Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.80/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ: 31-03-2021 ರಂದು ಪಿರ್ಯಾದಿದಾರರಾದ ಹರೀಶ್ ಎನ್. ಬಿನ್ ಲೇಟ್ ನಾರಾಯಣಸ್ವಾಮಿ,28 ವರ್ಷ, ನಾಯಕರು, ಜಿರಾಯ್ತಿ,  ವಾಸ ಮರವೇನಹಳ್ಳಿ, ಗ್ರಾಮ, ಕಸಬಾ ಹೋಬಳಿ, ಹಂಪಸಂದ್ರ ಪಂಚಾಯ್ತಿ. ಗುಡಿಬಂಡೆ  ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ನಮ್ಮ ತಂದೆ ನಾರಾಯಣಸ್ವಾಮಿ ಮತ್ತು ತಾಯಿ ಸರೋಜಮ್ಮರವರಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಒಂದನೇ ಶೋಭಾ, ಎರಡನೇ ನಾನು, ಮೂರನೇ ಸುಧಾ ಮತ್ತು ನಾಲ್ಕನೇ ರವಿಚಂದ್ರ ಎನ್ ಆಗಿರುತ್ತೇವೆ. ನನಗೆ ಮತ್ತು ನನ್ನ ಅಕ್ಕ ಮತ್ತು ತಂಗಿಗೆ ಮದುವೆಯಾಗಿದ್ದು, ಎಲ್ಲರೂ ಅವರವರ ಮನೆಗಳಲ್ಲಿ ಸಂಸಾರ ಮಾಡಿಕೊಂಡಿರುತ್ತೇವೆ. ನನ್ನ ತಮ್ಮನಾದ ರವಿಚಂದ್ರನು ಪದವಿ ವಿದ್ಯಾಬ್ಯಾಸ ಮುಗಿಸಿ, ನಮ್ಮ ಗ್ರಾಮದಲ್ಲಿ ಜಿರಾಯ್ತಿ ಕೆಲಸ ಮಾಡಿಕೊಂಡಿರುತ್ತಾನೆ.  ನಾನು ನನ್ನ ಹೆಂಡತಿ ಶ್ಯಾಮಲ, ಮಗ ಚಾರ್ವೀಕ್  ನನ್ನ ತಮ್ಮ ರವಿಚಂದ್ರ, ತಾಯಿ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದು, ರವಿಚಂದ್ರನಿಗೆ ಇನ್ನೂ ಮದುವೆಯಾಗಿರುವುದಿಲ್ಲ. ದಿನಾಂಕ:31.03.2021 ರಂದು ಬೆಳಗ್ಗೆ ಸುಮಾರು 06.30 ಗಂಟೆ ಸಮಯದಲ್ಲಿ ನನ್ನ ತಮ್ಮ ರವಿಚಂದ್ರರವರು ನಮ್ಮ ಬಾಬತ್ತು KA-40-T-1779/1780 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಟ್ರಾಲಿಯಲ್ಲಿ ನಮ್ಮ ಜಮೀನಿಗೆ ಗೊಬ್ಬರನ್ನು ತೆಗೆದುಕೊಂಡು ಬರಲು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿಯ ಗೊರ್ತಪಲ್ಲಿ ಗ್ರಾಮಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾನೆ. ನಂತರ ಬೆಳಿಗ್ಗೆ ಸುಮಾರು 8-30 ಗಂಟೆಯಲದಲ್ಲಿ ಯಾರೋ ನನಗೆ ಪೋನ್ ಮಾಡಿ ಡಿ.ಕೊತ್ತಪಲ್ಲಿ ಗ್ರಾಮದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಇಳಿಜಾರಿನ ರಸ್ತೆಯ ಬಲಬದಿಯಲ್ಲಿ ಟ್ರಾಕ್ಟರ್ ಮುಗುಚಿ ಬಿದ್ದು ನನ್ನ ತಮ್ಮ ರವಿಚಂದ್ರ ರವರು ಟ್ರಾಕ್ಟರ್ ಇಂಜಿನ್ ಕೆಳಗೆ ಬಿದ್ದುಮೃತಪಟ್ಟಿರುವುದಾಗಿ ತಿಳಿಸಿದ್ದು ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿತ್ತು. ನಂತರ ವಿಚಾರ ಮಾಡಿ ತಿಳಿಯಲಾಗಿ ರವಿಚಂದ್ರ  ನಮ್ಮ ಬಾಬತ್ತು KA-40-T-1779/1780 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಟ್ರಾಲಿಯನ್ನು ಚಾಲನೆ ಮಾಡಿಕೊಂಡು  ಗೊರ್ತಪಲ್ಲಿಗೆ ಹೋಗಲು ಡಿ.ಕೊತ್ತಪಲ್ಲಿ ಗ್ರಾಮದಿಂದ ಸುಮಾರು 1 ½ ಕಿ.ಮೀ ದೂರದಲ್ಲಿ ಸುಣ್ಣದಕಲ್ಲು ಬೆಟ್ಟದ ಬಳಿ ಇಳಿಜಾರಿನ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗೂಕತೆಯಿಂದ ಟ್ರಾಕ್ಟರ್ ಅನ್ನು ಚಾಲನೆ ಮಾಡಿಕೊಂಡು ಹೋಗುವಾಗ ಟ್ರಾಕ್ಟರ್ ವಾಹನ ನಿಯಂತ್ರಣ ಸಿಗದೇ ರಸ್ತೆಯ ಬಲ ಬದಿ ಉರುಳಿ ಬಿದ್ದು ರವಿಚಂದ್ರ ರವರು ಟ್ರಾಕ್ಟರ್ ಇಂಜಿನ್ ನ ಕೆಳಗೆ ಸಿಲುಕಿ ಆತನ ಕುತ್ತಿಗೆ, ಎದೆ, ಹೊಟ್ಟೆಯ ಮೇಲೆ ತೀವ್ರತರವಾದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರ ಸಹಾಯದಿಂದ ನನ್ನ ತಮ್ಮನ ಮೇಲೆ ಬಿದ್ದಿದ್ದ ಟ್ರಾಕ್ಟರ್ ಇಂಜನ್ ಅನ್ನು ಮೇಲೆತ್ತಿ, ಮೃತದೇಹವನ್ನು ಯಾವುದೋ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೇವೆ. ನನ್ನ ತಮ್ಮನಾದ ರವಿಚಂದ್ರರವರು ಅಪಘಾತದಲ್ಲಿ ಮೃತಪಟ್ಟಿದ್ದು, ಮಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು 11-45 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್ ಸಿ – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ರಿಯಾಜ್ ಪಾಷಾ ಬಿನ್ ದಾದೂ ಸಾಬ್,  ಮುಸ್ಲಿಮರು, ವ್ಯವಸಾಯ, ವಾಸ: ಎಂ, ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ. ಗೊಲ್ಲಹಳ್ಳಿ ಎಸ್ ಬಿ ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 08/03/2011 ರಂದು  89.000 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು ಮದ್ಯಾಹ್ನ 12-00 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್.ಸಿ. – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ರಾಮಕೃಷ್ಣರೆಡ್ಡಿ, ಸಿ ಬಿನ್ ಚೌಡಪ್ಪ, ಹಿಂದೂ,ವ್ಯವಸಾಯ, ವಾಸ: ಚಿಂತಪಲ್ಲಿ  ಗ್ರಾಮ,  ಚಿಂತಾಮಣಿ ತಾಲ್ಲೂಕು. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ.ಗೊಲ್ಲಹಳ್ಳಿ ಎಸ್. ಬಿ. ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 20/02/2009 ರಂದು  25.500 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ

 

4. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು ಮದ್ಯಾಹ್ನ 12-15 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್.ಸಿ. – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಇಬ್ರಾಹಿಂ ಸಿ ಬಿನ್ ಬುಡ್ಡುಸಾಬಿ, ಮುಸ್ಲಿಂ, ವ್ಯವಸಾಯ, ವಾಸ: ಎಂ ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ.ಗೊಲ್ಲಹಳ್ಳಿ ಎಸ್. ಬಿ. ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 29/08/2011 ರಂದು  81.000 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು ಮದ್ಯಾಹ್ನ 12-30 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್.ಸಿ. – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಬುಡನ್ ಸಾಬ್ ಬಿನ್ ಮಸ್ತಾನ್ ಸಾಬ್, ಮುಸ್ಲಿಂ, ವ್ಯವಸಾಯ, ವಾಸ: ಎಂ ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ.ಗೊಲ್ಲಹಳ್ಳಿ ಎಸ್. ಬಿ. ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 26/08/2011 ರಂದು  47.500 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

6. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.45/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು ಮದ್ಯಾಹ್ನ 12-45 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್.ಸಿ. – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಬೀಬಿಜಾನ್ ಬಿನ್ ಮೌಲಾ, ಮುಸ್ಲಿಂ, ವ್ಯವಸಾಯ, ವಾಸ: ಎಂ ಗೊಲ್ಲಹಳ್ಳಿ ಗ್ರಾಮ,  ಚಿಂತಾಮಣಿ ತಾಲ್ಲೂಕು. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ.ಗೊಲ್ಲಹಳ್ಳಿ ಎಸ್. ಬಿ. ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 05/09/2011 ರಂದು 1.50.000/- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

7. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 406,420 ಐ.ಪಿ.ಸಿ:-

          ದಿನಾಂಕ: 31/03/2021 ರಂದು ಮದ್ಯಾಹ್ನ 13-00 ಗಂಟೆಗೆ ಘನ ನ್ಯಾಯಾಲಯದಿಂದ ಸಾದರಾದ ದೂರನ್ನು ಘನ ನ್ಯಾಯಾಲಯದ ಹೆಚ್.ಸಿ. – 107 ಮುಸ್ತಪ ರವರು ತಂದು ಹಾಜರುಪಡಿಸಿದ್ದನ್ನು ಪಡೆದು ಪರಿಶೀಲಿಸಲಾಗಿ  ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಮೂಡಲಗೊಲ್ಲಹಳ್ಳಿ, ಚಿಂತಾಮಣಿ ತಾಲ್ಲೂಕು ಶಾಖೆಯಲ್ಲಿ  ಅಬ್ದುಲ್ ಸುಕೂರ್ ಬಿನ್ ಮಸ್ತಾನ್ ಖಾನ್, ಮುಸ್ಲಿಂ, ವ್ಯವಸಾಯ, ವಾಸ: ವೆಂಕಟಗಿರಿಕೋಟೆ,  ಚಿಂತಾಮಣಿ ನಗರ. ರವರು  ವ್ಯವಸಾಯ ಉದ್ದೇಶಕ್ಕಾಗಿ ಎಂ.ಗೊಲ್ಲಹಳ್ಳಿ ಎಸ್. ಬಿ. ಐ ಬ್ಯಾಂಕಿನಲ್ಲಿ ಬಂಗಾರದ ವಡವೆಗಳನ್ನು ಅಡಮಾನ ಇಟ್ಟು ದಿನಾಂಕ: 26/02/2011 ರಂದು 55.000 /- ರೂಗಳ ಸಾಲವನ್ನು ಪಡೆದುಕೊಂಡಿದ್ದು, ಸಾಲಿಯಾನ ವಾರ್ಷಿಕವಾಗಿ ಶೇಕಡ 7 % ರಂತೆ ಪಡೆದು ಕೊಂಡಿದ್ದರು. ತನ್ನ ಖಾತೆಯನ್ನು  ಸರಿಯಾಗಿ ನಿರ್ವಹಿಸದೇ ಬಡ್ಡಿಯನ್ನು ಸಹ ಸರಿಯಾಗಿ ಬ್ಯಾಂಕಿಗೆ ಸಂದಾಯ ಮಾಡದೇ ಅಡಮಾನ ಇಟ್ಟಿರುವ ಬಂಗಾರದ ವಡವೆಗಳಲ್ಲಿ  ಸಹ ಗುಣಮಟ್ಟ ಇಲ್ಲದೇ ಇರುವ ಬಗ್ಗೆ ಬ್ಯಾಂಕಿನ ಗಮನಕ್ಕೆ ಬಂದಿರುತ್ತದೆ. ಆರೋಪಿಯು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ. ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಪಿರ್ಯಾದಿದಾರರು ಕೋರಿ ನೀಡಿರುವ ದೂರಿನ ಸಾರಾಂಶವಾಗಿರುತ್ತೆ.

 

8. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 379 ಐ.ಪಿ.ಸಿ:-

          ದಿನಾಂಕ-31/03/2021 ರಂದು ಬೆಳಿಗ್ಗೆ 10:30 ಗಂಟೆಗೆ ಪಿಎಸ್ಐ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಕೃತ್ಯ ನಡೆದ ಸ್ಥಳದ  ಆಧಾರದ ಮೇಲೆ  ನೀಡಿದ ಕೇಸಿನ ದಾಖಲಾತಿಗನ್ನು ಟಪಾಲು ಮುಖಾಂತರ ಪಡೆದುಕೊಂಡು  ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ-24/12/2020 ರಂದು ಸಂಜೆ 05:30 ಗಂಟೆಯಲ್ಲಿ ದಿನಾಂಕ:24.12.2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಮುನಿಬೀರೇಗೌಡರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಕೆಎ 51 ಟಿ 8186 ನೊಂದಣಿ ಸಂಖ್ಯೆಯ ಟ್ರಾಕ್ಟರನ್ನು ಹೊಂದಿದ್ದು, ಅದಕ್ಕೆ ಕೆಎ 51 ಟಿ 8187 ಟ್ರೈಲರ್ ಇದ್ದು, ದಿನಾಂಕ:21.12.2020 ರಂದು ತಾನು ತಮ್ಮ ಟ್ರಾಕ್ಟರ್ & ಟ್ರೈಲರ್ ಅನ್ನು ತೋಟದ ಕೆಲಸಕ್ಕೆ ತೆಗೆದುಕೊಂಡು ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 10-00 ಗಂಟೆ ಸಮಯದಲ್ಲಿ ತನ್ನ ಬಾಬತ್ತು ಕೆಎ 51 ಟಿ 8187 ಟ್ರೈಲರ್ ಅನ್ನು ತಮ್ಮ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಬಳಿ ನಿಲ್ಲಿಸಿ ಇಂಜನನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ದಿ:22.12.2020 ರಂದು ಬೆಳಿಗ್ಗೆ 5-00 ಗಂಟೆಗೆ ಎದ್ದು ನೋಡಲಾಗಿ ತನ್ನ ಬಾಬತ್ತು