ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.218/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

  ದಿನಾಂಕ 01/08/2021 ರಂದು ಬೆಳಿಗ್ಗೆ ಎ ಎಸ್ ಐ ರಾಮಚಂದ್ರಪ್ಪ ರವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬೇಟಿ ಬೇಟಿ ನೀಡಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯನ್ನು ಮದ್ಯಾಹ್ನ 12-30 ಗಂಟೆಗೆ ಹಾಜರುಪಡಿಸಿದ ದೂರಿನ ಸಾರಾಂಶವೆನೆಂದರೆ ನಾನು  ಪ್ರತಿದಿನ ಮೂಗಿಚೆನ್ನೇಪಲ್ಲಿಯ ಬೋರ್ ವೆಲ್ ಮುನಿಶಾಮಿ ರರ ತೋಟದ ಬಳಿ ಕೂಡಿ ಕೆಲಸಕ್ಕೆ ಹೋಗುತ್ತೇನೆ ದಿನಾಂಕ 28/07/2021 ರಂದು ನಾನು ಬೋರ್ ವೆಲ್  ಮುನಿಶಾಮಿ ರವರ ಬಳಿ ಕೂಲಿ ಕೆಲಸಕ್ಕೆ ಹೋಗಿ ನಮ್ಮ ಗ್ರಾಮಕ್ಕೆ ನಮ್ಮ ಮನೆಗೆ ಬರಲು ರಾತ್ರಿ 7-30 ಗಂಟೆಯಲ್ಲಿ ಮೂಗಿಚೆನ್ನೇಪಲ್ಲಿ- ಸೋಲಮಾಕಲಪಲ್ಲಿಯ ಮಣ್ಣಿನ ರಸ್ತೆಯಲ್ಲಿ ತಿರುವಿಗೆ ಸರಿಯಾಗಿ ನಾನು ನಡೆದುಕೊಂಡು ಬರುತ್ತಿದ್ದಾಗ ನಮ್ಮ ಗ್ರಾಮದ ಕಡೆಯಿಂದ ಕತ್ತಲಲ್ಲಿ ಒಂದು ಕಪ್ಪು ಬಣ್ಣದ ಕಾರು ಲೈಟುಗಳನ್ನು ಹಾಕಿಕೊಂಡು ಅದರ ಚಾಲಕನು ಕಾರನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ನನ್ನ ಬಲಗಾಲಿನ ಪಾದದ ಹಿಮ್ಮಡಿಯ ಮೇಲೆ ಕಾರಿನ ಚಕ್ರವನ್ನು ಹತ್ತಿಸಿ ನಂತರ ಸದರಿ ಕಾರಿನ ಚಾಲಕನು ಕಾರನ್ನು ನಿಲ್ಲಿಸಿದಂತೆ ನಿಲ್ಲಿಸಿ ಹೊರಟು ಹೋದನು. ನನ್ನ ಬಲಗಾಲಿನ ಪಾದದ ಹಿಮ್ಮಡಿಯು ಮುರಿದು ಹೋಗಿ ತೀರ್ವ ಸ್ವರೂಪದ ರಕ್ತಗಾಯವಾಗಿ ನಾನು ಕೆಳಗಡೆ ಬಿದ್ದು ಹೋದೆನು. ದಾರಿಯಲ್ಲಿ ಹೋಗುತ್ತಿದ್ದ ಮೂಗಿಚೆನ್ನೆಪಲ್ಲಿ ಗ್ರಾಮದ ಪಿಲ್ಲನ್ನ ರವರು ಈ ಘಟನೆಯನ್ನು ನೋಡಿ ನನ್ನ ಮಗನಿಗೆ ತಿಳಿಸಿದ್ದು ನಂತರ ನನ್ನ ಮಗನಾದ ಅನಿಲ್ ಮತ್ತು ನನ್ನ ಪತ್ನಿಯಾದ ಲಕ್ಷ್ಮಿನರಸಮ್ಮ ರವರು ಸ್ಥಳಕ್ಕೆ ಬಂದು ಆಂಬ್ಯೂಲೆನ್ಸ್ ವಾಹನದಲ್ಲಿ ಕರೆದುಕೊಂಡು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೆನೆ. ನಾನು ದೂರು ಕೂಡುವುದು ನನಗೆ ಅರಿವಿಲ್ಲದ ಕಾರಣ ತಡವಾಗಿ ದೂರು ನೀಡಿರುತ್ತೇನೆ. ನನಗೆ ಅಪಘಾತಪಡಿಸಿದ ನಮ್ಮ ಗ್ರಾಮದ ಸ್ಟಾಂಪ್ ವೆಂಡರ್ ಶಿವಪ್ಪನ ಕಾರು ಆಗಿರುವುದಾಗಿ ಆತನ ಮೇಲೆ ಅನುಮಾನ ಇರುತ್ತೆ. ಸದರಿ ಕಾರಿನ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ಕೋರಿನ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. 15(A),32(3) ಕೆ.ಇ ಆಕ್ಟ್:-

  ಈ ದಿನ ದಿನಾಂಕ:31/07/2021   18-15  ಗಂಟೆ ಸಮಯದಲ್ಲಿ  ಪಿ.ಎಸ್.ಐ ರವರು  ಠಾಣೆಗೆ ಹಾಜರಾಗಿ ನೀಡಿದ ವರದಿಯ  ಸಾರಾಂಶವೆನೆಂದರೆ  ಚೇಳೂರು  ಗ್ರಾಮದ ಆರ್.ಎಂ.ಸಿ ಯಾರ್ಡ್ ಬಳಿ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಠಾಣೆಯ ಸಿಬ್ಬಂದಿಯವರಾದ ಸಿ.ಪಿ.ಸಿ 437 ಸತೀಶ್ , ಮೋಹನ್ ಎಪಿಸಿ 87 ರವರೊಂದಿಗೆ ಚೇಳೂರು ಬಸ್ ನಿಲ್ದಾಣದಲ್ಲಿ ಪಂಚರನ್ನು ಬರಮಾಡಿಕೊಂಡು ಗ್ರಾಮದ ಆರ್.ಎಂ.ಸಿ ಯಾರ್ಡ್ ಬಳಿ  ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಬಳಿ ಅಕ್ರಮವಾಗಿ ಮಧ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಮಧ್ಯಪಾನ ಮಾಡುತ್ತಿದ್ದವನನ್ನು  ವಶಕ್ಕೆ ಪಡೆದು ಆಸಾಮಿಗೆ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ನಿನ್ನ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು  ಪವನ್ ಕುಮಾರ್ ಬಿನ್ ಲೇಟ್ ರಾಮಕೃಷ್ಣಯ್ಯ ,36 ವರ್ಷ, ಭಜಂತ್ರಿ ಜನಾಂಗ , ವ್ಯಾಪಾರ  ,ಚಕ್ರರಾಯಪೇಟ್ ಗ್ರಾಮ, ಪುಲಿವೆಂದಲ ತಾಲ್ಲೂಕು, ಕಡಪ ಜಿಲ್ಲೆ ಆಂದ್ರ ಪ್ರದೇಶ,   ಎಂದು ತಿಳಿಸಿದ್ದು. ನಂತರ ಆತನ ಬಳಿಯಿದ್ದ ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ  `180 ಎಂ.