ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 279,283,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ; 01/03/2021 ರಂದು ಪಿರ್ಯಾದಿದಾರರಾದ  ನವೀನ ಬಿನ್ ನಾಗರಾಜು, 20 ವರ್ಷ, ನಾಯಕ ಜನಾಂಗ, ವಿದ್ಯಾರ್ಥಿ, ವಾಸ ಏಟಿಗಡ್ಡಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ದಿನಾಂಕ 28/02/2021 ರಂದು ನನ್ನ ತಂದೆಯಾದ ನಾಗರಾಜು ರವರು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಟೌನ್ ಗೆ ಹೋಗಿ ಅಕ್ಕಿ ತೆಗೆದುಕೊಂಡು ಬರುವುದಾಗಿ ತಿಳಿಸಿ ಸೈಕಲ್ ನಲ್ಲಿ ಹೋಗಿರುತ್ತಾರೆ. ನಂತರ ರಾತ್ರಿ ಸುಮಾರು 11-00 ಗಂಟೆಯಲ್ಲಿ ಯಾರೋ ನನಗೆ ಪೋನ್ ಮಾಡಿ ನಿಮ್ಮ ತಂದೆಗೆ ಡಿ.ವಿ.ಜಿ ರಸ್ತೆಯ ರೆಡ್ಡಿ ಎಲೆಕ್ಟ್ರಾನಿಕ್ಸ್ ಬಳಿ ಅಪಘಾತವಾಗಿದ್ದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ನಾನು ಮತ್ತು ನಮ್ಮ ತಾಯಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಂದೆಗೆ ತಲೆಗೆ ತೀವ್ರತರನಾದ ರಕ್ತಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ.01/03/2021 ರಂದು ಬೆಳಗಿನ 2-14 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.  ನಂತರ ವಿಚಾರ ಮಾಡಲಾಗಿ ದಿನಾಂಕ 28/02/2021 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ನನ್ನ ತಂದೆ ನಾಗರಾಜು ಬಿನ್ ನರಸಿಂಹಪ್ಪ, 42 ವರ್ಷ ರವರು ಡಿವಿಜಿ ರಸ್ತೆಯಲ್ಲಿ ಬಾಗೇಪಲ್ಲಿ ಟೌನ್ ಕಡೆಯಿಂದ ಮನೆಗೆ ಬರಲು ಸೈಕಲ್ ನಲ್ಲಿ ರೆಡ್ಡಿ ಎಲೆಕ್ಟ್ರಾನಿಕ್ಸ್ ಬಳಿ ಬರುವಾಗ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಯಾವುದೇ ಮುನ್ಚೂನೆ ನೀಡದೇ  ಹಾಗೂ ಸಿಗ್ನಲ್ ಇಲ್ಲದೇ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿದ್ದ ಕೆ.ಎ-51-ಎ.ಬಿ-6377 ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ತಂದೆಯ ತಲೆಗೆ ತೀವ್ರತರನಾದ ರಕ್ತ ಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಾಗೂ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಆದ್ದರಿಂದ ರಸ್ತೆಯಲ್ಲಿ ಯಾವುದೇ ಮುನ್ಚೂನೆ ನೀಡದೇ  ಹಾಗೂ ಸಿಗ್ನಲ್ ಇಲ್ಲದೇ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಿ, ಸಂಚಾರಿ ನಿಯಮವನ್ನು ಪಾಲಿಸದೇ ನಿಲ್ಲಿಸಿದ್ದ  ಕೆ.ಎ-51-ಎ.ಬಿ-6377 ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 427,506,504,447 ಐ.ಪಿ.ಸಿ:-