ಟ್ರೈಲರ್ ರಸ್ತೆಯಲ್ಲಿ ಇರಲಿಲ್ಲ. ತನ್ನ ಬಾಬತ್ತು ಕಳುವಾಗಿರುವ ಟ್ರೈಲರ್ ನ ಬೆಲೆ ಸುಮಾರು 1,00,000/- [ ಒಂದು ಲಕ್ಷ ರೂಪಾಯಿ] ಬೆಲೆ ಬಾಳುವಂತಹದ್ದಾಗಿದ್ದು, ತಕ್ಷಣ ತಾನು ಮತ್ತು ತನ್ನ ತಮ್ಮ ಹರೀಶ್ ಕುಮಾರ್ ರವರು ತಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತು ತಮಗೆ ಪರಿಚಯವಿರುವವರ ಮನೆಗಳ ಬಳಿ ಹೋಗಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ದಿ:24.12.2020 ರಂದು ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಳುವಾಗಿರುವ ತನ್ನ ಬಾಬತ್ತು ಕೆಎ 51 ಟಿ 8187 ನೊಂದಣಿ ಸಂಖ್ಯೆಯ ಟ್ರೈಲರ್ ಅನ್ನು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.  ನಂತರ ದಿನಾಂಕ-25/12/2020 ರಂದು ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೇಗಾಗಿ ಠಾಣೆಯ ಹೆಚ್,ಸಿ-150 ಮಂಜುನಾಥ್ ಮತ್ತು ಪಿ.ಸಿ-264 ನರಸಿಂಹಮೂರ್ತಿ ನೇಮಿಸಿ ಕಳುಹಿಸಿದ್ದು ಸದರಿರವರು ಬೆಳಿಗ್ಗೆ ಮಂಚನ ಬೆಲೆ,ನಂದಿ ಕ್ರಾಸ್,ವೆಂಕಟಗಿರಿ ಕೋಟೆ ಮತ್ತು ಆವತಿ ಕಡೆಗಳಿಗೆ ಭೇಟಿ  ನೀಡಿ ಭಾತ್ಮೀದಾರರನ್ನು ಸಂಮರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ದೇವನಹಳ್ಳಿ ತಾಲ್ಲೂಕು ಸಾವಕನಹಳ್ಳೀ ಗ್ರಾಮಕ್ಕೆ ಬೇಟಿ ನೀಡಿ ಬಾತ್ಮಿ ಸಂಗ್ರಹಿಸಲಾಗಿ ಕಳುವಾಗಿದ್ದ ಕೆಎ 51 ಟಿ 8187 ನೊಂದಣಿ ಸಂಖ್ಯೆಯ ಟ್ರೈಲರ್ ಅನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಆರೋಪಿಯ ಮನೆಯ ಬಳಿ ಆರೋಪಿಯ ಹೆಸರು ವಿಳಾಸ ಕೇಳಲಾಗಿ ಕೇಶವ ಬಿನ್  ರಾಜಣ್ಣ 50 ವರ್ಷ,ವಕ್ಕಲಿಗರು.ಜಿರಾಯ್ತಿ ವಾಸ ಸಾವಕನಹಳ್ಳಿ ಗ್ರಾಮ ದೇವನಹಳ್ಳಿ ತಾಲ್ಲೂಕು ಎಂದು ತಿಳಿಸಿದವನನ್ನು ಬೆಳಿಗ್ಗೆ 08:00 ಗಂಟೆ ಸಮಯದಲ್ಲಿ ಸಾವಕನಹಳ್ಳಿ ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 09:00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ದಸ್ತಗಿರಿ ಮಾಡಿ ಸೂಕ್ತ ಪೊಲೀಸ್ ಅಭಿರಕ್ಷೆಯಲ್ಲಿ ಬಿಟ್ಟಿರುತ್ತೆ ಹಾಗೂ ಆರೋಪಿಯ ಸ್ವ-ಇಚ್ಚಾ ಹೇಳಿಕೆಯನ್ನು ಪಡೆದುಕೊಂಡು ತನ್ನ ಹೇಳಿಕೆಯಲ್ಲಿ ತಾನು ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ಸರಹದ್ದಿನ ಕಂದವಾರ ಗ್ರಾಮದಲ್ಲಿ,ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೊನ್ನೇನಹಳ್ಳಿ.ವಿಶ್ವನಾಥಪುರ ಪೊಲೀಸ್ ಠಾಣಾ ಸರಹದ್ದಿನ ಕೋಡುಗುರ್ಕಿ ಗ್ರಾಮದಲ್ಲಿ ಟ್ರೈಲರ್ ಮತ್ತು ಟ್ಯಾಂಕರ್ ಅನ್ನು ಕಳವು ಮಾಡಿಕೊಂಡು ಬಂದು ಆ ಪೈಕಿ ಹೊನ್ನೇನಹಳ್ಳಿ ಗ್ರಾಮದಲ್ಲಿ ಕಳವು ಮಾಡಿರುವ ಟ್ರೈಲರ್ ಅನ್ನು ದೇವನಹಳ್ಳಿ ಟೌನ್ ಮರಳು ಬಾಗಿಲು ಬಳಿ ಮಾರಾಟ ಮಾಡಿರುವುದಾಗಿ ಉಳಿದವುಗಳನ್ನು ತಮ್ಮ ಮನೆಯ ಬಳಿ ಹೊಸದಾಗಿ ಪೈಂಟ್ ಮಾಡಿ ಇಟ್ಟಿರುವುದಾಗಿ ನುಡಿದಿರುತ್ತಾನೆ.  ನಂತರ ತನಿಖೆಯನ್ನು ಮುಂದುವರೆಸಿ ಈ  ಪ್ರಕರಣದಲ್ಲಿ ಆರೋಪಿಯು ಕೃತ್ಯಕ್ಕೆ ಬಳಸಿದ್ದ ಐಚರ್ ಟ್ರಾಕ್ಟರ್ ಇಂಜನ್ ಕೆಎ 43 ಎನ್ 0674 ಮಾರುತಿ ಓಮಿನಿ ಹಾಗೂ ಕಳವು ಮಾಡಿಕೊಂಡು ಹೋಗಿ ಮನೆಯ ಬಳಿ ನಿಲ್ಲಿಸಿದ್ದ 02 ಟ್ರೈಲರ್ ಮತ್ತು ಒಂದು ನೀರಿನ ಟ್ಯಾಂಕರ್ ಅನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮುಖಾಂತರ ಅಮಾನತ್ತು ಪಡಿಸಿಕೊಂಡು ಠಾಣಾ ಮಾಲು ಪಟ್ಟಿ ಸಂಖ್ಯೆ-224/2020 ರಲ್ಲಿ ನಮೂದಿಸಿರುತ್ತೆ.ಸದರಿ ಪ್ರಕರಣದಲ್ಲಿ ಆರೋಪಿ 2 ಗಗನ್ ಮತ್ತು ಆರೋಪಿ 3 ಕಿಶನ್ ರವರುಗಳು ತಲೆಮರೆಸಿಕೊಂಡಿದ್ದು ದಸ್ತಗಿರಿ ಮಾಡಿ ಮುಂದಿನ ತನಿಖೆ ಕೈಗೊಳ್ಳಲು ನೀಡಿದ ವರದಿ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.135/2021 ಕಲಂ. 447,504,506,467,468,471,420 ಐ.ಪಿ.ಸಿ & 3(1)(f),0,3(2)(v-a) SC AND THE ST (PREVENTION OF ATTROCITIES) ACT:-

          ದಿನಾಂಕ: 31/03/2021 ರಂದು ಸಂಜೆ 6.30 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ನ್ಯಾಯಾಲಯದಿಂದ ಸಾದರಾದ ಕೃಷ್ಣಪ್ಪ ಬಿನ್ ಲೇಟ್ ಕದಿರಪ್ಪ, 52 ವರ್ಷ, ಪರಿಶಿಷ್ಠ ಜಾತಿ, ಹಿರಣ್ಯಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ತನ್ನ ಹೆಂಡತಿಯಾದ ಸರಸ್ವತಮ್ಮ ರವರು ನಾರಾಯಣಿಗ ಬಿನ್ ಕೋನಿಗ ರವರ ಮೊಮ್ಮಗಳಾಗಿದ್ದು, 1951 ನೇ ಸಾಲಿನಲ್ಲಿ ನಾರಾಯಣಿಗ ರವರಿಗೆ ಹಿರಣ್ಯಹಳ್ಳಿ ಗ್ರಾಮದ ಸರ್ವೇ ನಂಬರ್ 44 ರಲ್ಲಿ 4 ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿರುತ್ತೆ. ದಿನಾಂಕ: 26/10/1993 ರಂದು ನಾರಾಯಣಿಗ ರವರು ಮೇಲ್ಕಂಡ ಜಮೀನನ್ನು ತನ್ನ ಹೆಂಡತಿಯಾದ ಸರಸ್ವತಮ್ಮ ರವರಿಗೆ ವಿಲ್ ಮಾಡಿರುತ್ತಾರೆ. ದಿನಾಂಕ: 18/06/1995 ರಂದು ನಾರಾಯಣಿಗ ರವರು ಮೃತಪಟ್ಟಿದ್ದು ನಂತರ ಸರಸ್ವತಮ್ಮ ರವರು ಸದರಿ ಸ್ವತ್ತಿನ ಅನುಭೋಗದಲ್ಲಿರುತ್ತಾರೆ. ಹೀಗಿರುವಾಗ ಚಿಂತಾಮಣಿ ತಾಲ್ಲೂಕು, ಬಚ್ಚವಾರಹಳ್ಳಿ ಗ್ರಾಮದ ವಕ್ಕಲಿಗ ಜನಾಂಗಕ್ಕೆ ಸೇರಿದ ಅಭಿಲಾಶ್ ಬಿನ್ ಲೇಟ್ ಮಂಜುನಾಥರೆಡ್ಡಿ ರವರು ಮೇಲ್ಕಂಡ ತನ್ನ ಹೆಂಡತಿಯ ಬಾಬತ್ತು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ತಾವು ಬೆಳೆದಿದ್ದ ಉರುಳಿ ಬೆಳೆಯನ್ನು ಟ್ರ್ಯಾಕ್ಟರ್ ಮುಖಾಂತರ ಉಳುಮೆ ಮಾಡಿದ್ದು, ಸದರಿ ಸಂಬಂಧ ದಿನಾಂಕ: 03/09/2020 ರಂದು ತನ್ನ ಹೆಂಡತಿ ಸರಸ್ವತಮ್ಮ ರವರು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್.ನಂ.456/2020 ರೀತ್ಯಾ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಲಾಷ್ ರವರು ಸರ್ಕಾರದಿಂದ ಮಂಜೂರಾಗಿರುವ ಒಂದು ನಕಲಿ ದಾಖಲೆಯನ್ನು ತೋರಿಸಿ ಈ ಜಮೀನು (3 ಎಕರೆ, 20 ಗುಂಟೆ ಜಮೀನು) ವೆಂಕಟಸ್ವಾಮಿ ಬಿನ್ ದೊಡ್ಡವೆಂಟಕರಾಮಣ್ಣ ರವರಿಗೆ ಸಂಬಂದಿಸಿದೆಂದು ತಿಳಿಸಿರುತ್ತಾರೆ. ನಂತರ ತಾನು ಈ ಬಗ್ಗೆ ತಾಲ್ಲೂಕು ಕಛೇರಿಯಲ್ಲಿ ಪರಿಶೀಲಿಸಲಾಗಿ ವೆಂಕಟಸ್ವಾಮಿ ರವರಿಗೆ ಅಂತಹ ಯಾವುದೇ ಜಮೀನು ಮಂಜೂರಾಗಿರುವುದಿಲ್ಲವೆಂದು ತಿಳಿದು ಬಂದಿರುತ್ತೆ. ಅಭಿಲಾಷ್ ರವರ ತಾತ ವೆಂಕಟಸ್ವಾಮಿ ರವರ ಹೆಸರಿನಲ್ಲಿ 1963 ಅಲ್ಲಿ ಯಾವುದೇ ಜಮೀನು ಮಂಜೂರಾಗದೆ ಇದ್ದು, ಆರೋಪಿಯು ಫಾರಂ ನಂ-1 ನ್ನು ನಕಲಿಯಾಗಿ ಸೃಷ್ಠಿಸಿ ತಮಗೆ ಹಾಗೂ ಸರ್ಕಾರಕ್ಕೆ ಮೋಸವೆಸಗಿರುತ್ತಾನೆ. ದಿನಾಂಕ: 21/10/2020 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಾನು ಮೇಲ್ಕಂಡ ತಮ್ಮ ಜಮೀನಿನಲ್ಲಿದ್ದಾಗ ಅಭಿಲಾಷ್ ರವರು ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಕೆಟ್ಟ ಮಾತುಗಳಿಂದ ಬೈದು, ಪ್ರಾಣಬೆದರಿಕೆಯನ್ನು ಹಾಕಿರುತ್ತಾನೆ. ಅಭಿಲಾಷ್ ರವರು ನಕಲಿ ದಾಖಲೆಗಳನ್ನು ಸೃಜನೆ ಮಾಡಿ ತನ್ನ ಜಮೀನನ್ನು ಕಬಳಿಸಬೇಕೆಂದು ಪರಿಶಿಷ್ಠ ಜಾತಿಗೆ ಸೇರಿದ ತನ್ನ ಮೇಲೆ ಸವರ್ಣೀಯ ಜಾತಿಗೆ ಸೇರಿದ ಅಭಿಲಾಷ್ ದೌರ್ಜನ್ಯವೆಸಗಿದ್ದು, ಆತನು ಕಲಂ 447, 504, 506, 467, 468, 471, 420 ಐ.ಪಿ.ಸಿ ಮತ್ತು ಕಲಂ 3(1)(ಎಫ್), 3(1)(ಜಿ), 3(2)(ವಿಎ) ಎಸ್.ಸಿ/ಎಸ್.ಟಿ ಪಿಓಎ ಆಕ್ಟ್-1989 ರೀತ್ಯಾ ಅಪರಾಧವೆಸಗಿರುತ್ತಾನೆ. ನಂತರ ತಾನು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಮನವಿಯನ್ನು ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ತಾನು ಘನ ನ್ಯಾಯಾಲಯದಲ್ಲಿ ಸಾದರದ ದೂರನ್ನು ದಾಖಲಿಸಿರುವುದಾಗಿರುತ್ತೆ.