ಎಲ್ ನ BAGPIPER DELUXE  WHISKY  ಕಂಪನಿಯ 8 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 1440 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 106.23 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 849.84 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ 180 ಎಂ.ಎಲ್ ನ BAGPIPER DELUXE  WHISKY  ಕಂಪನಿಯ 8 ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ ಸದರಿ ಸ್ಥಳದಲ್ಲಿದ್ದ ಒಂದು ಲೀಟರ್ ನ ಖಾಲಿ ವಾಟರ್ ಬಾಟಲ್  ಹಾಗೂ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಸಂಜೆ 5:15 ಗಂಟೆಯಿಂದ 6:00 ಗಂಟೆಯವರೆಗೆ ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ,  ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ನೀಡಿ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 32,34 ಕೆ.ಇ  ಆಕ್ಟ್:-

  ದಿನಾಂಕ;31.07.2021 ರಂದು ಸಂಜೆ 6-00 ಗಂಟೆಗೆ ಪಿ.ಎಸ್.ಐ ಸಾಹೇಬರು ರವರು  ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ.ಪಿ. ಮಂಜು ಆದ ತಾನು ಈ ದಿನ ದಿನಾಂಕ: 31.07.2021 ರಂದು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಎಸ್. ಗೊಲ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ  ಜೀಪು ಸಂಖ್ಯೆ ಕೆ.ಎ 40 ಜಿ-567 ರ ವಾಹನದಲ್ಲಿ ತಾನು ಮತ್ತು ಚಾಲಕ  ಮಂಜುನಾಥ ಎ.ಹೆಚ್.ಸಿ. 23 ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 38 ಸುರೇಶ. ಪಿಸಿ. 264 ನರಸಿಂಹಮೂರ್ತಿರವರೊಂದಿಗೆ ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಎಸ್. ಗೊಲ್ಲಹಳ್ಳಿ ಗ್ರಾಮದ ರಮೇಶ ಬಿನ್ ಮುನಿಶ್ಯಾಮಪ್ಪ. 36 ವರ್ಷ. ವಕ್ಕಲಿಗರು. ವ್ಯಾಪಾರ ವೃತ್ತಿ. ರವರ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಕೊಂಡು, ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಎಸ್. ಗೊಲ್ಲಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿಕೊಂಡಿದ್ದು, ನಂತರ  ವಾಹನಗಳಲ್ಲಿ ಪಂಚರನ್ನು  ಕರೆದುಕೊಂಡು ರಮೇಶ್  ರವರ ಚಿಲ್ಲರೆ ಅಂಗಡಿಯ ಬಳಿ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ಅಂಗಡಿಯ ಮುಂದೆ ಸಾರ್ವಜನಿಕರು ಗುಂಪು ಸೇರಿಕೊಂಡಿದ್ದು. ಪೊಲೀಸರನ್ನು ನೋಡಿ ಜನರು ಓಡಿ ಹೋದರು. ಅಂಗಡಿಯಲ್ಲಿದ್ದ ಒಂದು ಬಿಳಿ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ತೆರೆದು ನೋಡಿದಾಗ ಚೀಲದಲ್ಲಿ 1) ಹೈವಾರ್ಡ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್.ನ 71 ಟೆಟ್ರಾ ಪಾಕೆಟ್ ಗಳು   2] ಓಲ್ಡ್ ತವೆರನ್ ವಿಸ್ಕೀ 180 ಎಂ ಎಲ್ ನ 16 ಟೆಟ್ರಾ ಪಾಕೆಟ್ ಗಳು ಮತ್ತು 3] ಬ್ಯಾಗ್ ಪೈಪರ್ ವಿಸ್ಕೀ 180 ಎಂ ಎಲ್ ನ 14 ಟೆಟ್ರಾ ಪಾಕೆಟ್ ಗಳಿದ್ದು, ಒಟ್ಟು 11 ಲೀಟರ್ 790 ಎಂ ಎಲ್ ಮದ್ಯವಿದ್ದು, ಒಟ್ಟು ಬೆಲೆ 5369.45/- ರೂಗಳಾಗಿದ್ದು, ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ   ರಮೇಶ ಬಿನ್ ಮುನಿಶ್ಯಾಮಪ್ಪ. 36 ವರ್ಷ. ವಕ್ಕಲಿಗರು. ವ್ಯಾಪಾರ ವೃತ್ತಿ. ಎಸ್ ಗೊಲ್ಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮದ್ಯವನ್ನು ಸಾಗಾಣಿಕೆ ಮಾಡಲು ಮತ್ತು ಆತನ ಬಳಿ ಇಟ್ಟುಕೊಳ್ಳಲು  ಆತನಿಗೆ ಯಾವುದೇ ಪರವಾನಗಿಯನ್ನು ಹೊಂದಿರುವೆಯಾ ? ಎಂದು ಕೇಳಲಾಗಿ ಇಲ್ಲ ಎಂದು ಹೇಳಿದನು. ಆತನನ್ನು ನಮ್ಮ ವಶಕ್ಕೆ ಪಡೆಯಲು ಹೋದಾಗ ಆಸಾಮಿಯು ತಪ್ಪಿಸಿಕೊಂಡು ಓಡಿ ಹೋದನು. ಹಿಡಿಯಲು ಪ್ರಯತ್ನಿಸಿದಾಗ ಸಿಕ್ಕಿರುವುದಿಲ್ಲ ಸದರಿ ಆಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಮದ್ಯದಲ್ಲಿ ಮೂರು ಮಾದರಿಯಲ್ಲಿ ಒಂದೊಂದು  ಟೆಟ್ರಾ ಪಾಕೆಟ್ ಗಳನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ 'S' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್.ಗೆ ಪರೀಕ್ಷೆಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಮದ್ಯಾಹ್ನ 3-00 ಗಂಟೆಯಿಂದ 4-30 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ  5-00 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-30 ಗಂಟೆಗೆ ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 87 ಕೆ.ಪಿ  ಆಕ್ಟ್:-

