ಅಭಿಪ್ರಾಯ / ಸಲಹೆಗಳು

 

1. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.28/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2008:-

  ದಿನಾಂಕ:01/5/2021 ರಂದು ಪಿರ್ಯಾಧಿ ಶ್ರೀ ಬಸವರಾಧ್ಯ ಬಿನ್ ನಂದೀಶ್ವರಯ್ಯ, 27 ವರ್ಷ, ಲಿಂಗಾಯಿತರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ ನಂದಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಮೊ ಸಂಖ್ಯೆ:8861179202  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಮೇಲ್ಕಂಡ ವಿಳಾಸದಲ್ಲಿ  ವಾಸವಿದ್ದು, ನಂದಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕಿನಲ್ಲಿ 3946101005331 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ, ನಾನು ಕೆಲಸಕ್ಕಾಗಿ ಸ್ಕ್ಯಪ್ ಹ್ಯಾಪ್ ನಲ್ಲಿ ಇಂಟರ್ಯೂ ಮುಗಿಸಿರುತ್ತೇನೆ,  ಈಗಿರುವಲ್ಲಿ ದಿನಾಂಕ:24-04-2021 ರಂದು employer@victoriaoilandgas.org ರ ಮೇಲ್ ಐಡಿಯಿಂದ ವಿಕ್ಟೋರಿಯಾ ಆಯಿಲ್ & ಗ್ಯಾಸ್ ಕಂಪನಿಯಿಂದ ನನಗೆ ಲಂಡನ್ ನಲ್ಲಿ ಕೆಲಸ ಕೊಡಿಸುವುದಾಗಿ ಈ ಮೇಲ್ ಮುಖಾಂತರ ಲೆಟರ್ ಬಂದಿದ್ದು, ನಂತರ ಅವರು ಹೇಳಿದ ಹಾಗೆ ಸದರಿ ಲೆಟರ್ ಗೆ ನನ್ನ ಸಹಿ ಮಾಡಿ ಸ್ಕ್ಯಾನ್ ಮಾಡಿ ಅವರ ಮೇಲ್ ಗೆ ಕಳುಹಿಸಿಕೊಟ್ಟಿರುತ್ತೆನೆ, ನಂತರ ಮೇಲ್ಕಂಡ ಮೇಲ್ ನಿಂದ ಪುನ: ನನಗೆ ಮೇಲ್ ಕಳುಹಿಸಿ ನೀವುಗಳು ನಿಮ್ಮ ಸಂಪೂರ್ಣ ವಿವರಗಳನ್ನು ನಾವು ಕಳುಹಿಸಿರುವ ಈ ಮೇಲ್ ಗೆ ಕಳುಹಿಸಿ ಎಂತ visa.service@uk-consular.com ಮೇಲ್ ಐಡಿ ಕಳುಹಿಸಿರುತ್ತಾರೆ. ಅದರಂತೆ ನಾನು ನನ್ನ ಸಂಪೂರ್ಣ ವಿವರಗಳನ್ನು ಮೇಲ್ಕಂಡ  ಈಮೇಲ್ ಐಡಿಗೆ ಕಳುಹಿಸಿರುತ್ತೇನೆ. ನಂತರ ಸದರಿಯವರು ದಿನಾಂಕ:26-04-2021 ರಂದು ನನಗೆ ನಿಮ್ಮ ವಿಸಾ ಪ್ರೋಸಸ್ ಪ್ರಾಂಭಿಸಿರುತ್ತೇವೆ ಅದಕ್ಕಾಗಿ ನೀವು 30,600/-ರೂಗಳನ್ನು  ಐಸಿಐಸಿಐ ಬ್ಯಾಂಕ್ ನ ಖಾತೆ ಸಂಖ್ಯೆ-233201504964 ಪುಲೀಂದ್ರ ಟಿ,ರವರ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದು ಅದರಂತೆ ನಾನು ನನ್ನ ಬೆಂಗಳೂರಿನ ಎಮ್.