 

10. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.136/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ: 31/03/2021 ರಂದು ರಾತ್ರಿ 8.30 ಗಂಟೆಗೆ ಮನೋಹರ್ ಬಿನ್ ವೆಂಕಟೇಶ.ಕೆ.ಎನ್, 23 ವರ್ಷ, ನಾಯಕರು, ಕೂಲಿ ಕೆಲಸ, ಕುರುಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:31/03/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ತನ್ನ ತಂದೆಯಾದ ವೆಂಕಟೇಶ.ಕೆ.ಎನ್ ಬಿನ್ ಲೇಟ್ ನಾರಾಯಣಪ್ಪ, 49 ವರ್ಷರವರು ಮನೆಗೆ ದಿನಸಿ ವಸ್ತುಗಳನ್ನು ತೆಗೆದುಕೊಂಡು ಬರಲು ತಮ್ಮ ಬಾಬತ್ತು ಕೆಎ-40 ವೈ-4213 ನೊಂದಣಿ ಸಂಖ್ಯೆಯ ಹಿರೋ ಪ್ಯಾಶನ್ ಪ್ರೋ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಹೋಗಿರುತ್ತಾರೆ. ನಂತರ ಇದೇ ದಿನ ಸಂಜೆ ಸುಮಾರು 5.40 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಜಗನ್ನಾಥ ಬಿನ್ ತಿಮ್ಮಯ್ಯರವರು ತನಗೆ ಫೋನ್ ಮಾಡಿ ಕುರುಟಹಳ್ಳಿ ಗ್ರಾಮದ ಬಳಿ ಕಡಪ-ಬೆಂಗಳೂರು ರಸ್ತೆಯ ಶ್ರೀನಿವಾಸ ವೈನ್ಸ್ ಅಂಗಡಿಯ ಮುಂದೆ ನಿಮ್ಮ ತಂದೆ ವೆಂಕಟೇಶರವರಿಗೆ ಅಪಘಾತವಾಗಿದೆ ನೀನು ಕೂಡಲೇ ಬಾ ಎಂತ ತಿಳಿಸಿದ್ದು, ಕೂಡಲೇ ತಾನು ಮತ್ತು ತನ್ನ ತಮ್ಮನಾದ ಉದಯ್ ಕುಮಾರ್ ರವರು ತಮ್ಮ ಮನೆಗೆ ಸ್ವಲ್ಪ ದೂರದಲ್ಲಿದ್ದ ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ತಮ್ಮ ತಂದೆಯವರಿಗೆ ಹಣೆಗೆ, ಮೂಗಿನ ಮೇಲೆ, ತಲೆಯ ಹಿಂದೆ ರಕ್ತಗಾಯಗಳಾಗಿ, ಮೈ-ಕೈ ಮೇಲೆ ತರಚಿದ ರಕ್ತಗಾಯಗಳಾಗಿತ್ತು. ತಕ್ಷಣ ತಮ್ಮ ತಂದೆಯವರನ್ನು ಉಪಚರಿಸಿ ಚಿಕಿತ್ಸೆಗಾಗಿ ತಮ್ಮ ಬಾಬತ್ತು ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತೇನೆ. ತಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಅಪಘಾತದ ಬಗ್ಗೆ ಜಗನ್ನಾಥರವರಿಗೆ ವಿಚಾರ ಮಾಡಲಾಗಿ ಇದೇ ದಿನ ಸಂಜೆ ಸುಮಾರು 5.30 ಗಂಟೆ ಸಮಯದಲ್ಲಿ ನಿಮ್ಮ ತಂದೆಯರವರಾದ ವೆಂಕಟೇಶರವರು ತಮ್ಮ ಬಾಬತ್ತು ಕೆಎ-40-ವೈ-4213 ನೊಂದಣಿ ಸಂಖ್ಯೆಯ ಹೀರೋ ಪ್ಯಾಶನ್ ಪ್ರೋ ದ್ವಿಚಕ್ರ ವಾಹನದಲ್ಲಿ ಕುರುಟಹಳ್ಳಿ ಕ್ರಾಸ್ ನಿಂದ ತಮ್ಮ ಮನೆಯ ಕಡೆಗೆ ಕಡಪ-ಬೆಂಗಳೂರು ರಸ್ತೆಯಲ್ಲಿ ಶ್ರೀನಿವಾಸ ವೈನ್ಸ್ ಅಂಗಡಿಯ ಮುಂದೆ ಬರುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಎಪಿ-31-ಬಿಪಿ-0199 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಂದೆಯವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದರ ಪರಿಣಾಮ ತಮ್ಮ ತಂದೆ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಮೇಲ್ಕಂಡಂತೆ ಗಾಯಗಳಾಗಿರುವುದಾಗಿ ಗೊತ್ತಾಯಿತು. ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಎಪಿ-31 ಬಿಪಿ-0199 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:31/03/2021 ರಂದು ಸಂಜೆ 4-15 ಗಂಎಗೆ ಪಿರ್ಯದಿರರಾದ ಕಿರಣ ಬಿನ್ ನಾಗರಾಜ, 23 ವರ್ಷ, ಹಿಂದೂ ಸಾದರು ಜನಾಂಗ, ಜಿರಾಯ್ತಿ, ವಾಸ; ದಿನ್ನೆಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ತನಗೆ ತಂದೆ ನಾಗರಾಜ, ತಾಯಿ ಮಂಜುಳಮ್ಮ ಮತ್ತು ಒಬ್ಬ ತಂಗಿ ಸುಧಾ ರವರು ಇರುತ್ತಾರೆ. ದಿನಾಂಕ:24/03/2021 ರಂದು ತನ್ನ ತಾಯಿ ತನ್ನ ತವರು ಮನೆಯಾದ ಮಾವಿನಕಾಯಲಹಳ್ಳಿ ಗ್ರಾಮಕ್ಕೆ ಹೋದರು, ದಿನಾಂಕ:25/03/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ಮದು ರವರು ಪೊನ್ ಮಾಡಿ ಈ ದಿನ ಬೆಳಿಗ್ಗೆ  6-30 ಗಂಟೆಯಲ್ಲಿ  ಹಿರೇಬಿದನೂರು ಗ್ರಾಮದ ಬಳಿ ರಸ್ತೆಯಲ್ಲಿ ನಿಮ್ಮ ತಾಯಿಗೆ ಅಪಘಾತವಾಗಿರುವುದಾಗಿದ್ದು ಅಂಬುಲೇನ್ಸ್ ಸರ್ಕಾರಿ ಅಸ್ಪತ್ರೆ ಗೌರಿಬಿದನೂರುಗೆ ಚಿಕಿತ್ಸೆಗಾಗಿ ದಾಖಲಿಸಿವುದಾಗಿ ತಿಳಿಸಿದ್ದು ತಾನು ಮತ್ತು ತನ್ನ ತಂದೆ ನಾಗರಾಜ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರವು ನಿಜವಾಗಿರುತ್ತೆ. ನಂತರ ತಾನು ತನ್ನ  ತಾಯನ್ನು ವಿಚಾರಿಸಿದಾಗ ತಮ್ಮ ಗ್ರಾಮಕ್ಕೆ ಬರಲು ನಾಗೇನಹಳ್ಳಿ ಗ್ರಾಮದ  ಬಂದು ಬಸ್ಸಿಗಾಗಿ ಕಾಯುತ್ತೀದ್ದಾಗ ಮಾವಿನಕಾಯಲಹಳ್ಳಿ ಗ್ರಾಮ ವಾಸಿಯಾದ ಮದು ಬಿನ್ ರಾಜಣ್ಣ, 28 ವರ್ಷ, ಸಾದರು ಜನಾಂಗ ರವರು ಕೆ.ಎ- 05 ಎಂಎಫ್-3935 ನೊಂದಣಿ ಸಂಖ್ಯೆ ಓಮಿನಿ ವಾಹನದಲ್ಲಿ ಬಂದು ತನ್ನನ್ನು ಅದರಲ್ಲಿ ಕುರಿಸಿಕೊಂಡು ಗೌರಿಬಿದನೂರಿಗೆ ಬರಲು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಗೌರಿಬಿದನೂರು ನಗರ ಹಿರೇಬಿದನೂರು ಗ್ರಾಮದ ರಸ್ತೆಯ ಪಕ್ಕದಲ್ಲಿ ಪಲ್ಟಿ ಹೊಡಿಸಿ ರಸ್ತೆ ಅಪಘಾತ ಮಾಡಿದ ಪರಿಣಾಮ ಅದರಲ್ಲಿದ್ದ ತನಗೆ ಹಣೆ ಬಳಿ ರಕ್ತ ಗಾಯವಾಗಿದ್ದು ಮತ್ತು ಬೆನ್ನಿನ ಮೂಳೆ ಮುರಿತವಾಗಿದ್ದು ಮತ್ತು ಮದು ರವರಿಗೆ ಬಲಕಣ್ಣಿಗೆ ಮತ್ತು ಹಣೆ ಬಳಿ ಗಾಯವಾಗಿರುವುದಾಗಿ ತಿಳಿಸಿದ್ದು ನನ್ನ ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ತಾನು ಮತ್ತು ತನ್ನ ತಂದೆ ಅಂಬೆಲೇನ್ಸ್ನಲ್ಲಿ ಬೆಂಗಳೂರಿನಲ್ಲಿರುವ ಕೊಲಂಬಿಯ ಏಷ್ಯಾ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸುತ್ತೀದ್ದರಿಂದ ತಾವು ಆ ದಿನ ದೂರು ನೀಡಲು ಸಾದ್ಯವಾಗಹಿರುವುದಿಲ್ಲ.  ಆದ್ದರಿಂದ ತನ್ನ ತಾಯಿಗೆ ಅಪಘಾತ ಪಡಿಸದ ಮದು ಬಿನ್ ರಾಜಣ್ಣ ರವರ ವಿರುದ್ದ ಮತ್ತು  ಕೆ.ಎ- 05 ಎಂಎಫ್-3935 ನೊಂದಣಿ ಸಂಖ್ಯೆ ಓಮಿನಿ ವಾಹನದ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿದೆ.

