ಅಭಿಪ್ರಾಯ / ಸಲಹೆಗಳು

  1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 09/2021 ಕಲಂ.419,420  ಐಪಿಸಿ & 66(D) (INFORMATION TECHNOLOGY ACT 2008 :-

       ದಿನಾಂಕ:01/2/2021 ರಂದು ಪಿರ್ಯಾಧಿ ಹರೀಶ್ ಎಂ ಎ ಬಿನ್ ಅಂಜಿನಪ್ಪ, 29 ವರ್ಷ, ಈಡಿಗರು, ಟ್ರಾನ್ಸಪೋರ್ಟ ಕೆಲಸ,  ವಾಸ ಮರಳೂರು ಗ್ರಾಮ, ಗೌರೀಬಿದನೂರು ತಾಲ್ಲೂಕು,  ಮೊ.ಸಂಖ್ಯೆ: 7676712535

  . ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿದ ದುರಿನ ಸಾರಾಂಶವೇನೆಮದರೆ ತಾನು ಲಾರಿಗಳನ್ನು ಇಟ್ಟುಕೊಂಡು ಇಟ್ಟುಕೊಂಡು ಅವುಗಳ ಬಾಡಿಗೆಯಿಂದ ಜೀವನ ಮಾಡಿಕೊಂಡಿರುತ್ತೇನೆ ಕಾದಲವೇಣಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ SB ಅಕೌಂಟ್ ನಂ:8836101000620. ಹಾಗೂ ನನ್ನ ಬಳಿ  ವಿವೋ ಕಂಪನಿಯ ಮೊಬೈಲ್ ನಲ್ಲಿ ಜಿಯೋ ಕಂಪನಿಯ ಸಿಮ್ ನಂ:7676712535 ಇರುತ್ತದೆ.  ಹಾಗೂ ಇದರಲ್ಲೆ ಇಂಟರ್ನೆಟ್,  ಗೂಗಲ್ ಫೇ & ಪೋನ್ ಫೇ ವ್ಯಾಲೆಟ್ ಗಳನ್ನು ಇನ್ಸಾಟಾಲ್ ಮಾಡಿಕೊಂಡು ನನ್ನ ಮೇಲ್ಕಂಡ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು ಇದರಿಂದ ನನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತೇನೆ. ಈಗಿರುವಾಗ ದಿನಾಂಕ:28/01/2021 ರಂದು ನಾನು ನಮ್ಮ ಮನೆಯಲ್ಲಿದ್ದಾಗ ಮೊ ಸಂಖ್ಯೆ: 8653209672 ಸಂಖ್ಯೆಯಿಂದ ನನ್ನ ಮೊಬೈಲ್ ಗೆ ಕರೆ ಮಾಡಿ ನಾವು ಟಾಟಾ ಕ್ಯಾಪಿಟಲ್ ಟಾಟಾ ಕಂಪನಿಯಿಂದ ಮಾತಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು ನಂತರ ಕ್ಯಾಪಿಟಲ್ ಕಂಪನಿಯಿಂದ  ನಿಮಗೆ  5 ಲಕ್ಷ ರೂಗಳ ¸Á® ಮಂಜುರಾಗಿದೆ ಎಂತ ಕರೆ ಮಾಡಿದ. ಆಗ ನಾನು ಈ ಹಿಂದೆ ಟಿವಿಎಸ್ ಕಂಪನಿಯಲ್ಲಿ ಲೋನ್ ಗೆ ನಾನು ಆನ್ ಲೈನ್ ಮೂಲಕ ಅರ್ಜಿ ಹಾಕಿದ್ದು, ಅದೇ ಇರಬಹುದೆಂತ ತಿಳಿದು ನಾನು ಅವರಿಗೆ ಲೋನ್ ಮಂಜೂರು ಮಾಡಲು ತಿಳಿಸಿದೆ. ನಂತರ ಅವರು ಲೋನ್ ಮಂಜೂರಾಗಿರುವ ಮತ್ತು  ಬಡ್ಡಿ ಮಾಹಿತಿ ಇರುವ ಲೆಟರ್ ನ್ನು ನನ್ನ ವ್ಯಾಟ್ಸಾಪ್ ಗೆ ಕಳುಹಿಸಿದರು. ನಂತರ  ಅವರು ನಿಮ್ಮ ಲೋನ್ಗೆ  ಇನ್ಸೂರೆನ್ಸ್ ಮಾಡಬೇಕು ಅದಕ್ಕೆ 7570/- ರೂಗಳನ್ನು ಕೆನರಾ ಬ್ಯಾಂಕ್ ಅಕೌಂಟ್ ನಂ:5814108002398.& IFSC CODE:- CNRB0005814 ಖಾತೆಗೆ ಹಣ ಕಳುಹಿಸಲು ತಿಳಿಸಿದ. ನಂತರ ನಾನು ದಿನಾಂಕ:30/1/2021 ರಂದು ನನ್ನ ಮೇಲ್ಜಂಡ ಬ್ಯಾಂಕ್ ಖಾತೆಯಿಂದ 7570/- ರೂಗಳನ್ನು ಅವನು ನೀಡಿದ್ದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುತ್ತೇನೆ. ನಂತರ ಪುನಃ ಅವನು ಕರೆ ಮಾಡಿ ನೀವು ಇಎಂಐ ಯಾವ ತರ ಕಟ್ಟುತ್ತೀರಿ ಎಂಬ ಬಗ್ಗೆ ಕನ್ಪರ್ಮೇಷನ್ ಬೇಕು  ಅದಕ್ಕೆ ನೀವು ಒಂದು ಇಎಂಐ ಕಂತು 15,436/- ರೂಗಳನ್ನು ಕಟ್ಟಲು ತಿಳಿಸಿದ.ಅದರಂತೆ ನಾನು ನನ್ನ ಖಾತೆಯಿಂದ ಅವನು ನೀಡಿದ್ದ ಖಾತೆಗೆ ಹಣ 15,436/- ರೂಗಳನ್ನು ವರ್ಗಾಯಿಸಿರುತ್ತೇನೆ. ನಂತರ ನನಗೆ ಒಂದು ಮೇಲ್ ಬಂದಿದ್ದು ಅದರಲ್ಲಿಆರ್ ಬಿ ಐ ನಿಂದ 35,577/- ರೂಗಳನ್ನು ಕಟ್ಟಿದರೆ ನಿಮ್ಮ ಲೋನ್ ಈ ದಿನ ಬಿಡುಗಡೆ ಮಾಡಲಾಗುತ್ತದೆಂತ ಮೇಲೆ ಬಂದಿದ್ದು, ನನಗೆ ಬಹಳವಾಗಿ ಹಣದ ಆವಶ್ಯಕತೆ ಇದ್ದುದರಿಂದ ನಾನು ನಿಜ ಇರಬಹುದೆಂತ ನಂಬಿ ನನ್ನ ಖಾತೆಯಿಂದ 35,577/- ರೂಗಳನ್ನು ಅವನು ನೀಡಿದ್ದ ಮೇಲ್ಕಂಡ ಖಾತೆಗೆ ವರ್ಗಾಯಿಸಿರುತ್ತೇನೆ. ಈಗೆ ಇನ್ನು ಅನೇಕ ಚಾರ್ಜಗಳಿಗೆ ಅಂತ ಈ ಕೆಳಕಂಡಂತೆ  ನನ್ನಿಂದ ಒಟ್ಟು 1,79,629/- ರೂಗಳ ಹಣವನ್ನು ಪಡೆದು ನನಗೆ ಯಾವುದೇ ಲೋನ್ ನೀಡದೆ ಮತ್ತು ಹಣವನ್ನು ವಾಪಸ್ಸು ನೀಡದೆ ವಂಚಿಸಿರುವ ಮೇಲ್ಕಂಡ ಮೊಬೈಲ್ ನಂಬರ್ & ಅಕೌಂಟ್ ಬಳಕೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಬೇಕಾಗಿ ಕೋರಿದೆ.

