ನು ಕೇಳದೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಪಡಿಸಿ, ತಮ್ಮನ್ನು ಏಕ ವಚನದಲ್ಲಿ ಬೈಯ್ಯುತ್ತಾ, ಕೈಯಲ್ಲಿದ್ದ ಮಚ್ಚಿನಿಂದ ಮಣಿಕಂಠ ಆದ ತನಗೆ ಹೊಡೆಯಲು ಬಂದಾಗ ತಾನು ತಪ್ಪಿಸಿಕೊಂಡು ಪಕ್ಕಕ್ಕೆ ಬಿದ್ದುಹೋದೆ. ಅಷ್ಠರಲ್ಲಿ ಅಲ್ಲಿಯೇ ಇದ್ದ ಇತರೆ ಪೊಲೀಸರು ಮತ್ತು ಅದೇ ಗ್ರಾಮದ ಸಾರ್ವಜನಿಕರು ಆತನನ್ನು ಹಿಡಿದುಕೊಳ್ಳಲು ಹೋಗುವಷ್ಟರಲ್ಲಿ ಆತ ಮಚ್ಚಿನ ಸಮೇತ ಸ್ಥಳದಿಂದ ಓಡಿ ಹೋಗಿರುತ್ತಾನೆ. ನಂತರ ತಾವು ಆತನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಅನಿಲ್ ಬಿನ್ ವೆಂಕಟೇಶಪ್ಪ, 28 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೇಕೆಲಸ, ಮೂಡಚಿಂತಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದುಬಂದಿರುತ್ತೆ. ನಂತರ ಈ ದಿನ ದಿನಾಂಕ: 01/09/2021 ರಂದು ಬೆಳಿಗ್ಗೆ ತಾನು ERSS Dial 112 ಕರ್ತವ್ಯವನ್ನು ಮುಗಿಸಿಕೊಂಡು ಠಾಣೆಗೆ ಹಾಜರಾಗಿ ಮೇಲ್ಕಂಡಂತೆ ತಮ್ಮ ಮೇಲೆ ಗಲಾಟೆ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಾಗೂ ಮಚ್ಚನ್ನು ತೋರಿಸಿ ಪ್ರಾಣಬೆದರಿಕೆ ಹಾಕಿರುವ ಅನಿಲ್ ಬಿನ್ ವೆಂಕಟೇಶಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.209/2021 ಕಲಂ. 379  ಐ.ಪಿ.ಸಿ:-

     ದಿನಾಂಕ:01/08/2021 ರಂದು ಬೆಳಿಗ್ಗೆ 8-45 ಗಂಟೆಗೆ ಫಿರ್ಯಾದುದಾರರಾದ ಚಂದ್ರಶೇಖರ ಗೌಡ ಲೇಟ್ ರಾಮಾಂಜಿನೇಯ ಗೌಡ ,ಸಹಾಯಕ ಶಿಕ್ಷಕಕರು, ನಕ್ಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ; ದಿನಾಂಕ: 10/06/2021 ರಂದು ತಮ್ಮ ಗ್ರಾಮದಲ್ಲಿ ತಮ್ಮ ವಾಸದ ಮನೆಯ ರಸ್ತೆ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್ ನಲ್ಲಿ ತಮ್ಮ ಬಾಬತ್ತು ಕೆಎ-40 ಇ.ಡಿ-2284  ದ್ವಿ-ಚಕ್ರವಾಹನವನ್ನು ನಿಲ್ಲಿಸಿದ್ದು ಕಳ್ಳತನ ವಾಗಿದ್ದು ಈ ವರೆಗೆ ತಮ್ಮ ಬಾಬತ್ತು ದ್ವಿ-ಚಕ್ರ ವಾಹನವನ್ನು ಎಲ್ಲಾಕಡೆ ಹುಡುಕಲಾಗಿ ಎಲ್ಲಯೂ ಸಿಗದ ಕಾರಣ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿರುವುದಾಗಿದೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:31/08/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ-318 ದೇವರಾಜ್ ರವರು  ಎನ್ ಸಿ ಆರ್ ನಂ 200/2021 ರಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಹಾಜರ್ ಪಡಿಸಿದ ನ್ಯಾಯಾಲಯದ ಆದೇಶ ಪ್ರತಿಯ ಸಾರಾಂಶವೆನೆಂದರೆ ದಿ:30/08/2021 ರಂದು   ಬೆಳಗ್ಗೆ 09-05  ಗಂಟೆಗೆ  ಗಂಟೆಗೆ ಶ್ರೀ.