Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 173/2021 ಕಲಂ. 306 ರೆ/ವಿ 34 ಐಪಿಸಿ :-

     ದಿನಾಂಕ: 30/06/2021 ರಂದು ಪಿರ್ಯಾದಿದಾರರಾದ ನಂಜುಂಡಪ್ಪ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ನಲ್ಲಪರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ನನಗೆ ಇಬ್ಬರು ಮಕ್ಕಳಿದ್ದು, ಮೊದಲನೇ ಲಕ್ಷ್ಮೀನರಸಮ್ಮ ಮತ್ತು ಎರಡನೇ ಸದಾಶಿವ ಆಗಿರುತ್ತಾರೆ ನನ್ನ ಮಗನಾದ ಸದಾಶಿವರವರಿಗೆ ಈಗ್ಗೆ 6 ವರ್ಷಗಳ ಹಿಂದೆ ನನ್ನ ಹೆಂಡತಿ ಜಯಮ್ಮರವರ ಅಣ್ಣ ಮಾರಪ್ಪನ ಮಗಳಾದ ಸುನಿತಾರವರನ್ನು ಮದುವೆ ಮಾಡಿಕೊಂಡಿದ್ದು, 3 ತಿಂಗಳು ಇದ್ದು, ನಂತರ ನನ್ನ ಮಗನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡಿರುತ್ತಾರೆ. ಆ ನಂತರ ಸದಾಶಿವನಿಗೆ ಈಗ್ಗೆ 4 ವರ್ಷಗಳ ಹಿಂದೆ ಇದೇ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿ ಕದಿರನ್ನಗಾರಿಕೋಟೆ ಗ್ರಾಮದ ವಾಸಿಯಾದ ಅಂಜಲಿ ಬಿನ್ ರವಿ ರವರೊಂದಿಗೆ ಮದುವೆ ಮಾಡಿರುತ್ತೇನೆ. ನಮ್ಮ ಮನೆಯಲ್ಲಿ ನಾನು ನನ್ನ ಹೆಂಡತಿ ಜಯಮ್ಮ ನನ್ನ ಮಗ ಸದಾಶಿವ ಹಾಗೂ ನನ್ನ ಸೊಸೆಯಾದ ಅಂಜಲಿ ರವರು ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತೇವೆ. ನನ್ನ ಮಗ ಮತ್ತು ಸೊಸೆ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದರು.      ಹೀಗಿರುವಲ್ಲಿ ನನ್ನ ಸೊಸೆ ಅಂಜಲಿಗೆ 2 ಬಾರಿ ಗರ್ಭಿಣಿಯಾಗಿ  ಗರ್ಭಪಾತವಾಗಿತ್ತದೆ. ಮೂರನೇ ಸಲ ಗರ್ಭಿಣಿಯಾಗಿದ್ದು 9 ತಿಂಗಳು ಆದಾಗ ಮಗು ಹೊಟೆಯಲ್ಲಿಯೇ ಸತ್ತುಹೋಗಿರುತ್ತದೆ. ನಂತರ ನನ್ನ ಸೊಸೆಯಾದ ಅಂಜಲಿಯನ್ನು ಆರೈಕೆಗಾಗಿ ಅವರ ತವರು ಮನೆಗೆ ನನ್ನ ಮಗ ಬಿಟ್ಟು ಬಂದಿರುತ್ತಾನೆ. ನನ್ನ ಮಗನು ಆಗಾಗ ನನ್ನ ಸೊಸೆ ಅಂಜಲಿಯನ್ನು ನೋಡಿಕೊಂಡು ಬರುತ್ತಿದ್ದನು. ಇತ್ತೀಚೆಗೆ ನನ್ನ ಮಗ ಅಂಜಲಿ ರವರ ತವರು ಮನೆಗೆ ಹೋಗಿ ಹೆಂಡತಿಯನ್ನು ಕಳುಹಿಸಿಕೊಡಲು ಕೇಳಿದಾಗ ಕಳುಹಿಸಿರುವುದಿಲ್ಲ. ನಂತರ ದಿನಾಂಕ:26.06.2021 ರಂದು ನಾನು ನನ್ನ ಹೆಂಡತಿ ಅಂಜಲಿರವರ ತವರು ಮನೆಗೆ ಹೋಗಿ ನಮ್ಮ ಸೊಸೆಯನ್ನು ನಮ್ಮ ಮನೆಗೆ ಕಳುಹಿಸಿಕೊಡುವಂತೆ ಕೇಳಲಾಗಿ ಈಗ ಕಳುಹಿಸಿಕೊಡುವುದಿಲ್ಲ. ಎಂದು ಹೇಳಿರುತ್ತಾರೆ. ನಂತರ ನನ್ನ ಮಗ ಪೋನ್ ಮಾಡಿ ನನ್ನ ಹೆಂಡತಿಗೆ ಕಳುಹಿಸಿಕೊಡುವಂತೆ ಕೇಳಿದಾಗ ತವರು ಮನೆಯವರು ಹೆಂಡತಿಯನ್ನು ಕಳುಹಿಸಿಕೊಡುವುದಿಲ್ಲ ಎಂದು ತಿಳಿಸಿರುವುದಾಗಿ ನಮಗೆ ತಿಳಿಸಿರುತ್ತಾನೆ. ದಿನಾಂಕ:29.06.2021 ರಂದು ಬೆಳಗ್ಗೆ 6.00 ಗಂಟೆಗೆ ನಾನು ನನ್ನ ಹೆಂಡತಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 12.00 ಗಂಟೆಗೆ ಬಂದು ನೋಡಲಾಗಿ ನನ್ನ ಮಗ ಮನೆಯಲ್ಲಿ ಇಲ್ಲದೇ ಇದ್ದು, ಮಂಚದ ಮೇಲೆ ಆತನ ಮೊಬೈಲ್ ಉಂಗುರಗಳು ಮತ್ತು ಒಂದು ಪತ್ರವನ್ನು ಬರೆದು ಇಟ್ಟಿರುತ್ತಾನೆ. ಸದರಿ ಪತ್ರವನ್ನು ನನಗೆ ತಿಳಿದವರ ಹತ್ತಿರ ಓದಿಸಿ ಕೇಳಲಾಗಿ ತಾನು ಜೀವನದಲ್ಲಿ ತಾನು ತನ್ನ ಹೆಂಡತಿಯ ತವರು ಮನೆಯವರ ಕಿರುಕುಳದಿಂದ ಸಾಯಬೇಕು ಎಂದುಕೊಂಡಿರುತ್ತೇನೆಂದು ಬರೆದಿದ್ದು, ಎಂದು ವಿಚಾರ ತಿಳಿದು ನನ್ನ ಮಗ ನಮ್ಮ ಸ್ವಂತ ಗ್ರಾಮವಾದ ನಲ್ಲಪರೆಡ್ಡಿಪಲ್ಲಿಗೆ ಹೋಗಿರಬಹುದೆಂದು ತಿಳಿದು ನನ್ನ ಅಣ್ಣನಾದ ಗಂಗಪ್ಪರವರಿಗೆ ಪೋನ್  ಮಾಡಿ ತಿಳಿಸಿರುತ್ತೇನೆ. ದಿನಾಂಕ:30.06.2021 ರಂದು ಬೆಳಗ್ಗೆ ಸುಮಾರು 10.00 ಗಂಟೆಗೆ ನನ್ನ ಅಣ್ಣ ಗಂಗಪ್ಪರವರು ನನಗೆ ಪೋನ್ ಮಾಡಿ ನಿಮ್ಮ ಮಗ ಸದಾಶಿವ ನಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ತಿಳಿಸಿದ್ದು, ನಾನು ಮತ್ತು ನನ್ನ ಹೆಂಡತಿ ಬೆಂಗಳೂರಿನಿಂದ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ನನ್ನ ಮಗನ ಶವವನ್ನು ಕೆಳಗೆ ಇಳಿಸಿದ್ದರು. ನನ್ನ ಮಗ ಸದಾಶಿವನಿಗೆ ನನ್ನ ಸೊಸೆಯಾದ ಅಂಜಲಿ ಆಕೆಯ ತಂದೆ ರವಿ ತಾಯಿ ನಾರಾಯಣಮ್ಮ, ಮಗ ವೆಂಕಟೇಶ್ ದೊಡ್ಡಪ್ಪ ರವರುಗಳು ಕಿರುಕುಳ ನೀಡುತ್ತಿದ್ದು, ಇದರಿಂದ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನ ಶವವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತೇವೆ, ಇದರೊಂದಿಗೆ ಸದಾಶಿವ ಬರೆದಿರುವ ಡೆತ್ ನೋಟ್ ಅನ್ನು ಲಗತ್ತಿಸಿರುತ್ತೇನೆ. ನನ್ನ ಮಗನ ಸಾವಿಗೆ ಕಾರಣರಾದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 93/2021 ಕಲಂ. 279,304(ಎ) ಐಪಿಸಿ :-