  ಕ್ರ ಸಂ    ದಿನಾಂಕ    ಬ್ಯಾಂಕ್ ಅಕೌಂಟ್ ನಂಬರ್    ವ್ಯಾಲೆಟ್ ನಂಬರ್    ಮೊತ್ತ    ಯಾವ ಉದ್ದೇಶಕ್ಕಾಗಿ

  1    30/1/2021    CANARA BANK A/C NO: 5814108002398 IFSC: CNRB0005814    -    7570    INSURENCE

  2    30/1/2021    CANARA BANK A/C NO: 5814108002398 IFSC: CNRB0005814    -    15436    MADAL EMI

  3    30/1/2021    CANARA BANK A/C NO: 5814108002398 IFSC: CNRB0005814    -    35577    TDS

  4    30/1/2021    -    7710937945     49000    NOC CHARGES

  5    30/1/2021    -    7710937945    10000    PANALTI

  6    30/1/2021    -    7710937945    12546    PANALTI

  7    30/1/2021        7710937945    12500    PAPER CHARGES

  8    30/1/2021    -    7710937945    28500    LOAN CANCEL CHARGES

  9    30/1/2021    -    7710937945    8500    LATE  PAY CHARGES

                GROSS TOTAL    1,79,629    -

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 52/2021 ಕಲಂ.15(ಎ) ಕೆ.ಇ ಆಕ್ಟ್:-

       ದಿನಾಂಕ: 31/01/2021 ರಂದು ಮದ್ಯಾಹ್ನ 2.00 ಗಂಟೆಗೆ ಠಾಣೆಯ ಎ.ಎಸ್.ಐ, ಶ್ರಿ ಅಕ್ಬರ್ ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:31/01/2021 ರಂದು ಬೆಳಿಗ್ಗೆ ತಾನು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಅದರಂತೆ ತಾನು ಠಾಣಾ ವ್ಯಾಪ್ತಿಯ ನಾಯನಹಳ್ಳಿ, ಚೊಕ್ಕಹಳ್ಳಿ ಗ್ರಾಮಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಿಗ್ಗೆ 12.00 ಗಂಟೆಗೆ ನೆಲಮಾಚನಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ಹೆಚ್.ಎನ್.ಪ್ರಕಾಶ ಬಿನ್ ನಾರಾಯಣಸ್ವಾಮಿ ಎಂಬುವರು ಗ್ರಾಮದಲ್ಲಿ ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತನಗೆ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಹಾಗೂ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಹೆಚ್.ಎನ್.ಪ್ರಕಾಶ ಬಿನ್ ನಾರಾಯಣಸ್ವಾಮಿ, 29 ವರ್ಷ, ಕುರುಬರು, ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ, ನೆಲಮಾಚನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ML ನ 04 ಟೆಟ್ರಾ ಪ್ಯಾಕೆಟ್ ಗಳು, 2) ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 90 ML ನ 02 ಮದ್ಯದ ಟೆಟ್ರಾ ಪಾಕೇಟ್ ಗಳು, 3) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 12-30 ಗಂಟೆಯಿಂದ ಮದ್ಯಾಹ್ನ 1-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ  ಹೆಚ್.ಎನ್.ಪ್ರಕಾಶ ಬಿನ್ ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 53/2021 ಕಲಂ.15(ಎ) ಕೆ.ಇ ಆಕ್ಟ್:-

       ದಿನಾಂಕ: 31/01/2021 ರಂದು ಮದ್ಯಾಹ್ನ 2.30 ಗಂಟೆಗೆ ಠಾಣೆಯ ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:31/01/2021 ರಂದು ಬೆಳಿಗ್ಗೆ ತಾನು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಅದರಂತೆ ಠಾಣಾ ವ್ಯಾಪ್ತಿಯ ವೀರಾಪುರ, ನೆಲಮಾಚನಹಳ್ಳಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 1.00 ಗಂಟೆಗೆ ಪಾಲೇಪಲ್ಲಿ ಗ್ರಾಮದ ಬಳಿಗೆ ಹೋದಾಗ ಪಾಲೇಪಲ್ಲಿ ಗ್ರಾಮದ ವಾಸಿ ಶ್ರೀರಾಮರೆಡ್ಡಿ ಬಿನ್ ಲೇಟ್ ರಾಮರೆಡ್ಡಿ ಎಂಬುವರು ಅವರ ಅಂಗಡಿಯ  ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶ್ರೀರಾಮರೆಡ್ಡಿ ಬಿನ್ ಲೇಟ್ ರಾಮರೆಡ್ಡಿ, 45 ವರ್ಷ, ಒಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಪಾಲೇಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1).ಓಲ್ಡ್ ಟಾವರಿನ್ ವಿಸ್ಕಿ 180 ಎಂ.ಎಲ್ ನ 04 ಟೆಟ್ರಾ ಪ್ಯಾಕೆಟ್ ಗಳು, 2).ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 04 ಟೆಟ್ರಾ ಪ್ಯಾಕೆಟ್ ಗಳು, 3).ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್, 4).02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 1.00 ಗಂಟೆಯಿಂದ ಮದ್ಯಾಹ್ನ 1.45 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ಶ್ರೀರಾಮರೆಡ್ಡಿ ಬಿನ್ ಲೇಟ್ ರಾಮರೆಡ್ಡಿ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ.15(ಎ) ಕೆ.ಇ ಆಕ್ಟ್:-