ಕೆ.ಪ್ರಸನ್ನಕುಮಾರ್, ಪಿ.ಎಸ್.ಐ, ಗೌರಿಬಿದನೂರು ನಗರ ಪೊಲೀಸ್ ಠಾಣೆ ರವರು  ಠಾಣೆಯಲ್ಲಿ ನೀಡಿದ ದೂರು ವರದಿಯ ಸಂಬಂದವೆನೆಂದರೆ  ದಿ:30/08/2021 ರಂದು ಬೆಳಗ್ಗೆ ತಾನು ಠಾಣೆಯಲ್ಲಿದ್ದಾಗ  ಠಾಣಾ ಸರಹದ್ದಿನಲ್ಲಿ  ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಾನೂನು ಕ್ರಮ ಜರುಗಿಸುವ ಬಗ್ಗೆ ಸೂಚನೆಗಳನ್ನು ನೀಡಿ ನೇಮಕ ಮಾಡಿದ್ದ ಶ್ರೀ.ರಮೇಶ್, ಪಿ.ಸಿ.282 ರವರು  ಈದಿನ ದಿ:30/08/2021 ರಂದು  ಬೆಳಗ್ಗೆ 7-15 ಗಂಟೆಯ ಸಮಯದಲ್ಲಿ  ಠಾಣೆಯಲ್ಲಿ ತನ್ನ ಮುಂದೆ ಹಾಜರಾಗಿ  ಗೌರಿಬಿದನೂರು ನಗರದ, ಬಿ.ಹೆಚ್.ರಸ್ತೆಯ, ಶ್ರೀ.ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯ, ಉತ್ತರಪಿನಾಕಿನಿ ನದಿ ದಡದಲ್ಲಿನ  ಸಾರ್ವಜನಿಕ   ಪ್ರದೇಶದಲ್ಲಿ   ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶವನ್ನು ಮಾಡಿಕೊಟ್ಟು ಮಧ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುವುದಾಗಿ  ವರದಿಯನ್ನು ಮಾಡಿದ್ದು, ಈ ಮಾಹಿತಿಯ ಮೇರೆಗೆ  ಠಾಣೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಪಂಚರಿಗೆ ಮಾಹಿತಿಯನ್ನು ತಿಳಿಸಿ   ಪಂಚಾಯ್ತಿದಾರರನ್ನು  ಮತ್ತು   ಠಾಣಾ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ.-40.ಜಿ-281 ಜೀಪ್ನಲ್ಲಿ  ಚಾಲಕನಾದ ಎಪಿಸಿ-76. ಹರೀಶ, ಠಾಣಾ ಸಿಬ್ಬಂದಿಯಾದ ಪಿ.ಸಿ-282 ಶ್ರೀ.ರಮೇಶ್ ರವರನ್ನು  ತನ್ನ ಜೊತೆ  ಕರೆದುಕೊಂಡು ಈದಿನ ದಿ:30/08/2021 ರಂದು ಬೆಳಗ್ಗೆ  7-25 ಗಂಟೆಗೆ  ಠಾಣೆಯಿಂದ ಹೊರಟು  ಈದಿನ ದಿ:30/08/2021 ರಂದು ಬೆಳಗ್ಗೆ  7-35 ಗಂಟೆಗೆ  ಮಾಹಿತಿ ಬಂದಿದ್ದ ಗೌರಿಬಿದನೂರು ನಗರದ, ಬಿ.ಹೆಚ್.ರಸ್ತೆಯ,  ಶ್ರೀ.ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯ, ಉತ್ತರಪಿನಾಕಿನಿ ನದಿ ದಡದ  ಬಳಿಗೆ ಬಂದು  ಜೀಪನ್ನು ನಿಲ್ಲಿಸಿ  ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿಯು ಶ್ರೀ.ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯ, ಉತ್ತರಪಿನಾಕಿನಿ ನದಿ ದಡದಲ್ಲಿನ ಸಾರ್ವಜನಿಕ  ಪ್ರದೇಶದಲ್ಲಿ   ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಾಕಾಶ  ಮಾಡಿಕೊಟ್ಟು ಮಧ್ಯವನ್ನು ಮಾರಾಟ ಮಾಡುತ್ತಿದ್ದು ಅಲ್ಲಿದ್ದ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಖಚಿತಪಟ್ಟಿದ್ದು ಕೂಡಲೇ ಪಂಚರ ಸಮಕ್ಷಮ  ತಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ಓಡಿ ಹೋಗಿದ್ದು ಮದ್ಯವನ್ನು ಮಾರಾಟ ಮಾಡುತ್ತಾ, ಸ್ಥಳವಕಾಶವನ್ನು ಮಾಡಿಕೊಟ್ಟಿದ್ದ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀ. ಕೆ.