     ದಿನಾಂಕ: 01-03-2021 ರಂದು ಬೆಳಗ್ಗೆ 10-30 ಗಂಟೆಯಲ್ಲಿ ಪಿರ್ಯಾಧಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ತನಗೆ  ಚಿಕ್ಕಬಳ್ಳಾಪುರ ನಗರಸಭೆಯಿಂದ 1992 ನೇ ಸಾಲಿನಲ್ಲಿ ಗಂಗನಮಿದ್ದೆ(ನಿಮ್ಮಕಲಕುಂಟೆ) ಎಂ.ಜಿ ರಸ್ತೆಯ ಪಕ್ಕದಲ್ಲಿ ಅಶ್ರಯ ಯೋಜನೆ ಅಡಿಯಲ್ಲಿ  30*40 ರ ನಿವೇಶನ ಮಂಜೂರಾಗಿದ್ದು ಸದರಿ  ನಿವೇಶನ ಸಂಖ್ಯೆ: 3150/ಹೆಚ್ ಎಲ್ ಸಂ: 199/2. ಆಗಿದ್ದು ನನ್ನ ಹೆಸರಿಗೆ ಹಕ್ಕುಪತ್ರ ಬಂದಿದ್ದು ಇ-ಖಾತೆ ಸಹ ಆಗಿರುತ್ತದೆ. ಆದರೆ ನಮ್ಮ ನಿವೇಶನದ ಪಕ್ಕದಲ್ಲಿ ಜಮೀನು ಇರುವುದಾಗಿ ಹಾಗೂ ನಮ್ಮ ನಿವೇಶನ ಸಹ ತನಗೆ ಸೇರಿದ್ದಾಗಿ ಪಕ್ಕದ ಜಮೀನಿನ ಗೋವಿಂದಪ್ಪ ಎಂಬುವವರು ಪದೇಪದೇ ಗಲಾಟೆ ಮಾಡುವುದು ತೊಂದರೆ ಕೊಡುವುದು ಮಾಡುತ್ತಿದ್ದ, ದಿನಾಂಕ: 01-01-2021, ರಂದು ನಮ್ಮ ನಿವೇಶನದಲ್ಲಿ ಪಾಯ ಹಾಕುವ ಸಲುವಾಗಿ ಸ್ವಚ್ಚಗೊಳಿಸಲು ನಾನು ನನ್ನ ಮಗ ಮಧುಸೂಧನ್ ನಮ್ಮ ನಿವೇಶನಕ್ಕೆ ಹೋಗಿದ್ದಾಗ ಗೋವಿಂದಪ್ಪ ಸ್ಥಳಕ್ಕೆ ಬಂದು ನಮ್ಮನ್ನು ಅವ್ಯಾಚ್ಯಶಬ್ದಗಳಿಂದ ಬೈದು ಜಮೀನಿನ ಒಳಗೆ ಬಂದರೆ ಕೈಕಾಲು ಮುರಿಯುವುದಾಗಿ ಬೆದಿರಕೆ ಹಾಕಿ ಓಡಿಸಿರುತ್ತಾನೆ. ಈ ಬಗ್ಗೆ ನಗರ ಠಾಣೆಗೆ ದೂರನ್ನು ನೀಡಿದ್ದು ಎನ್ ಸಿಅರ್-01/2021 ರೀತ್ಯಾ ದಾಖಲಾಗಿರುತ್ತೆ ಆಗ ಪೊಲೀಸರು ಗೋವಿಂದಪ್ಪನಿಗೆ ಸದರಿ ಸ್ಥಳದ ದಾಖಲೆಗಳನ್ನು ತೆಗೆದುಕೊಂಡು ವಿಚಾರಣೆಗೆ ಬರುವಂತೆ ಅನೇಕ ಬಾರಿ ಹೇಳಿದರೂ  ವಿಚಾರಣೆಗೆ ಬರಲಿಲ್ಲ.  ಆ ಸಮಯದಲ್ಲಿ ಪೊಲೀಸ್ ಠಾಣೆಯಿಂದ ಹಾಗೂ ನಾನು ಸಹ ಪ್ರತ್ಯೇಕವಾಗಿ ನಿವೇಶನವನ್ನು ಗುರ್ತಿಸಿಕೊಡಲು ನಗರ ಸಭೆಗೆ ಮನವಿಯನ್ನು ಸಲ್ಲಿಸಿಕೊಂಡಿದ್ದು  ದಿನಾಂಕ: 05-01-2021 ರಂದು  ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬೇಟಿಮಾಡಿ ಪರಿಶೀಲಿಸಿ ನಿವೇಶನವನ್ನು ಗುರ್ತಿಸಿ ಕಲ್ಲುಗಳನ್ನು ಹಾಕಿ ಹೋಗಿರುತ್ತಾರೆ. ಅದರಂತೆ ನಾವು  ಸುಮಾರು 40,000/- ರೂಗಳನ್ನು ಕರ್ಚುಮಾಡಿ ತಮ್ಮ ನಿವೇಶನಕ್ಕೆ  