 

12. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.50/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:01-04-2021 ರಂದು ಮದ್ಯಾಹ್ನ 12-05 ಗಂಟೆಗೆ ಪಿರ್ಯಾದಿದಾರರಾದ ಸರಮನ್ ಸಿಂಗ್ ಯಾದವ್ ಬಿನ್ ಅನುಖೇಲಾಲ್ ಸಿಂಗ್ ಯಾದವ್ 49 ವರ್ಷ ಯಾದವ ಜನಾಂಗ ಕೂಲಿ ಕೆಲಸ ವಾಸ ನಂ-621 ಸುಲ್ತಾನ್ ಪುರ ಎಕ್ಸಟೇಷನ್ ದಕ್ಷಿಣ ದೆಹಲಿ. ದೆಹಲಿ ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ: ತನಗೆ 1ನೇ ಬಿನೇಶ್ 2ನೇ ಅಂಕಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು ತನ್ನ 1ನೇ ಮಗನಾದ ಬಿನೇಶ್  ರವರು ತನ್ನ ತಂಗಿಯ ಊರಾದ ಕೇತನಾ ಹರಸ ಪಿರೋಜ್ ಬಾದ್ ಉತ್ತರಪ್ರದೇಶ್ ರಾಜ್ಯದಲ್ಲಿ ನನ್ನ ತಂಗಿಯ ಮನೆಯಲ್ಲಿದ್ದುಕೊಂಡು ಲಾರಿ ಕ್ಲೀನರ್ ಕೆಲಸ ಮಾಢಿಕೊಂಡಿರುತ್ತಾನೆ.  ತಮ್ಮ ತಂಗಿಯ ಊರಿನವರಾದ  ಮತ್ತು ತನ್ನ ಮಗ ಬೀನೇಶ್ ರವರ ಸ್ನೇಹಿತನಾದ  ಶೈಲೇಂದ್ರಕುಮಾರ್ ಬಿನ್ ಶ್ಯಾಂ ಸಿಂಗ್ ಕತಾರಾ 26 ವರ್ಷ ಯಾದವ್ ಜನಾಂಗ ಚಾಲಕ ವೃತ್ತಿ ವಾಸ ಕೇತನಾ ಹರಸ ಪಿರೋಜ್ ಬಾದ್ ಉತ್ತರಪ್ರದೇಶ್ ರಾಜ್ಯ  ರವರು ಲಾರಿ ಚಾಲಕರಾಗಿದ್ದು ಇವರು ಕೆ.ಎಂ.ಟ್ರಾನ್ಸ್ ಲಾಜಿಸ್ಟೀಕ್ ಪ್ರೈವೇಟ್ ಕಂಪನಿಯ ಸರಕು ಸಾಗಾಣಿಕೆ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದು  ಅಗಾಗ ತನ್ನ ಮಗನಾದ ಬಿನೇಶ್  ರವರನ್ನು ಲಾರಿ ಕ್ಲೀನರ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಅದರಂತೆ ಹೀಗಿರುವಾಗ ತನ್ನ ಮಗನಾದ ಬಿನೇಶ್  ರವರು ದಿನಾಂಕ:24-03-2021 ರಂದು ಚಾಲಕರಾದ  ಶೈಲೇಂದ್ರಕುಮಾರ್ ರವರೊಂದಿಗೆ ಲಾರಿ ಚಾಲಕ ಕೆಲಸಕ್ಕೆ ಹೋಗಿರುತ್ತಾರೆ. ದಿನಾಂಕ:31-03-2021 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ತನ್ನ ತಂಗಿಯಾದ ಬ್ಯಾಕುಂಟೆ  ರವರು ತನಗೆ ಪೋನ್ ಮಾಡಿ ತಿಳಿಸಿದ್ದನೆಂದರೆ ದಿನಾಂಕ:31-03-2021 ರಂದು ರಾತ್ರಿ ಸುಮಾರು 8-15 ಗಂಟೆಯಲ್ಲಿ ತನ್ನ ತಂಗಿ ಬ್ಯಾಕುಂಟೆ ರವರಿಗೆ ತನ್ನ ಮಗನಾದ ಬೀನೇಶ್ ರವರೊಂದಿಗೆ ಹೋಗಿದ್ದ ಚಾಲಕ  ಶೈಲೇಂದ್ರಕುಮಾರ್ ರವರು ಪೋನ್ ಮಾಡಿ ದಿನಾಂಕ:31-03-2021 ರಂದು ಶೈಲೇಂದ್ರಕುಮಾರ್ ರವರು ಮತ್ತು ಬೀನೇಶ್ ರವರು ಕೆ.ಎಂ.ಟ್ರಾನ್ಸ್ ಲಾಜಿಸ್ಟೀಕ್ ಪ್ರೈವೇಟ್ ಕಂಪನಿಯ ಸರಕು ಸಾಗಾಣಿಕೆ ಕಂಪನಿಗೆ ಸೇರಿದ ಆರ್.ಜೆ-47 ಜಿ.ಎ-2349 ನೊಂದಣಿ ಸಂಖ್ಯೆಯ ಲಾರಿಯಲ್ಲಿ ಆಂದ್ರಪ್ರದೇಶ ರಾಜ್ಯದ ಪೆನುಕೊಂಡ ಬಳಿ ಇರುವ ಕೀಯಾ ಕಂಪನಿಯಲ್ಲಿ  ಕೀಯಾ ಕಾರುಗಳನ್ನು ಲೋಡ್ ಮಾಡಿಕೊಂಡು ಕನರ್ಾಟಕ ರಾಜ್ಯದ ಬೆಂಗಳೂರಿಗೆ ಹೋಗಲು ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿದ್ದಾಗ ದಾರಿ ಮದ್ಯ ಇರುವ ಕನರ್ಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಚೆಂಡೂರು ಕ್ರಾಸ್ ಬಳಿ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆ ಹೋಗುವ ಎನ್.ಹೆಚ್-44 ರಸ್ತೆಯ ಎಡ ಬಾಗದಲ್ಲಿರುವ  ಮಹದೇವ ಹರಿಯಾಣ ರಾಜಸ್ಥಾನ ಡಾಬಾ ಬಳಿ ವಿಶ್ರಾಂತಿ ಪಡೆಯಲು ಮೇಲ್ಕಂಡ ಸರಕು ಸಾಗಾಣಿಕೆ ಲಾರಿಯನ್ನು ನಿಲ್ಲಿಸಿ ನಂತರ ಚಾಲಕನಾದ ಶೈಲೇಂದ್ರಕುಮಾರ್ ಮತ್ತು ಬೀನೇಶ್ ರವರು ಚೆಂಡೂರು ಕ್ರಾಸ್ ನಲ್ಲಿ ಇರುವ ಅಂಗಡಿಗೆ ಹೋಗಲು ಮಹದೇವ ಹರಿಯಾಣ ರಾಜಸ್ಥಾನ ಡಾಬಾ ಕಡೆಯಿಂದ ನಡೆದುಕೊಂಡು ಹೈದರಾಬಾದ್ -ಬೆಂಗಳೂರು ಎನ್.ಹೆಚ್-44 ರಸ್ತೆಯನ್ನು ದಾಟಿಕೊಂಡು ಬೆಂಗಳೂರು ಕಡೆಯಿಂದ ಹೈದರಾಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯನ್ನು ದಾಟಲು ಮುಂದೆ ಬೀನೇಶ್ ರವರು ಸದರಿ ರಸ್ತೆಯನ್ನು ದಾಟುತ್ತಿದ್ದಾಗ ದಿನಾಂಕ:31-03-2021 ರಂದು ಸಂಜೆ ಸುಮಾರು 7-00 ಗಂಟೆಯಿಂದ ಸಂಜೆ ಸುಮಾರು 7-30 ಗಂಟೆಯಲ್ಲಿ ಬೆಂಗಳೂರು ಕಡೆಯಿಂದ ಬಂದ KA-03 AF-1403 ನೊಂದಣಿ ಸಂಖ್ಯೆಯ TOYOTA Etios ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚೆಂಡೂರು ಕ್ರಾಸ್ ಬಳಿ ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯನ್ನು ದಾಟುತ್ತಿದ್ದ ಬೀನೇಶ್ ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ಬೀನೇಶ್ ರವರಿಗೆ ತಲೆಗೆ ತೀವ್ರವಾದ ರಕ್ತಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿರವುದಾಗಿ ಮತ್ತು ಬೀನೇಶ್ ರವರ ಮೃತದೇಹವನ್ನು ಕನರ್ಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರವುದಾಗಿ ತಿಳಿಸಿರವುದಾಗಿ ತಿಳಿಸಿದಳು ನಂತರ ತಾನು ತಮ್ಮ ಊರಿನಿಂದ ಈ ದಿನ ದಿನಾಂಕ:01-04-2021 ರಂದು ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನಂತರ ಅದೇ ಅಸ್ಪತ್ರೆಯಲ್ಲಿದ್ದ ಶೈಲೇಂದ್ರ ಕುಮಾರ ರವರನ್ನು ವಿಚಾರ ಮಾಡಲಾಗಿ ಅಪಘಾತದ ಬಗ್ಗೆ ಮೇಲ್ಕಂಡಂತೆ ತಿಳಿಸಿರುತ್ತಾರೆ. ಆದ್ದರಿಂದ ತನ್ನ ಮಗನಾದ ಬೀನೇಶ್ ಬಿನ್  ಸರಮನ್ ಸಿಂಗ್ ಯಾದವ್ 26 ವರ್ಷ ಯಾದವ ಜನಾಂಗ ಕ್ಲೀನರ್  ಕೆಲಸ ವಾಸ ನಂ-621 ಸುಲ್ತಾನ್ ಪುರ ಎಕ್ಸಟೇಷನ್ ದಕ್ಷಿಣ ದೆಹಲಿ. ದೆಹಲಿ ರಾಜ್ಯ ರವರಿಗೆ ಅಪಘಾತಪಡಿಸಿದ ಮೇಲ್ಕಂಡ ಬಂದ KA-03 AF-1403 ನೊಂದಣಿ ಸಂಖ್ಯೆಯ TOYOTA Etios ಕಾರಿನ ಮತ್ತು ಅದರ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 307,302,34 ಐ.ಪಿ.ಸಿ:-