ಬಾಲಕೃಷ್ಣ ಬಿನ್ ಲೇಟ್ ಕೆ.ರಾಮನ್ನ, 64 ವರ್ಷ, ಶೆಟ್ಟಿ ಬಲಜಿಗ ಜನಾಂಗ, ಟೀ ವ್ಯಾಪಾರ, ವಾಸ  ಕೆ.ವಿ.ಕೆ.ಕೃಷ್ಣಮೂರ್ತಿ ರವರ ಮನೆಯ ಎದುರು, ಅಜಾದ್ ನಗರ, ಪರಗಿ ರಸ್ತೆ, ಹಿಂದೂಪುರ ಟೌನ್, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ, ಮೊಬೈಲ್ ನಂ.6303302922  ಎಂದು ತಿಳಿಸಿದ್ದು ಸದರಿಯವರನ್ನು ಸಾರ್ವಜನಿಕರಿಗೆ ಮದ್ಯ ಸೇವನೆ  ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟ ಮದ್ಯವನ್ನು ಸರಬರಾಜು ಮಾಡುತ್ತಿರುವುದಕ್ಕೆ  ಸಂಬಂಧಪಟ್ಟಂತೆ ಯಾವುದಾದರೂ  ಪರವಾನಿಗೆ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ  ಪರಿಶೀಲನೆ ಮಾಡಲಾಗಿ 1] ಹೈವಾರ್ಡ್ಸ್ ಕಂಪನಿಯ ಚೀಯರ್ಸ್ ವಿಸ್ಕಿ 90 ಎಂ.ಎಲ್. ಸಾಮರ್ಥ್ಯದ ಮದ್ಯವಿರುವ 16 ಟೆಟ್ರಾ ಪಾಕೇಟುಗಳು, ಇವುಗಳ ಒಟ್ಟು ಮೌಲ್ಯ 562-08/-ರೂಗಳು,  ಮಧ್ಯದ ಪ್ರಮಾಣವನ್ನು  ಲೆಕ್ಕ ಮಾಡಲಾಗಿ ಒಟ್ಟು ಸಾಮಥ್ರ್ಯ 01 ಲೀಟರ್ 440 ಎಂ.ಎಲ್ ಆಗಿರುತ್ತೆ.  2] ಹೈವಾರ್ಡ್ಸ್ ಕಂಪನಿಯ ಚೀಯರ್ಸ್ ವಿಸ್ಕಿ 90 ಎಂ.ಎಲ್. ಸಾಮರ್ಥ್ಯದ ಖಾಲಿ 04 ಟೆಟ್ರಾ ಪಾಕೇಟುಗಳು. 3] ಮದ್ಯವನ್ನು ಕುಡಿದು ಬಿಸಾಕಿದಂತಹ 04  ಖಾಲಿ  ಪ್ಲಾಸ್ಟಿಕ್ ಗ್ಲಾಸುಗಳು ಮತ್ತು 4] 01 ಲೀಟರ್ ಸಾಮರ್ಥ್ಯದ ಒಂದು ಖಾಲಿ  ಪ್ಲಾಸ್ಟಿಕ್ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಗ್ಗೆ  07-40 ಗಂಟೆಯಿಂದ ಬೆಳಗ್ಗೆ  08-25 ಗಂಟೆಯವರೆಗೆ ಪಂಚನಾಮೆಯನ್ನು  ಜರುಗಿಸಿ ಮೇಲ್ಕಂಡ ಮಾಲುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ  ಬೆಳಗ್ಗೆ 08-35 ಗಂಟೆಗೆ ವಾಪಸ್ಸು ಬಂದು ಬೆಳಗ್ಗೆ  09-05 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯನ್ನು  ನಿಮ್ಮ ಮುಂದೆ ಹಾಜರ್ಪಡಿಸುತ್ತಿದ್ದು  ಆರೋಪಿಯ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ  ಠಾಣಾಧಿಕಾದಿಕಾರಿಗಳಾದ ನಿಮಗೆ ಸೂಚಿರುತ್ತೆ  ಎನ್ನುವ ದೂರು ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್.ನಂ. 200/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡು  ಈ ದಿನ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.204/2021 ಕಲಂ. 506,34,504,323,324 ಐ.ಪಿ.ಸಿ:-