ಕಲ್ಲುಕೂಚ ಹಾಗೂ ತಂತಿಬೇಲಿ ಹಾಕಿಕೊಂಡು ಬಂದಿದ್ದು  ದಿನಾಂಕ:27-02-2021 ರಂದು ಮದ್ಯಾಹ್ನ 1-00 ಗಂಟೆಯಲ್ಲಿ  ಗೋವಿಂದಪ್ಪ ರವರು ಯಾವುದೋ ಬುಲ್ಡೋಜರ್ ಟ್ರಾಕ್ಟರ್ ನ್ನು ತೆಗೆದುಕೊಂಡು ಬಂದು ನಮ್ಮ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾವು ಹಾಕಿಸಿದ್ದ ಕಲ್ಲುಕೂಚ ಹಾಗೂ ತಂತಿಬೇಲಿಯನ್ನು ಸದರಿ ಬುಲ್ಡೋಜರ್ ಟ್ರಾಕ್ಟರ್ ನಿಂದ ಕಿತ್ತುಹಾಕಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೆ ತಾನು ಮತ್ತು ತನ್ನ ಮಗ ಮಧುಕುಮಾರ್ ಹಾಗೂ ಇತರರು  ಅಲ್ಲಿಗೆ ಹೋದಾಗ ಗೋವಿಂದಪ್ಪ ಅಲ್ಲಿ ನಿಂತುಕೊಂಡು ಅಕ್ರಮವಾಗಿ ಬುಲ್ಡೋಜರ್ ಟ್ರಾಕ್ಟರ್ ನ್ನು ನಿವೇಶನಕ್ಕೆ ನುಗ್ಗಿಸಿ ಎಲ್ಲಾ ಕಲ್ಲುಕೂಚ ಹಾಗೂ ತಂತಿಬೇಲಿಯನ್ನು ಬುಲ್ಡೋಜರ್ ಟ್ರಾಕ್ಟರ್ ನಿಂದ ಕಿತ್ತುಹಾಕಿಸಿ ನಿವೇಶನದಿಂದ ಹೊರಕ್ಕೆ ತಳ್ಳಿಸಿ ಸುಮಾರು 40,000/- ರೂಗಳಷ್ಟು ವಸ್ತುಗಳನ್ನು ನಷ್ಠ ಮಾಡಿಸಿರುತ್ತಾನೆ. ತಾವು ಹೋಗಿ ಗೋವಿಂದಪ್ಪನನ್ನು ಕೇಳಲಾಗಿ  ''ಬೇವರ್ಸಿ ಮುಂಡೆ ಯಾರನ್ನು ಕೇಳಿ ಕಲ್ಲುಗಳನ್ನು ಹಾಕಿಸಿದ್ದೀಯೇ ಯಾರು ಬಂದು ನಿಮಗೆ ಜಾಗ ಬಿಡಿಸಿಕೊಡುತ್ತಾರೋ ನೋಡುತ್ತೇನೆ. ಜಮೀನಿನ ಓಳಗೆ ಕಾಲು ಇಟ್ಟು ನೋಡಿ, ಯಾರಾದರೂ ಜಮೀನಿನ ಒಳಗೆ ಬಂದು  ನೋಡಿ ಕೊಚ್ಚಿಹಾಕಿ ಇದೇ ಜಮೀನಿನಲ್ಲಿ ಮುಚ್ಚಿಹಾಕುತ್ತೀನಿ ನಿಮ್ಮಿಂದ ಏನಾಗುತ್ತೋ ನಾನು ನೋಡುತ್ತೇನೆ ಎಂದು ಕೂಗಾಡಿರುತ್ತಾನೆ. ತಮ್ಮ ಮೇಲೆ ಗೊವೀಂದಪ್ಪ ಕೂಗಾಡುತ್ತಿದ್ದುದನ್ನು ಕಂಡು ಅಲ್ಲೆ ಇದ್ದ ತಮ್ಮ ಏರಿಯಾದ ಶಂಕರ, ಸುರೇಶ ಮತ್ತು ಲಕ್ಷ್ಮಣ ರವರು ಬಂದು ಇಬ್ಬರಿಗೂ ಸಮಾಧಾನ ಪಡಿಸಿ ಕಳುಹಿಸಿರುತ್ತಾರೆ.  ಒಟ್ಟಾರೆಯಾಗಿ ತನಗೆ ಸರ್ಕಾರದಿಂದ ಉಚಿತವಾಗಿ ಅಶ್ರಯ ಯೋಜನೆಯಲ್ಲಿ ಮಂಜೂರಾಗಿರುವ ನಿವೇಶನಕ್ಕೆ ಎಲ್ಲಾ ದಾಖಲೆಗಳಿದ್ದು ನಗರ ಸಭೆ ಅಧಿಕಾರಿಗಳು ನಿವೇಶನ ಗುರ್ತಿಸಿಕೊಟ್ಟಿದ್ದರೂ ಸಹ ತನ್ನ ನಿವೇಶನದಲ್ಲಿ ರೂ 40,000/- ಕರ್ಚುಮಾಡಿ ಹಾಕಿಸಿದ್ದ ಕಲ್ಲುಕೂಚ ಮತ್ತು ತಂತಿಬೇಲಿಯನ್ನು ಬುಲ್ಡೋಜರ್ ಟ್ರಾಕ್ಟರ್ ನಿಂದ ಕಿತ್ತುಹಾಕಿಸಿ ನಷ್ಠಪಡಿಸಿದ್ದೇ ಅಲ್ಲದೆ ಕೇಳಿದ್ದಕ್ಕೆ ನಮ್ಮನ್ನು ಅವ್ಯಾಚ್ಯಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುವ  ಗೋವಿಂದಪ್ಪನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿದ ಮೇರೆಗೆ ಪ್ರಕರಣವನ್ನು ದಾಖಲಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.85/2021 ಕಲಂ. 279,304(A)  ಐ.ಪಿ.ಸಿ:-

