ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 82/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:31.05.2021 ರಂದು ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ತನ್ನ ತಂದೆ ಸುಬ್ರಮಣ್ಯಾಚಾರಿ ರವರು ಈಗ್ಗೆ 4 ತಿಂಗಳುಗಳಿಂದ ಚಿಕ್ಕಬಳ್ಳಾಪುರ ಟೌನ್ ಪ್ರಶಾಂತನಗರದ ವಾಸಿ ಶ್ರೀಮತಿ ನಾಗಲಕ್ಷ್ಮೀ ಕೋಂ ಪುರುಶೋತ್ತಮರವರಿಗೆ ಅವರು ಕೆಲಸ ಮಾಡುವ ಬೆಂಗಳೂರಿನ M/S BOEING INDIA PRIVATE LIMITED ಕಂಪನಿಯವರು ನೀಡಿದ್ದ KA-04, MW-3524 ನೊಂದಣಿ ಸಂಖ್ಯೆಯ MARUTI SWIFT DZIRE ಕಾರಿಗೆ ಚಾಲಕರಾಗಿ ಹೋಗುತ್ತಿದ್ದರು. ದಿನ ದಿನಾಂಕ: 30/05/2021 ರಂದು ಬೆಳಿಗ್ಗೆ 9-45 ಗಂಟೆಯಲ್ಲಿ ತಾನು, ತನ್ನ ತಾಯಿ ಶ್ರೀಮತಿ ಮಂಜುಳ, 42 ವರ್ಷ, ನಮ್ಮ ಅಕ್ಕ ನವ್ಯ, 24 ವರ್ಷ, ಅವರ ಮಗ ಶುಭಾಶಿಷ್, 6 ವರ್ಷ, ತನ್ನ ತಂಗಿ ತನುಜಾ, 20 ವರ್ಷ ಎಲ್ಲರೂ ಗುವ್ವಲಕಾನಹಳ್ಳಿಯಲ್ಲಿ ಹುಷಾರಿಲ್ಲದೇ ಇರುವ ತಮ್ಮ ಮಾವನನ್ನು ನೋಡಿಕೊಂಡು ಬರಲು ತನ್ನ ತಂದೆಯವರು ಚಲಾಯಿಸಿಕೊಂಡಿದ್ದ KA-04, MW-3524 ನೊಂದಣಿ ಸಂಖ್ಯೆಯ MARUTI SWIFT DZIRE ಕಾರಿನಲ್ಲಿ ಕುಳಿತು, ತನ್ನ ತಂದೆ ಕಾರನ್ನು ಚಲಾಯಿಸುತ್ತಿದ್ದು ನಾವು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ಚಿಕ್ಕಬಳ್ಳಾಪುರ-ಬಾಗೇಪಲ್ಲಿ NH-44 ಟಾರು ರಸ್ತೆಯಲ್ಲಿ ಮರಸನಹಳ್ಳಿ ಬಳಿ ಹೋಗುತ್ತಿದ್ದಾಗ ತನ್ನ ತಂದೆ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಎರಡೂ ರಸ್ತೆಯ ಮದ್ಯದ ಡಿವೈಡರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಪಲ್ಟಿಯಾಗಿ ಜಖಂಗೊಂಡಿತು. ಕಾರಿನಲ್ಲಿ ಮುಂದೆ ಕುಳಿತಿದ್ದ ತನಗೆ ಎದೆಗೆ ಒತ್ತಿದ್ದಂತಹಾ ನೋವಾಗಿದ್ದು, ಹಿಂದಿನ ಸೀಟಿನಲ್ಲಿ ಕುಳಿತಿದ್ದ ತನ್ನ ತಾಯಿ ಶ್ರೀಮತಿ ಮಂಜುಳಾರವರಿಗೆ ಎಡಕಾಲ ಮಂಡಿಗೆ ರಕ್ತಗಾಯವಾಗಿದ್ದು, ಉಳಿದವರಿಗೆ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ಸ್ಥಳಕ್ಕೆ 108 ಆಂಬುಲೆನ್ಸ್ ಕರೆಸಿಕೊಂಡು ಅದರಲ್ಲಿ ತಾನು, ತನ್ನ ತಾಯಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ ಬಂದು ದಾಖಲಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ತನ್ನ ತಾಯಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯಗಾಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ತಾನು ತನ್ನ ಮನೆಯವರು ತನ್ನ ತಾಯಿಯವರನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಅಲ್ಲಿ ಅವರೊಂದಿಗೆ ಇದ್ದು, ಈ ದಿನ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣವಾದ KA-04, MW-3524 ನೊಂದಣಿ ಸಂಖ್ಯೆಯ MARUTI SWIFT DZIRE ಕಾರು ಮತ್ತು ಅದನ್ನು ಚಲಾಯಿಸುತ್ತಿದ್ದ ತನ್ನ ತಂದೆ ಸುಬ್ರಮಣ್ಯಾಚಾರಿರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ,ವ,ವರದಿ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 249/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ: 01/06/2021 ರಂದು ಮದ್ಯಾಹ್ನ 12.15 ಗಂಟೆಗೆ ಠಾಣೆಯ ಶ್ರೀ ಸುರೇಶ, ಸಿ.ಹೆಚ್.