     ದಿನಾಂಕ: 01/07/2021 ರಂದು  ಬೆಳಗ್ಗೆ 09-00 ಗಂಟೆಯ ಸಮಯಕ್ಕೆ  ಪಿರ್ಯಾದಿ ಶ್ರೀ ನವಚೇತನ್ ಬಿನ್  ನರಸಪ್ಪ 34ವರ್ಷ ಕೊತ್ತನೂರು ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು ರವರು ಚಿಕ್ಕಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಗೆ  ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ದಿನಾಂಕ: 30/06/2021 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಎನ್.ಹೆಚ್. 44 ರಸ್ತೆಯಲ್ಲಿ   ಕೊತ್ತನೂರು  ಗ್ರಾಮದ ವಾಸಿ ನಾರಾಯಣಸ್ವಾಮಿ ಬಿನ್   ವೀರಪ್ಪ 60 ವರ್ಷ ರವರು  ತನ್ನ  ಬಾಬತ್ತು 03  ಚಕ್ರದ  ಎಕ್ಸೆಲ್  ವಾಹನದಲ್ಲಿ  RTO ಕಛೇರಿಗೆ  ಹೋಗಲು ಹಾರೋಬಂಡೆ  ಗ್ರಾಮದ ಗೇಟ್ ಬಳಿ ಇರುವ ಶ್ರೀ ಸಾಯಿಬಾಬ  ದೇವಸ್ಥಾನದ ಮುಂದೆ    : ಯು :  ಟರ್ನ್ ತೆಗೆದುಕೊಂಡು ಮುಂದೆ ಹೋದ ಸಮಯದಲ್ಲಿ  ಬಾಗೇಪಲ್ಲಿ  ಕಡೆಯಿಂದ ಬೆಂಗಳೂರು  ಕಡೆಗೆ   ಲಾರಿ ನಂಬರ್  TN 52 Z 2899 ರ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಹಿಂದಿನಿಂದ ನಾರಾಯಣಸ್ವಾಮಿ ರವರು  ಚಾಲನೆ  ಮಾಡುತ್ತಿದ್ದ ದ್ವಿ ಚಕ್ರ  ವಾಹನಕ್ಕೆ ಡಿಕ್ಕಿಹೊಡೆಯಿಸಿ ಅಪಘಾತ ಮಾಡಿದ್ದು  ಹಾರೋಬಂಡೆ  ಗ್ರಾಮದ  ರಮೇಶ  ಎಂಬುವರ ಮೂಲಕ  ಮಾಹಿತಿ  ತಿಳಿದ ಪಿರ್ಯಾದಿ ಸ್ಥಳಕ್ಕೆ  ಹೋಗಿ ವಿಚಾರಣೆ ಮಾಡಿ ಗಾಯಾಳುವನ್ನು  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸಿ  ಪ್ರಥಮ ಚಿಕಿತ್ಸೆ  ಕೊಡಿಸಿ ನಂತರ  ವೈದ್ಯರ ಸಲಹೆಯ ಮೇರೆಗೆ  ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ   ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಕೊಡಿಸಿ ಅಲ್ಲಿಂದ  ಬೆಂಗಳೂರಿನ ಜಯನಗರ ದಿಗ್ವಿಜಯ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ದಾಖಲು ಮಾಡಿದ್ದು ಗಾಯಾಳು  ನಾರಾಯಣಸ್ವಾಮಿ ರವರು   ಚಿಕಿತ್ಸೆ  ಪಡೆಯುತ್ತಿದ್ದಾಗ ದಿನಾಂಕ: 01/07/2021 ರಂದು ಬೆಳಗ್ಗೆ 08-20 ಗಂಟೆಯಲ್ಲಿ  ಚಿಕಿತ್ಸೆ   ಫಲಿಸದೇ  ಮೃತಪಟ್ಟಿರುತ್ತಾನೆಂದು ಅಪಘಾತಕ್ಕೆ  ಕಾರಣವಾದ TN 52 Z 2899 ರ ವಾಹನದ ಚಾಲಕನ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 49/2021 ಕಲಂ. 464,465,468,420 ಐಪಿಸಿ :-

     ದಿನಾಂಕ: 30-06-2021 ರಂದು ಈ ಕೇಸಿನ ಪಿರ್ಯಾದಿಯಾದ ಶ್ರೀ ಜಿ. ನರಸಿಂಹಮೂರ್ತಿ ಆಡಳಿತ ಶಿರಸ್ತೇಧಾರರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, 2013 ನೇ ಸಾಲಿನಲ್ಲಿ  ಚಿಕ್ಕಬಳ್ಳಾಪುರ ಜಿಲ್ಲಾ  ಮತ್ತು ಸತ್ರ ನ್ಯಾಯಾಲಯದ ನೋಟಿಪಿಕೇಶನ ಸಂ: 01/2013 ದಿನಾಂಕ: 19/02/2013 ರ ಆದೇಶದಂತೆ 2013 ನೇ ಸಾಲಿನ ಸೇವಕ ಹುದ್ದೆಗಾಗಿ ಅರ್ಜಿಯನ್ನು  ಕರೆಯಲಾಗಿದ್ದು ಸದರಿ ಹುದ್ದೇಗೆ ಅರ್ಜಿಗಳನ್ನು ಸಲ್ಲಿಸಿಕೊಂಡಿದ್ದ  ನ್ಯಾಯಾಲಯದ ಮಾನದಂಡದಂತೆ  ಒಟ್ಟು 943 ಜನ ಅಭ್ಯರ್ಥಿಗಳು ಕರ್ನಾಟಕದಾದ್ಯಂತ ಸೇವಕ ಹುದ್ದೆಗೆ ನೇಮಕವಾಗಿದ್ದು ಅದರಲ್ಲಿ ಕ್ರಮಸಂಖ್ಯೆ -16 ರಲ್ಲಿ ಕಂಡ ಚಂದ್ರ ಶೇಖರ್ ಎನ್ ಬಿನ್ ನಂಜಪ್ಪ, ನಂ,3739, 1 ನೇ ಮೈನ್, 8 ನೇ ಕ್ರಾಸ್, ಬಿ ಬ್ಲಾಕ್ ಗಾಯತ್ರಿ ನಗರ ಬೆಂಗಳೂರು ಎಂಬ ವ್ಯಕ್ತಿಯು ತನಗೆ  7 ನೇ ತರಗತಿಯಲ್ಲಿ 600 ಅಂಕಗಳಿಗೆ 498 ಅಂಕ ತೆಗೆದು 83 % ದಂತೆ ತೇರ್ಗಡೆಯಾಗಿರುವುದಾಗಿ ಸುಳ್ಳು ಅಂಕಪಟ್ಟಿಯನ್ನು ನೀಡಿ  ನೇಮಕವಾಗಿರುತ್ತಾನೆ. ಆತನ ಅಂಕಪಟ್ಟಿಯ ನೈಜತೆಯ ಬಗ್ಗೆ  ಅರೋಪಿ ಚಂದ್ರಶೇಖರ್ ನನ್ನು  ಮೂಲ 7 ನೇ ತರಗತಿಯ  ಅಂಕಪಟ್ಟಿಯನ್ನು  ಹಾಜರು ಪಡಿಸಲು  ತಿಳಿಸಿದ  ಮೇರೆಗೆ  ಅರೋಪಿ ಹಾಜರು ಪಡಿಸಿದ ಅಂಕಪಟ್ಟಿಯನ್ನು  ಪರಿಶೀಲಿಸಲಾಗಿ ಅದರಲ್ಲಿ 600 ಅಂಕಗಳಿಗೆ 316 ಅಂಕಗಳು ಇರುವುದು ಕಂಡು ಬಂದಿದ್ದು  ಕೆಲಸಕ್ಕೆ ಸೇರುವ ಸಮಯದಲ್ಲಿ ನೀಡಿದ್ದ ಅಂಕಪಟ್ಟಿಗೆ ಹಾಗೂ ನಂತರ  ಹಾಜರು ಪಡಿಸಿದ  ಅಂಕಪಟ್ಟಿಗೆ ಹೋಲಿಕೆಯಾಗದೆ ಇದ್ದರಿಂದ ಪರಿಶೀಲನೆಗಾಗಿ  ಉಪನಿರ್ಧೇಶಕರು  ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ರವರಿಗೆ  ಸಲ್ಲಿಸಿ ಪರಿಶೀಲಿಸಿದಾಗ  ಅರೋಪಿಯು 7 ನೇ ತರಗತಿಯಲ್ಲಿ  600 ಅಂಕಗಳಿಗೆ 316 ಅಂಕಗಳು ಗಳಿಸಿರುವುದು ದೃಡವಾಗಿರುತ್ತದೆ. ಅರೋಪಿ ಚಂದ್ರಶೇಖರ್ ಎನ್. ರವರು  ತನಗೆ ಬಂದಿರುವ ನೈಜ ಅಂಕಪಟ್ಟಿಯನ್ನು  ಮರೆಮಾಚಿ ಹೆಚ್ಚು ಅಂಕಗಳು ಬಂದಿರುವುದಾಗಿ ಸುಳ್ಳು ಅಂಕಪಟ್ಟಿಯನ್ನು ನೇಮಕಾತಿ ಪ್ರಾಧಿಕಾರಕ್ಕೆ ನೀಡಿ ಸರ್ಕಾರಿ ಹುದ್ದೆಯನ್ನು ಪಡೆದುಕೊಂಡು  ನೇಮಕಾತಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರಕ್ಕೆ ವಂಚನೆ ಮಾಡಿ ಮೋಸ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ  ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 33/2021 ಕಲಂ. 279,337,304(A) ಐಪಿಸಿ :-