       ದಿನಾಂಕ: 31/01/2021 ರಂದು ಸಂಜೆ 7:40 ಗಂಟೆಗೆ ಪಿ ಎಸ್ ಐ ರವರು ಠಾಣೆಗೆ ಹಾಜರಾಗಿ  ನೀಡಿದ ವರದಿಯ ಸಾರಾಂಶವೆನೆಂದರೆ ದಿನಾಂಕ:-31/01/2021 ರಂದು ಸಂಜೆ ಸುಮಾರು 06-30 ಗಂಟೆಯ ಸಮಯದಲ್ಲಿ ನಾರಾಯಣಸ್ವಾಮಿ.ಆರ್  ಪಿ.ಎಸ್.ಐ ಆದ  ನಾನು ಠಾಣೆಗೆ ಒದಗಿಸಿರುವ ರಕ್ಷಕ್  ಸರ್ಕಾರಿ ಜೀಪ್ ಸಂಖ್ಯೆ ಕೆಎ-07-ಜಿ-61 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ನಾನು ಮತ್ತು ನನ್ನೊಂದಿಗೆ ಠಾಣೆಯ ಶ್ರೀ. ವೇಣು ಸಿಪಿಸಿ-190, ರವರು ನಗರದ ಚೇಳೂರು ರಸ್ತೆ, ಇಡ್ಲಿಪಾಳ್ಯ, ಬೆಂಗಳೂರು ವೃತ್ತ, ಎನ್.ಆರ್ ಬಡಾವಣೆ, ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಆರ್.ಆರ್ ವೃತ್ತದ ಬಳಿ ಇವರು ಪಾರ್ಕ್  ಬಳಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಬೆಂಗಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ ಇಬ್ಬರು ಆಸಾಮಿಗಳು ತಮ್ಮ ಬಳಿ ಕವರ್ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  2-3 ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 3-4 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು  ಧರ್ಮಪಾಲ್ ಬಿನ್ ಚನ್ನಕೃಷ್ಣ, 43 ವರ್ಷ, ಟೈಲರ್ ಕೆಲಸ, ವಕ್ಕಲಿಗ, ವಾಸ: ಸೊಣ್ಣಶೆಟ್ಟಿಹಳ್ಳಿ ವಾರ್ಡ್ ನಂ: 13,  ಚಿಂತಾಮಣಿ ನಗರ, ಆತನ ಬಳಿ ಇದ್ದ ಚೀಲದಲ್ಲಿ ಪರಿಶೀಲಿಸಲಾಗಿ 90 ML  HAYWARDS CHEERS WHISKEY ನ 4 ಟೆಟ್ರಾ ಪ್ಯಾಕೆಟ್ ಗಳು ಇದ್ದು ಇವು ಒಟ್ಟು 360 ಮಿ.ಲೀಟರ್ ಇದ್ದು, ಇವುಗಳ  ಒಟ್ಟು ಬೆಲೆ ಸುಮಾರು 121 ರೂ ಗಳಷ್ಟು ಬೆಲೆ ಬಾಳುವಂತಹದ್ದಾಗಿದ್ದು, ಈ ಮಾಲನ್ನು, 2 ಖಾಲಿ ಪ್ಲಾಸ್ಟಿಕ್ ಲೋಟಗಳು,  ಖಾಲಿಯಾಗಿರುವ 90 ML  HAYWARDS CHEERS WHISKEY ಯ ಟೆಟ್ರಾ ಪ್ಯಾಕೆಟ್ ಗಳನ್ನು ಈ ದಿನ ಸಂಜೆ 06-45  ಗಂಟೆಯಿಂದ 07-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಗಳೊಂದಿಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 16/2021 ಕಲಂ.15(ಎ) ಕೆ.ಇ ಆಕ್ಟ್:-

       ದಿನಾಂಕ: 31/01/2021 ರಂದು ರಾತ್ರಿ 7:50 ಗಂಟೆಗೆ ಆನಂದ್ ಕುಮಾರ್. ಜೆ.ಎನ್  ಪಿ.ಐ  ಚಿಂತಾಮಣಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:-31/01/2021 ರಂದು ಸಂಜೆ ಸುಮಾರು 06-45 ಗಂಟೆಯ ಸಮಯದಲ್ಲಿ ತಾನು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-3699 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ತಾನು ಮತ್ತು ತನ್ನೊಂದಿಗೆ ಠಾಣೆಯ ಶ್ರೀ. ಸರ್ವೇಶ್ ಸಿಪಿಸಿ-426, ರವೀಂದ್ರ ಸಿಪಿಸಿ-539 ರವರು ನಗರದ ಚೇಳೂರು ರಸ್ತೆ, ಬೆಂಗಳೂರು ವೃತ್ತ, ಮಾರುತಿ ವೃತ್ತ ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಆರ್.ಆರ್ ವೃತ್ತದ ಪಾರ್ಕ್  ಮುಂಭಾಗದ ಖಾಲಿ ಮೈದಾನದಲ್ಲಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಂಗಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ ಇಬ್ಬರು ಆಸಾಮಿಗಳು ತಮ್ಮ ಬಳಿ ಕವರ್ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  2-3 ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಆಸಾಮಿಯು ತನ್ನ ಹೆಸರು ಕೆ.ಮಂಜುನಾಥ್ ಬಿನ್ ಲೇಟ್ ಕೊಂಡಪ್ಪ, 45 ವರ್ಷ, ಬಲಜಿಗ ಜನಾಂಗ, ವಾಸ: ಚೌಡರೆಡ್ಡಿಪಾಳ್ಯ, 03 ನೇ ಕ್ರಾಸ್,  ಚಿಂತಾಮಣಿ ನಗರ ಎಂದು ತಿಳಿಸಿದ್ದು ಆತನ ಬಳಿ ಇದ್ದ ಚೀಲದಲ್ಲಿ ಪರಿಶೀಲಿಸಲಾಗಿ 90 ML  HAYWARDS CHEERS WHISKEY ನ 4 ಟೆಟ್ರಾ ಪ್ಯಾಕೆಟ್ ಗಳು ಇದ್ದು ಇವು ಒಟ್ಟು 360 ಮಿ.ಲೀಟರ್ ಇದ್ದು, ಇವುಗಳ  ಒಟ್ಟು ಬೆಲೆ ಸುಮಾರು 121 ರೂ ಗಳಷ್ಟು ಬೆಲೆ ಬಾಳುವಂತಹದ್ದಾಗಿದ್ದು, ಈ ಮಾಲನ್ನು, 2 ಖಾಲಿ ಪ್ಲಾಸ್ಟಿಕ್ ಲೋಟಗಳು,  ಖಾಲಿಯಾಗಿರುವ 90 ML  HAYWARDS CHEERS WHISKEY ಯ ಟೆಟ್ರಾ ಪ್ಯಾಕೆಟ್ ಗಳನ್ನು ಈ ದಿನ ಸಂಜೆ 07-00 ಗಂಟೆಯಿಂದ 07-45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಗಳೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿರುತ್ತೆ .