     ದಿನಾಂಕ: 28/02/2021 ರಂದು ಸಂಜೆ 5.00 ಗಂಟೆಗೆ ಸತ್ಯನಾರಾಯಣ ಬಿನ್ ಲೇಟ್ ಶ್ರೀರಾಮಪ್ಪ, 36 ವರ್ಷ, ಬಲಜಿಗರ ಜನಾಂಗ, ಕೂಲಿಕೆಲಸ, ಕೊಡದವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ಶ್ರೀರಾಮಪ್ಪ, ಮತ್ತು ತಾಯಿ ವಸಂತಮ್ಮ ರವರಿಗೆ 4 ಜನ ಮಕ್ಕಳು, 1ನೇ ಜಯಮ್ಮ, 2ನೇ ಪಾರ್ವತಮ್ಮ 3ನೇ ತಾನು, 4ನೇ ಜಯಂತಿ, ಮೂವರಿಗೆ ಮದುವೆಗಳು ಆಗಿರುತ್ತವೆ. ಜಯಂತಿಗೆ ಮದುವೆ ಆಗಿಲ್ಲ, ತಮ್ಮೊಂದಿಗೆ ವಾಸವಿದ್ದಾಳೆ. ತಮ್ಮ ತಾಯಿ ಹೂವಿನ ವ್ಯಾಪಾರ ಮಾಡುತ್ತಿದ್ದು, ತಾನು ಕೂಲಿಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ತನ್ನ ತಾಯಿ ವಸಂತಮ್ಮ ರವರಿಗೆ 58 ವರ್ಷ ವಯಸ್ಸಾಗಿದ್ದು, ಪ್ರತಿದಿನ ಚಿಂತಾಮಣಿಯಲ್ಲಿ ಹೂವು ಖರೀದಿಸಿ ತಮ್ಮೂರಿನಲ್ಲಿ ಮತ್ತು ಪಕ್ಕದ ಗ್ರಾಮಗಳಲ್ಲಿ ಹೂವು ಮಾರಾಟ ಮಾಡುತ್ತಿದ್ದಳು. ಈ ದಿನ ದಿನಾಂಕ: 28/02/2021 ರಂದು ಮದ್ಯಾಹ್ನ 3.15 ಗಂಟೆಯಲ್ಲಿ ತಾನು ಚಿಂತಾಮಣಿಯಲ್ಲಿದ್ದಾಗ ನಮ್ಮೂರಿನ ಚೌಡರೆಡ್ಡಿ ಬಿನ್ ನಾರಾಯಣಸ್ವಾಮಿ ರವರು ಪೋನ್ ಮಾಡಿ ನಿಮ್ಮ ತಾಯಿ ವಸಂತಮ್ಮ ರವರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಮ್ಮೂರಿನ ಗೇಟ್ ನಲ್ಲಿ ಅಪಘಾತ ಮಾಡಿದ ಪರಿಣಾಮ ನಿಮ್ಮ ತಾಯಿಯ ತಲೆಗೆ ತೀವ್ರತರವಾಗಿ ಜಜ್ಜಿದ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು. ತಾನು ತಕ್ಷಣ ತಮ್ಮೂರಿಗೆ ಬಂದು ನೋಡಲಾಗಿ ವಿಷಯ ನಿಜವಾಗಿತ್ತು, ತಮ್ಮೂರಿನ ಗೇಟ್ ನಲ್ಲಿ ತನ್ನ ತಾಯಿಯ ಹೆಣ ರಸ್ತೆಯ ಮೇಲೆ ಬಿದ್ದಿದ್ದು, ತಾಯಿಯ ತಲೆಗೆ ಜಜ್ಜಿ ಮೆದುಳು ಹೊರಬಂದು ಸ್ಥಳದಲ್ಲಿ ಮೃತಪಟ್ಟಿದ್ದಳು. ವಿಚಾರ ಮಾಡಲಾಗಿ ತನ್ನ ತಾಯಿ ಈ ದಿನ ದಿನಾಂಕ:28/02/2021 ರಂದು ಮದ್ಯಾಹ್ನ 3.10 ಗಂಟೆಯಲ್ಲಿ ಚಿಂತಾಮಣಿಯಲ್ಲಿ ಹೂವು ತರಲು ಬಸ್ಸಿಗೆ ಚಿಂತಾಮಣಿ-ಶ್ರೀನಿವಾಸಪುರ ರಸ್ತೆಯ ದಾಟುತ್ತಿದ್ದಾಗ ಶ್ರೀನಿವಾಸಪುರ ಕಡೆಯಿಂದ ಬಂದ ಕೆ.ಎಸ್.ಆರ್.ಟಿಸಿ ಬಸ್ ಸಂಖ್ಯೆ ಕೆ.