     ದಿನಾಂಕ; 01-07-2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಪಿರ್ಯಾದಿ ಅಲ್ಲಾಬಕಾಶ್ ಬಿನ್ ಲೇಟ್ ಪಕೃದ್ದೀನ್ ಸಾಬ್,53 ವರ್ಷ, ಮುಸ್ಲಿಂ ಜನಾಂಗ, ಬಾಳೇಹಣ್ಣು ವ್ಯಾಪಾರ, ವಾರ್ಡ್ ನಂ: 03, ದರ್ಗಾಮೊಹಲ್ಲಾ ಚಿಕ್ಕಬಳ್ಳಾಪುರ ಟೌನ್ ರವರು   ಠಾಣೆಗೆ ಹಾಜರಾಗಿ ನೀಡಿದ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತನಗೆ ಮೂವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಆಗಿದ್ದು,1ನೇ ಮಗನಾದ ವಸೀಮ್, 2ನೇ ಮಗಳು ಫಿಜಾ ಮತ್ತು 3ನೇ ಮಗ ರಿಹಾನ್, 15 ವರ್ಷ, ಆಗಿರುತ್ತಾರೆ. ದಿನಾಂಕ:01.07.2021 ರಂದು ನಮ್ಮ ಪಕ್ಕದ ಮನೆಯ ವಾಸಿಯಾದ ಅಬೂಬಕರ್ ಸಿದ್ದೀಕ್ ರವರು ತನ್ನ ಮಗನಾದ ರಿಹಾನ್ ರವರನ್ನು ಬ್ಯಾಗ್ ಮಾರಾಟ ಮಾಡುವುದಕ್ಕಾಗಿ ಚಿಕ್ಕಬಳ್ಳಾಪುರದ ಪ್ಲವರ್ ಮಾರ್ಕೆಟ್ ಗೆ ಕರೆದುಕೊಂಡು ಹೋಗಿದ್ದು, ಬೆಳಿಗ್ಗೆ ಸುಮಾರು 8.00 ಘಂಟೆ ಸಮಯದಲ್ಲಿ ಅಬೂಬಕರ್ ಸಿದ್ದೀಕ್ ರವರು ತನ್ನ ದೊಡ್ಡ ಮಗನಾದ ವಸೀಮ್ ರವರಿಗೆ ಪೋನ್ ಮಾಡಿ ಕೆವಿ ಕ್ಯಾಂಪಸ್ ರಸ್ತೆಯ ಪ್ಲವರ್ ಮಾರ್ಕೆಟ್ ಬಳಿ ನಮ್ಮ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆಸಿದ್ದು, ರಿಹಾನ್ ರವರಿಗೆ ಎಡಗೈ ಮುರಿದು ಹೋಗಿರುತ್ತದೆ. ಹಾಗೂ ತುಟಿ ಹಾಗೂ ಎಡಗಾಲು ತರಚಿಕೊಂಡು ಹೋಗಿರುತ್ತದೆ. ತಾನು ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇನೆಂದು ತಿಳಿಸಿದ್ದು, ಕೂಡಲೇ ವಸೀಮ್ ತನಗೆ ವಿಚಾರವನ್ನು ತಿಳಿಸಿದ್ದು, ತಾನು ಕ್ಯಾಂಪಸ್ ಬಳಿಯ ಸ್ಥಳಕ್ಕೆ ಹೋದಾಗ ಅಪಘಾತವಾಗಿರುವುದು ನಿಜವಾಗಿದ್ದು ಅಪಘಾತವುಂಟು ಮಾಡಿದ ಕಾರ್  ನಂಬರ್ ಕೆಎ-53-ಜೆಡ್-3922 ಸ್ವಿಪ್ಟ್ ಡಿಜೈರ್ ಕಾರ್ ರಸ್ತೆಯ ಪಕ್ಕ ಇದ್ದು ಹೀರೋ ಹೋಂಡಾ ದ್ವಿಚಕ್ರ ವಾಹನ ನಂ ಕೆಎ-40-ಯು-1860 ಸ್ಥಳದಲ್ಲೇ ಬಿದ್ದಿತ್ತು. ನಂತರ ತಾನು ಜೀವನ್ ಆಸ್ಪತ್ರೆಯ ಬಳಿ ಬಂದು ತನ್ನ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವಾಗ ಮಾರ್ಗ ಮಧ್ಯೆ ಹೆಬ್ಬಾಳ ಸಮೀಪ ತನ್ನ ಮಗ ರಿಹಾನ್ ರವರು ಮೃತಪಟ್ಟಿದ್ದು ನಂತರ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಬಂದು ಶವಾಗಾರದಲ್ಲಿ ಇಟ್ಟಿರುತ್ತೇವೆ. ಅಬೂಬಕರ್ ಸಿದ್ದೀಕ್ ರವರನ್ನು ವಿಚಾರ ಮಾಡಿದಾಗ ಆತನ ಬಾಬತ್ತು  ಹೀರೋ ಹೋಂಡಾ ದ್ವಿಚಕ್ರ ವಾಹನ ನಂ ಕೆಎ-40-ಯು-1860 ರಲ್ಲಿ ರಿಹಾನ್ ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಪ್ಲವರ್ ಮಾರ್ಕೆಟ್ ಕಡೆಗೆ ಹೋಗುತ್ತಿದ್ದಾಗ ಬೆಳಿಗ್ಗೆ 7.45 ಘಂಟೆ ಸಮಯದಲ್ಲಿ ಹಿಂಬದಿಯಿಂದ ಬಂದಂತಹ ನಂಬರ್ ಕೆಎ-53-ಜಡ್-3922 ಸ್ವಿಪ್ಟ್ ಡಿಜೈರ್ ಕಾರ್ ನ ಚಾಲಕನು ಕಾರನ್ನು ಅತಿವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ತನ್ನ ಮಗ ಹಾಗೂ ಅಬೂಬಕರ್ ಸಿದ್ದಿಕ್ ರವರು ಕೆಳಕ್ಕೆ ಬಿದ್ದುಹೋಗಿದ್ದು ಅಬೂಬಕರ್ ಸಿದ್ದಿಕ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ರಿಹಾನ್ ರವರಿಗೆ ಗಾಯಗಳಾಗಿರುತ್ತವೆಂದು ತಿಳಿದು ಬಂದಿರುತ್ತೆ. ತನ್ನ ಮಗನ ಸಾವಿಗೆ ಕಾರಣನಾಗಿರುವ ಕೆಎ-53-ಜಡ್-3922 ಸ್ವಿಪ್ಟ್ ಡಿಜೈರ್ ಕಾರ್ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 34/2021 ಕಲಂ. 279,337 ಐಪಿಸಿ :-

     ದಿನಾಂಕ:01/07/2021 ರಂದು ಮದ್ಯಾಹ್ನ 13-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಶ್ರೀನಿವಾಸ ಬಿನ್ ಮಂಜುನಾಥ, 56 ವರ್ಷ, ನಾಯಕ ಜನಾಂಗ, ಕಂಟ್ರಾಕ್ಟರ್, ವಾಸ: ವೇಮಣ್ಣ ಲೇಔಟ್, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಪೋಸ್ಟ್, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 10 ವರ್ಷಗಳಿಂದ ಖಾಸಗೀ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಈಗಿರುವಲ್ಲಿ ದಿನಾಂಕ:01/07/2021 ರಂದು ಬೆಳಿಗ್ಗೆ 11-45 ಗಂಟೆಯ ಸಮಯದಲ್ಲಿ ಅಗಲಗುರ್ಕಿ ಗೇಟ್ ನಿಂದ ಸುಮಾರು 100 ಮೀಟರ್ ಬೆಂಗಳೂರು ಕಡೆಗೆ ಲಾಯರ್ ಪರಮೇಶ್ವರ ರವರ ಜಮೀನಿನಲ್ಲಿ ವಿದ್ಯುತ್ ತಂತಿಯ ಲೈನ್ ಕೆಲಸ ಮಾಡುತ್ತಿದ್ದಾಗ ರಸ್ತೆಯಲ್ಲಿ ಜೋರಾದ ಶಬ್ದ ಕೇಳಿ ರಸ್ತೆ ಕಡೆಗೆ ಹೋಡಿದಾಗ ಒಂದು ಕಾರು ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆಸಿಕೊಂಡು ಮೂರು ಪಲ್ಟಿ ಹೊಡೆದು ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದ್ದು, ಪಕ್ಕದಲ್ಲಿಯೇ ಕಾರಿನ ಮುಂಭಾಗ ಒಂದು ದ್ವಿಚಕ್ರ ವಾಹನ ಹಾದುಹೋಯಿತು. ನಾವು ಹತ್ತಿರ ಹೋಗಿದ್ದು, ಕಾರ್ ನಂ: ಕೆ.ಎ-51-ಎಂ.ಇ-9339 ಆಗಿತ್ತು. ಕಾರಿನಲ್ಲಿದ್ದ ವ್ಯಕ್ತಿಗೆ ಹಣೆಯ ಬಳಿ ಮತ್ತು ಕೈ-ಕಾಲಿಗೆ ತರಚಿದ ಗಾಯವಾಗಿತ್ತು. ನಾವು ಆತನನ್ನು ವಿಚಾರಿಸಿದಾಗ ಯತಿರಾಜ್ ಚಲನಚಿತ್ರ ನಟರು ಎಂದು ತಿಳಿಸಿದರು. ಇವರು ಕಾರಿನಲ್ಲಿ ಒಬ್ಬರೇ ಕುಳಿತಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು, ಈತನು ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗಲು ತನ್ನ ಕಾರ್ ನಂ:ಕೆ.ಎ-51-ಎಂ.ಇ-9339 ರಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಅಡ್ಡಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದು, ಆತನ ಅತಿವೇಗದ ಚಾಲನೆಯಿಂದ ಕಾರು ನಿಯಂತ್ರಣಕ್ಕೆ ಸಿಗದೇ ಪಲ್ಟಿ ಹೊಡೆದು ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿರುತ್ತದೆ. ಈ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತದೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 296/2021 ಕಲಂ. 341,447,307,504,506 ರೆ/ವಿ 34 ಐಪಿಸಿ :-

     ದಿನಾಂಕ: 30/06/2021 ರಂದು ರಾತ್ರಿ ಠಾಣೆಯ WASI ಪದ್ಮ ರವರು ಹೊಸಕೋಟೆ ನಗರದ ಶ್ರೀನಿವಾಸ ಆಸ್ಪತ್ರೆಯಲ್ಲಿ ಗಾಯಾಳು ಕೃಷ್ಣಾರೆಡ್ಡಿ.ಕೆ.ಆರ್ ಬಿನ್ ಲೇಟ್ ರಾಮರೆಡ್ಡಿ, 66 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 11.30 ಗಂಟೆಗೆ ಠಾಣೆಗೆ ಬಂದು ಹಾಜರುಪಡಿಸಿದ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ದಾಯಾಧಿಗಳಾದ ಪ್ರಭಾಕರರೆಡ್ಡಿ, ಕೋದಂಡರಾಮರೆಡ್ಡಿ ಹಾಗೂ ತಮಗೆ ಜಮೀನಿನ ವಿಚಾರದಲ್ಲಿ ಹಳೇ ದ್ವೇಷವಿದ್ದು, ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ನಡೆದ ಗಲಾಟೆಯ ಸಲುವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಹೀಗಿರುವಾಗ ದಿನಾಂಕ: 29/06/2021 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ತಾನು ಎಂದಿನಂತೆ ತೋಟದ ಬಳಿ ಇರುವ ಕೋಳಿ ಫಾರಂ ಬಳಿ ಮಲಗಲು ಹೋಗಿದ್ದು, ಎರಡೂ ಕೋಳಿ ಫಾರಂಗಳ ಮದ್ಯೆ ಇರುವ ಖಾಲಿ ಜಾಗದಲ್ಲಿ ನಿಂತುಕೊಂಡು ಕೋಳಿಗಳನ್ನು ನೋಡಿಕೊಂಡು ಆ ಮೇಲೆ ಮಲಗೋಣವೆಂದು ವೀಕ್ಷಣೆ ಮಾಡುತ್ತಿದ್ದೆ. ಇದೇ ವೇಳಗೆ ಕೋದಂಡರಾಮರೆಡ್ಡಿ ಬಿನ್ ಲೇಟ್ ಬೈರೆಡ್ಡಿ, ಪ್ರಭಾಕರರೆಡ್ಡಿ ಬಿನ್ ಲೇಟ್ ಬೈರೆಡ್ಡಿ ಮತ್ತು ಅಭಿಲಾಷ ಬಿನ್ ಪ್ರಭಾಕರರೆಡ್ಡಿ ರವರು ತನ್ನ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ, ತನ್ನನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು “ನೀನು ನಮ್ಮಗಳ ಮೇಲೆ ಹಾಕಿರುವ ಕೇಸಿನಲ್ಲಿ ಪೊಲೀಸ್ ಠಾಣೆಯಲ್ಲಿ ವಾಪಸ್ ಪಡೆದುಕೋ” ಎಂದು ಹೇಳಿದ್ದು, ಅದಕ್ಕೆ ತಾನು ನ್ಯಾಯಾಲಯದಲ್ಲಯೇ ಇತ್ಯರ್ಥವಾಗಲಿ ಎಂದು ಹೇಳುತ್ತಿದ್ದಂತೆ ಮೇಲ್ಕಂಡ ಮೂರು ಜನರು ತೆಲಗಿನಲ್ಲಿ “ಈ ಲೋಫರ್ ನಾ ಕೊಡುಕು ಚೆಪ್ಪಿನಾ ಮಾಟ ವಿನಲೆ, ಕೊಸವು ಮಂದು ತೀಯ್ಯರಾ ಇನ್ನೀ ನೋಟಿಲೋಕಿ ಪೂಯ್ಯಿರಾ” ಎಂದು ಹೇಳುತ್ತಾ ಕೋದಂಡರಾಮರೆಡ್ಡಿ ಮತ್ತು ಅಭಿಲಾಷ ರವರು ತನ್ನನ್ನು ಬಿಗಿಯಾಗಿ ಹಿಡಿದುಕೊಂಡು ಕೆಳಕ್ಕೆ ತಳ್ಳಿದರು. ಪ್ರಭಾಕರರೆಡ್ಡಿ ರವರು ತಂದಿದ್ದ ಯಾವುದೋ ಹುಲ್ಲಿಗೆ ಹೊಡೆಯುವ ಔಷದಿಯನ್ನು ತನ್ನ ಬಾಯಿಗೆ ಸುರಿದು ಕೊಲೆ ಮಾಡಲು ಯತ್ನಿಸಿದರು. ತಾನು ಒರಳಾಡುತ್ತಿದ್ದಾಗ ನಿನ್ನ ಕುಟುಂಭದವರನ್ನು ಇದೇ ರೀತಿ ಸಾಯಿಸುತ್ತೇವೆಂದು ಪ್ರಾಣಬೆದರಿಕೆ ಹಾಕಿಕೊಂಡು ಹೊರಟು ಹೋದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ತನ್ನನ್ನು ಈ ದಿನ ದಿನಾಂಕ: 30/06/2021 ರಂದು ಬೆಳಿಗ್ಗೆ 08.00 ಗಂಟೆಗೆ ತಮ್ಮ ಗ್ರಾಮದ ಸತೀಶ್ ಬಿನ್ ಈರಪ್ಪರೆಡ್ಡಿ ರವರು ಕರೆ ತಂದು ಪ್ರಥಮ ಚಿಕಿತ್ಸೆ ಪಡೆಸಿದರೆಂತ ತಿಳಿಯಿತು. ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಆದ ನಂತರ ತನಗೆ ಪ್ರಜ್ಞೆ ಬಂದಿದ್ದು ಪರೀಕ್ಷಿಸಿದ ವೈಧ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ನಗರದ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಆದ್ದರಿಂದ ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿರುವ, ತನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 121/2021 ಕಲಂ. 341 ಐಪಿಸಿ :-