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 17/2021 ಕಲಂ.ಮನುಷ್ಯ ಕಾಣೆ:-

       ದಿನಾಂಕ: 01/02/2021 ರಂದು ಬೆಳಿಗ್ಗೆ  11:30 ಗಂಟೆಗೆ ಪಿರ್ಯಾದಿದಾರರಾದ ಲಲಿತಮ್ಮ ಕೋಂ ಅಂಜಿತ್ ಕುಮಾರ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಈಗ್ಗೆ 3 ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದ ನಾರಾಯಣಸ್ವಾಮಿ ರವರ ಮಗನಾದ ಅಂಜಿತ್ ಕುಮಾರ್ ಎಂಬುವವರೊಂದಿಗೆ ಮದುವೆಯಾಗಿದ್ದು, ನಂತರ ತಾವು ಈಗ್ಗೆ 2 ವರ್ಷಗಳಿಂದ ಇದೇ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬಾಡಿಗೆ  ಮನೆ ಮಾಡಿಕೊಂಡು  ಬಟ್ಲಹಳ್ಳಿ ಗ್ರಾಮದಲ್ಲಿ ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ತನ್ನ ಗಂಡ  ಬಟ್ಲಹಳ್ಳ್ಳಿಯಲ್ಲಿ ಜಮೀನುನ್ನು ಲಿಜ್ ಹಾಕಿಕೊಳ್ಳಲು ಅಪ್ಪಿ ಎಂಬುವವರಿಂದ ಸಾಲವಾಗಿ ಹಣವನ್ನು ಪಡೆದುಕೊಂಡಿರುತ್ತಾರೆ. ಸದರಿ ಹಣವನ್ನು ವಾಪಸ್ಸು ನೀಡಲು ಇದೇ ಚಿಂತಾಮಣಿ ನಗರದ ನನ್ನ ಗಂಡನ ಸ್ನೇಹಿತರಾದ ರಾಜ, ನರಸಿಂಹ, ಆಯಿಷಾ, ಕೃಷ್ಣ, ರಾಜೇಶ್ ರವರುಗಳ ಬಳಿ ಸಾಲವಾಗಿ ಹಣವನ್ನು ಪಡೆದುಕೊಂಡಿರುತ್ತಾರೆ. ಸದರಿ ಹಣವನ್ನು ವಾಪಸ್ಸು ಕೊಡು  ಎಂತ ಸದರಿ ಮೇಲ್ಕಂಡ ತನ್ನ ಗಂಡನ ಸ್ನೇಹಿತರು ಪ್ರತಿದಿನ ಮನೆಯ ಬಳಿ ಬಂದು ಕೇಳುತ್ತಿದ್ದಾಗ ನನ್ನ ಗಂಡ ಮನಸ್ಸಿಗೆ ಬೇಜಾರು ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 20/12/2020 ರಂದು ಬೆಳಿಗ್ಗೆ 11:30 ಗಂಟೆ ಸಮಯದಲ್ಲಿ ತಾನು ಮನೆಯಲ್ಲಿರುವಾಗ ತನ್ನ ಗಂಡನಾದ ಅಂಜಿತ್ ಕುಮಾರ್ ರವರು ನನ್ನ ಅತ್ತೆಯಾದ ಶಾಂತಮ್ಮ ರವರಿಗೆ ನಾನು ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೊದವರು ಪುನಃ ರಾತ್ರಿಯಾದರೂ ಮನೆಗೆ ವಾಪಸ್ಸು ಬರದೇ ಇದ್ದಾಗ ನಾವು ಗಾಬರಿಯಾಗಿ ತಮ್ಮ ನೆಂಟರ ಮನೆಗಳಲ್ಲಿ ಹಾಗೂ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತನ್ನ ಗಂಡನ ಮೊ ನಂ: 9019595505 ನಂಬರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಬಂದಿರುತ್ತದೆ. ಇದುವರೆಗೂ ತನ್ನ ಗಂಡನನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ಬಂದು ದೂರುನ್ನು ನೀಡುತ್ತಿರುತ್ತೇನೆ, ತನ್ನ ಗಂಡ ಮಾಡಿದ ಸಾಲಬಾಧೆಯಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಎಲ್ಲಿಗೊ ಹೊರಟು ಹೋಗಿರುತ್ತಾರೆ. ಆದ್ದರಿಂದ ತನ್ನ ಗಂಡನನ್ನು ಪತ್ತೆಮಾಡಿಕೊಡಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 31/2021 ಕಲಂ. 323,324,504,506,34 ಐ.ಪಿ.ಸಿ:-