ಎ-07 ಎಫ್-1579 ರ ಬಸ್ಸಿನ ಚಾಲಕ ಬಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ತಮ್ಮ ತಾಯಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೇಲ್ಕಂಡಂತೆ ಗಾಯಗಳಾಗಿ ಮೃತಪಟ್ಟಿರುವುದು ಗೊತ್ತಾಯಿತು. ಬಸ್ ತಮ್ಮೂರಿನ ಗೇಟ್ ನಲ್ಲಿ ನಿಂತಿತ್ತು. ನಂತರ ತನ್ನ ತಾಯಿಯ ಹೆಣವನ್ನು ತಮ್ಮೂರಿನವರು ಮತ್ತು ತಾನು ಯಾವುದೋ ಟಾಟಾ ಎ.ಸಿಇ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದೆವು. ಆದ್ದರಿಂದ ತಮ್ಮ ತಾಯಿಯ ಅಪಘಾತದ ಸಾವಿಗೆ ಕಾರಣರಾದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.86/2021 ಕಲಂ. 279,337   ಐ.ಪಿ.ಸಿ:-

     ದಿನಾಂಕ: 28/02/2021 ರಂದು ಸಂಜೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಸೂಲದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 28/02/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ತನಗೆ ಚಿಂತಾಮಣಿ ನಗರದಲ್ಲಿ ಕೆಲಸದ ನೀಮಿತ್ತ ತಾನು ತನ್ನ ಬಾಬತ್ತು KA-41 U-0085 ನೊಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ನಗರಕ್ಕೆ ಬಂದು ಕೆಲಸ ಮುಗಿಸಿಕೊಂಡು ಪುನಃ ತಮ್ಮ ಗ್ರಾಮಕ್ಕೆ ವಾಪಸ್ ಹೋಗಲು ಮೇಲ್ಕಂಡ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ಸುಮಾರು 5.00 ಗಂಟೆ ಸಮಯದಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಗೇಟ್ ಬಳಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ತನ್ನ ಎದುರುಗಡೆಯಿಂದ ಅಂದರೆ ಏಕಮುಖ ರಸ್ತೆಯಲ್ಲಿ ಬಂದ ನಂಬರ್ KA-51 N-4602 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕ ಆತನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ವಾಹನ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದು, ತನ್ನ ಎರಡೂ ಮೊಣಕಾಲುಗಳಿಗೆ, ಬಲ ಮೊಣಕೈಗೆ, ಮುಖದ ಮೇಲೆ ಮತ್ತು ಹಣೆಗೆ ತರಚಿದ ಗಾಯಗಳಾಗಿರುತ್ತೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಮುನಿವೆಂಕಟರಾಯಪ್ಪ ಹಾಗೂ ಸಾರ್ವಜನಿಕರು ತನ್ನನ್ನು ಉಪಚರಿಸಿ ಚಿಂತಾಮಣೀ ಸರ್ಕಾರಿ ಆಸ್ಪತ್ರಗೆ ಚಿಕಿತ್ಸೆಗಾಗಿ ಕರೆದುಕೊಮಡು ಬಂದು ದಾಖಲು ಮಾಡಿದ್ದು, ತನಗೆ ಅಪಘಾತವನ್ನುಮಟು ಮಾಡಿದ ಕಾರು ಹಾಗೂ ತನ್ನ ದ್ವಿಚಕ್ರ ವಾಹನ ಸ್ಥಳದಲ್ಲಿಯೇ ಇರುತ್ತೆ. ಆದ್ದರಿಂದ ತನಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ನಂಬರ್ KA-51 N-4602 ನೊಂದಣಿ ಸಂಖ್ಯೆಯ ಟಯೋಟಾ ಇನ್ನೋವಾ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 

5. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 279,337   ಐ.ಪಿ.ಸಿ:-

     ದಿನಾಂಕ:01/03/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಪಿರ್ಯಾದಿದಾರರಾದ ಲಕ್ಷ್ಮಿದೇವಮ್ಮ ಕೋಂ ಗೋಪಾಲಗೌಡ, 45 ವರ್ಷ, ಸಾದರು ಜನಾಂಗ, ಕೂಲಿ ಕೆಲಸ, ವಾಸ: ಮೈಲಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾನೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತನಗೆ ಸುಮಾರು 30 ವರ್ಷಗಳ ಹಿಂದೆ ಗೋಪಾಲಗೌಡ ರವರೊಂದಿಗೆ ಮದುವೆಯಾಗಿದ್ದು, ತಮಗೆ ಸುಗುಣ ಎಂಬ ಒಂದು ಹೆಣ್ಣು ಮಗಳು ಇದ್ದು ಈಕೆಗೆ ಮದುವೆಯನ್ನು ಮಾಡಿದ್ದು ಈಕೆ ತನ್ನ ಗಂಡನ ಮನೆಯಲ್ಲಿ ವಾಸವಾಗಿರುತ್ತಾಳೆ. ಈ ದಿನ ದಿನಾಂಕ:01/03/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ತನ್ನ ಗಂಡ ಗೋಪಾಲಗೌಡ ರವರು ಕೆಲಸ ನಿಮಿತ್ತ ಗೌರಿಬಿದನೂರಿಗೆ ಹೋಗಿ ಬರುವುದಾಗಿ ತಿಳಿಸಿ ಕೆ.ಎ-40 ಇಸಿ-9162 ದ್ವಿ ಚಕ್ರ ವಾಹನದಲ್ಲಿ ತಾನು ಚಾಲನೆ ಮಾಡಿಕೋಂಡು ಮನೆಯಿಂದ ಹೋದರು. ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ತನ್ನ ಭಾವನ ಮಗನಾದ ಮೋಹನ್ ಕುಮಾರ್ ಬಿನ್ ಕೆಂಪ್ಪಣ್ಣ, 32 ವರ್ಷ ರವರು ಪೊನ್ ಮಾಡಿ ತಮ್ಮ ಚಿಕ್ಕಪ್ಪ ರವರು ಗೌರಿಬಿದನೂರು ನಗರದಲ್ಲಿ ತನ್ನ ಕೆಲಸವನ್ನು ಮುಗಿಸಿಕೋಂಡು ತಮ್ಮ ಗ್ರಾಮಕ್ಕೆ ಬರಲು ಗೌರಿಬಿದನೂರು ನಗರದ ಹಿರೇಬಿದನೂರು ಗ್ರಾಮದ ಬಳಿಯಿರುವ ಬೈಪಾಸ್ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 09-15 ಗಂಟೆಯಲ್ಲಿ ಬರುತ್ತೀದ್ದಾಗ ಹಿಂದೂಪುರ ಕಡೆಯಿಂದ ಬಂದು ಕೆಎ-05 ಎಇ-5112 ನೋಂದಣಿ ಸಂಖ್ಯೆ ಲಾರಿಯ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ಡಿಕ್ಕಿ  ಹೊಡೆಯಿಸಿದ ಪರಿಣಾಮ ತಮ್ಮ ಚಿಕ್ಕಪ್ಪ ರವರಿಗೆ ತಲೆ, ಬಲಕಾಲಿನ ಪಾದದ ಬಳಿ, ಎಡ ಕಾಲಿನ ಮೊಣಕಾಲಿನ ಬಳಿ ರಕ್ತಗಾಯಗಳಾಗಿದ್ದು