          ದಿನಾಂಕ: 31-03-2021 ರಂದು ಸಂಜೆ18-15 ಗಂಟೆಗೆ ಘನ ನ್ಯಾಯಾಯಲದ ಸಿ.ಹೆಚ್.ಸಿ-137 ಮಂಜುನಾಥ ರವರು ಘನ ನ್ಯಾಯಾಲಯದ ಪಿ.ಸಿ.ಆರ್. ನಂ-03/2021 ನ್ನು ಪಡೆದು ಹಾಜರುಪಡಿಸಿದ್ದನ್ನು ಸ್ವೀಕರಿಸಿ ಪರಿಶೀಲಿಸಲಾಗಿ ಈ ಕೇಸಿನ ಪಿರ್ಯಾಧಿ ಗಂಗಾಧರಪ್ಪ ಬಿನ್ ನರಸಿಂಹಪ್ಪ 55 ವರ್ಷ ಪೋತೇನಹಳ್ಳಿ ಗ್ರಾಮ ತೋಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು ರವರು ದೂರನ್ನು ನೀಡಿದ್ದು. ಈ ಕೇಸಿನಲ್ಲಿ ಮೃತ ಪಿರ್ಯಾಧಿಯ ಮಗ ನರೇಂದ್ರ @ ಬಾಬು 18 ವರ್ಷ ರವರು ಮತ್ತು  ಆರೋಪಿಗಳಾಗಿರುವ ಪ್ರಭು ಬಿನ್ ನರಸಿಂಹಮೂರ್ತಿ 21 ವರ್ಷ ಮತ್ತು ಅಶ್ವತ್ಥ  ಬಿನ್ ಪಾಪಯ್ಯ 22 ವರ್ಷ ರವರುಗಳು ಅಪ್ತ ಗೆಳೆಯರಾಗಿದ್ದು. ಪಿರ್ಯಾಧಿಯ ಮಗ ನರೇಂದ್ರ  ರವರು ಬೆಂಗಳೂರಿನಲ್ಲಿ ಖಾಸಗಿ  ಕೆಲಸವನ್ನು ಮಾಡಿಕೊಂಡಿದ್ದು, ವಾರಕ್ಕೊಂದು ಸಲ ಪೋತೇನಹಳ್ಳಿ ಗ್ರಾಮಕ್ಕೆ ಬರುತ್ತಿದ್ದು. ಸಂತೋಷದಿಂದ ಜೀವನ ಮಾಡಿಕೊಂಡಿದ್ದು. ಪಿರ್ಯಾಧಿಯ ಮಗ ನರೇಂದ್ರನಿಗೆ ತುಂಭಾ ಆಪ್ತ ಗೆಳೆಯರಾದ ಪ್ರಭು ಮತ್ತು ಅಶ್ವತ್ಥ ರವರು  ಆಗಾಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ನರೇಂದ್ರ ರವರಿಗೆ ಪೋನ್ ಮುಖಾಂತರ ಮಾತನಾಡುತ್ತಿದ್ದರು.. ದಿನಾಂಕ:16-02-2021 ರಂದು ಬೆಳಿಗ್ಗೆ 10-00 ರಿಂದ 10-30 ರ ಸಮಯದಲ್ಲಿ ಪ್ರಭು ರವರು ತನ್ನ ಮೋಬೈಲ್ ನಿಂದ ನರೇಂದ್ರನಿಗೆ ಪೋನ್ ಮಾಡಿ ನಿಮ್ಮ ತಂದೆಯವರನ್ನು ಹೊಡೆಯುತ್ತಿರುವುದಾಗಿ ನೀನು ಬೆಂಗಳೂರಿನಿಂದ ಪೋತೇನಹಳ್ಳಿಗೆ ಬರಬೇಕೆಂದು ತಿಳಿಸಿದ್ದು  ನರೇಂದ್ರ ನಿಜವೆಂದು ನಂಬಿ ಪೋತೇನಹಳ್ಳಿಗೆ ಮದ್ಯಾಹ್ನ 2.00 ಗಂಟೆಗೆ ಬಂದು ನೋಡಲಾಗಿ ಯಾವುದೇ ಘಟನೆ ನಡೆದಿರುವುದಿಲ್ಲ. ನಂತರ ಪ್ರಭು ನರೇಂದ್ರನನ್ನು ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ದ್ವಿಚಕ್ರ ವಾಹನ ಕೆಎ-51-ಇಬಿ-690 ರಲ್ಲಿ ನರೇಂದ್ರನನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ತೊಂಡೇಬಾವಿ ಕಡೆಗೆ ಹೋಗಿ ನಂತರ ತೊಂಡೇಬಾವಿ ಸ್ಟೇಷನ್ ಹತ್ತಿರ ಪ್ರಭು ಮತ್ತು ಅಶ್ವತ್ಥ ರವರು ಬಾರ್ ನಲ್ಲಿ ಕುಡಿದು ನಂತರ ಮಂಚೇನಹಳ್ಳಿ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಹೋಗಿದ್ದು ರಾತ್ರಿ 7.30 ರ ಸಮಯಕ್ಕೆ ಫೋನ್ ಮುಖಾಂತರ ನರೇಂದ್ರ ರಸ್ತೆ ಪಕ್ಕದಲ್ಲಿ ಸತ್ತು ಹೋಗಿರುವುದಾಗಿ ತಿಳಿಸಿದ್ದು ಪಿರ್ಯಾದಿ ಮತ್ತು ಹೆಂಡತಿ ಮತ್ತು ಸಂಬಂಧಿಕರು ನರೇಂದ್ರನು ಸತ್ತಿರುವ ಸ್ಥಳಕ್ಕೆ ಹೋಗಿ ನೋಡಿದಾಗ ನರೇಂದ್ರ ಹೆಣವಾಗಿ ಬಿದ್ದಿದ್ದು ನರೇಂದ್ರನನ್ನು ಪ್ರಭು ಮತ್ತು ಅಶ್ವತ್ಥ ಕಬ್ಬಿಣದ ರಾಡಿನಿಂದ ತಲೆ, ಬೆನ್ನು, ಕೈ ಕಾಲುಗಳಿಗೆ ಬಲವಾಗಿ ಹೊಡೆದು ಕೊಲೆ ಮಾಡಿರುವ ನಿಶಾನೆಗಳಿದ್ದು ಈ ಬಗ್ಗೆ ಪಿರ್ಯಾದಿದಾರರಿಂದ ಅತಿವೇಗವಾಗಿ ವಾಹನ ಓಡಿಸಿದ್ದು ಅಪಘಾತದಿಂದ ಮೃತಪಟ್ಟಿರುವುದಾಗಿ ಕಲಂ 279,337,304(ಎ) ರೀತ್ಯಾ ಸುಳ್ಳು ಪ್ರ.ವ.ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿದ್ದು ಪಿರ್ಯಾದಿಯ ಮಗ ನರೇಂದ್ರನ್ನು ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಪೋತೇನಹಳ್ಳಿಗೆ ಕರೆಯಿಸಿಕೊಂಡು ತೊಂಡೇಬಾವಿ ಮಾರ್ಗವಾಗಿ ಮಂಚೇನಹಳ್ಳಿಗೆ ಮಾರ್ಗದ ರಸ್ತೆಯ ಬದಿಯಲ್ಲಿ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಇದ್ದ ಘನ ನ್ಯಾಯಾಲಯದಿಂದ ಸಾದರವಾದ ದೂರು.

 

14. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:31/03/2021 ರಂದು ಪಿರ್ಯಾದಿದಾರರಾದ ಶ್ರೀ. ಸಾಲೇಹ  ಬಿನ್ ಲೇಟ್ ದಸ್ತಗಿರ್, ಮುಸ್ಲಿಂ ಜನಾಂಗ, ಅಲಕಾಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:30/03/2021 ರಂದು ಪಿರ್ಯಾದಿಯ ಬಾವಂದಿರಾದ ಜಮೀರ್ ಬಾಷ ಬಿನ್ ಲೇಟ್ ಗೌಸ್ ಫೀರ್, 45 ವರ್ಷ ಮತ್ತು ಜಾಕಿರ್ ಹುಸೇನ್ ಬಿನ್ ಖಲೀಲ್ ಸಾಬ್, 33 ವರ್ಷ ರವರುಗಳು ಗಾರೆ ಕೆಲಸಕ್ಕೆ ತಮ್ಮ ಕೆಎ-40-ವಿ-6434 ರ ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಬರಲು ದೊಡ್ಡಬಳ್ಳಾಪುರ ತೊಂಡೇಬಾವಿ ಮಾರ್ಗದ ಕಲ್ಲಿನಾಯಕನಹಳ್ಳಿ ಗ್ರಾಮದ ಪೆದ್ದಮ್ಮ ದೇವಾಲಯದ ಮುಂಭಾಗದಲ್ಲಿ ಬರುತ್ತಿರುವಾಗ ಸಂಜೆ 6.30 ಗಂಟೆ ಸಮಯದಲ್ಲಿ ಗೌರಿಬಿದನೂರು ಕಡೆಯಿಂದ ಬಂದ ಕೆಎ-01-ಎಂಯು-5330 ರ ಕಾರಿನ ಚಾಲಕ ಕಾರನ್ನು ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಜಮೀರ್ ಪಾಷ ರವರ ಬಲಕಾಲಿಗೆ ಗಾಯವಾಗಿದ್ದು ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ಜಾಕಿರ್ ಹುಸೇನ್ ರವರಿಗೆ ಕೈ ಕಾಲುಗಳಿಗೆ ಗಾಯಗಳಾಗಿದ್ದು ಗಾಯಾಳು ಗಳನ್ನು ಅಲ್ಲಿಗೆ ಬಂದ ಆಂಬುಲೆನ್ಸ್ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಪಘಾತ ಪಡಿಸಿದ ಕೆಎ-01-ಎಂಯು-5330 ರ ಕಾರಿನ ಚಾಲಕನ  ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.87/2021 ಕಲಂ. 420,373,423,506,120B ಐ.ಪಿ.ಸಿ:-