       ದಿನಾಂಕ 31/01/2021 ರಂದು ಪಿರ್ಯಾಧಿದಾರರಾದ  ಶ್ರೀನಿವಾಸ ಬಿನ್ ನಾರಯಣಪ್ಪ, 31ವರ್ಷ,ಕುರುಬ ಜನಾಂಗ , ,ಲಾರಿ ಚಾಲಕ , ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ- ದಿನಾಂಕ 28/01/2021 ರಂದು ನಾನು ಮತ್ತು ನಮ್ಮ ಗ್ರಾಮದ ಲಕ್ಷ್ಮೀಪತಿ  ಎಂಬುವವರು ರಾತ್ರಿ ಸುಮಾರು 8-30 ಗಂಟೆಯಲ್ಲಿ ನಮ್ಮ ಗ್ರಾಮದ  ಬಸ್ ನಿಲ್ಧಾಣದ ಬಳಿ ಇರುವ ಅಂಗಡಿಗಯಲ್ಲಿ ತನ್ನ ದ್ವಿ ಚಕ್ರ ವಾಹನದಲ್ಲಿ ಹೋಗಿ ನಿಲ್ಲಿಸಿ ಸಿಗರೇಟ್ ಪಡೆದುಕೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ನಮ್ಮ ಗ್ರಾಮದ ಸಂಜೀವ ಮತ್ತು ಚಂದ್ರಬಾಬು ಎಂಬುವರು ಒಂದು ಕಾರಿನಲ್ಲಿ ಬಂದು ಅದೇ ಅಂಗಡಿಯ ಬಳಿ ನಿಲ್ಲಿಸಿದರು ನಾನು ಸಿಗರೇಟ್ ಪಡೆದು ನನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗಲು ವಾಹನದ ಬಳಿ ಬಂದಾಗ ನನ್ನ ವಾಹನ ಹೋಗಲು ಕಾರು ಅಡ್ಡ ಇದ್ದ ಕಾರಣ ಕಾರನ್ನು ಸ್ವಲ್ಪ ಪಕ್ಕಕ್ಕೆ ತೆಗೆಯಲು ತಿಳಿಸಿದಾಗ ಸಂಜೀವಪ್ಪ ಬುವನು ನಾನು ಕಾರು ಪಕ್ಕಕ್ಕೆ ತೆಗೆಯುವುದಿಲ್ಲ ನಾನು ಹೋಗುವ ವರೆಗೂ ಇರು ಎಂತ ಹೇಳಿದ ಹಾಗೂ ಅವಾಚ್ಯ  ಶಬ್ದಗಳಿಂದ ಬೈದಿರುತ್ತಾನೆ. ಚಂದ್ರಬಾಬು ಈನನ್ನ ಮಗನದು ಜಾಸ್ತಿಯಾಗಿದೆ ಎಂದು ಹೇಳಿ ನನ್ನನ್ನು ಎದೆಗೆ ಕಾಲಿನಿಂದ ಒದ್ದಿರುತ್ತಾನೆ. ಆಗ ಸಂಜೀವ ತನ್ನ ಕಾರಿನಲ್ಲಿದ್ದ ಜಾಕ್ ರಾಡ್ ನಿಂದ ನನ್ನ ಹಣೆಗೆ ಮತ್ತು ಎಡ ಕಣ್ಣಿನ ಬಳಿ ಹೊಡೆದು ರಕ್ತಗಾಯ ಮಾಡಿ ಈ ನನ್ನ ಮಗನನ್ನು ಈ ದಿನ ಸಾಯಿಸಬೇಕು ಎಂದು ಕೊಲೆ ಬೆದರಿಕೆ ಹಾಕಿದ  ಕೂಗಾಟ ಕೇಳಿ ಅಲ್ಲಿಗೆ ಬಂದ ಶಿವಕುಮಾರ ಎಂಬುವನು ನನ್ನನ್ನು ಕೆಳಕ್ಕೆ ತಳ್ಳಿ ನನ್ನ ಎಡ ಕೆನ್ನೆಯ ಮೇಲೆ ತರಚಿದ ಗಾಯವನ್ನುಂಟು ಮಾಡಿದ ಹಾಗೂ ನನ್ನ ಮೈ ಮೇಲೆ ಕಾಲಿನಿಂದ  ಒದ್ದು ಮೈ ಕೈ ನೋವುಂಟು ಮಾಡಿದ ಆಗ ಅಲ್ಲೇ ಇದ್ದ ನಮ್ಮ ಗ್ರಾಮದ ಲಕ್ಷ್ಮೀ ಪತಿ ಬಿನ್ ಆನಂದ ಮತ್ತು ಮುದ್ದ ಎಂಬುವರು ಜಗಳ ಬಿಡಿಸಿ ನನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಯಾವುದೇ ವಾಹನದಲ್ಲಿ ಚಿಕಿತ್ಸೆ ದಾಖಲಿಸಿರುತ್ತಾರೆ ನನ್ನ ಮೇಲೆ ವಿನಾಕಾರಣ ಜಗಳ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಊರಿನಲ್ಲಿ ಪಂಚಾಯ್ತಿ ಮಾಡಿಕೊಳ್ಳೋಣವೆಂತ  ಗ್ರಾದ ಹಿರಿಯರು ಹೇಳಿದ್ದು ಪಂಚಾಯ್ತಿ ಮಾಡದೆ ಇದ್ದರಿಂದ ದೂರನ್ನು ಈ ದಿನ ತಡವಾಗಿ ನೀಡುತ್ತಿದ್ದು ಮೇಲ್ಕಂಡ ಮೂರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 19/2021 ಕಲಂ. 279  ಐ.ಪಿ.ಸಿ:-

       ದಿನಾಂಕ:31/01/2021 ರಂದು ಸಾಯಂಕಾಲ  4.30 ಗಂಟೆಯ ಸಮಯದಲ್ಲಿ ಪಿರ್ಯಾಧಿದಾರರು ಠಾಣೇಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ  ಈ ದಿನ ದಿನಾಂಕ 31/01/2021 ರಂದು ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಹೆಂಡತಿ ಐಶ್ವರ್ಯ, 36 ವರ್ಷ, ತನ್ನ ಮಗಳು ಶ್ರೀಅಕ್ಷಧ 10 ವರ್ಷ ರವರು ಬೆಂಗಳೂರು ನಿಂದ ಆಂದ್ರ ಪ್ರದೇಶದ ಲೇಪಾಕ್ಷಿಗೆ ಹೋಗಲು ತನ್ನ ಬಾಬತ್ತು ಎಪಿ  05-ಡಿ.ಎಸ್.-8491 ರ ಕಾರಿನಲ್ಲಿ ಕುಳಿತುಕೊಂಡು ತಾನು ಚಾಲನೆ ಮಾಡಿಕೊಂಡು ಚಿಕ್ಕಬಳ್ಳಾಪುರ ಮಾರ್ಗವಾಗಿ ಎನ್.ಹೆಚ್. 44 ರಸ್ತೆಯಲ್ಲಿ ಸಾದಲಿ ಕ್ರಾಸ್ ಹತ್ತಿರ ಇದೇ ದಿನ ದಿನಾಂಕ 31/01/2021 ರಂದು ಮದ್ಯಾಹ್ನ ಸುಮಾರು 3-35 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ತಮ್ಮ ಹಿಂದುಗಡೆಯಿಂದ ಬಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ04-ಎಂಎಫ್-1043 ರ ಕಾರಿನ ಚಾಲಕ ತನ್ನ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾವು ಹೋಗುತ್ತಿದ್ದ ಮೇಲ್ಕಂಡ ತಮ್ಮ ಬಾಬತ್ತು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಮ್ಮ ಕಾರಿನ ಹಿಂಭಾಗ ಸಂಪೂರ್ಣವಾಗಿ ಜಕ್ಕಂ ಆಗಿರುತ್ತೆ. ಕೆಎ04-ಎಂಎಫ್-1043 ರ ಕಾರಿನ ಮುಂಭಾಗ ಜಕ್ಕಂ ಆಗಿರುತ್ತೆ. ಆದರೆ ಕಾರಿನಲ್ಲಿದ್ದ ತನಗಾಗಲೀ ತನ್ನ ಹೆಂಡತಿಗೆ ಆಗಲೀ ಹಾಗೂ ತನ್ನ ಮಗಳಿಗಾಗಲೀ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ. ಆದ್ದರಿಂದ ರಸ್ತೆ ಅಪಘಾತ ಉಂಟುಪಡಿಸಿದ ಕೆಎ04-ಎಂಎಫ್-1043 ರ ಕಾರಿನ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರುತ್ತೇನೆ. ಸದರಿ ದೂರನ್ನು ಕನ್ನಡ ಭಾಷೆಯಲ್ಲಿ ನೀಡಿರುತ್ತೇನೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 12/2021 ಕಲಂ. 15(A),32(3) ಕೆ.ಇ ಆಕ್ಟ್:-

       ದಿನಾಂಕ 31-01-2021 ರಂದು ಸಂಜೆ 04.30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಮಹಜರ್ ನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:31/01/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಗೌಡನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ ರವರ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಚಿಲ್ಲರೆ ಅಂಗಡಿ ಬಳಿ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಹಚ್.ಸಿ-210 ಕೆ.ಬಿ.ಶಿವಪ್ಪ, ಸಿ.ಪಿ.ಸಿ-484 ವಿ.ಎಸ್.ಶಿವಣ್ಣ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಗೌಡನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗೌಡನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿರುವ ಆಸಾಮಿ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಚಿಲ್ಲರೆ ಅಂಗಡಿ ಮಾಲೀಕ ಸಹ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋಗಿದ್ದು, ಆತನನ್ನು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲ. ಆತನ ಹೆಸರು ಮತ್ತು ವಿಳಾಸ ಕೇಳಗಾಗಿ  ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ, 54 ವರ್ಷ, ವಕ್ಕಲಿಗರು, ಟೈಲರ್ ಕೆಲಸ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  ಮದ್ಯದ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARDS CHEERS WHISKY ಮಧ್ಯದ 10 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 10 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 351/-ರೂ ಆಗಿರುತ್ತೆ. ಮದ್ಯ ಒಟ್ಟು 900 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕ ನರಸಿಂಹಪ್ಪ ಓಡಿಹೋಗಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 3-15 ರಿಂದ 4-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನರಸಿಂಹಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳು ನೀಡಿದ ವರದಿ ಸಾರಾಂಶವಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 10/2021 ಕಲಂ. 380,457 ಐ.ಪಿ.ಸಿ:-

       ದಿನಾಂಕ:31/01/2021 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿ ಶ್ರೀ. ನಾಗರಾಜ, ಪಾರುಪತ್ತೆದಾರ, ಶ್ರೀ ಯೋಗ ಮತ್ತು ಭೋಗ ನಂದೀಶ್ವರ ಸ್ವಾಮಿ ದೇವಾಲಯ, ನಂದಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರಸ್ವಾಮಿ ದೇವಾಲಯದಲ್ಲಿ ದಿನಾಂಕ:30/01/2021 ರಂದು ಸಂಜೆ 7:30 ಗಂಟೆಗೆ ಮಹಾ ಮಂಗಳಾರತಿ ಮುಗಿದ ಪ್ರತಿನಿತ್ಯದಂತೆ ಬಾಗಿಲನ್ನು ಹಾಕಿಕೊಂಡು ಹೋಗಿರುತ್ತೇವೆ. ರಾತ್ರಿ ಕಾವಲುಗಾರನಾದ ವಿಜಯ್ ಕುಮಾರ್ ರವರು ಪ್ರತಿ ನಿತ್ಯದಂತೆ ಬಂದಿರುತ್ತಾನೆ. ಈ ದಿನ ದಿನಾಂಕ:31/01/2021 ರಂದು ಬೆಳಿಗ್ಗೆ 06:00 ಗಂಟೆಗೆ ದೇವಾಲಯದ ಆರ್ಚಕರಾದ ಟಿ.ಎಲ್ ಶ್ರೀನಾಥ ಬಿನ್ ಲಕ್ಷ್ಮಿನರಸಿಂಹಯ್ಯ ರವರು ದೂರವಾಣಿಯ ಮುಖಾಂತರ ದೇವಾಲಯದ ಮುಂಭಾಗದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಇಡಲಾಗಿದ್ದ ಎರಡು ಸ್ಟೀಲ್ ಕಾಣಿಕೆ ಹುಂಡಿಗಳ ಕಾಣುತ್ತಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರಬಹುದು ಎಂದು ತಿಳಿಸಿರುತ್ತಾರೆ. ಈ ದೇವಾಲಯದಲ್ಲಿ 8 ಕಾಣಿಕೆ ಹುಂಡಿಗಳು ಇದ್ದು ಈ ಪೈಕಿ ಎರಡು ಸ್ಟೀಲ್ ಕಾಣಿಕೆ ಹುಂಡಿಗಳನ್ನು ದಿನಾಂಕ:30/01/2021 ರಂದು ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿ ಇದರಲ್ಲಿ ಒಂದು ಹುಂಡಿಯನ್ನು ಹಾಗೂ ಹುಂಡಿಯಲ್ಲಿರುವ ಹಣ ಹಾಗೂ ಇತರೆಯನ್ನು ಕಳವು ಮಾಡಿಕೊಂಡು ಖಾಲಿ ಹುಂಡಿಯನ್ನು ದೇವಾಲಯದ ಮೇಲೆ ಚಾವಣಿಯ ಮೇಲೆ ಬಿಟ್ಟು ಹೋಗಿರುತ್ತಾರೆ. ಮತ್ತೊಂದು ಹುಂಡಿಯನ್ನು ತೆಗೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ನಡೆಸಿ ದೇವಾಲಯಕ್ಕೆ ಸೂಕ್ತ ಭದ್ರತೆ ನೀಡಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣದ ವರದಿ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 09/2021 ಕಲಂ. 15(A),32(3) ಕೆ.ಇ ಆಕ್ಟ್:-