  ದಿನಾಂಕ:31.07.2021 ರಂದು ಸಂಜೆ 18-30 ಗಂಟೆಗೆ ಠಾಣಾ ಎನ್.ಸಿ.ಆರ್ 175/2021 ರಲ್ಲಿ ಪ್ರಕರಣ ದಾಖಲಿಸಲು ಘನ ಒಂದನೇ ಸಿ.ಜೆ ಮತ್ತು ಜೆ. ಎಮ್ ಎಫ್.ಸಿ ನ್ಯಾಯಾಲಯ ಚಿಕ್ಕಬಳ್ಲಾಪುರ ರವರಿಂದ ಅನುಮತಿಯನ್ನು ಪಡೆದ ದೂರಿನ ಸಾರಾಂಶವೆನೆಂದರೆ ಈ ದಿನ ಮಾನ್ಯ ಸಿ.ಪಿ.ಐ ಸಾಹೇಬರು ರವರು ಮತ್ತು ಸಿಬ್ಬಂದಿಯವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ 40 ಜಿ 6633 ವಾಹನದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿಗಾಗಿ ತಾಲ್ಲೂಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಸಂಜೆ ಸುಮಾರು 17-00 ಗಂಟೆಗೆ ಜಡೇನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರ ಮಾಡಿಕೊಂಡು ಚಿಕ್ಕಬಳ್ಳಾಪುರ ತಾಲ್ಲೂಕಿನ ಜಡೇನಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ  ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು ದಾಳಿಯಲ್ಲಿ 02 ಜನ ಆರೋಪಿಗಳು ಸಿಕ್ಕಿ ಬಿದ್ದಿದ್ದು ಸ್ಥಳದಿಂದ 04 ಜನ ಆರೋಪಿತರು ಸ್ಥಳದಿಂದ ಪರಾರಿಯಾಗಿರುತ್ತಾರೆ. ಜೂಜಾಟಕ್ಕೆ ಬಳಸಿದ್ದ 1) ಒಂದು ಪ್ಲಾಸ್ಟಿಕ್ ಚೀಲ 2) 52 ಇಸ್ಪೀಟ್ ಎಲೆಗಳು 3) 9,800/- ರೂ ನಗದು ಹಣವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಜೂಜಾಟದ ಸ್ಥಳದಲ್ಲಿ 02 ಜನ ಆರೋಪಿತರನ್ನು ಮಾಲುಗಳನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ನೀಡಿದ ವರದಿಯ ಮೇರೆಗೆ ಈ ಪ್ರ.ವ.ವರದಿ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ  ಆಕ್ಟ್:-

  ದಿನಾಂಕ:31/07/2021 ರಂದು ಮಧ್ಯಾಹ್ನ 13-00 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ  ತಾಲ್ಲೂಕು ಕಚೇರಿಯಲ್ಲಿ ಡಿ.ಸಿ ಸಾಹೇಬರ ವಿ.ಸಿ ಯನ್ನು ಮುಗಿಸಿಕೊಂಡು ಕೆಎ 40-ಜಿ-60 ಸರ್ಕಾರಿ ಜೀಪ್ ನಲ್ಲಿ  ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ಹಾಗೂ ಜೀಫ ಚಾಲಕರಾಗಿ ಎ.ಪಿ.ಸಿ 94 ಬೈರಪ್ಪ ರವರೊಂದಿಗೆ ಠಾಣೆಗೆ ವಾಪಸ್ಸು ಶಿಡ್ಲಘಟ್ಟ ದಿಂದ  ಸುಮಾರು 13-15 ಗಂಟೆಯ ವೇಳೆಗೆ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ದ್ಯಾವಪ್ಪನಗುಡಿಯ ಮುಖಾಂತರ ಕನ್ನಪ್ಪನಹಳ್ಳಿಯ ಕಡೆಗೆ ಬಂದಾಗ  ನನಗೆ ಬಂದ ಮಾಹಿತಿ ಏನೆಂದರೆ ಸದ್ದಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಪಟ್ಟಿಗೆ ಅಂಗಡಿಯ ಮುಂಭಾಗ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿಗೆ ತೊಂದರೆಯುಂಟು ಮಾಡುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಮಧ್ಯಹ್ನ 13-30 ಗಂಟೆಗೆ ಸದ್ದಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಬಳಿ ಬಂದು ಪಂಚರನ್ನು ಬರಮಾಡಿಕೊಂಡು ಸದರಿಯವರಿಗೆ ದಾಳಿ ಮಾಡುವ ವಿಚಾರ ತಿಳಿಸಿ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದರ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ಪಂಚರೊಂದಿಗೆ ಸದ್ದಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಹೋಗಿ ಪಟ್ಟಿಗೆ ಅಂಗಡಿಯ ಸ್ವಲ್ಪ ದೂರದಲ್ಲಿ ಕಟ್ಟಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯೆಕ್ತಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರುನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಅಲ್ಲಿಯೇ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಮಧ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೆ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿರುತ್ತಾನೆ ನಂತರ ಸದರಿ ಆಸಾಮಿಯ  ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ವೆಂಕಟಸ್ವಾಮಿ,50 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಸದ್ದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:8296204518 ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ  ORIGINAL CHOICE ನ 22 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1980 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 772.86 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  ಎರಡು ಖಾಲಿ 90 ಎಂ,ಎಲ್ ನ  ORIGINAL CHOICEನ  ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮತ್ತು ಒಂದು ಲೀಟರ್  ಖಾಲಿ ವಾಟರ್ ಬಾಟೆಲ್ ನ್ನು ಮಧ್ಯಾಹ್ನ 13-45 ಗಂಟೆಯಿಂದ ಮಧ್ಯಾಹ್ನ 14-45 ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಆಸಾಮಿಯನ್ನು ಕರೆದುಕೊಂಡು ಮಧ್ಯಾಹ್ನ 15-15 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:99/2021 ಕಲಂ:15(A),32(3) ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 15(A),32(3) ಕೆ.ಇ  ಆಕ್ಟ್:-

  ದಿನಾಂಕ:31/07/2021 ರಂದು ಮಧ್ಯಾಹ್ನ 15-45 ಗಂಟೆಯ ಸಮಯದಲ್ಲಿ  ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ ಸದ್ದಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಚಿಲ್ಲರೆ ಅಂಗಡಿಯ ಮುಂಭಾಗ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿಗೆ ತೊಂದರೆಯುಂಟು ಮಾಡುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ಮತ್ತು ಸಿ.ಪಿ.ಸಿ 72 ವಸಂತ ಕುಮಾರ್ ರವರೊಂದಿಗೆ 11 ನೇ ಮೈಲಿ, ಲಗುನಾಯ್ಕನ ಹಳ್ಳಿ ಕ್ರಾಸ್ ,ಮುಮ್ಮನಹಳ್ಳಿ ಕ್ರಾಸ್, ಸೋಮನಹಳ್ಳಿ, ತರಬಹಳ್ಳಿ ಹಾಗೂಕನ್ನಪ್ಪನಹಳ್ಳಿಯ ಮುಖಾಂತರ ಸಂಜೆ 16-20 ಗಂಟೆಯ ಸಮಯಕ್ಕೆ ಸದ್ದಹಳ್ಳಿ ಗ್ರಾಮ ಮುಖ್ಯ ರಸ್ತೆಯ ಬಳಿ ಹೋಗಿ ಮುಖ್ಯ ರಸ್ತೆಯಲ್ಲಿ ಪಂಚರನ್ನು ಬರಮಾಡಿಕೊಂಡು ಸದರಿಯವರಿಗೆ ದಾಳಿ ಮಾಡುವ ವಿಚಾರ ತಿಳಿಸಿ ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದರ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ಪಂಚರೊಂದಿಗೆ ಸದ್ದಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ರವಿಚಂದ್ರ ರವರ ಚಿಲ್ಲರೆ  ಅಂಗಡಿಯ ಬಳಿ ಹೋಗಿ ಸ್ವಲ್ಪ ದೂರದಲ್ಲಿ ಕಟ್ಟಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯೆಕ್ತಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯವರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಅಲ್ಲಿಯೇ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಗೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಹಾಗೂ ಮಧ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೆ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿರುತ್ತಾನೆ ನಂತರ ಸದರಿ ಆಸಾಮಿಯ  ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ರವಿಚಂದ್ರ ಬಿನ್ ಎಸ್.