     ಪಿರ್ಯಾದಿದಾರರಾದ ಶ್ರೀರಾಮರೆಡ್ಡಿ ಬಿನ್ ಲೇಟ್ ಪಟೇಲ್ ರಾಮರೆಡ್ಡಿ, 55 ವರ್ಷ, ವಕ್ಕಲಿಗರು, ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರು, ಗಂಡ್ರಾಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:  ನಾನು ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರಾಗಿರುತ್ತೇನೆ. ಕೃಷಿ ಉತ್ಪನ್ನ ಸಮಿತಿಯ ಟಮೋಟ ಮಾರುಕಟ್ಟೆಯಲ್ಲಿ ಆರ್ ವೆಂಕಟಾಚಲಪತಿ ಲೈಸೆನ್ಸ್ ನಂ 384 ರಂತೆ ಪರವಾನಿಗೆಯನ್ನು ಹೊಂದಿರುತ್ತಾರೆ. ಹೀಗಿರುವಾಗ ದಿನಾಂಕ 29/06/2021 ರಂದು ರಾತ್ರಿ ಸುಮಾರು 11-45 ಸಮಯದಲ್ಲಿ  ವೆಂಕಟಾಚಲಪತಿರವರ ಮಗನಾದ ದಿಲೀಪ್.ವಿ ರವರು ಟಮೋಟ ಮಾರುಕಟ್ಟೆಗೆ ಹೋಗುವ ರಸ್ತೆಯಾದ ಊಲವಾಡಿ ರಸ್ತೆಯ ಇಂದಿರಾ ಕ್ಯಾಂಟಿನ್ ಮುಂಭಾಗದ ರಸ್ತೆಯಲ್ಲಿ  ಎಪಿ-39 ಟಿಸಿ-0009 ಕ್ಯಾಂಟರ್ ವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ ಟಮೋಟ ಮಾರುಕಟ್ಟೆಗೆ ರೈತರ ಟಮೋಟ ವಾಹನಗಳು ಹೋಗದಂತೆ ಮಾಡಿದ್ದು ನಂತರ ಟಮೋಟ ಮಾರುಕಟ್ಟೆಗೆ ಬಂದ ರೈತರಾದ ರಾಜಕುಮಾರ್ ಬಿನ್ ಬೈರೆಡ್ಡಿ ಗುಡಾರ್ಲಹಳ್ಳಿ ಚಿಂತಾಮಣಿ ತಾಲ್ಲೂಕು, ಮಂಜುನಾಥ ಗೋಪಸಂದ್ರ ಹಾಗೂ ಕೇಶವರೆಡ್ಡಿ ಬಿನ್ ಈರಪ್ಪರೆಡ್ಡಿ ತುಳುವನೂರು ರವರು ಹೋಗಿ ಕೇಳಿದಾಗ ಅವರನ್ನು ಸಹ ಅಡ್ಡಗಟ್ಟಿ ದೌರ್ಜನ್ಯ ಮಾಡಿ ಮಾರುಕಟ್ಟೆ ಒಳಗೆ ಹೋಗದಂತೆ ತೊಂದರೆ ನೀಡಿರುತ್ತಾನೆ. ನಂತರ ಬೆಳಗಿನ ಜಾವ 4-00 ಗಂಟೆಗೆ ನಾನು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅದ್ಯಕ್ಷರಾದ ಕೃಷ್ಣಮೂರ್ತಿ ಬಿನ್ ಲೇಟ್ ಮುನಿಶಾಮಪ್ಪ, ಕುರುಟಹಳ್ಳಿ ಗ್ರಾಮ ರವರು ಹೋಗಿ ರೈತರಿಗೆ ಅಡ್ಡ ಹಾಕಿದ್ದ ಕ್ಯಾಂಟರ್ ವಾಹನ ಹಾಗೂ ದಿಲೀಪ್ ರವರನ್ನು ಕಳುಹಿಸಿರುತ್ತೇವೆ. ನಾವು ಸರ್ವ ಸದಸ್ಯರ ಸಭೆಯಲ್ಲಿ ತಿರ್ಮಾನ ಮಾಡಿಕೊಂಡು ಕೇಸು ನೀಡುತ್ತಿರುತ್ತೇವೆ. ಆದ್ದರಿಂದ ಕೃಷಿ ಉತ್ಪನ್ನ ಸಮಿಯ ಟಮೋಟ ಮಾರುಕಟ್ಟೆಗೆ ರೈತರು ಹೋಗದಂತೆ ರಸ್ತೆಗೆ ಅಡ್ಡಲಾಗಿ ಕ್ಯಾಂಟರ್ ವಾಹನವನ್ನು ನಿಲ್ಲಿಸಿ ಕೇಳಲು ಹೋದ ರೈತರಿಗೆ ದೌರ್ಜನ್ಯ ಮಾಡಿ ತೊಂದರೆ ನೀಡಿರುವ ಮೇಲ್ಕಂಡ ದಿಲೀಪ್ ಬಿನ್ ವೆಂಕಟಾಚಲಪತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 78/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:01/07/2021 ರಂದು ಮಧ್ಯಾಹ್ನ 12-45 ಗಂಟೆಗೆ  ಪಿ,ಎಸ್,ಐ ರವರು ಮಾಲು ಪಂಚನಾಮೆ,ಆಸಾಮಿಯೊಂದಿಗೆ ಠಾಣೆಗೆ  ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,   ದಿನಾಂಕ:01/07/2021 ರಂದು ಬೆಳಗ್ಗೆ 10-30 ಗಂಟೆಯ ಸಮಯದಲ್ಲಿ ತಾನು ಕೆಎ40 ಜಿ-60 ಸರ್ಕಾರಿ ಜೀಫನಲ್ಲಿ  ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 186 ನರಸಿಂಹಯ್ಯ ಹಾಗೂ ಜೀಫ ಚಾಲಕರಾಗಿ ಎ.ಪಿ.ಸಿ 190 ಬೈರಪ್ಪ ರವರೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು  ಬಶೆಟ್ಟಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ  ಭಾಗವಹಿಸಿ ಕಾರ್ಯಕ್ರಮ ಮುಗಿದ  ನಂತರ ಬೆಳಗ್ಗೆ ಸುಮಾರು 11-15 ಗಂಟೆಗೆ ದಿಬ್ಬೂರಹಳ್ಳಿ ಸರ್ಕಲ್ ನ ಬಳಿ ಬಂದಾಗ  ನನಗೆ ದಿಬ್ಬೂರಹಳ್ಳಿ ಸಂತೆ ಮೈದಾನದ ಬಳಿ  ಯಾರೋ ಒಬ್ಬ ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಬೊಂಡಾ ಮಾರಾಟ ಮಾಡಿಕೊಂಡು ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ಪಂಚರನ್ನು ಬರಮಾಡಿಕೊಂಡು  ಸರ್ಕಲ್ ನಿಂದ ತಿಮ್ಮಸಂದ್ರ ರಸ್ತೆಯ ಮೂಲಕ ಸಂತೆ ಮೈದಾನ ಬಳಿ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯೆಕ್ತಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಬೊಂಡಾ ಮಾರಾಟ ಮಾಡುತ್ತಾ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲಿಸರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಅಲ್ಲಿಯೇ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸ ಕೇಳಲಾಗಿ  ಲಕ್ಷ್ಮೀ ನಾರಾಯಣಪ್ಪ ಬಿನ್ ಲೇಟ್ ನಾರೆಪ್ಪ, 54 ವರ್ಷ, ಬೆಸ್ತರು, ವ್ಯವಸಾಯ ಮತ್ತು ಚಿಲ್ಲರೆ ಅಂಗಡಿಯ ವ್ಯಾಪಾರ ವಾಸ: ಸಂತೇ ಮೈದಾನದ ಬಳಿ, ದಿಬ್ಬೂರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೊನ್ ನಂಬರ್:7899829153 ಎಂದು ತಿಳಿಸಿದ್ದು  ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90ಎಂ,ಎಲ್ ನ original choice deluxe whisky ಯ 12 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1080 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 421.56ರೂ ಆಗಿರುತ್ತೆ ನಂತರ ಅಲ್ಲಿಯೇ ಇದ್ದ  90 ML ನ mc dowels ನ 04 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 360 ಎಂ,ಎಲ್ ಆಗಿರುತ್ತೆ ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 81.91 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 327.64 ರೂ ಬೆಲೆ ಇರುತ್ತೆ ಹಾಗೂ 180 ML ನ OLD TAVERN  WHISKY ಯ 3 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳು ಒಟ್ಟು ಮೌಲ್ಯ 540 ಎಂ,ಎಲ್  ಆಗಿದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 86.75 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 260.25 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳ ಒಟ್ಟು ಮೌಲ್ಯ 1980 MLಆಗಿದ್ದು ಅವುಗಳ ಒಟ್ಟು ಬೆಲೆ 1009.45 ರೂಗಳು ಇರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  2 ಖಾಲಿ 90 ಎಂ ಲ್ ನ original choice deluxe whisky ಯ  ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮತ್ತು ಒಂದು ಖಾಲಿ ವಾಟರ್ ಬಾಟೆಲ್ ನ್ನು ಬೆಳಗ್ಗೆ  11-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆ ಹಾಗೂ ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳ ವಶಕ್ಕೆ ನೀಡಿ ಮುಂದಿನ ಕ್ರಮ ನೀಡಿದ ವರದಿಯನ್ನು ಪಡೆದು ಠಾಣಾ ಮೊ.,ಸಂಖ್ಯೆ:78/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 144/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 27/06/2021 ರಂದು ಪಿರ್ಯಾದಿದಾರರಾದ ಶ್ರೀ. ಕೆ.ಸಿ.ವಿಜಯ್ ಕುಮಾರ್, ಪಿ.ಎಸ್.ಐ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆದ ಕೆಂಪೇಗೌಡ ಜಯಂತಿ ಬಂದೋಬಸ್ತ್ ಕರ್ತವ್ಯವನ್ನು ಮುಗಿಸಿಕೊಂಡು ವಾಪಸ್ ಗೌರಿಬಿದನೂರಿಗೆ ಬರಲು ಮುದುಗಾನಕುಂಟೆ ಕ್ರಾಸ್ ಬಳಿ  ಮದ್ಯಾನ್ಹ 2-15 ಗಂಟೆಯಲ್ಲಿ ಬರುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ವೆಳಪಿ ಗ್ರಾಮದಲ್ಲಿ, ಮಂಜುನಾಥ ಬಿನ್ ಕೃಷ್ಣಪ್ಪ  ರವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯಾದ,ಪಿಸಿ-512, ರಾಜಶೇಖರ , ಸಿ.ಪಿ.ಸಿ-281 ಗುರುಸ್ವಾಮಿ, ಮತ್ತು ಪಿ.ಸಿ-426 ಲೋಹಿತ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾನ್ಹ 3-00 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಮಂಜುನಾಥ ಬಿನ್ ಕೃಷ್ಣಪ್ಪ, 22ವರ್ಷ, ನಾಯಕರು, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ ವೆಳಪಿ ಗ್ರಾಮ, ನಗರಗೆರೆ ಹೋಬಳಿ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 15  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 350 ಎಂ.ಎಲ್. ಆಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು, ಇವುಗಳ ಒಟ್ಟು ಬೆಲೆ 526.95 ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 3-00 ಗಂಟೆಯಿಂದ 4-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 15 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ  4-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.284/2021 ರಂತೆ ದಾಖಲಿಸಿಕೊಂಡಿರುತ್ತೆ, ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 145/2021 ಕಲಂ. 87 ಕೆ.ಪಿ. ಆಕ್ಟ್‌ :-