     ದಿನಾಂಕ 31/08/2021 ರಂದು ಮದ್ಯಾಹ್ನ 1-15 ಗಂಟೆಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ತಾಯಿ ಪಿರ್ಯಾಧಿ ಉಷಾ ಕೊಂ ಮಹೇಂದ್ರ ಜಂಗಾಲಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರ ಹೇಳಿಕೆಯನ್ನು ಪಡೆದಿದ್ದರ ಸಾರಾಂಶವೇನೆಂದರೆ, ದಿನಾಂಕ 31/08/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆಯ ಸಮಯದಲ್ಲಿ ತನ್ನ ತಾಯಿ ಯಶೋಧಮ್ಮ ರವರ ಮೇಲೆ ಯಾವುದೋ ಕಾರಣಕ್ಕೆ ತಮ್ಮ ಗ್ರಾಮದ ಕದಿರಪ್ಪ ರವರು ತನ್ನ ತಾಯಿ ರವರ ಮನೆಯ ಬಳಿ ಜಗಳಮಾಡಿಕೊಂಡು ಸ್ಥಳದಿಂದ ಹೋಗುವಾಗ  ಆರೋಪಿತರು ಬಂದು ಇದ್ದಕ್ಕಿಂದಂತೆ ತನ್ನ ಮಗಳಾದ ಸಾಯಿ ಕೀರ್ತಿ ರವರಿಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು, ಆಗಾ ತಾನು ಏಕೆ ತನ್ನ ಮಗಳಿಗೆ ಹೊಡೆದಿದ್ದು ಎಂದು ಕೇಳಿದ್ದಕ್ಕೆ ತನಗೆ ಓಬಕ್ಕ ಕೈಗಳಿಂದ ಬೆನ್ನಿಗೆ ಹೊಡೆದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು, ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂತ ಪ್ರಾಣಬೆದರಿಕೆ ಹಾಕಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಮೇರೆಗೆ ಠಾಣೆಗೆ ದಿನಾಂಕ 31/08/2021 ರಂದು ಮದ್ಯಾಹ್ನ 2-15 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.205/2021 ಕಲಂ. 15(A),32(3) ಕೆ.ಇ ಆಕ್ಟ್:-

    ದಿನಾಂಕ:30/08/2021 ರಂದು ಎ,ಎಸ್,ಐ ಗಂಗಾಧರಪ್ಪ.ಆರ್  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆದಿನಾಂಕ:30/08/2021 ರಂದು ಸಂಜೆ 5-00 ಗಂಟೆಯಲ್ಲಿ ಪೆರೇಸಂದ್ರ ಹೊರ ಠಾಣೆಯಲ್ಲಿದ್ದಾಗ ಹೊರ ಠಾಣಾ   ಸಿಬ್ಬಂದಿ ಬಾಬಾಜಾನ್ ಹೆಚ್.ಸಿ-253  ರವರು  ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ  ತಾಲ್ಲೂಕು ಕಮ್ಮಗುಟ್ಟಹಳ್ಳಿ   ಗ್ರಾಮದಲ್ಲಿ   ಗಸ್ತುನಲ್ಲಿರುವಾಗ ಕಮ್ಮಗುಟ್ಟಹಳ್ಳಿ  ಕ್ರಾಸ್  ಬಳಿ  ಸಾರ್ವಜನಿಕ ರಸ್ತೆಯಲ್ಲಿ ಮರದ ಕೆಳಗೆ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ.  ನಾನು ಮತ್ತು ಶ್ರೀನಿವಾಸ ಸಿ.ಪಿ.ಸಿ-272  ರವರು ದ್ವಿಚಕ್ರವಾಹನದಲ್ಲಿ ಸಂಜೆ 5-15 ಗಂಟೆ ಸಮಯಕ್ಕೆ ಕಮ್ಮಗುಟ್ಟಹಳ್ಳಿ   ಕ್ರಾಸ್ ಗೆ  ಹೋಗಿ ಸ್ಥಳದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ  ಕಮ್ಮಗುಟ್ಟಹಳ್ಳಿ   ಕ್ರಾಸ್ ನ  ರಸ್ತೆಯಲ್ಲಿ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮರದ ಕೆಳಗೆ  ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 5-30 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಆಸಾಮಿಯ  ಹೆಸರು & ವಿಳಾಸ ತಿಳಿಯಲಾಗಿ ಚಿನ್ನಪ್ಪ ಬಿನ್ ತಿಪ್ಪಯ್ಯ, 65 ವರ್ಷ, ಭೋವಿ, ಜಿರಾಯ್ತಿ, ವಾಸ ಚಿಕ್ಕನಾರೆಪ್ಪನಹಳ್ಳಿ ಗ್ರಾಮ, ಗುಡಿಬಂಡೆ   ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 11 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 440 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*11=562.08/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 5-45 ಗಂಟೆಯಿಂದ 6-45   ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 7-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು  ಸೂಚಿಸಿದ ಮೇರೆಗೆ ಸೂಚಿಸಿದ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು   ಪ್ರಕರಣ ದಾಖಲಿಸಿರುತ್ತೆ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 279,337 ಐ.ಪಿ.ಸಿ & 187 INDIAN MOTOR VEHICLES ACT:-

     ದಿನಾಂಕ:01-09-2021 ರಂದು ಬೆಳಗ್ಗೆ 06:15 ಗಂಟೆಗೆ ಎ.ಎಸ್.ಐ ಗೋಪಾಲ್ ರವರು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೋಹರ ಬಿನ್ ಮುನಿರಾಜು, 19 ವರ್ಷ, ಪ/ಜಾತಿ, ವಿದ್ಯಾರ್ಥಿ, ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆ ಪಡೆದುಕೊಂಡು ಬಂದ ಸಾರಾಂಶವೇನೆಂದರೆ, ತಾನು ದಿನಾಂಕ:31-08-2021 ರಂದು ಸಂಜೆ 6:40 ಗಂಟೆಯಲ್ಲಿ ತಾನು ತಮ್ಮ ಗ್ರಾಮದಿಂದ ಗೋಪಿನಾಥ ಬೆಟ್ಟದ ಕಡೆಗೆ ವಾಕಿಂಗ್ ಹೋಗಿ ಪುನಃ ವಾಪಸ್ಸು ಬೆಟ್ಟದ ಕಡೆಯಿಂದ ತಮ್ಮ ಗ್ರಾಮದ ಕಡೆ ನಡೆದುಕೊಂಡು ಬರುತ್ತಿದ್ದಾಗ ಸಂಜೆ 7:30 ಗಂಟೆಗೆ ಬೆಟ್ಟದ ತಿರುವಿನಲ್ಲಿ ಮೇಲ್ಭಾಗದಿಂದ ಯಾವುದೋ ಒಂದು ದ್ವಿಚಕ್ರ ವಾಹನ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಾನು ರಸ್ತೆಯಲ್ಲಿ ಬಿದ್ದು ತನಗೆ ಎಡಕಾಲಿನ ಮೊಣಕಾಲಿನ ಕೆಳಭಾಗ ರಕ್ತಗಾಯ ಮತ್ತು ಎಡಕಾಲಿನ ಪಾದದ ಬಳಿ ರಕ್ತಗಾಯಗಳು ಆಗಿದ್ದು ದ್ವಿಚಕ್ರವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ, ತಾನು ತಮ್ಮ ದೊಡ್ಡಪ್ಪನ ಮಗನಾದ ನರಸಿಂಹ ರವರಿಗೆ ಫೋನ್ ಮಾಡಿ ಕರೆದಾಗ ಅವರು ಸ್ಥಳಕ್ಕೆ ಬಂದು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ, ತನಗೆ ಅಪಘಾತ ಪಡಿಸಿ ಹೊರಟು ಹೋಗಿರುವ ದ್ವಿಚಕ್ರವಾಹನವನ್ನು ಪತ್ತೆ ಮಾಡಿ ಅದರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 323,324,504,34,506 ಐ.ಪಿ.ಸಿ:-