ವಿ ದ್ಯಾವಪ್ಪ,32 ವರ್ಷ, ವಕ್ಕಲಗಿರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಸದ್ದಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಮದ್ಯ ತುಂಬಿದ HAYWARDS CHEERS WHISKY ಯ 90 ML ನ 22 ಟೆಟ್ರಾ ಪಾಕೆಟ್ ಗಳು ಇವುಗಳ ಒಟ್ಟು ಮೌಲ್ಯ 1980 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 772.86 ರೂ  ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  ಎರಡು ಖಾಲಿ 90 ಎಂ,ಎಲ್ ನ  HAYWARDY CHEERS WHISKY ಯ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮತ್ತು ಒಂದು ಲೀಟರ್  ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30 ಗಂಟೆಯಿಂದ 17-30 ಗಂಟೆಯ ವರೆಗೆ  ವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಆಸಾಮಿಯನ್ನು ಕರೆದುಕೊಂಡು ಮಧ್ಯಾಹ್ನ 18-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:100/2021 ಕಲಂ:15(A),32(3) ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.178/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:31/07/2021 ರಂದು ಸಂಜೆ 17-15 ಗಂಟೆಗೆ ಪಿರ್ಯಾದಿ ಅರುಣ ಕುಮಾರ್ ಬಿನ್ ಹೆಚ್.ಹನುಮಂತಪ್ಪ ಹೊಸೂರು ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:27/07/2021 ರಂದು ರಾತ್ರಿ ಪಿರ್ಯಾದಿದಾರರು ಮತ್ತು ನಾಗರಾಜ ಬಿನ್ ನಾರಾಯಣಪ್ಪ ರವರು ಇಬ್ಬರೂ ಸೇರಿ ಜುಪಿಟರ್ ದ್ವಿ ಚಕ್ರವಾಹನ ಸಂಖ್ಯೆ.ಕೆ.ಎ-40,ಇ-7181 ರಲ್ಲಿ ಮುದುಗೆರೆ ಬಳಿ ಇರುವ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಹೊಸೂರಿನಿಂದ ಹೋಗಿ  ಪೆಟ್ರೋಲ್ ತುಂಬಿಸಿಕೊಂಡು ಮತ್ತೆ ಹೊಸೂರಿಗೆ ದಿನಾಂಕ:27/07/2021 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ವಾಪಸ್ಸು ಬರುತ್ತಿದ್ದಾಗ, ಕೋಟಾಲದಿನ್ನೆ  ಮತ್ತು ಮುದುಗೆರೆಯ ಮದ್ಯದಲ್ಲಿ ನೂತನವಾಗಿ ಕಟ್ಟುತ್ತಿರುವ ಸೇತುವೆ ಬಳಿ ನಾವು ದ್ವಿಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಎದುರುಕಡೆಯಿಂದ ಅಂದರೆ ಕೋಟಾಲದಿನ್ನೆ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಮಿನಿ ಮಾರುತಿ ವ್ಯಾನನ್ನು ಅದರ ಚಾಲಕ ಚಾಲನೆ ಮಾಡಿಕೊಂಡು ಬಂದು ನಾವು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ನಮ್ಮ ವಾಹನಕ್ಕೆ ಗುದ್ದಿರುತ್ತಾನೆ. ಇದರಿಂದ ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ನಾಗರಾಜ ಕೆಳಕ್ಕೆ ಬಿದ್ದು ಹೋಗಿ ಕಾಲು ಮುರಿದಿರುತ್ತದೆ. ನನಗೂ ಸಹ ಮೂಗಿಗೆ ಮತ್ತು ಬಲ ಕೈಗೆ ಗಾಯಗಳಾಗಿರುತ್ತವೆ. ಅಲ್ಲಿ ಇದ್ದ ಸಾರ್ವಜನಿಕರು ಯಾರೋ 108 ಆಂಬುಲೆನ್ಸ್ ಗೆ ಕರೆ ಮಾಡಿರುತ್ತಾರೆ. ತಕ್ಷಣ ಆಂಬುಲೆನ್ಸ್ ನಲ್ಲಿ ನಮ್ಮನ್ನು ಸರ್ಕಾರಿ ಆಸ್ಪತ್ರೆ ಗೌರೀಬಿದನೂರಿಗೆ ಕರೆದುಕೊಂಡು ಹೋಗಿರುತ್ತಾರೆ. ನಾನು ಹೊರರೋಗಿಯಾಗಿ ಚಿಕಿತ್ಸೆ ಮಾಡಿಸಿಕೊಂಡಿರುತ್ತೇನೆ. ನಾಗರಾಜು ರವರಿಗೆ ತೀವ್ರತರ ಗಾಯಗಳಾಗಿರುವುದರಿಂದ ಗೌರೀಬಿದನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂದು ರಾತ್ರಿಯೇ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ನಾಗರಾಜು ರವರು ಇನ್ನೂ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ಪಡೆಯುತ್ತಿದ್ದಾರೆ, ನಂತರ ದಿನಾಂಕ:27/07/2021 ರಂದು ರಾತ್ರಿ 9-30 ಗಂಟೆಯಲ್ಲಿ ನಮಗೆ ಅಪಘಾತ ಮಾಡಿದ ವಾಹನವು ಓಮಿನಿ ಮಾರುತಿ ವ್ಯಾನ್ ಸಂಖ್ಯೆ-ಕೆ.ಎ-40, ಎ-2809 ಆಗಿರುತ್ತದೆ. ಅದರ ಚಾಲಕ ಪ್ರಭಾಕರ ಬಿನ್ ವೆಂಕಟೇಶಪ್ಪ, ಕಾದಲವೇಣಿ ಗ್ರಾಮ ಎಂದು ತಿಳಿದುಕೊಂಡೆವು, ನಮಗೆ ಅಪಘಾತ ಮಾಡಿ ತೀವ್ರ ತರ ಗಾಯಗಳನ್ನುಂಟು ಮಾಡಿರುವ ಮೇಲ್ಕಂಡ ಪ್ರಭಾಕರ ಮತ್ತು ವ್ಯಾನಿನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

8. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 143,147,323,324,504,506,149 ಐ.ಪಿ.ಸಿ:-