     ದಿನಾಂಕ:30.06.2021 ರಂದು ಸಂಜೆ 17-00 ಗಂಟೆಗೆ ಗೌರೀಬಿದನೂರು ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಪಿ.ಸಿ-129 ಶ್ರೀ ರಾಮಚಂದ್ರ ರವರು ಘನ ನ್ಯಾಯಾಲಯದಿಂದ ತಂದು ಹಾಜರುಪಡಿಸಿದ್ದರ ಅನುಮತಿ ಆದೇಶದ ಸಾರಾಂಶವೇನೆಂದರೆ, ದಿನಾಂಕ 31/05/2021 ರಂದು ಸಂಜೆ 19-00 ಗಂಟೆ ಸಮಯದಲ್ಲಿ ಗೌರೀಬಿದನೂರು ಪೊಲೀಸ್ ವೃತ್ತ ನೀರಿಕ಼ಕರಾದ ಎಸ್.ಡಿ.ಶಶೀಧರ್ ಸಿ.ಪಿ.ಐ ರವರು ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಹಾಜರಾಗಿ ಆಸಾಮಿಗಳು, ಮಾಲುಗಳು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:31/05/2021 ರಂದು ಸಂಜೆ 5-00 ಗಂಟೆಯಲ್ಲಿ ನಾನು ವೃತ್ತ ಕಛೇರಿಯಲ್ಲಿದ್ದಾಗ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಡಮಲೋಡು ಗ್ರಾಮದ ಬಳಿ ಇರುವ ಮರಳೂರು ಕೆರೆ ಕಾಲುವೆ ಸಮೀಪ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿ.ಪಿ.ಸಿ-512 ರಾಜಶೇಖರ, ಸಿ.ಪಿ.ಸಿ-518 ಆನಂದ, ಸಿ.ಪಿ.ಸಿ-520 ಶ್ರೀನಾಥ ಮತ್ತು ಚಾಲಕ ಎ.ಪಿ.ಸಿ-133 ಹೇಮಂತ ರವರೊಂದಿಗೆ ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-1222 ರಲ್ಲಿ ಉಡುಮಲೋಡು ಗ್ರಾಮಕ್ಕೆ ಸಂಜೆ 5-30  ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಸರ್ಕಾರಿ ಜಿಫ್ ಸಂಖ್ಯೆ: ಕೆ.ಎ-40 ಜಿ-1222 ರಲ್ಲಿ ಹೊರಟು ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮರಳೂರು ಕೆರೆ ಕಾಲುವೆ ಸಮೀಪ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಮರಳೂರು ಕೆರೆ ಅಂಗಳದ ಹೊಂಗೆ ಮರದ ಕೆಳಗೆ ವೃತ್ತಾಕಾರವಾಗಿ ಕುಳಿತುಕೊಂಡು ಆ ಪೈಕಿ ಒಬ್ಬ ಅಂದರ್ ಗೆ 100/-ರೂ ಇನ್ನೋಬ್ಬ ಬಾಹರ್ ಗೆ 100/-ರೂ ಎಂದು ಜೋರಾಗಿ ಕೂಗುತ್ತಾ ಉಳಿದವರು ಹಣವನ್ನು ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂದಿಯವರು ಸದರಿಯವರನ್ನು ಸುತ್ತುವರೆದು  ಮೇಲೆ ಹೇಳದಂತೆ ಸೂಚಿಸಿದರು, ಕೆಲವರು ಸ್ಥಳದಿಂದ ಓಡಿಹೋದರು ಸ್ಥಳದಲ್ಲಿ ವಶಕ್ಕೆ ಪಡೆದವರ ಹೆಸರು ವಿಳಾಸವನ್ನು ಕೆಳಲಾಗಿ 1) ರಾಜು ಬಿನ್ ನಾಗರಾಜು, 35 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಉಪ್ಪಾರ ಕಾಲೋನಿ, ಗೌರೀಬಿದನೂರು ಟೌನ್,  2) ಕೃಷ್ಣ ಬಿನ್ ವಸಂತಪ್ಪ, 38 ವರ್ಷ, ಉಪ್ಪಾರ ಜನಾಂಗ, ಅಮಾಲಿ ಕೆಲಸ ವಾಸ , ಉಪ್ಪಾರ ಕಾಲೋನಿ, ಗೌರೀಬಿದನೂರು ಟೌನ್, 3) ರಾಮಕೃಷ್ಣಪ್ಪ ಬಿನ್ ವೆಂಕಟರವಣ, 43 ವರ್ಷ, ಬಲಿಜ ಜನಾಂಗ, ಚಾಲಕ ವೃತ್ತಿ, ಉಪ್ಪಾರ ಕಾಲೋನಿ, ಗೌರೀಬಿದನೂರು ಟೌನ್  4) ಗಂಗಾಧರಪ್ಪ ಬಿನ್ ಲೇಟ್ ಗಂಗಪ್ಪ, 45 ವರ್ಷ, ಉಪ್ಪಾರ ಜನಾಂಗ, ಅಮಾಲಿ ಕೆಲಸ ವಾಸ , ಉಪ್ಪಾರ ಕಾಲೋನಿ, ಗೌರೀಬಿದನೂರು ಟೌನ್, 5) ಗೋವಿಂದಪ್ಪ ಬಿನ್ ಲೇಟ್ ಅಂಜಿನಪ್ಪ, 45 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಉಪ್ಪಾರ ಕಾಲೋನಿ, ಗೌರೀಬಿದನೂರು ಟೌನ್, 6) ಅಶ್ವತ್ಥನಾರಾಯಣ ಬಿನ್ ಲೇಟ್ ನರಸಿಂಹಪ್ಪ, 54 ವರ್ಷ, ಉಪ್ಪಾರ ಜನಾಂಗ, ಲೈನ್ ಮ್ಯಾನ್ ಕೆಲಸ, ವಾಸ ಟಿಪ್ಪು ನಗರ ಗೌರೀಬಿದನೂರು ಟೌನ್, ಎಂದು ತಿಳಿಸಿದ್ದು, ನಂತರ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 1) ಕೆ.ಎ-40, ಹೆಚ್-4744 ಹೀರೋ ಹೋಂಡಾ ಸ್ಪ್ಲೆಂಡರ್  2) ಕೆ.ಎ-40, ಇ.ಇ-1736 ಎಕ್ಸ್.ಎಲ್-100 ಹೆವಿಡ್ಯೂಟಿ, 3) ನಂಬರ್ ಇಲ್ಲದ MBLHAR 074HHL 22056 ಹೀರೋ ಸ್ಪ್ಲೆಂಡರ್ ದ್ವಿ ಚಕ್ರ ವಾಹನ ಮತ್ತು 4) ಕೆ.ಎ-06, ಎಕ್ಸ್-5422 ಎಕ್ಸ್.ಎಲ್. ಹೆವಿಡ್ಯೂಟಿ  ದ್ವಿ ಚಕ್ರವಾಹನಗಳನ್ನು  ಸ್ಥಳದಲ್ಲಿ ನಿಲ್ಲಿಸಿರುತ್ತಾರೆ. ಹಾಗೂ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣಕ್ಕಿಟ್ಟಿದ್ದ 3,160/- ರೂಗಳು ಮತ್ತು ಒಂದು ನ್ಯೂಸ್ ಪೇಪರ್ ಅನ್ನು ಹಾಗೂ ಸ್ಥಳದಲ್ಲಿದ್ದ ವಾಹನಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ, ಪಂಚನಾಮೆಯನ್ನು ಸಂಜೆ 17-30 ಗಂಟೆಯಿಂದ 18-30 ಗಂಟೆಯವರೆಗೆ ಬರೆದು ನಿರ್ವಹಿಸಿರುತ್ತೆ. ನಂತರ ಸಂಜೆ 18-45 ಗಂಟೆಗೆ ಠಾಣೆಗೆ ವಾಪಸ್ ಬಂದು ಮೇಲ್ಕಂಡ ಮಾಲುಗಳು ಮತ್ತು ಆಸಾಮಿಗಳೊಂದಿಗೆ ವರದಿ ಮತ್ತು ಅಸಲು ಪಂಚನಾಮೆಯನ್ನು ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್ ನಂ.255/2021 ರಂತೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣಾ ಮೊ.ಸಂ.145/2021 ಕಲಂ.87 ಕೆ.ಪಿ.ಆಕ್ಟ್  ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 146/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:30.06.2021 ರಂದು ಸಂಜೆ 18-40 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಪಿ.ಸಿ-129 ರಾಮಚಂದ್ರ ರವರು ಘನ ನ್ಯಾಯಾಲಯದಿಂದ ತಂದು ಹಾಜರುಪಡಿಸಿದ ಅನುಮತಿ ಆದೇಶದ ಸಾರಾಂಶವೇನೆಂದರೆ, ದಿನಾಂಕ: 18/06/2021 ರಂದು ಬೆಳಿಗ್ಗೆ 11-30 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಮೋಹನ್ ಎನ್ ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ, ದಿನಾಂಕ: 18/06/2021 ರಂದು  ಬೆಳಿಗ್ಗೆ 9-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೊರ ಠಾಣೆ ವ್ಯಾಪ್ತಿಯ ಹಂಪಸಂದ್ರ ಗ್ರಾಮದಲ್ಲಿ, ಸುರೇಶ ಬಿನ್ ವೆಂಕಟಶಾಮಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೊಸೂರು ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಪಿ.ಸಿ-520 ಶ್ರೀನಾಥ, ಪಿ.ಸಿ-512 ರಾಜಶೇಖರ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಬೆಳಿಗ್ಗೆ 10-00 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಮತ್ತೊಬ್ಬ ಆಸಾಮಿ ಆ ಇಬ್ಬರು ವ್ಯಕ್ತಿಗಳಿಗೆ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಗಳನ್ನು ಹಿಡಿದುಕೊಂಡು ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಸುರೇಶ ಬಿನ್ ವೆಂಕಟಶಾಮಪ್ಪ, 36 ವರ್ಷ, ಆದಿ ಕರ್ನಾಟಕ, ಜನಾಂಗ, ಕಂಬಿ ಕೆಲಸ ವಾಸ ಹಂಪಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂದು ಮದ್ಯಪಾನ ಮಾಡಲು ಆ ಇಬ್ಬರು ವ್ಯಕ್ತಿಗಳಿಗೆ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು ಸುರೇಶ ಬಿನ್ ನರಸಿಂಹಪ್ಪ, 30 ವರ್ಷ, ಆದಿ ಕರ್ನಾಟಕ, ಜನಾಂಗ, ಕಂಬಿ ಕೆಲಸ ವಾಸ, ಹಂಪಸಂದ್ರ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ ಬೆಳಿಗ್ಗೆ  10-00 ಗಂಟೆಯಿಂದ 11-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಬೆಳಿಗ್ಗೆ 11-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.271/2021 ರಂತೆ ಎ.ಎಸ್.ಐ ಬಾಬುಖಾನ್ ರವರು  ದಾಖಲಿಸಿಕೊಂಡು ಘನ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿಗಾಗಿ ನಿವೇದಿಸಿಕೊಂಡಿದ್ದು ಘನ ನ್ಯಾಯಾಲಯದ ಅನುಮತಿ ಆದೇಶದ ಮೇರೆಗೆ  ಠಾಣಾ ಮೊ.ಸಂ.146/2021 ಕಲಂ. 15(ಎ), 32(3) ಕೆ.ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 140/2021 ಕಲಂ. 323,324,447,504 ರೆ/ವಿ 34 ಐಪಿಸಿ :-