ಜಿ ರಸ್ತೆಯಲ್ಲಿ ಇರುವ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಉಳಿತಾಯ ಖಾತೆ ಸಂಖ್ಯೆ-  50100246352364 ಗೆ ಲಿಂಕ್ ಆಗಿರುವ ನನ್ನ ಮೇಲ್ಕಂಡ ಪೋನ್ ನಂಬರಿನ ಗೂಗಲ್ ಪೇ ಮುಖಾಂತರ ಹಣ ವರ್ಗಾವಣೆ  ಮಾಡಿರುತ್ತೇನೆ, ನಂತರ ದಿನಾಂಕ:28-04-2021 ರಂದು  ಪುನಃ ಮೇಲ್ಕಂಡ visa.service@uk-consular.com ಮೇಲ್ ಐಡಿಯಿಂದ ಎನ್.ಹೆಚ್.ಎಸ್ ಫಾರಂ ಭರ್ತಿ ಮಾಡಿ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಿ ಹಾಗೂ ಇದರ ವೆಚ್ಚ 76,800/-ರೂಗಳನ್ನು ವರ್ಗಾವಣೆ ಮಾಡುವಂತೆ ತಿಳಿಸಿದ್ದು ಅದಕ್ಕೆ ನಾನು ಅವರು ಹೇಳಿದ ಹಾಗೆ ಎನ್.ಹೆಚ್.ಎಸ್ ಫಾರಂನ್ನು  ಭರ್ತಿ ಮಾಡಿ ಮೇಲ್ ಕಳುಹಿಸಿ ಅವರು ಹೇಳಿದ ಹಾಗೆ ನನ್ನ ಮೇಲ್ಕಂಡ ಕೆನರಾ ಬ್ಯಾಂಕಿನ ಖಾತೆಯಿಂದ ಹಣ ವರ್ಗಾವಣೆ ಮಾಡಿರುತ್ತೇನೆ. ನಂತರ ಇದೇ ದಿನ ಸದರಿಯವರು ಇಮೇಲ್ ಮುಖಾಂತರ ಗ್ಲೋಬಲ್ ಬ್ಯಾಕ್ ರೌಂಡ್  ಚೆಕ್ ಕ್ಲೀಯರೆನ್ಸ್ ರಿಪೋರ್ಟ್ ಮಾಡಿಸಲು ನೀವುಗಳು 1,35000/-ರೂ ಹಣ ವರ್ಗಾವಣೆ ಮಾಡುವಂತೆ ಮೇಲ್ ಮುಖಾಂತರ ಮೆಸೇಜ್ ಮಾಡಿದ್ದು ನಾನು ಹಣ ಕಳುಹಿಸಿರುವುದಿಲ್ಲ, ನಂತರ  ಮೇಲ್ ನಲ್ಲಿದ್ದ ಮೊಬೈಲ್ ನಂಬರ್ 9362198465 ಸಂಖ್ಯೆಗೆ ಪೋನ್ ಮಾಡಿದ್ದು ಸದರಿಯವರು ಸಹ ನೀವು ಹಣ ಕಳುಹಿಸಿ 5-6 ದಿನಗಳಲ್ಲಿ ವಿಸಾ ಕಳುಹಿಸಿಕೊಡುವುದಾಗಿ ತಿಳಿಸಿರುತ್ತಾರೆ, ಆಗ ನನಗೆ ಅನುಮಾನ ಬಂದು ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದೇನೆ, ನನಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನಿಂದ ಒಟ್ಟು 1,07,400/-ರೂಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ನನ್ನ ಪಾಸ್ ಪೋರ್ಟ್ ಮತ್ತು ನನ್ನ ವಿವರಗಳನ್ನು ಸ್ಕ್ಯಾನ್ ಮಾಡಿಸಿಕೊಂಡು ವಂಚಿಸಿರುವ ಮೇಲ್ಕಂಡ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಂಡು ನನ್ನ ಹಣ ನನಗೆ ವಾಪಸ್ಸುಕೊಡಿಸಬೇಕೆಂದು  ಕೋರಿ ನೀಡಿದ ದೂರು.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.174/2021 ಕಲಂ. 15(A) ಕೆ.ಇ ಆಕ್ಟ್:-