       ದಿನಾಂಕ:31/01/2021 ರಂದು ಸಂಜೆ 06-45 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ.  ದಿನಾಂಕ:31/01/2021 ರಂದು ಸಂಜೆ ಸುಮಾರು 05-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಗುಮ್ಮನಾಯಕನಪಾಳ್ಯ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ತುಂಗೇಟದಿನ್ನ ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ತುಂಗೇಟದಿನ್ನ ಗ್ರಾಮದ ಮನೆಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಬಾಗದ ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು  ಓಡಿ ಹೋಗಿದ್ದು  ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು  ಹೆಸರು ವಿಳಾಸ ಕೇಳಲಾಗಿ  ಉಮಾಪತಿ ಬಿನ್ ವೆಂಕಟರವಣಪ್ಪ 29 ವರ್ಷ, ಬಲಜಿಗ ಜನಾಂಗ, ವ್ಯಾಪಾರ ತುಂಗೇಟದಿನ್ನ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  15  ಹೈ ವಾರ್ಡ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  525/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ,  ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ  09/2021  ಕಲಂ 15(ಎ) 32(3) ಕೆ,ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ,

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 26/2021 ಕಲಂ. 15(A),32(3)   ಕೆ.ಇ ಆಕ್ಟ್:-

       ದಿನಾಂಕ:31.01.2021 ರಂಧು ಸಂಜೆ 4.45 ಗಂಟೆಗೆ ಹೆಚ್.ಸಿ 191 ರವಿಕುಮಾರ್ ರವರು ಮಾಲು ಅರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ, ಈ ದಿನ ದಿನಾಂಕ 31/01/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು  ನನಗೆ ಠಾಣೆಯ 9 ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ಈ ದಿನ 9 ನೇ ಗ್ರಾಮ ಗಸ್ತಿನಲ್ಲಿ ಬರುವ ಗ್ರಾಮಗಳಾದ ದೇವರಮಳ್ಳೂರು, ಬಸವನಪರ್ತಿ, ಮಾರಪ್ಪನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ಬೊಮ್ಮನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಗ್ರಾಮದಲ್ಲಿ ಬಾತ್ಮೀದಾರರಿಂದ ಬೊಮ್ಮನಹಳ್ಳಿ ಗ್ರಾಮದ ಗೇಟ್ ನಲ್ಲಿರುವ ದೇವರಾಜು ಬಿನ್ ಮುನಿವೆಂಕಟಪ್ಪ ರವರ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ಪಂಚರ ಸಮಕ್ಷಮದಲ್ಲಿ ಅಂಗಡಿಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಗಡಿಯ ಮುಂಭಾಗದ ಕಲ್ಲು ಚಪ್ಪಡಿಯ ಮೇಲೆ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು, ಪಂಚರ ಸಮಕ್ಷಮ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿದ್ದು, ನಂತರ ಚಿಲ್ಲರೆ ಅಂಗಡಿಯಲ್ಲಿದ್ದ ಅದರ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಮದ್ಯದ ಪಾಕೇಟ್ ಗಳನ್ನು ಹಾಜರು ಪಡಿಸುವಂತೆ ಕೇಳಲಾಗಿ ಆತನು ತನ್ನ ಅಂಗಡಿಯಲ್ಲಿದ್ದ ಮದ್ಯದ ಟೆಟ್ರಾ ಪಾಕೇಟ್ ಗಳಿದ್ದ ಒಂದು ಕಪ್ಪು ಬಣ್ಣದ ಕವರ್ ಅನ್ನು ಹಾಜರು ಪಡಿಸಿದ್ದು, ಸದರಿ ಕವರ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ ರಾಜ ವಿಸ್ಕಿಯ 6 ಟೆಟ್ರಾ ಪಾಕೇಟ್ ಗಳಿದ್ದು  ಪ್ರತಿಯೊಂದು ಟೆಟ್ರಾ ಪಾಕೇಟ್ ಮೇಲೆ 35.13 ರೂ ಎಂದು ನಮೂದು ಆಗಿದ್ದು ಇವುಗಳ ಒಟ್ಟು ಬೆಲೆ 210.78 ರೂಗಳಾಗಿದ್ದು, ಸ್ಥಳದಲ್ಲಿಯೇ ರಾಜ ವಿಸ್ಕಿಯ 4 ಖಾಲಿ ಟೆಟ್ರಾ ಪಾಕೇಟ್ ಗಳು, 4 ಖಾಲಿ ನೀರಿನ ವಾಟರ್ ಪಾಕೇಟ್ ಗಳು ಮತ್ತು 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಬಿದ್ದಿದ್ದು, ನಂತರ ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ದೇವರಾಜು ಬಿನ್ ಮುನಿವೆಂಕಟಪ್ಪ, 48 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಸೊಣ್ಣೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗೆ ಮದ್ಯವನ್ನುಸೇವನೆ ಮಾಡಲು ಸ್ಥಳವಕಾಶ ಮಾಡಿಕೊಡಲು ತನ್ನ ಬಳಿ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸದರಿ ಆಸಾಮಿಯು ಅಕ್ರಮವಾಗಿ ತನ್ನ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶವನ್ನು ನೀಡಿರುವುದಾಗಿ ಕಂಡು ಬಂದಿದ್ದು ಮೇಲ್ಕಂಡ ಮಾಲುಗಳನ್ನು ಮದ್ಯಾಹ್ನ 3-15 ಗಂಟೆಯಿಂದ ಸಂಜೆ 4-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ವಾಪಸ್ಸಾಗಿ ಪಂಚನಾಮೆ, ಮಾಲನ್ನು ಮತ್ತು ಆರೋಪಿಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಸದರಿ ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 10/2021 ಕಲಂ. 323,324,504,34 ಐ.ಪಿ.ಸಿ:-