     ದಿನಾಂಕ 30/06/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ  ಗಾಯಾಳು ಬಸವರಾಜು ಬಿನ್ ಗಂಗಪ್ಪ, 49 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ವಾಸ ಕೊಂಡವಾಬನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ನೀಡಿದ  ಹೇಳಿಕೆ ದೂರಿನ ಸಾರಾಂಶವೇನೆಂದರೆ ತಾನು ಚಾಲಕ ವೃತ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತನಗೆ ಕೊಂಡವಾನಹಳ್ಳಿ ಗ್ರಾಮದ ಸರ್ವೆ ನಂಬರ್ 16 ರಲ್ಲಿ 8 ಎಕೆರೆ 02 ಗುಂಟೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಮೂರು ಎಕೆರೆ ಎಕರೆ ಜಮೀನಿನಲ್ಲಿ ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 30/06/2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ತಾನು ಉಳುಮೆ ಮಾಡುತ್ತಿದ್ದ ಜಮೀನಿನಲ್ಲಿ ತನ್ನ ದೊಡ್ಡಪ್ಪನ ಮಗನಾದ ನಾಗೇಂದ್ರ ಕುಮಾರ್ ಬಿನ್ ಪಿಳ್ಳದೊಡ್ಡಪ್ಪ,58 ವರ್ಷ, ಅವರ  ಹೆಂಡತಿ  ಭಾಗ್ಯಮ್ಮ, 50 ವರ್ಷ, ಅವರ ಮಗ ಭರತ್, 28 ವರ್ಷ ರವರು ಉಳುಮೆ ಮಾಡಿ ಬಿತ್ತನೆ ಮಾಡುತ್ತಿದ್ದಾಗ ತಾನು ನೋಡಿ ತಾನು ಮತ್ತು ತನ್ನ ಹೆಂಡತಿ ಮಾಣಿಕ್ಯ,40 ವರ್ಷ,  ತನ್ನ ತಾಯಿ ಪದ್ಮಮ್ಮ, 60 ವರ್ಷ ರವರು ಹೋಗಿ  ತಮ್ಮ  ಜಮೀನಿನಲ್ಲಿ  ಯಾಕೆ   ಉಳುಮೆ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಈ ಪೈಕಿ ನಾಗೇಂದ್ರ ರವರು ತನ್ನ ಮೇಲೆ ಏಕಾಏಕಿ  ಜಗಳಕ್ಕೆ ಬಂದು ತನ್ನ ಕೈಯಲ್ಲಿದ್ದ ಕಬ್ಬಿಣದ ಕಂಬಿಯಿಂದ ತನ್ನ ಡ ಕೈಗೆ ಹೊಡೆದು ಊತದ ಗಾಯವನ್ನುಂಡು ಮಾಡಿ, ಬಲಗಾಲಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾರೆ. ನಂತರ ತನ್ನ ತಾಯಿ ಪದ್ಮಮ್ಮ ರವರಿಗೆ ನಾಗೇಂದ್ರ ಕುಮಾರ್ ಅದೇ ಕಬ್ಬಿಣದ ಕಂಬಿಯಿಂದ ಹಣೆಗೆ ಹೊಡೆದು ರಕ್ತಗಾಯ ಮಾಡಿದ್ದು ಕೈಗಳಿಂದ ಹೊಡೆದು ಮೈ ಮೇಲೆ ಮೂಗೇಟು ಉಂಟು ಮಾಡಿರುತ್ತಾರೆ. ತನ್ನ ಹೆಂಡತಿ ಮಾಣಿಕ್ಯ ರವರಿಗೆ  ಭಾಗ್ಯಮ್ಮ ರವರು ದೊಣ್ಣೆಯಿಂದ ಭಲಬುಜಕ್ಕೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ.  ಭರತ್ ಎಂಬುವವನು ತಮ್ಮನ್ನು ಕುರಿತು ಲೋಫರ್ ನನ್ನ ಮಕ್ಕಳ, ಲೋಫರ್ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ  ಅಲ್ಲೆ ಇದ್ದ ತಮ್ಮ ಗ್ರಾಮದ ನರಸರೆಡ್ಡಿ ಬಿನ್ ಮ್ಯಾಕಲಪ್ಪ ಮತ್ತು ಲಕ್ಷ್ಮಣ ಬಿನ್ ನರಸಿಂಹಪ್ಪ ರವರು ಗಲಾಟೆ ಬಿಡಿಸಿದ್ದು  ಗಾಯಗಳಾಗಿದ್ದು ತಾವು ಯಾವುದೋ ಒಂದು ವಾಹನದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ಬಂದು ದಾಖಲಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದ ಮೆಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೆಳಿಕೆ ದೂರು.