ಬಲ ಕೈನ ಮೂಳೆ ಮುರಿತವಾಗಿರುತ್ತೆ, ದ್ವಿ ಚಕ್ರ ವಾಹನವು ಜಖಂಗೊಂಡಿದ್ದು ತಾನು ತಮ್ಮ ಚಿಕ್ಕಪ್ಪ ರವರನ್ನು ಚಿಕಿತ್ಸೆಗಾಗಿ ಗೌರಿಬಿದನೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತೆನೆಂದು ತಿಳಿಸಿದ್ದು ತಾನು ಯಾವುದೋ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರವು ನಿಜವಾಗಿರುತ್ತೆ. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು ತಾನು ಗಂಡನ್ನು ಅಂಬುಲೇನ್ಸ್ ನಲ್ಲಿ ತನ್ನ ಅಳಿಯನ ಜೊತೆಯಲ್ಲಿ ಬೆಂಗಳೂರಿಗೆ ಕಳುಯಿಸಿಕೊಟ್ಟಿರುತ್ತೇನೆ.  ಆದ್ದರಿಂದ ತನ್ನ ಗಂಡನಿಗೆ ರಸ್ತೆ ಅಪಘಾತ ಮಾಡಿದ ಕೆಎ-05 ಎಇ-5112 ಲಾರಿಯ ಚಾಲಕ ಮತ್ತು ವಾಹನದ ವಿರುದ್ದು ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೋಂಡಿರುತ್ತೆ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.53/2021 ಕಲಂ. 279,304(ಎ)   ಐ.ಪಿ.ಸಿ:-

     ದಿನಾಂಕ: 01-03-2021 ರಂದು ಮದ್ಯಾಹ್ನ 12.00 ಗಂಟೆಗೆ ಫಿರ್ಯಾದಿದಾರರಾದ ಶ್ರಿಮತಿ ಸರೋಜಮ್ಮ ಕೋಂ ಲೇಟ್ ಮಾರಪ್ಪ, 45 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ದೊಡ್ಡಹಳ್ಳಿ ಗ್ರಾಮ, ವೈ.ಎನ್. ಹೊಸಕೋಟೆ ಹೋಬಳಿ, ಪಾವಘಡ ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ಮಾರಪ್ಪ ರವರು ಈಗ್ಗೆ 13 ವರ್ಷಗಳ ಹಿಂದೆ ಮೃತಪಟ್ಟಿರುತ್ತಾನೆ. ತಮಗೆ 1ನೇ ನರೇಶ ಮತ್ತು 2ನೇ ಅನೀಲ್ ಕುಮಾರ್ ಎಂಬ ಇಬ್ಬರು ಮಕ್ಕಳಿದ್ದು ತನ್ನ ಹಿರಿಯ ಮಗನಾದ ನರೇಶ ರವರಿಗೆ ಸುಮಾರು 10-12 ವರ್ಷ ವಯಸ್ಸಿನ ಹುಡುಗನಾಗಿದ್ದಾಗಲೇ ಮೃತಪಟ್ಟಿದ್ದು ಹಾಲಿ ತಾನು ಹಾಗೂ ತನ್ನ ಮಗನಾದ ಅನೀಲ್ ಕುಮಾರ್ ರವರು ಇರುತ್ತೇವೆ. ತನ್ನ ಮಗನಾದ ಅನೀಲ್ ಕುಮಾರ್ ಡಿ.ಎಂ. ರವರಿಗೆ ಸುಮಾರು 20 ವರ್ಷ ವಯಸ್ಸಾಗಿದ್ದು ಆತನು ತಮ್ಮ ಗ್ರಾಮದಲ್ಲಿ ಟಮೋಟೋ ಬಾಕ್ಸ್ ಲೋಡಿಂಗ್ ಮಾಡುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಹೀಗಿದ್ದು ದಿನಾಂಕ: 28-02-2021 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ತಮ್ಮ ಗ್ರಾಮದ ಯಲ್ಲಪ್ಪ ಬಿನ್ ರಾಮಪ್ಪ ರವರೊಂದಿಗೆ ಕೆಎ-64-1052 ಭಾರತ್ ಬೆಂಜ್ ಕ್ಯಾಂಟರ್ ನಲ್ಲಿ ಟಮೋಟೋ ಲೋಡ್ ಮಾಡಿಕೊಂಡು