  ದಿನಾಂಕ:01/05/2021 ರಂದು  ಮದ್ಯಾಹ್ನ 14-00 ಗಂಟೆ ಸಮಯದಲ್ಲಿ ಠಾಣೆಯ ಹೆಚ್.ಸಿ 249 ಸಂದೀಪ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ ತಾನು ಮತ್ತು ಠಾಣೆಯ ವೆಂಕಟರವಣ ಪಿಸಿ 544 ರವರು  ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಠಾಣಾ ವ್ಯಾಪ್ತಿಯ ಗೋಪಾಲಪುರ, ಸಿದ್ದೆಪಲ್ಲಿ ಕ್ರಾಸ್ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 1-00 ಗಂಟೆಗೆ ವೀರಪಲ್ಲಿ ಗ್ರಾಮದ ಬಳಿಗೆ ಹೋದಾಗ ವೀರಪಲ್ಲಿ ಗ್ರಾಮದ ವಾಸಿ ವೆಂಕಟಲಕ್ಷಮ್ಮ ಕೊಂ ಶಿವಕುಮಾರ್ ಎಂಬುವರು ಅವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿ ಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ವೆಂಕಟಲಕ್ಷಮ್ಮ ಕೊಂ ಶಿವಕುಮಾರ್, 35 ವರ್ಷ ,ಒಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ, ವೀರಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್  04 ಟೆಟ್ರಾ ಪ್ಯಾಕೆಟ್ ಗಳು 2) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್ 3) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 1-00 ಗಂಟೆಯಿಂದ ಮದ್ಯಾಹ್ನ 1-45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ವೆಂಕಟಲಕ್ಷಮ್ಮ ಕೊಂ ಶಿವಕುಮಾರ್ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುತ್ತೆ.

 

3. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.34/2021 ಕಲಂ. 15(A),32(3)  ಕೆ.ಇ ಆಕ್ಟ್:-

  ದಿನಾಂಕ:01-05-2021 ರಂದು ಮಧ್ಯಾಹ್ನ 1-30 ಗಂಟೆಗೆ ಪಿ.ಎಸ್.ಐ ಶ್ರೀ ಎನ್. ರತ್ನಯ್ಯರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:01-05-2021 ರಂದು ಬೆಳಿಗ್ಗೆ ತಾನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-148 ಧನಂಜಯ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯ್ಕ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ಬಿಳ್ಳೂರು ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬೋಯಿಪಲ್ಲಿ ಗ್ರಾಮದ ಮಲ್ಲಿಕಾರ್ಜುನ ಬಿನ್ ಸದಾಶಿವ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತನಗೆ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಬಿಳ್ಳೂರು ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಲಾಗಿ ಮಲ್ಲಿಕಾರ್ಜುನ ಬಿನ್ ಸದಾಶಿವ, 30 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಬೋಯಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 16 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 440 ಎಂ.ಎಲ್, ಅದರ ಬೆಲೆ 562.08/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೇಟ್ ಇದ್ದು, ಸದರಿ ಆಸಾಮಿ ಮಲ್ಲಿಕಾರ್ಜುನರವರನ್ನು ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಿಗೆ ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿರುತ್ತಾನೆ. ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮಧ್ಯಾಹ್ನ 12-00 ಗಂಟೆಯಿಂದ 1-00  ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ, ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.134/2021 ಕಲಂ. 379 ಐ.ಪಿ.ಸಿ:-