ಸಿ-57 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01/06/2021 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುರುಟಹಳ್ಳಿ ಗ್ರಾಮದ ಪ್ರಶಾಂತ್ ಬಿನ್ ಮಂಜುನಾಥ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 11.15 ಗಂಟೆಗೆ ಕುರುಟಹಳ್ಳಿ ಗ್ರಾಮದ ಪ್ರಶಾಂತ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಪ್ರಶಾಂತ್ ಬಿನ್ ಮಂಜುನಾಥ, 25 ವರ್ಷ, ಗಾಣಿಗ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಕುರುಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 250/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

     ದಿನಾಂಕ: 01/06/2021 ರಂದು ಮದ್ಯಾಹ್ನ 12.30 ಗಂಟೆಗೆ ಠಾಣೆಯ ಶ್ರೀ ಕೃಷ್ಣಪ್ಪ, ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01/06/2021 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-516 ವಿಶ್ವನಾಥ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಿನ್ನಸಂದ್ರ ಗ್ರಾಮದ ಯಾರಬ್ ಬಿನ್ ಕಲೀಲ್ ರವರು ಅವರ ಮಟನ್ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 11.30 ಗಂಟೆಗೆ ಚಿನ್ನಸಂದ್ರ ಗ್ರಾಮದ ಯಾರಬ್ ರವರ ಮಟನ್ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಯಾರಬ್ ಬಿನ್ ಕಲೀಲ್, 25 ವರ್ಷ, ಮುಸ್ಲಿಂ ಜನಾಂಗ, ಮಟನ್ ಅಂಗಡಿ ಮಾಲೀಕರು, ವಾಸ: ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಮಟನ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 251/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 01/06/2021 ರಂದು ಮದ್ಯಾಹ್ನ 1.00 ಗಂಟೆಗೆ ಠಾಣೆಯ ಶ್ರೀ ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 01-06-2021 ರಂದು ಬೆಳಗ್ಗೆ 11.45 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-504 ಸತೀಶ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಚಿನ್ನಸಂದ್ರ ಗ್ರಾಮದ ಮಹಮದ್ ನಿಜಾಮುದ್ದೀನ್ ಬಿನ್ ಲೇಟ್ ಮಹಮದ್ ಷಾಬುದ್ದೀನ್ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಮದ್ಯಾಹ್ನ 12.00 ಗಂಟೆಗೆ ಚಿನ್ನಸಂದ್ರ ಗ್ರಾಮದ ಮಹಮದ್ ನಿಜಾಮುದ್ದೀನ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಹಮದ್ ನಿಜಾಮುದ್ದೀನ್ ಬಿನ್ ಲೇಟ್ ಮಹಮದ್ ಷಾಬುದ್ದೀನ್, 60 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಮಟನ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.92/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ: 31/05/2021 ರಂದು ಪಿರ್ಯಾದಿದಾರರಾದ ಗುಲ್ಜಾರ್ ಖಾನ್ ಬಿನ್ ಲೇಟ್ ಹಯಾತ್ ಖಾನ್, 02ನೇ ಕ್ರಾಸ್, ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಚಿಂತಾಮಣಿ ನಗರದ ಖಲೀಲ್ ಶಾಧಿ ಮಹಲ್ ಹಿಂಭಾಗದಲ್ಲಿರುವ ಮನೆಯಲ್ಲಿ ಬಾಡಿಗೆ ವಾಸವಾಗಿರುತ್ತೆನೆ. ನನ್ನ ತಾಯಿಯಾದ ಶ್ರೀಮತಿ ಪ್ಯಾರೆಜಾನ್ ರವರು ರಂಜಾನ್ ಹಬ್ಬದ ದಿನದಂದು ನಿಧನರಾಗಿರುತ್ತಾರೆ ಸದರಿ ನನ್ನ ತಾಯಿಯವರು ತಿಥಿ ಕಾರ್ಯಕ್ಕಾಗಿ ನಾನು ದಿನಾಂಕ: 24/05/2021 ರಂದು ನಮ್ಮ ತಾಯಿಯವರ ಮನೆಯಲ್ಲಿದ್ದಾಗ ನಾನು ವಾಸವಾಗಿರುವ ಮನೆಯಲ್ಲಿ ನಾನು ಇಲ್ಲದಿರುವ ಸಮಯದಲ್ಲಿ ನಿನ್ನೆ ರಾತ್ರಿ ಅಂದರೆ 24/05/2021 ರಂದು ಕಳ್ಳತನವಾಗಿರುತ್ತೆದೆ ಸದರಿ ಮನೆಯಲ್ಲಿ ಬೀರೋ ಒಡೆದು ಅದರಲ್ಲಿರುವ ಸುಮಾರು 50,000 ಸಾವಿರು ನಗರದು ಮತ್ತು ಸುಮಾರು 70,000 ಸಾವಿರ ಬೆಲೆ ಬಾಳುವ ಕತ್ತಿನ ಸರ ಮತ್ತು ಕಿವಿಯ ಓಲೆಯನ್ನು ಕಳ್ಳರು ಕಳ್ಳತನ ಮಾಡಿರುತ್ತಾರೆ ಆದ್ದರಿಂದ ನಮ್ಮ ಮನೆಯಲ್ಲಿ ಕಳುವಾಗಿರುವ ನಗರದು ಹಣ ಮತ್ತು ಚಿನ್ನದ ಓಡವೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 93/2021 ಕಲಂ. 269,270,188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ಪಿರ್ಯಾದಿದಾರರಾದ ಆನಂದಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ರವರು ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:01/06/2021 ರಂದು ಬೆಳಿಗ್ಗೆ  ನಾನು ಮತ್ತು ಠಾಣಾ  ಸಿಬ್ಬಂದಿ ಸಿ.ಪಿ.ಸಿ-426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ-40-ಜಿ-3699 ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಕೋಲಾರ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ರಸ್ತೆಯ ಕೆ.ಎಂ.ಡಿ. ಕಲ್ಯಾಣ ಮಂಟಪದ ಬಳಿಯಿರುವ ಎಸ್.ಎಲ್.ಎನ್. ಟ್ರೇಡರ್ಸ್ನ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದ್ದರೂ ಸಹ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ನಂತರ ಪಂಚರ ಸಮಕ್ಷಮ ಸದರಿ  ಟ್ರೇಡರ್ಸ್ ಅಂಗಡಿಯ ಮಾಲೀಕನ  ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ರಮೇಶ್ ಬಿನ್ ಲಕ್ಷ್ಮಿನಾರಾಯಣ, 36ವರ್ಷ, ವಕ್ಕಲಿಗರು, ಎಸ್.ಎಲ್.ಎನ್. ಟ್ರೇಡರ್ಸ್ ಅಂಗಡಿ ಮಾಲೀಕರು, ವಾಸ ಕೊಡದವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಈ ಬಗ್ಗೆ ಪಂಚನಾಮೆಯನ್ನು ಜರುಗಿಸಿರುತ್ತೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ಸದರಿ ಎಸ್.ಎಲ್.ಎನ್.ಟ್ರೇಡರ್ಸ್ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.55/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 31-05-2021 ರಂದು ಸಂಜೆ 05.15 ಗಂಟೆಗೆ ಪಿ.ಎಸ್.ಐ ರವರು ಮಾಲು, ಮಹಜರ್, ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:31/05/2021 ರಂದು ಮಧ್ಯಾಹ್ನ 15-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಬುರಡಗುಂಟೆ ಗ್ರಾಮದ ಸುಧಾಕರ ಬಿನ್ ವೆಂಕಟಪ್ಪ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಸ್ಥಳದ ಮೇಲೆ  ದಾಳಿ ನಡೆಸುವ ಸಲುವಾಗಿ ನಾನು ಸಿಬ್ಬಂದಿಯಾದ ಸಿಹೆಚ್ಸಿ-210 ಕೆ.ಬಿ. ಶಿವಪ್ಪ  ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಬುರಡಗುಂಟೆ ಗ್ರಾಮದ ಬಳಿ ಹೋಗಿ ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗ್ರಾಮದೊಳಗೆ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಸುಧಾಕರ ಬಿನ್ ವೆಂಕಟಪ್ಪ ರವರ ಮನೆಯ ಬಳಿ ಹೋಗಿ ನೋಡಲಾಗಿ ಮನೆಯ ಮಾಲೀಕನಾದ ಸುಧಾಕರ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಮನೆಯ ಮಾಲೀಕನೂ ಸಹ ಓಡಿ ಹೋಗಲು ಮುಂದಾದಾಗ ಆತನನ್ನು ಹಿಡಿದುಕೊಂಡು ಪಂಚರ ಸಮಕ್ಷಮ ಆತನ ಹೆಸರು ಮತ್ತು ವಿಳಾಸ ಕೇಳಗಾಗಿ  ಸುಧಾಕರ ಬಿನ್ ವೆಂಕಟಪ್ಪ, 45 ವರ್ಷ, ಜಿರಾಯ್ತಿ, ಬಲಜಿಗರು, ವಾಸ ಬುರಡಗುಂಟೆ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 180 ಎಂ.