ಕೋಲಾರಕ್ಕೆ ಹೋಗಿ ಮಾರ್ಕೆಟ್ ನಲ್ಲಿ ಅನ್ ಲೋಡ್ ಮಾಡಿ ಬರುವುದಾಗಿ ಹೇಳಿ ಹೋಗಿದ್ದು, ದಿನಾಂಕ: 01-03-2021 ರಂದು ಬೆಳಿಗ್ಗೆ ಸುಮಾರು 6.30 ಗಂಟೆ ಸಮಯದಲ್ಲಿ ಅನೀಲ್ ಕುಮಾರ್ ಬಿನ್ ಹನುಮಂತಪ್ಪ ಎಂಬುವರು ತಮ್ಮ ಸಂಬಂಧಿಯಾದ ಹರಿಕೃಷ್ಣ ಬಿನ್ ರಾಮಾಂಜಿನಪ್ಪ ರವರಿಗೆ ಪೋನ್ ಮಾಡಿ ತನ್ನ ಮಗನಾದ ಅನೀಲ್ ಕುಮಾರ್ ರವರು ಕೆಲಸಕ್ಕೆ ಹೋಗಿದ್ದ ಯಲ್ಲಪ್ಪ ರವರ ಕ್ಯಾಂಟರ್ ವಾಹನಕ್ಕೆ ಶಿಡ್ಲಘಟ್ಟ ತಾಲ್ಲೂಕು ಜೆ.ವೆಂಕಟಾಪುರ ಕೆರೆ ಕಟ್ಟೆಯ ಮೇಲ್ಬಾಗ ಅಪಘಾತವಾಗಿರುವುದಾಗಿ ಅಪಘಾತದಲ್ಲಿ ತನ್ನ ಮಗನಾದ ಅನೀಲ್ ಕುಮಾರ್ ರವರು ಮೃತಪಟ್ಟಿದ್ದು ಯಲ್ಲಪ್ಪ ಬಿನ್ ರಾಮಪ್ಪ ರವರಿಗೆ ಗಾಯಗಳಾಗಿರುವುದಾಗಿ ತಿಳಿಸಿದ್ದು ಕೂಡಲೇ ತಾನು, ತಮ್ಮ ಸಂಬಂಧಿಕರಾದ ಹರಿಕೃಷ್ಣ ಹಾಗೂ ಇತರರು ಸ್ಥಳಕ್ಕೆ ಬಂದು ವಿಚಾರ ಮಾಡಲಾಗಿ ದಿನಾಂಕ: 01-03-2021 ರಂದು ಬೆಳಗಿನ ಜಾವ ಟಮೋಟೋ ವನ್ನು ಕೋಲಾರ ಮಾರ್ಕೆಟ್ ನಲ್ಲಿ ಅನ್ ಲೋಡ್ ಮಾಡಿ ವಾಪಸ್ಸು ನಮ್ಮ ಗ್ರಾಮಕ್ಕೆ ಬರುವ ಸಲುವಾಗಿ ಹೆಚ್.ಕ್ರಾಸ್ ವಿಜಯಪುರ ರಸ್ತೆಯ ಜೆ.ವೆಂಕಟಾಪುರ ಕೆರೆ ಕಟ್ಟೆಯ ಮೇಲ್ಬಾಗದಲ್ಲಿ ಬೆಳಗಿನ ಜಾವ 5.30 ಗಂಟೆಯಲ್ಲಿ ಶ್ರೀ ದುಗ್ಗಲಮ್ಮ ದೇವಾಲಯದ ಬಳಿ ಕ್ಯಾಂಟರ್ ನ್ನು ಚಾಲಕ ಯಲ್ಲಪ್ಪ ಬಿನ್ ರಾಮಪ್ಪ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಕ್ಯಾಂಟರ್ ವಾಹನವು ನಿಯಂತ್ರಣ ತಪ್ಪಿ ಶ್ರೀ ದುಗ್ಗಲಮ್ಮ ದೇವಾಲಯಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಮಗನಾದ ಅನೀಲ್ ಕುಮಾರ್ ರವರಿಗೆ ತಲೆ, ಮೈ ಮೇಲೆ ಹಾಗೂ ಇತರೆ ಕಡೆಗೆಗಳಲ್ಲಿ ತೀವ್ರತರವಾದ ಗಾಯಗಳಾಗಿ ಮೃತಪಟ್ಟಿದ್ದು ಯಲ್ಲಪ್ಪ ಬಿನ್ ರಾಮಪ್ಪ ರವರಿಗೆ ಸಣ್ಣಪಟ್ಟ ಗಾಯಗಳಾಗಿದ್ದು ಮೃತಪಟ್ಟಿದ್ದ ತನ್ನ ಮಗನ ಮೃತದೇಹವನ್ನು ಸಾರ್ವಜನಿಕರ ಸಹಾಯದಿಂದ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುವುದಾಗಿದ್ದು, ತಾವು ಸ್ಥಳಕ್ಕೆ ಬೇಟಿ ಮಾಡಿ ತನಿಖೆ ಕೈಗೊಂಡು ನಂ. ಕೆಎ-64-1052 ಭಾರತ್ ಬೆಂಜ್ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 53/2021 ಕಲಂ 279, 304(ಎ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 01-03-2021 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080