     ದಿನಾಂಕ:01/09/2021 ರಂದು ಮದ್ಯಾಹ್ನ 1:20 ಗಂಟೆಗೆ ಪಿರ್ಯಾದಿ ವೆಂಕಟರವಣಪ್ಪ ಬಿನ್ ನಾರಾಯಣಪ್ಪ, 52 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತನಗೆ 4 ಜನ ಮಕ್ಕಳಿದ್ದು 1 ನೇ ಮಮತ, 2 ನೇ ಸುನೀಲ್, 3 ನೇ ಪವಿತ್ರ, 4 ನೇ ಗೌತಮಿ ಎಂಬ ಮಕ್ಕಳಿರುತ್ತಾರೆ. ಅವರಲ್ಲಿ ಇಬ್ಬರಿಗೆ ಮದುವೆಗಳಾಗಿ ಇನ್ನಿಬ್ಬರು ನಮ್ಮ ಜೊತೆ ಇರುತ್ತಾರೆ. ತನ್ನ ಅಕ್ಕಳಾದ ಲಕ್ಷ್ಮಮ್ಮ ರವರಿಗೆ ತನ್ನ ತಂದೆಯ ಭಾಗದಲ್ಲಿ 1 ಎಕರೆ 5 ಗುಂಟೆ ಜಮೀನು ನೀಡಿರುತ್ತೆ. ದಿನಾಂಕ:31/08/2021 ರಂದು ಸಂಜೆ 7:30 ಗಂಟೆ ಸಮಯದಲ್ಲಿ ಗಜೇಂದ್ರ ಬಿನ್ ಚನ್ನಪ್ಪ ರವರು ತೋಟದಲ್ಲಿ ನೀರಿನ ಪೈಪುಗಳನ್ನು ಹೊಡೆದು ಹಾಕಿರುವ ವಿಚಾರದಲ್ಲಿ ತಾನು ಕೇಳಿದಕ್ಕೆ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ದಿನಾಂಕ:01/09/2021 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ನಾನು ಮನೆಯ ಬಳಿ ಇದ್ದಾಗ ತನ್ನ ಅಳಿಯನಾದ ಗಜೇಂದ್ರ ತನ್ನ ಮಗಳಾದ ಮಮತ ರವರು ಏಕಾ ಏಕಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ಕೆಳಕ್ಕೆ ತಳ್ಳಿ ಆ ಪೈಕಿ ಗಜೇಂದ್ರ ಕಾಲಿನಿಂದ ತನ್ನನ್ನು ತುಳಿದುಕೊಂಡು ಹೊಡೆದಿರುತ್ತಾನೆ. ಮಮತ ರವರು ಕಲ್ಲಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾಳೆ. ನಂತರ ಇಬ್ಬರು ತನ್ನನ್ನು ಕುರಿತು ನೀನು ಏನಾದರು ಇನ್ನೊಂದು ಬಾರಿ ಪೈಪುಗಳನ್ನು ಹೊಡೆದಿರುವ ವಿಚಾರದಲ್ಲಿ ಕೇಳಿದ್ದೆ ಆದರೆ ನಿನ್ನನ್ನು ಸಾಯಿಸತ್ತೇನೆಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾಗ ತಮ್ಮ ಗ್ರಾಮದ ವೆಂಕಟರೆಡ್ಡಿ ಬಿನ್ ಆಂಜಿನಪ್ಪ ಮತ್ತು ಮಾರುತಿ ಬಿನ್ ನಾಗಪ್ಪ ರವರುಗಳು ಜಗಳ ಬಿಡಿಸಿ ಕಳುಹಿಸಿರುತ್ತಾರೆ. ತಗೆ ಹೊಡೆದು ಗಲಾಟೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

12. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.91/2021 ಕಲಂ. 379 ಐ.ಪಿ.ಸಿ:-

     ದಿನಾಂಕ:31-08-2021 ರಂದು ಸಂಜೆ 19-00 ಗಂಟೆಗೆ ಪಿರ್ಯಾದುದಾರರಾದ ಶ್ರೀ.ಶಂಕರಪ್ಪ ಬಿನ್ ವೆಂಕಟರವಣಪ್ಪ, ಬಿಳ್ಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಬಿಳ್ಳೂರು ಗ್ರಾಮದ ನಿವಾಸಿಯಾಗಿದ್ದು, 2018ನೇ ಸಾಲಿನಲ್ಲಿ ದ್ವಿಚಕ್ರವಾಹನ ಕೊಂಡಿದ್ದು, ಅದರ ನಂಬರ್ KA-50-Y9264  ಆಗಿದ್ದು,  ದಿನಾಂಕ: 30-08-2021 ರಂದು ರಾತ್ರಿ ವೇಳೆಯಲ್ಲಿ ತನ್ನ ದ್ವಿಚಕ್ರವಾಹನವನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದು, ರಾತ್ರಿಯಲ್ಲಿ ಸುಮಾರು 01-30 ಗಂಟೆಯಲ್ಲಿ ತನ್ನ ಬಾಬತ್ತು ಮೇಲ್ಕಂಡ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ  ಬಿಳ್ಳೂರು & ಸುತ್ತಮುತ್ತಲ ಗ್ರಾಮಗಳ ಕಡೆ ಹುಡುಕಾಡಿ ತಡವಾಗಿ ದೂರು ನೀಡುತ್ತಿದ್ದು, ಹುಡುಕಿಕೊಡಲು ಕೋರಿ ಪಿರ್ಯಾದು.

 

13. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 31/08/2021 ರಂದು ಸಂಜೆ 5-45 ಗಂಟೆಗೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಆರ್.ವೆಂಕಟರವಣ ಹೆಚ್.ಸಿ.115  ರವರು ಆರೋಪಿ ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ.31.08.2021 ರಂದು ಸಂಜೆ 4.30 ಗಂಟೆಯಲ್ಲಿ ಮೊ.ಸಂ: 104/2021 ಕಲಂ: 323,324,325, 504 ರೆ/ವಿ 34 ಐಪಿಸಿ ಕೇಸಿನಲ್ಲಿ ಆರೋಪಿಗಳ ಪತ್ತೆ ಬಗ್ಗೆ ನಾನು ಮತ್ತು ನಾರಾಯಣ ಪಿ.ಸಿ-278 ರವರೊಂದಿಗೆ ರಾಜೀವ್ ಗಾಂಧಿ ಲೇಔಟ್ ಕಡೆ ಹೋಗುತ್ತಿದ್ದಾಗ ದಿಬ್ಬೂರಹಳ್ಳಿ ರಸ್ತೆಯ ಅಮೀರ್ ಬಾಬಾ ದಾರ್ಗ ಸಮೀಪ ಯಾರೋ ಒಬ್ಬ ಆಸಾಮಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯಪಾನ ಮಡಲು ಅನುವು ಮಾಡಿಕೊಟ್ಟಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಯಾರೋ ಇಬ್ಬರೂ ಮದ್ಯಪಾನ ಸೇವನೆ ಮಾಡುತ್ತಿರುವವರು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ ವೆಂಕಟಕೃಷ್ಣ ಬಿನ್ ಲೇಟ್ ಅಣಕೂರು ಮುನಿಯಪ್ಪ, 37 ವರ್ಷ, ಪ.ಜಾತಿ, ಕೂಲಿ ಕೆಲಸ, ರಾಜೀವ್ ಗಾಂಧಿ ಲೇಔಟ್, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು ಇವರನ್ನು ಮದ್ಯಪಾನ ಮಾರಾಟ ಮಾಡಲು ಪರಿವಾನಗಿ ಇದೆಯೇ ಎಂದು ಪ್ರಶ್ನಿಸಿದಾಗ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಪಂಚಾಯ್ತಿದಾರರನ್ನು ಸ್ಥಳಕ್ಕೆ ಬರಮಾಡಿಕೊಂಡು ಆಸಾಮಿಯ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಪರಿಶೀಲಿಸಲಾಗಿ ORIGINAL CHOICE DELUXE WHISKY 90 ML ನ 16 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 16 ರ ಬೆಲೆ ಒಟ್ಟು 562-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ORIGINAL CHOICE DELUXE WHISKY 90 ML EMPTY 02 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಸಂಜೆ 4.45 ರಿಂದ 5.15 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ವೆಂಕಟಕೃಷ್ಣ ರವರನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 02-09-2021 05:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080