ಎಲ್ ಟೆಟ್ರಾ ಪ್ಯಾಕೆಟ್ಗಳು ಇದ್ದು, ಸ್ಥಳದಲ್ಲಿಯೇ  180 ML HAYWARDS CHEERS WHISKEY ಮಧ್ಯದ 12 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 70.26/- ರೂ  ಆಗಿದ್ದು, 12 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 843/-ರೂ ಆಗಿರುತ್ತೆ. ಮದ್ಯ ಒಟ್ಟು 2160 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಆಸಾಮಿಯನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 15-30 ರಿಂದ 16-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್ ನ್ನು, ಆಸಾಮಿಯನ್ನು, ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಸುಧಾಕರ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.88/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 01/06/2021 ರಂದು 9-30 ಗಂಟೆಗೆ ಪಿರ್ಯಾದಿದಾರರಾದ ಗೌರಿಬಿದನೂರು  ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಶಶಿಧರ್.ಎಂ ರವರು ಮಾಲು, ಮಹಜರ್ ಹಾಗೂ ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:01-06-2021 ರಂದು ಬೆಳಗ್ಗೆ 07.30 ಗಂಟೆಯ ಸಮಯದಲ್ಲಿ ನಾನು ಮತ್ತು ಹೆಚ್.ಸಿ-224 ವೆಂಕಟೇಶ್ ರವರು ಮಂಚೇನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿ ಏನೇಂದರೆ ಸಂತೆಬೀದಿಯಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ಕಾರ್ಟೂನ್ ಬಾಕ್ಸ್ ನಲ್ಲಿ ಮದ್ಯ ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು ನಾನು ಆತನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ವೆಂಕಟಪ್ಪ ಬಿನ್ ಲೇಟ್ ನ್ಯಾತಪ್ಪ, 45 ವರ್ಷ, ಗೊಲ್ಲ ಜನಾಂಗ, ವ್ಯವಸಾಯ, ವಾಸ: ಸಂತೇಬೀದಿ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು   ಎಂದು ತಿಳಿಸಿದ್ದು ಈ ಆಸಾಮಿಯನ್ನು  ಸಂತೆ ಬೀದಿಯಲ್ಲಿ ಮಾರಾಟ ಮಾಡಲು ಯಾವುದೇ ರೀತಿಯ ಅನುಮತಿ ಇದಿಯ ಎಂದು ಕೇಳಲಾಗಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತೆ. ನಂತರ ಆತನ ಬಳಿ ಇದ್ದ ಮದ್ಯವನ್ನು ಪರಿಶೀಲನೆ ಮಾಡಲಾಗಿ ಒಂದು ಕಾರ್ಟೂನ್ ಬಾಕ್ಸ್ ನಲ್ಲಿ 90 ಎಂ.ಎಲ್ ನ 18 ಹೈವಾರ್ಡ್ಸ್ ವಿಸ್ಕಿಯ  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, 02 ಖಾಲಿ ಟೆಟ್ರಾ ಪ್ಯಾಕೆಟ್ ಗಳು ಇರುತ್ತವೆ ಹಾಗೂ 04 ಪ್ಲಾಸ್ಟಿಕ್ ಗ್ಲಾಸು ಇರುತ್ತವೆ ಇದರ ಬೆಲೆ ಸುಮಾರು 720/- ರೂ ಆಗಿರುತ್ತದೆ.  ಮೇಲ್ಕಂಡ 18 ಟೆಟ್ರಾ ಪ್ಯಾಕ್ ಮತ್ತು ಖಾಲಿ ಎರೆಡು ಟೆಟ್ರಾ ಪ್ಯಾಕ್ ಮತ್ತು 04 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಪಂಚನಾಮೆಯ ಮೂಲಕ ಬೆಳಗ್ಗೆ 7.30 ರಿಂದ 8.30 ಗಂಟೆಯ ಸಮಯದವರೆಗೆ ಅವುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ವೆಂಕಟಪ್ಪ ಬಿನ್ ಲೇಟ್ ನ್ಯಾತಪ್ಪ, 45 ವರ್ಷ, ಗೊಲ್ಲ ಜನಾಂಗ, ವ್ಯವಸಾಯ, ವಾಸ: ಸಂತೇಬೀದಿ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 01-06-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080