       ದಿನಾಂಕ. 31-01-2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಮನ್ಸೂರ್ ಖಾನ್ ಬಿನ್ ಇಸ್ಮಾಯಿಲ್ ಖಾನ್ ಕೋಟೆ ಶಿಡ್ಲಘಟ್ಟ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ:30-01-2021 ರಂದು ರಾತ್ರಿ ಸುಮಾರು 10-30 ಗಂಟೆಯಲ್ಲಿ ಪಿರ್ಯಾದಿ ಮನ್ಸೂರ್ ಖಾನ್ ಮನೆಯ ಬಳಿ ಇದ್ದಾಗ ಜಾಕೀರ್ ರವರು ಬಂದು ಸ್ಮಶಾನದ ಬಳಿ ಕರೆದುಕೊಂಡು ಹೋಗಿ ತನ್ನ ಆಟೋದಲ್ಲಿ ಗಾಂಜಾ ಇಟ್ಟಿದ್ದೆ ಅದನ್ನು ನೀನು ತೆಗೆದುಕೊಂಡಿದ್ದೀಯಾ ಎಂದು ಬಾಯಿ ಮಾತಿನಲ್ಲಿ ಜಗಳ ಮಾಡಿದ್ದು, ಅಷ್ಟರಲ್ಲಿ ಪೊಲೀಸರಿಗೆ ವಿಚಾರ ತಿಳಿದು ಸ್ಥಳಕ್ಕೆ ಬಂದು ನಮ್ಮಗಳಿಗೆ ಬುದ್ದಿ ಹೇಳಿ ವಾಪಸ್ಸು ಕಳುಹಿಸಿಕೊಟ್ಟರು. ನಂತರ ದಿನಾಂಕ:31-01-21 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಜಾಕೀರ್ ಪುನ: ತನ್ನ ಮನೆಯ ಬಳಿ ಬಂದು ಆಟೋ ವಿಚಾರ ಮಾತನಾಡಬೇಕು ಬಾ ಎಂದು ಸ್ಮಶಾನದ ಬಳಿ ಕರೆದುಕೊಂಡು ಹೋಗಿ ಅಲ್ಲಿ ಜಾಕೀರ್ ಸ್ನೇಹಿತರಾದ ಶರೀಪ್ ಮತ್ತು ಗೌಸ್ ರವರುಗಳು ಇದ್ದು ಎಲ್ಲರೂ ಇದ್ದಕ್ಕಿದ್ದಂತೆ ನನ್ನ ಮೇಲೆ ಗಲಾಟೆ ಮಾಡಿ ಆ ಪೈಕಿ ಶರೀಪ್ ಕೈಯಲ್ಲಿದ್ದ ಚಾಕುವಿನಿಂದ ತಿವಿಯಲು ಬಂದಾಗ ಬಂದಾಗ ಬಲ ಕೈ ಅಡ್ಡ ಇಟ್ಟಾಗ ಹೆಬ್ಬರಳಿಗೆ ರಕ್ತಗಾಯ ವಾಗಿರುತ್ತೆ. ನಂತರ ನನ್ನ ತಮ್ಮ ಮುಬಾರಕ್ ರವರಿಗೆ ಬೇಗ ಸ್ಮಶಾನದ ಬಳಿ ಬಾ ಎಂದು ತಿಳಿಸಿದಾಗ ಸ್ವಲ್ಪ ಸಮಯದ ನಂತರ ನನ್ನ ತಮ್ಮ ಮುಬಾರಕ್ ತಾಯಿ ಅಮೀನಾ ತಾಜ್ ಮತ್ತು ಮಾವ ರವರು ಸ್ಥಳಕ್ಕೆ ಬಂದಾಗ ಜಾಕೀರ್ ಏನೋ ನನ್ನ ಮಗನೆ ನಿಮ್ಮ ಮನೆಯವರನ್ನು ಕರೆಯಿಸಿದ್ದೀಯಾ ಎಂದು ಬಾಯಿಗ ಬಂದಂತೆ ಬೈದು, ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾನೆ.ಶರೀಫ್ ರವರು ಚಾಕುವಿನಿಂದ ಪುನ: ನನ್ನ ಮೇಲೆ ಹಲ್ಲೆ ಮಾಡಲು ಬಂದಾಗ ನಿನ್ನ ತಮ್ಮ ಮುಬಾರಕ್ ಅಡ್ಡಬಂದಾಗ ಚಾಕುವಿನಿಂದ ನನ್ನ ತಮ್ಮನ ಎಡಭಾಗದ ತೊಡೆಗೆ ಚಾಕುವಿನಿಂದ ತಿವಿದು ರಕ್ತಗಾಯಪಡಿಸಿರುತ್ತಾನೆ. ಅದೇ ಚಾಕುವಿನಿಂದ ನಮ್ಮ ತಾಯಿಗೆ ಬಲ ಕೈ ತೋರು ಬೆರಳಿಗೆ ಮತ್ತು ಬಾಬಾ ರವರ ಎಡಭಾಗದ ಹಸ್ತಕ್ಕೆ ರಕ್ತಗಾಯಪಡಿಸಿದ್ದು ನಾವು ಕಿರುಚಿಕೊಳ್ಳುತ್ತಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಬರುವಷ್ಟರಲ್ಲಿ ಎಲ್ಲರೂ ಓಡಿ ಹೋಗಿರುತ್ತಾರೆಂದು, ಸದರಿಯವರ   ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ಹೇಳಿಕೆ ಮೇರೆಗೆ  ಠಾಣಾ ಮೊ.ಸಂ: 10/2021 ಕಲಂ: 323,324,504, ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 06-02-2021 01:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080