 

13. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 141/2021 ಕಲಂ. 323,324,447,504 ರೆ/ವಿ 34 ಐಪಿಸಿ :-

     ದಿನಾಂಕ 30/06/2021 ರಂದು ಸಂಜೆ 6-15  ಗಂಟೆ ಸಮಯದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ  ಗಾಯಾಳು ನಾಗೇಂರ ಕುಮಾರ್ ಬಿನ್  ಲೇಟ್ ಪಿಳ್ಳ ಚೌಡಪ್ಪ,  58 ವರ್ಷ, ವಕ್ಕಲಿಗರು, ಜಿರಾಯ್ತಿ,  ವಾಸ ಕೊಂಡವಾಬನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ನೀಡಿದ  ಹೇಳಿಕೆ ದೂರಿನ ಸಾರಾಂಶವೇನೆಂದರೆ ತಾನು ಜಿರಾಯ್ತಿಯಿಂದ  ಜೀವನ ಮಾಡಿಕೊಂಡಿರುತ್ತೇನೆ. ತನಗೆ ಮತ್ತು ತನ್ನ ಚಿಕ್ಕಪ್ಪನ ಮಗನಾದ ಬಸವರಾಜು ರವರಿಗೆ ಕೊಂಡವಾನಹಳ್ಳಿ ಗ್ರಾಮದ ಸರ್ವೆ ನಂಬರ್ 64 ರಲ್ಲಿ 02 ಎಕೆರೆ 10 ಗುಂಟೆ ಜಮೀನಿನಲ್ಲಿ ಮನಸ್ತಾಪಗಳಿದ್ದು ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದೆವು. ಮೇಲ್ಕಂಡ ಸರ್ವೆ ನಂಬರ್ ಜಮೀನು ತನ್ನ ಮಗ ಭರತ್ ಗೆ ತನ್ನ ತಂದೆ ವಿಲ್ ಬರೆದಿರುತ್ತಾರೆ. ಈ . ಜಮೀನಿನಲ್ಲಿ 40  ವರ್ಷಗಳಿಂದ ಉಳುಮೆ ಮಾಡುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 30/06/2021 ರಂದು ತಾನು , ತನ್ನ  ಹೆಂಡತಿ  ಭಾಗ್ಯಮ್ಮ, 50 ವರ್ಷ, ತನ್ನ  ಮಗ ಭರತ್, 28 ವರ್ಷ ರವರು ಉಳುಮೆ ಮಾಡಿ ಬಿತ್ತನೆ ಮಾಡುತ್ತಿದ್ದಾಗ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ  ತನ್ನ ಚಿಕ್ಕಪ್ಪನ ಮಗನಾದ ಬಸವರಾಜು ,49 ವರ್ಷ,  ಅವರ ಹೆಂಡತಿ ಮಾಣಿಕ್ಯ , 40 ವರ್ಷ, ಅವರ ತಾಯಿ  ಪದ್ಮಮ್ಮ  ರವರು ತಮ್ಮ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಈ ಜಮೀನು ನಮ್ಮದು ಎಂದು ಹೇಳಿ ಈ ಪೈಕಿ ಬಸವರಾಜು ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಸೊಂಟಕ್ಕೆ ಹೊಡೆದು ಊತದ ಗಾಯವನ್ನುಂಟು ಮಾಡಿ, ಮೈ ಮೇಲೆ ಕಯಗಳಿಂದ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ನಂತರ ತನ್ನ ಮಗ ಭರತ್ ಗೆ ಬಸವರಾಜು ರವರು ಅದೇ ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ ಕೈಗಳಿಂದ ಮೈಮೇಲೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ.  ನಂತರ ಪದ್ಮಮ್ಮ ಮತ್ತು ಮಾಣಿಕ್ಯ ರವರು  ಕೈಗಳಿಂದ ತನ್ನ ಹೆಂಡತಿ ಭಾಗ್ಯಮ್ಮ ರವರಿಗೆ  ಮೈಮೇಲೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ಮಾಣಿಕ್ಯ ರವರು ದೊಣ್ಣೆಯಿಂದ  ತನ್ನ ಹೆಂಡತಿ ಭಾಗ್ಯಮ್ಮ ರವರ ಎಡ ಕೈ ಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ.  ಎಲ್ಲರೂ ಸೇರಿ ತಮ್ಮನ್ನು ಕುರಿತು  ಬೇವರ್ಸಿ ನನ್ನ ಮಕ್ಕಳಾ , ಬೇವರ್ಸಿ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ  ಬೈದಿದ್ದು ಆಗ  ಅಲ್ಲೆ ಜಮೀನಿನಲ್ಲಿದ್ದ ಇದ್ದ ಪ್ರಭಮ್ಮ ಕೊಂ ವೆಂಕಟೇಶಪ್ಪ  ಮತ್ತು ಲಕ್ಷ್ಮಣ ಬಿನ್ ನರಸಿಂಹಪ್ಪ ರವರು ಗಲಾಟೆ ಬಿಡಿಸಿದ್ದು  ಗಾಯಗಳಾಗಿದ್ದು ತಾವು ಯಾವುದೋ ಒಂದು ವಾಹನದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ಬಂದು ದಾಖಲಾಗಿ ತಮ್ಮ ಮೇಲೆ ಹಲ್ಲೆ ಮಾಡಿದ್ದ ಮೆಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೆಳಿಕೆ ದೂರು.

 

14. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 142/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಎಸ್,ಐ ನಂಜುಂಡ ಶರ್ಮ  ಆದ ನಾನು ಈ ದಿನ ದಿನಾಂಕ:30/06/2021 ರಂದು ಸಂಜೆ 7-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗಸ್ತು ಸಿಬ್ಬಂದಿ ಸಿ.ಹೆಚ್.ಸಿ-28 ದಕ್ಷಿಣಾಮೂರ್ತಿರವರು  ನನಗೆ ಪೋನ್ ಮಾಡಿ ಗುಡಿಬಂಡೆ  ತಾಲ್ಲೂಕು ಪಸುಪಲೋಡು   ಗ್ರಾಮದಲ್ಲಿ ಗಸ್ತುನಲ್ಲಿರುವಾಗ ಭಾಸ್ಕರ್ ಬಿನ್ ಆದಿನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ- 73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಸಂಜೆ 7-15 ಗಂಟೆ ಸಮಯಕ್ಕೆ  ಪಸುಪಲೋಡು   ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ಭಾಸ್ಕರ್ ಬಿನ್ ಆದಿನಾರಾಯಣಪ್ಪ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 7-30 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಂಯನ್ನು ವಶಕ್ಕೆ ಪಡೆದು  ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ಭಾಸ್ಕರ್ ಬಿನ್ ಆದಿನಾರಾಯಣಪ್ಪ 35ವರ್ಷ ಪಾಳೇಗಾರರು ಜಿರಾಯ್ತಿ ಕೆಲಸ ವಾಸ-ಪಸುಪಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10= 351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 7-30 ಗಂಟೆಯಿಂದ 8-00 ಗಂಟೆಯವರೆಗೆ ಪಸುಪಲೋಡು ಗ್ರಾಮದ ಬಾಸ್ಕರ್ ರವರ ಮನೆಯ ಬಳಿಯ ವಿದ್ಯುತ್ ಬೆಳಕಿನಲ್ಲಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 8-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 8-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

15. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 143/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಂಜುಂಡಶರ್ಮ ಎ,ಎಸ್,ಐ ಆದ ನಾನು  ನೀಡುತ್ತಿರುವ ವರದಿಯ ದೂರು ಏನೆಂದರೆ ದಿನಾಂಕ:30/06/2021 ರಂದು ಸಂಜೆ 8-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಸಿಬ್ಬಂದಿ ಸಿ.ಹೆಚ್.ಸಿ-73 ಹನುಮಂತರಾಯಪ್ಪ   ರವರು  ನನಗೆ ಪೋನ್ ಮಾಡಿ ಗುಡಿಬಂಡೆ  ತಾಲ್ಲೂಕು ಪಸುಪಲೋಡು   ಗ್ರಾಮದಲ್ಲಿ ಗಸ್ತುನಲ್ಲಿರುವಾಗ ರಾಮಕೃಷ್ಣಪ್ಪ ಬಿನ್ ಲೇಟ್ ಮಲ್ಲಪ್ಪ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-102 ಆನಂದ ಎನ್  ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಸಂಜೆ 8-45 ಗಂಟೆ ಸಮಯಕ್ಕೆ  ಪಸುಪಲೋಡು   ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ರಾಮಕೃಷ್ಣಪ್ಪ ಬಿನ್ ಲೇಟ್ ಮಲ್ಲಪ್ಪ್ಪ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 8-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಂಯನ್ನು ವಶಕ್ಕೆ ಪಡೆದು  ಸದರಿ ಆಸಾಮಿಯ  ಹೆಸರು & ವಿಳಾಸ ಕೆಳಿ ತಿಳಿಯಲಾಗಿ ರಾಮಕೃಷ್ಣಪ್ಪ ಬಿನ್ ಲೇಟ್ ಮಲ್ಲಪ್ಪ 50ವರ್ಷ ಪಾಳೇಗಾರ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ-ಪಸುಪಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 15 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 05 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1,350 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*15= 526.96/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 8-45 ಗಂಟೆಯಿಂದ 9-15 ಗಂಟೆಯವರೆಗೆ ಪಸುಪಲೋಡು ಗ್ರಾಮದ ರಾಮಕೃಷ್ಣಪ್ಪ ರವರ ಮನೆಯ ಬಳಿಯ ವಿದ್ಯುತ್ ಬೆಳಕಿನಲ್ಲಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 9-30 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 9-45 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

16. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ. 66/2021 ಕಲಂ. 87 ಕೆ.ಪಿ. ಆಕ್ಟ್‌ :-