          ದಿನಾಂಕ 01/04/2021 ರಂದು ಮದ್ಯಾಹ್ನ 1.15 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯದ ಪಿಸಿ-90 ರಾಜಕುಮಾರ್ ರವರು ಘನ ನ್ಯಾಯಾಲಯದಿಂದ ಸಾದರಾಗಿ ಬಂದ ಪಿಸಿಆರ್ ನಂಬರ್-55/2017 ಅನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದು, ಸದರಿ ಪಿಸಿಆರ್ ಅನ್ನು ಪಿರ್ಯಾದಿದಾರರಾದ ನಾಗರಾಜ್ ಬಿನ್ ಆನಂದ ರಾವ್, 45 ವರ್ಷ, ಜೆ.ವೆಂಕಟಾಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಸಲ್ಲಿಸಿಕೊಂಡಿರುವ ದೂರು ಆಗಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಖಾತೆಯು ಜಂಗಮಕೋಟೆ ಗ್ರಾಮದ ಸೆಂಟ್ರಲ್ ಬ್ಯಾಂಕಿನಲ್ಲಿದ್ದು, ಪಿರ್ಯಾದಿದಾರರು ತನ್ನ ಖಾತೆಗೆ ಸಂಬಂದಿಸಿದಂತೆ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಆಗ ಬ್ಯಾಂಕ್ ಮಾನ್ಯೇಜರ್ ರವರು ಸಾಲವನ್ನು ಮಂಜೂರು ಮಾಡುವಾಗ ಸಹಿ ಮಾಡಿರುವ ಖಾಲಿ 20 ಚೆಕ್ ಗಳನ್ನು ಸಾಲದ ಉದ್ದೇಶಕ್ಕಾಗಿ ನೀಡಬೇಕೆಂದು ತಿಳಿಸಿದ ಕಾರಣ ಪಿರ್ಯಾದಿದಾರರು ಸದರಿ ಚೆಕ್ ಗಳ ಮೇಲೆ ಸಹಿಯನ್ನು ಮಾಡಿ ಇಟ್ಟುಕೊಂಡಿದ್ದು, ಆ ಸಮಯದಲ್ಲಿ ಆರೋಪಿ-2 ರಿಂದ 4 ರವರು ಪಿಯರ್ಾದಿದಾರರ ಜೊತೆ ಆತ್ಮೀಯತೆಯಿಂದಿದ್ದು, ಪಿರ್ಯಾದಿದಾರರ ಚೆಕ್ ಗಳನ್ನು ಕಳ್ಳತನ ಮಾಡಿಕೊಂಡಿದ್ದು, ಪಿರ್ಯಾದಿದಾರರು ದಿನಾಂಕ 15/09/2015 ರಂದು ಸಂಬಂಧ ಪಟ್ಟ ಠಾಣೆಗೆ ದೂರನ್ನು ನೀಡಿದ್ದು, ಮೇಲ್ಕಂಡ ಆರೋಪಿಗಳನ್ನು ಕರೆದು ವಿಚಾರಣೆ ಮಾಡಲಾಗಿ ಆರೋಪಿಗಳು 14 ಚೆಕ್ ಗಳನ್ನು ವಾಪಸ್ಸು ನೀಡಿ ಉಳಿದ 6 ಚೆಕ್ ಗಳು ಕಳೆದು ಹೋಗಿದೆ ಎಂದು ತಿಳಿಸಿದ್ದು, ಇದಕ್ಕೆಲ್ಲಾ ಸಾಕ್ಷಿ ಗಿರೀಶ್ ಬಿನ್ ನಾರಾಯಣಚಾರಿ ರವರಾಗಿರುತ್ತಾರೆ. ಒಂದುವರೆ ವರ್ಷ ಕಳೆದ ನಂತರ ಆರೋಪಿ-2 ರಿಂದ 4 ರವರು ತಮ್ಮ ಸ್ನೇಹಿತನಾದ ಆರೋಪಿ-1 ರವರಿಗೆ ತನ್ನ 006140 ಸಂಖ್ಯೆ ಚೆಕ್ ಅನ್ನು ನೀಡಿ ಅದರಲ್ಲಿ 4.25.000-00 ರೂ ಎಂದು ಬರೆದುಕೊಂಡು ತನ್ನ ಖಾತೆ ಇರುವ ಬ್ಯಾಂಕಿನಲ್ಲಿ ಹಣವನ್ನು ಡ್ರಾ ಮಾಡಲು ದಿನಾಂಕ 17/03/2017 ರಂದು ಸಲ್ಲಿಸಿಕೊಂಡಿದ್ದು, ತನ್ನ ಖಾತೆಯಲ್ಲಿ ಸಮರ್ಪಕವಾದ ಹಣ ಇಲ್ಲದ ಕಾರಣ ದಿನಾಂಕ 20/03/2017 ರಂದು ಹಿಂಬರವನ್ನು ಪಡೆದುಕೊಂಡು ನಂತರ ಸದರಿ ಚೆಕ್ ಮೇಲೆ ತನಗೆ ದಿನಾಂಕ 15/04/2017 ರಂದು ತನಗೆ ಲೀಗಲ್ ನೋಟಿಸ್ ಅನ್ನು ಕಳಹಿಸಿ ಕೊಟ್ಟಿದ್ದು, ನಂತರ  ತಾನು ದಿನಾಂಕ 01/05/2017 ರಂದು ಆರೋಪಿಗಳನ್ನು ಕೇಳಿದ್ದಕ್ಕೆ ತನಗೆ ಬೆದರಿಕೆಯನ್ನು ಹಾಕಿರುತ್ತಾರೆ. ಆರೋಪಿ-2 ರಿಂದ 4 ರವರು ತನಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಸಂಚು ಮಾಡಿಕೊಂಡು ತನ್ನ ಚೆಕ್ ಗಳನ್ನು ಕಳ್ಳತನ ಮಾಡಿ ತನಗೆ ಗೊತ್ತಿರದ ಆರೋಪಿ-1 ರವರಿಂದ ತನ್ನ ಮೇಲೆ ಘನ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸನ್ನು ದಾಖಲಿಸಿರುವ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಸಲ್ಲಿಸಿಕೊಂಡಿರುವ ದೂರು ಆಗಿರುತ್ತದೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.88/2021 ಕಲಂ. 405,120(A),420,423,424,463,468,470,34 ಐ.ಪಿ.ಸಿ:-

          ದಿನಾಂಕ 01/04/2021 ರಂದು ಮದ್ಯಾಹ್ನ 1-45 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯದ ಪಿಸಿ-90 ರಾಜಕುಮಾರ್ ರವರು ಘನ ನ್ಯಾಯಾಲಯದಿಂದ ಸಾದರಾಗಿ ಬಂದ ಪಿಸಿಆರ್ ನಂಬರ್-138/2018 ಅನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದು, ಸದರಿ ಪಿಸಿಆರ್ ಅನ್ನು ಪಿರ್ಯಾದಿದಾರರಾದ ಶ್ರೀ ರಪೀಕ್ ಅಹಮದ್ ಬಿನ್ ಷರೀಪ್, 63 ವರ್ಷ, ನಂ 9ಎ, 2 ನೇ ಬೀದಿ, 1 ನೇ ಮಹಡಿ, ಚಿಕ್ಕಬಜಾರ್ ರಸ್ತೆ ಕ್ರಾಸ್, ಟಸ್ಕರ್ ಟೌನ್, ಬೆಂಗಳೂರು ರವರು ಸಲ್ಲಿಸಿಕೊಂಡಿರುವ ದೂರು ಆಗಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರ್.ಎ ಸುಭಾನ್ ಮತ್ತು ಮುಮ್ತಾಜ್ ಬೇಗಂ ರವರಿಗೆ ಲೇಟ್ ಶಕೀಲಾ ಪರ್ವೀನ್, ಲೇಟ್ ಜಮೀಲಾ ಪರ್ವೀನ್ ಮತ್ತು ಆರೋಪಿ-1 ಜಾವೀದ್ ಹುಸೇನ್ , ಆರೋಪಿ-2 ಖಾಲೀದ್ ಹುಸೇನ್ ಎಂಬ ಮಕ್ಕಳಿದ್ದು, ಲೇಟ್ ಶಕೀಲಾ ಪರ್ವೀನ್ ರವರು ಪಿರ್ಯಾದಿದಾರರ ಹೆಂಡತಿಯಾಗಿದ್ದು, ಪಿರ್ಯಾದಿದಾರರ ಮಾವ ಆರ್.ಎ ಸುಭಾನ್ ರವರು ದಿನಾಂಕ 07/12/1972 ರಂದು ಶಿಡ್ಲಘಟ್ಟ ತಾಲ್ಲೂಕು ಹಾರಡಿ ಗ್ರಾಮದ ಸರ್ವೇ ನಂಬರ್ ಗಳಾದ 5, 6/2, 8/2, 9, 10, 11, 12/2, 20/2, 21 ಒಟ್ಟು 28 ಎಕರೆ 24 ಗುಂಟೆ ಜಮೀನನ್ನು ಖರೀದಿ ಮಾಡಿದ್ದು, ದಿನಾಂಕ 15/12/2014 ರಂದು ಆರೋಪಿ 1 & 2 ಅಕ್ರಮವಾಗಿ ಪಿರ್ಯಾದಿದಾರರ ಹೆಂಡತಿ ಲೇಟ್ ಶಕೀಲಾ ಪರ್ವೀನ್ ಹಾಗು ಅವರ ಉತ್ತರಾಧಿಕಾರಿಗಳಿಗೆ ಬರಬೇಕಾಗಿರುವ ಜಮೀನನ್ನು ಮೋಸ ಮಾಡುವ ಉದ್ದೇಶದಿಂದ ಮೇಲ್ಕಂಡ ಜಮೀನನ್ನು ಆರೋಪಿ-3 ರವರಿಗೆ ಮಾರಾಟ ಮಾಡಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಸಲ್ಲಿಸಿಕೊಂಡಿರುವ ದೂರು ಆಗಿರುತ್ತದೆ.   

Last Updated: 01-04-2021 06:17 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080