     ದಿನಾಂಕ:01-05-2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ  ಪಿರ್ಯಾದಿದಾರರಾದ ಅಜರ್ುನ್. ಎಂ ಬಿನ್ ಎನ್.ಸಿ.ಮುನಿರಾಜು, ಸುಮಾರು 30  ವರ್ಷ, ತೋಗಟವೀರ ಜನಾಂಗ, ಮಗ್ಗದ ಕೆಲಸ,ವಾಸ:ನೆಲವಾಗಿಲು ಗ್ರಾಮ,ನಂದಗುಡಿ ಹೋಬಳಿ,ಹೊಸಕೋಟೆ ತಾಲ್ಲೂಕು  ರವರು ಠಾಣೆಗೆ ಹಾಜರಾಗಿನೀಡಿದ ದೂರಿನ ಸಾರಾಂಶವೇನೆಂದರೆ  ತಾನು  ಮಗ್ಗದ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ತಾನು  ಈಗ್ಗೆ 2 ವರ್ಷದ ಹಿಂದೆ ನಂ  KA-53 HB-1229 HERO SPELENDOR PLUS ದ್ವಿಚಕ್ರವಾಹನವನ್ನು ತೆಗೆದುಕೊಂಡಿದ್ದು, ಸದರಿ ದ್ವಿಚಕ್ರವಾಹನದ ದಾಖಲಾತಿಗಳು ತನ್ನ ಹೆಸರಿನಲ್ಲಿಯೇ ಇರುತ್ತೆ,  ತನ್ನ  ಅಣ್ಣನಾದ ಬೀಮಾನಂದ ರವರು ಶಿಡ್ಲಘಟ್ಟ ತಾಲ್ಲೂಕು ಹೆಚ್.ಕ್ರಾಸ್ ಗ್ರಾಮದಲ್ಲಿ ಇಂಡಿಯನ್ ಆಯ್ಲ್ ಪೆಟ್ರೋಲ್ ಬಂಕ್ ಬಳಿ ಇರುವ ಸಂಗಪ್ಪ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ ತಾನು  ಆಗಾಗ ತನ್ನ  ಅಣ್ಣನ ಮನೆಗೆ ಹೋಗಿ ಬರುತ್ತಿದ್ದೆ ಈಗಿರುವಲ್ಲಿ ದಿನಾಂಕ:29-04-2021 ರಂದು ರಾತ್ರಿ 8-30 ಗಂಟೆಯಲ್ಲಿ ತಾನು ತನ್ನ ಬಾಬತ್ತು  KA-53 HB-1229 HERO SPELENDOR PLUS ದ್ವಿಚಕ್ರವಾಹನದಲ್ಲಿ  ಹೆಚ್.ಕ್ರಾಸ್ ಗ್ರಾಮದ ತನ್ನ  ಅಣ್ಣನ ಮನೆಗೆ ಬಂದಿದ್ದು ತನ್ನ  ದ್ವಿಚಕ್ರವಾಹನವನ್ನು ತನ್ನ  ಅಣ್ಣನ ಬೀಮಾನಂದ ರವರ ಮನೆಯ ಮುಂದೆ ನಿಲ್ಲಿಸಿದ್ದು, . ನಂತರ ತಾನು ತನ್ನ  ಅಣ್ಣನ ಮನೆಯಲ್ಲಿಯೇ ಮಲಗಿಕೊಂಡು ದಿನಾಂಕ:30-04-2021 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ಎದ್ದು ಊರಿಗೆ ಹೋಗೋಣವೆಂದು ಹೊರಗಡೆ ಬಂದು ನೋಡಲಾಗಿ ತನ್ನ ಬಾಬತ್ತು ದ್ವಿಚಕ್ರವಾಹನ ಅಲ್ಲಿ ಇರಲಿಲ್ಲ ಸುತ್ತಮುತ್ತಲು ಹುಡುಕಾಡಿದರೂ ಪತ್ತೆ ಯಾಗಿರುವುದಿಲ್ಲ ತನ್ನ ಬಾಬತ್ತು KA-53 HB-1229 HERO SPELENDOR PLUS ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ತನ್ನ ದ್ವಿಚಕ್ರವಾಹನವನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ದ್ವಿಚಕ್ರವಾಹನವನ್ನು ಮತ್ತು ಕಳ್ಳತನಮಾಡಿರುವವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:134/2021 ಕಲಂ:379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 01-05-2021 05:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080