    ದಿನಾಂಕ 31/07/2021 ರಂಧು ಸಂಜೆ 5:30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ವೀಣ ಕೋಂ ಅನಿಲ್ ಕುಮಾರ್, 25 ವರ್ಷ, ಆದಿಕರ್ನಾಟಕ ಜನಾಂಗ, ಗೃಹಿಣಿ, ತುಮಕುಂಟ ಚೆಕ್ ಪೋಸ್ಟ್, ಹಿಂದೂಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 30/07/2021 ರಂದು ಬೆಳಿಗ್ಗೆ ತಾನು ಕಲ್ಲೂಡಿ ಗ್ರಾಮಕ್ಕೆ ಜಾತ್ರೆ ನಿಮಿತ್ತ ಬಂದಿದ್ದು ಸಂಜೆ 4:00 ಗಂಟೆಯಲ್ಲಿ ತಾನು ಮನೆಯ ಬಳಿ ಇರುವಾಗ ಕಲ್ಲೂಡಿ ಗ್ರಾಮದ ಗಂಗಾಧರಪ್ಪ ರವರ ಮಗನಾದ ಮೂರ್ತಿ ರವರು ತಮ್ಮ ಮನೆ ಬಳಿ ಬಂದು ತನ್ನ ತಮ್ಮನಾದ ಪವನ್ ರವರನ್ನು ಬೈಕ್ ಕೀ ಕೇಳಿದ್ದು ತನ್ನ ತಮ್ಮ ಬೈಕ್ ಕೀ ಇರುವುದಿಲ್ಲವೆಂದು ತಿಳಿಸಿದ್ದಕ್ಕೆ ಮೂರ್ತಿ ರವರು ತನ್ನ ತಮ್ಮ ಬಾಲು ರವರೊಂದಿಗೆ ಬಂದು ಗಲಾಟೆ ಮಾಡಿ ಚಾಕುವನ್ನು ಎಸೆದಿರುತ್ತಾನೆ. ನಂತರ ತಮ್ಮ ಸ್ನೇಹಿತರಾದ ಬೊಮ್ಮಸಂದ್ರ ಗ್ರಾಮದ ವಾಸಿಗಳಾದ ಸಾಯಿ, ನಂದೀಶ, ಶಿವರಾಮರಾಜು ರವರು ಸೇರಿಕೊಂಡು ತಮ್ಮ ತಾಯಿ ರತ್ನಮ್ಮ ರವರಿಗೆ ಪಕ್ಕದಲ್ಲಿದ್ದ ಕಟ್ಟಿಗೆಗಳಿಂದ ಹೊಡೆದಿರುತ್ತಾರೆ. ನಂತರ ತಾನು ಗಲಾಟೆ ಬಿಡಿಸಲು ಹೋಗಿದ್ದು ತನಗೂ ಸಹ ಹೊಡೆದಿರುತ್ತಾರೆ. ಗಲಾಟೆಯಲ್ಲಿ ತನ್ನ ಮಾಂಗಲ್ಯ ಸರವನ್ನು ಕಿತ್ತುಹಾಕಿರುತ್ತಾರೆ. ನಂತರ ತನ್ನ ತಂಗಿ ಪವಿತ್ರ ರವರನ್ನು ಸಹ ಹೊಡೆದಿರುತ್ತಾರೆ. ಹಾಗೂ ತಮಗೆ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ತಾವು ರತ್ನಮ್ಮ ರವರನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮೂರ್ತಿ, ಬಾಲು, ಸಾಯಿ, ನಂದೀಶ, ಶಿವರಾಮರಾಜು ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

9. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.173/2021 ಕಲಂ. 379 ಐ.ಪಿ.ಸಿ:-

  ದಿನಾಂಕ 31/07/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾಧಿ ವೀರಯ್ಯ ಬಿನ್ ಪ್ರಭಯ್ಯಾ ಅರಮನೆ ರಸ್ತೆ,ವಸಂತನಗರ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 25/07/2021 ರಂದು ರಾತ್ರಿ 12-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಆದೆಗಾರಹಳ್ಳಿ ಗ್ರಾಮದ ಸರ್ವೇ ನಂ 20 ರ ಆವಲಕೊಂಡರೆಡ್ಡಿ ರವರ ಜಮೀನಿನಲ್ಲಿರುವ ರಿಲಿಯಾನ್ಸ್ ಜಿಯೋ ಕಂಪನಿ I-KACKBP-9026 2F ರ ಟವರನ ಜನರೇಟರ್ ನ    12920.95/- ರೂ ಬೆಲೆ ಬಾಳುವ 145 ಲೀಟರ್ ಡಿಸೆಲ್ ಹಾಗೂ ಗುಡಿಬಂಡೆ ತಾಲ್ಲೂಕು ನಡುವಿನಹಳ್ಳಿ ಗ್ರಾಮ ಸರ್ವೇ ನಂ 120/1 ರ ಚನ್ನಪ್ಪರೆಡ್ಡಿ ರವರ ಜಮೀನಿನಲ್ಲಿರುವ –I-KA-GBND-9016 ರ ಟವರನ ಜನರೇಟರ್ ನ  7128.80/- ರೂ ಬೆಲೆ ಬಾಳುವ 80 ಲೀಟರ್ ಡಿಸೆಲ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.174/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:31/07/2021 ರಂದು ಸಂಜೆ 5-45 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-218/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:30/07/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ  ತಾನು ಪೆರೆಸಂದ್ರ ಪೊಲೀಸ್ ಹೊರ ಠಾಣೆಯಲ್ಲಿರುವಾಗ ತನಗೆ ಠಾಣಾ ಹೆಚ್.ಸಿ. 77 ಶ್ರೀ ಶಂಕರಪ್ಪ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲರಾಳಹಳ್ಳಿ ಗ್ರಾಮದ ಎನ್.ಎಸ್. ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ  ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ಶಂಕರಪ್ಪ ರವರೊಂದಿಗೆ ದ್ವಿಚಕ್ರವಾಹನದಲ್ಲಿ ನಲ್ಲರಾಳಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಬೆಳಿಗ್ಗೆ 10-30 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿ ಎನ್.ಎಸ್. ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ ರವರ ಚಿಲ್ಲರೆ ಅಂಗಡಿ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಎನ್.ಎಸ್. ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಎನ್.