     ದಿನಾಂಕ:30/06/2021 ರಂದು ರಾತ್ರಿ 8:30 ಗಂಟೆಗೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕರು ರವರು ದಾಳಿ ಪಂಚನಾಮೆ, ವಶಪಡಿಸಿಕೊಂಡ ಮಾಲನ್ನು, ನಾಲ್ಕು ಜನ ಆರೋಪಿತರನ್ನು ಹಾಜರ್ಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:30/06/2021 ರಂದು ಸಂಜೆ 7:20 ಗಂಟೆ ಸಮಯದಲ್ಲಿ ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-114 ರವಿ ಕುಮಾರ, ಪಿಸಿ-241 ವಿಜಯಕುಮಾರ ಜೀಪ್ ಚಾಲಕ ಎಹೆಚ್.ಸಿ-22 ಮಂಜುನಾಥ ರವರೊಂದಿಗೆ ಬೇರೆ ಪ್ರಕರಣದಲ್ಲಿ ತನಿಖೆಗಾಗಿ ನಂದಿ ಗಿರಿಧಾಮ ಠಾಣೆಯ ಬಳಿ ಹೋಗಿದ್ದಾಗ ನನಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ, ಆಗಲಗುರ್ಕಿ ಕೈಗಾರಿಕಾ ಪ್ರದೇಶದ ಟೈಟಾನ್ ಕಂಪನಿಯ ರಸ್ತೆಯ ಗಾಯಿತ್ರಿ ಕಾಂಕ್ರೀಟ್ ಪ್ರೊಡೆಕ್ಟ್ ಪ್ಲಾಟ್ ನಂ:21 ರಲ್ಲಿ ಯಾರೋ ಆಸಾಮಿಗಳು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ಸದರಿ ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲು ಆಗಲಗುರ್ಕಿ ಕೈಗಾರಿಕಾ ಪ್ರದೇಶದಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಈ ಮೇಲ್ಕಂಡ ವಿಚಾರ ತಿಳಿಸಿ ಅಂದರ್-ಬಾಹರ್ ಇಸ್ಫೀಟ್ ಜೂಜಾಟದ ಮೇಲೆ ದಾಳಿ ಮಾಡಲು ನಮ್ಮೊಂದಿಗೆ ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರು ಪಂಚರಾಗಲು ಒಪ್ಪಿದ್ದು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸಂಜೆ 7:35 ಗಂಟೆಗೆ ಹೋಗಿ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮೊರೆಯಲ್ಲಿ ನಿಂತು ನೋಡಲಾಗಿ ಸುಮಾರು ಜನರು ಗುಂಪಾಗಿ ಕುಳಿತುಕೊಂಡು ಕೆಲವರು ಅಂದರ್ಗೆ 100/-ರೂ ಗಳೆಂದು, ಇನ್ನೂ ಕೆಲವರು ಬಾಹರ್ 100/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಒಮ್ಮಲೇ ದಾಳಿ ಮಾಡಿ ಮೇಲೆಕ್ಕೆ ಏಳದಂತೆ ಸೂಚನೆ ನೀಡಿದಾಗಲು ಸಹ ಇಸ್ಪಿಟ್ ಜೂಜಾಟವಾಡುತ್ತಿದ್ದ ನಾಲ್ಕು ಜನರು ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿ ನಾಲ್ಕು ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಅವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಿವಾಸ ಮೂತರ್ಿ ಬಿನ್ ಲೇಟ್ ರುದ್ರಪ್ಪ, 53 ವರ್ಷ, ಪ.ಜಾತಿ, ಶಿಕ್ಷಕರು, ವಾಸ: ಜೈಬೀಮ್ ನಗರ, ಚಿಕ್ಕಬಳ್ಳಾಪುರ ನಗರ, 2) ನವೀನ್ ಬಿನ್ ಲೇಟ್ ಚಿಕ್ಕ ನರಸಿಂಹಯ್ಯ, 35 ವರ್ಷ, ಪ.ಜಾತಿ, ಎಸ್.ಡಿ.ಎ ಕೆಲಸ, ವಾಸ: ಮುಸ್ಟೂರು, ಚಿಕ್ಕಬಳ್ಳಾಪುರ ನಗರ, 3) ರಮೇಶ ಬಿನ್ ನರಸಿಂಹಯ್ಯ, 40 ವರ್ಷ, ಪ.ಜಾತಿ, ಶಿಕ್ಷಕರು, ವಾಸ: ಕಾರ್ಖನೆಪೇಟೆ ರಸ್ತೆ, ಚಿಕ್ಕಬಳ್ಳಾಪುರ ನಗರ, 4) ನಾಗರಾಜ ಬಿನ್ ಕಾರಕೂರಪ್ಪ, 44 ವರ್ಷ, ಕುರುಬರು, ಶಿಕ್ಷಕರು, ವಾಸ: ಹೆಚ್.ಎಸ್ ಗಾರ್ಡನ್, ಚಿಕ್ಕಬಳ್ಳಾಪುರ ನಗರ ಎಂದು ತಿಳಿಸಿರುತ್ತಾರೆ. ಜೂಜಾಟದ ಸ್ಥಳದಲ್ಲಿ ಇಸ್ಪೀಟ್ ಎಲೆಗಳು ಮತ್ತು ಹಣವು ಪ್ಲಾಸ್ಟಿಕ್ ಚೀಲದ ಮೇಲೆ ಇದ್ದು ಇದ್ದಂತಹ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ಜೊಡಿಸಿ ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಮತ್ತು 6200/- ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 6200/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸಂಜೆ 7;40 ಗಂಟೆಯಿಂದ ರಾತ್ರಿ 8:20 ಗಂಟೆಯವರೆಗೆ ವಿದ್ಯುತ್ ಬೆಳಕಿನಲ್ಲಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ರಾತ್ರಿ 8:30 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 216/2021 ಕಲಂ. 143,323,341,447,504,506 ರೆ/ವಿ 149 ಐಪಿಸಿ :-

     ದಿನಾಂಕ:30.06.2021 ರಂದು ಪಿರ್ಯಾದಿದರರಾದ ಪಾರ್ವತಮ್ಮ ಕೋಂ ಲೇಟ್ ನರಸಿಂಹಯ್ಯ, 50 ವರ್ಷ, ನಾಯಕ, ಜಿರಾಯ್ತಿ, ದಂಡಿಗನಾಳ ಗ್ರಾಮ ಹೊಸಕೋಟೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ತಂದೆ-ತಾಯಿಗೆ ಒಂದನೇ ಶ್ರೀರಾಮಪ್ಪ, 2 ನೇ ವೆಂಕಟೇಶಪ್ಪ, 3 ನೇ ನಾನು ಆಗಿರುತ್ತೇನೆ. ತನ್ನ ತವರು ಮನೆ ಶಿಡ್ಲಘಟ್ಟ ತಾಲ್ಲೂಕು ತಾತಹಳ್ಳಿ ಗ್ರಾಮವಾಗಿದ್ದು ತನ್ನನ್ನು ಸುಮಾರು 30 ವರ್ಷಗಳ ಹಿಂದೆ ದಂಡಿಗಾನಹಳ್ಳಿ ಗ್ರಾಮದ ನರಸಿಂಹಪ್ಪ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ತನ್ನ ತಾಯಿಯಾದ ಮುನಿಯಮ್ಮ ರವರ ಹೆಸರಿಗೆ  ಶಿಡ್ಲಘಟ್ಟ ತಾಲ್ಲೂಕು ತಾತಹಳ್ಳಿ ಗ್ರಾಮದ ಹಳೆ ಸರ್ವೆ ನಂ 91, ಹೊಸ ಸರ್ವೆ ನಂ 171 ರಲ್ಲಿ 3 ಎಕರೆ ಜಮೀನು ದಿನಾಂಕ:12/11/1982 ರಂದು ಎಲ್.ಎನ್.ಡಿ.ಆರ್.ಯು.ಸಿ 43/82-83 ನೇ ಸಾಲಿನಲ್ಲಿ ಭೂಮಿ ಮಂಜೂರಾಗಿ ಸಾಗುವಳಿ ಚೀಟಿ, ಪಹಣಿ, ಮುಟೇಷನ್ ಒಳಗೊಂಡಂತೆ ಎಲ್ಲಾ ದಾಖಲೆಗಳು ತಮ್ಮ ತಾಯಿಯವರ ಹೆಸರಿನಲ್ಲಿರುತ್ತೆ. ತಮ್ಮ ತಾಯಿಯಾದ ಮುನಿಯಮ್ಮ ರವರು ಮರಣ ಹೊಂದಿದ ನಂತರ ತಮ್ಮ ಅಣ್ಣಂದಿರು ಸೇರಿ ಮೇಲ್ಕಂಡ ಜಮೀನನ್ನು ದಾನವಾಗಿ 2012 ನೇ ಸಾಲಿನಲ್ಲಿ ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಮುಖಾಂತರ ತನ್ನ ಹೆಸರಿಗೆ ನೊಂದಣಿ ಮಾಡಿಕೊಟ್ಟಿರುತ್ತಾರೆ, ಆಂದಿನಿಂದ ಎಲ್ಲಾ ದಾಖಲೆಗಳು ತನ್ನ ಹೆಸರಿನಲ್ಲಿದ್ದು ಸದರಿ ಜಮೀನಿನಲ್ಲಿ ತಾನೇ ಅನುಭವದಲ್ಲಿರುತ್ತೇನೆ.  ಸದರಿ ಜಮೀನಿಗೆ ತಾನು ಈ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಕಛೇರಿ ಮೂಲಕ ಹದ್ದು ಬಸ್ತು ಅಳತೆ ಮಾಡಿಸಿ ಚೆಕ್ಕುಬಂದಿ ಕಲ್ಲು ಹಾಕಿಸಿರುತ್ತೇನೆ. ಹೀಗಿರುವಲ್ಲಿ ದಿನಾಂಕ: 29.06.2021 ರಂದು ತಾನು ಮತ್ತು ತನ್ನ ಮಗನಾದ ಮಂಜುನಾಥ ರವರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಿಸುತಿದ್ದಾಗ ತಮ್ಮ ಗ್ರಾಮದ ವಾಸಿಗಳು ತಮ್ಮ ಸಂಬಂಧಿಕರಾದ ಮುನಿಕೃಷ್ಣ ಬಿನ್ ನಾರಾಯಣಪ್ಪ, ಮುನಿರಾಜು ಬಿನ್ ನಾರಾಯಣಪ್ಪ, ಮೂರ್ತಿ ಬಿನ್ ನಾರಾಯಣಪ್ಪ, ವೆಂಕಟೇಶ ಬಿನ್ ನಾರಾಯಣಪ್ಪ, ಸುಶೀಲಮ್ಮ ಬಿನ್ ನಾರಾಯಣಪ್ಪ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ತಮ್ಮ ಜಮೀನಿನೊಳಗೆ ಅತಿಕ್ರಮ ಪ್ರವೇಶ ಮಾಡಿ ನೀವು ಯಾರು ಈ ಜಮೀನಿನಲ್ಲಿ ಉಳುಮೆ ಮಾಡುವುದಕ್ಕೆ ಲೋಪರ್ ಮುಂಡೆ ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದಿದ್ದು, ನಾವುಗಳು ಈ ಜಮೀನು ನಮ್ಮದು ನೀವು ಯಾರು ಕೇಳುವುದಕ್ಕೆ ಎಂದಾಗ ಮುನಿಕೃಷ್ಣ, ಮುನಿರಾಜು, ವೆಂಕಟೇಶ, ಮೂರ್ತಿ ರವರುಗಳು ತನ್ನ ಮಗನಾದ ಮಂಜುನಾಥ ರವರ ಮೈ ಮೇಲೆ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ನೊವುಂಟು ಮಾಡಿದ್ದು ತಾನು ಜಗಳ ಬಿಡಿಸಲು ಅಡ್ಡ ಹೋದಾಗ ಸುಶೀಲಮ್ಮ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿ ಮೇಲ್ಕಂಡವರುಗಳೆಲ್ಲರೂ ಸಹ ತಾವುಗಳು ಉಳುಮೆ ಮಾಡುವುದಕ್ಕೆ ಅಡ್ಡಿಪಡಿಸಿ ಇನ್ನು ಮುಂದೆ ಈ ಜಮೀನಿನ ವಿಷಯಕ್ಕೆ ಬಂದರೆ ನಿಮ್ಮಗಳನ್ನು ಇದೇ ಜಮೀನಿನಲ್ಲಿ ಊತು ಬಿಡುವುದಾಗಿ ಪ್ರಾಣಬೆದರಿಕೆ ಹಾಕಿ ಜಗಳ ಮಾಡುತಿದ್ದಾಗ ಅಕ್ಕಪಕ್ಕದ ಜಮೀನಿನವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಗಲಾಟೆಗಳ ಬಗ್ಗೆ ತಮ್ಮ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಮೇಲ್ಕಂಡವರುಗಳ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮಕೈಗಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

Last Updated: 01-07-2021 05:54 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080