ಎಸ್. ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ 46 ವರ್ಷ, ವಕ್ಕಲಿಗ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ನಲ್ಲರಾಳಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಒರಜಿನಲ್ ಚಾಯ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-45 ಗಂಟೆಯಿಂದ ಬೆಳಿಗ್ಗೆ 11-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಎನ್.ಎಸ್. ರವಿಕುಮಾರ್ ಬಿನ್ ಲೇಟ್ ಶ್ರೀರಾಮಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 12-30 ಘಂಟೆಗೆ ಠಾಣೆಗೆ ಬಂದು 1-00 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

11. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.175/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ:30/07/2021 ರಂದು ರಾತ್ರಿ 7-00  ಗಂಟೆ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಎ.ಎಸ್.ಐ  ಶ್ರೀ ಗಂಗಾಧರಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30/07/2021 ರಂದು ಮದ್ಯಾಹ್ನ 3-00  ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮಂತರಾಯಪ್ಪ ಸಿ,ಹೆಚ್ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ: 30/07/2021 ರಂದು  ತಾನು ಸೋಮೇನಹಳ್ಳಿ, ಕಾಟೇನಹಳ್ಳಿ ಕಡೆ ಗಸ್ತು ಮಾಡುತ್ತಿರುವಾಗ ಕದಿರಶೆಟ್ಟಿಹಳ್ಳಿ   ಗ್ರಾಮದ ಬಳಿ ಕಾಲುವೆ ಅಂಗಳದಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-141 ಸಂತೋಷ ಸಿ,ಹೆಚ್,ಸಿ-29 ಶ್ರೀನಿವಾಸ ಸಿ,ಹೆಚ್,ಸಿ- 35 ನಾರಾಯಣಸ್ವಾಮಿ, ಸಿ,ಹೆಚ್,ಸಿ-102 ಆನಂದ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಮದ್ಯಾಹ್ನ 3-15 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 4-00  ಗಂಟೆಗೆ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಮತ್ತು ಪಂಚರನ್ನು ಬರಮಾಡಿಕೊಂಡು ಕದಿರಶೆಟ್ಟಿಹಳ್ಳಿ ಗ್ರಾಮದ ಬಳಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 4-15 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಮಂಜುನಾಥ ವಿ ಬಿನ್ ವೆಂಕಟರವಣಪ್ಪ, 30 ವರ್ಷ, ಎಸ್.ಸಿ  ಜನಾಂಗ, ಚಾಲಕ ವೃತ್ತಿ, ಕದಿರಿಶೆಟ್ಟಿಹಳ್ಳಿ ಗ್ರಾಮ, ಗುಡಿಬಂಡೆ  ತಾಲ್ಲೂಕು, 2) ವೇಣುಗೋಪಾಲ್ ಬಿನ್ ಮುನಿಯಪ್ಪ,   24 ವರ್ಷ, ಎಸ್.ಸಿ ಜನಾಂಗ, , ಜಿರಾಯ್ತಿ,  ವಾಸ ಕದಿರಿಶೆಟ್ಟಿಹಳ್ಳಿ ಗ್ರಾಮ, ಗುಡಿಬಂಡೆ  ತಾಲ್ಲೂಕು, 3) ಕೆ.ಸಿ ಕೊಂಡಪ್ಪ ಬಿನ್ ಲೇಟ್ ಚಿನ್ನಪ್ಪ, 60 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ,  ವಾಸ ಕಾಟೇನಹಳ್ಳಿ  ಗ್ರಾಮ, ಗುಡಿಬಂಡೆ  ತಾಲ್ಲೂಕು,  4)    ಶ್ರೀನಿವಾಸ ಬಿನ್ ಲೆಟ್ ಲಕ್ಷ್ಮಯ್ಯ,  43 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ,  ವಾಸ ಕದಿರಿಶೆಟ್ಟಿಹಳ್ಳಿ ಗ್ರಾಮ, ಗುಡಿಬಂಡೆ  ತಾಲ್ಲೂಕು,  ಎಂದು ತಿಳಿಸಿದ್ದು .  ಸ್ಥಳದಲ್ಲಿ 1060 ರೂ ನಗದು ಹಣ, 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 1060/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 4-30 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ  ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ 04 ಜನ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-00  ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-15 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು  ಸೂಚಿಸಿದ ಮೇರೆಗೆ  ಘನ ನ್ಯಾಯಾಲಯದಿಂದ ಅನುಮ,ತಿ ಪಡೆದುಕೊಂಡು ಪ್ರಕರಣ ದಾಖಲಸಿರುತ್ತೆ.

 

12. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ 01-08-2021 ರಂದು ಮಧ್ಯಾಹ್ನ 02.30 ಗಂಟೆಗೆ ಪಿರ್ಯಾಧಿದಾರರಾದ ಕೆ.ಆರ್ ರಾಜೇಂದ್ರಬಾಬು ಬಿನ್ ರಾಮಯ್ಯ, 34 ವರ್ಷ, ಬಲಜಿಗ ಜನಾಂಗ, ಚಾಲಕ ವೃತ್ತಿ, ವಾಸ ಕೊಮ್ಮೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 30/07/2021 ರಂದು ಮಧ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ತಮ್ಮ ಅಣ್ಣನಾದ ಆರ್.ಮಂಜುನಾಥ ರವರು ಕೊಮ್ಮೇಪಲ್ಲಿ ಕ್ರಾಸ್ ನಲ್ಲಿ ಬಸ್ ಗೆ ಬಿಡಲು ತಮ್ಮ ಬಾಮೈದನಾದ ಹರಿನಾಥ ಬಿನ್ ಪ್ರಭಾಕರ್ ರವರನ್ನು ಕೆಎ-53-ಹೆಚ್ಇ-4936 ನೋಂದಣಿ ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ತಮ್ಮ ಗ್ರಾಮದಿಂದ ಕೊಮ್ಮೇಪಲ್ಲಿ ಕ್ರಾಸ್ ಗೆ ಬಂದು ಹರಿನಾಥನನ್ನು ಕ್ರಾಸ್ ನಲ್ಲಿ ಇಳಿಸಿ ಪುನಃ ನಮ್ಮ ಗ್ರಾಮಕ್ಕೆ ಹೋಗಲು ಹೋಗುತ್ತಿದ್ದಾಗ ಚಿಂತಾಮಣಿ-ಚೇಳೂರು ರಸ್ತೆಯಲ್ಲಿ ಚಿಂತಾಮಣಿ ಕಡೆಯಿಂದ ಬಂದ ಎಪಿ-39-ಟಿಪಿ-1382 ನೋಂದಣಿ ಸಂಖ್ಯೆಯ BOLERO PICKUP ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಅಣ್ಣ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತಮ್ಮ ಅಣ್ಣನಾದ ಆರ್. ಮಂಜುನಾಥ ರವರು ದ್ವಿಚಕ್ರವಾಹನದಿಂದ ಕೆಳಗೆ ಬಿದ್ದು, ಬಲಕಾಲು ಮೊಣಕಾಲು ಗಾಯವಾಗಿರುತ್ತದೆ. ಹಾಗೂ ದ್ವಿಚಕ್ರವಾಹನವೂ ಸಹ ಅಪಘಾತದಿಂದ ಜಖಂ ಆಗಿರುತ್ತದೆ. ಆಗ  ಅಲ್ಲಿಯೇ ಕ್ರಾಸ್ ನಲ್ಲಿದ್ದ  ಹರಿನಾಥ, ನರೇಂದ್ರ ಬಿನ್ ದೇವರಾಜು ರವರು ಗಾಯಗೊಂಡಿದ್ದ ತಮ್ಮ ಅಣ್ಣನನ್ನು ಉಪಚರಿಸಿ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ  ನನಗೆ ಕರೆ ಮಾಡಿ ತಿಳಿಸಿದ್ದು, ನಂತರ  ತಾನು ತಮ್ಮ ಅಣ್ಣನನ್ನು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಂಗಳೂರಿನ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಪಡಿಸುತ್ತಿರುತ್ತೇನೆ. ನಮ್ಮ ಅಣ್ಣನಿಗೆ ಬಲಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರಿಂದ ದೂರು ನೀಡಲು ತಡಮಾಡಿದ್ದು, ತಮ್ಮ ಅಣ್ಣನಾದ ಆರ್. ಮಂಜುನಾಥ ರವರು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಅಪಘಾತಪಡಿಸಿದ ಎಪಿ-39-ಟಿಪಿ-1382 ನೋಂದಣಿ ಸಂಖ್ಯೆಯ BOLERO PICKUP ವಾಹನ ಚಾಲಕನ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:31/07/2021 ರಂದು ಠಾಣಾ ಪಿಸಿ 105 ನವೀನ್ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 31/07/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ನಾನು ಮತ್ತು  ಪಿ.ಸಿ-336 ಉಮೇಶ್ ಬಿ ಶಿರಶ್ಯಾಡ್ ರವರೊಂದಿಗೆ ತೊಂಡೇಬಾವಿ ಕಡೆಗಳಲ್ಲಿ ಗಸ್ತಿನಲ್ಲಿ ಇರುವಾಗ ಬಂದ ಮಾಹಿತಿ ಏನೇಂದರೆ ಕುಂಟಚಿಕ್ಕನಹಳ್ಳಿ ಗ್ರಾಮದ  ಗಂಗಾಧರ ಬಿನ್ ಲೇಟ್ ತಿಮ್ಮಯ್ಯ ರವರು ಕುಂಟಚಿಕ್ಕನಹಳ್ಳಿ ಗ್ರಾಮದ ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 336 ಉಮೇಶ್ ಬಿ ಶಿರಶ್ಯಾಡ್  ರವರು ಹಾಗೂ ಪಂಚರೊಂದಿಗೆ  ಮದ್ಯಾಹ್ನ 3-30  ಗಂಟೆಯ ಸಮಯಕ್ಕೆ  ಕುಂಟಚಿಕ್ಕನಹಳ್ಳಿ ಗ್ರಾಮದ ಗಂಗಾಧರ ಬಿನ್ ಲೇಟ್ ತಿಮ್ಮಯ್ಯ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಾಧರ ಬಿನ್ ಲೇಟ್ ತಿಮ್ಮಯ್ಯ, 50 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ ಕುಂಟಚಿಕ್ಕನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 14  ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 3). 3 ಪ್ಲಾಸ್ಟಿಕ್  ಲೋಟ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ 3-45 ಗಂಟೆಯಿಂದ ಸಂಜೆ 4-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 504/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಗಂಗಾಧರ ಬಿನ್ ಲೇಟ್ ತಿಮ್ಮಯ್ಯ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 02-08-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080